For Quick Alerts
ALLOW NOTIFICATIONS  
For Daily Alerts

ಹಣ್ಣುಗಳ ರಾಜ 'ಮಾವಿನಹಣ್ಣು' ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದು...

ಬೇಸಿಗೆಯಲ್ಲಿ ಮಾವಿನ ಹಣ್ಣು ಯಥೇಚ್ಛವಾಗಿದ್ದು ಇದರಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಗರ್ಭಿಣಿಗೆ ಹೆಚ್ಚಿನ ಶಕ್ತಿ ನೀಡುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

By Manu
|

ಗರ್ಭಾವಸ್ಥೆ ಮಹಿಳೆಯ ಜೀವನದ ಅತಿ ಸಂತೋಷಕರ ಅವಧಿಯಾಗಿದ್ದು ಈ ಅವಧಿಯ ವಿವಿಧ ದಿನಗಳಲ್ಲಿ ಬೇರೆ ಬೇರೆ ರುಚಿಯನ್ನು ತಿನ್ನಲು ಮನಸ್ಸು ಪ್ರೇರೇಪಿಸುತ್ತದೆ. ಗರ್ಭಿಣಿಯ ಈ ಬಯಕೆಯನ್ನು ಪೂರೈಸಲು ಮನೆಯ ಸದಸ್ಯರೆಲ್ಲರೂ ಸಂತೋಷದಿಂದಲೇ ಉತ್ಸುಕತೆಯಿಂದ ತಯಾರಾಗುತ್ತಾರೆ. ಮಾವಿನ ಹಣ್ಣಿನಲ್ಲಿರುವ 8 ಆರೋಗ್ಯಕರ ಗುಣಗಳು

ಆದರೆ ಹೆಚ್ಚು ತಿನ್ನುವುದರಿಂದ ತೂಕವೂ ಹೆಚ್ಚುವ ಕಾರಣ ಗರ್ಭಿಣಿ ಬಯಸಿದ ಎಲ್ಲಾ ಆಹಾರಗಳನ್ನು ತಿನ್ನುವುದು ಸರಿಯಲ್ಲ. ಗರ್ಭಾವಸ್ಥೆಯಲ್ಲಿ ಮಗುವಿನ ಪೋಷಣೆಯನ್ನೂ ತಾಯಿಯ ಆಹಾರವೇ ಪೂರೈಸಬೇಕಾದ ಕಾರಣ ಗರ್ಭಿಣಿ ಹೆಚ್ಚು ಸತ್ವಯುತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಆದ್ದರಿಂದ ಈ ಅವಧಿಯಲ್ಲಿ ಸೇವಿಸಬೇಕಾದ ಆಹಾರಗಳ ಬಗ್ಗೆ ಹೆಚ್ಚು ಗಮನ ನೀಡಬೇಕು. ಯಾವುದೇ ಸಲ್ಲದ ಆಹಾರದ ಸೇವನೆಯಿಂದ ಗರ್ಭಿಣಿಗೂ ಮಗುವಿನ ಆರೋಗ್ಯಕ್ಕೂ ತೊಂದರೆಯಾಗಬಹುದು. ಗರ್ಭಿಣಿಯರೇ ಹಣ್ಣು-ತರಕಾರಿಗಳೆಂದರೆ ಮುಖ ಸಿಂಡರಿಸಬೇಡಿ

ಆದ್ದರಿಂದ ಗರ್ಭಿಣಿ ಬಯಸಿದಳು ಎಂಬ ಒಂದೇ ಕಾರಣದಿಂದ ಯಾವುದೇ ಆಹಾರವನ್ನು ಆಕೆಗೆ ನೀಡುವಂತಿಲ್ಲ. ಬದಲಿಗೆ ಆಕೆಗೆ ಯಾವ ಆಹಾರ ಸೂಕ್ತವೋ ಮತ್ತು ಅಗತ್ಯವೋ ಆ ಆಹಾರಗಳನ್ನು ಆಕೆ ಬಯಸದೇ ಇದ್ದರೂ ತಿನ್ನಲು ನೀಡುವುದು ಜಾಣತನದ ಕ್ರಮ. ಅಲ್ಲದೇ ಗರ್ಭಿಣಿಯರು ಕದ್ದು ಮುಚ್ಚಿ ಕೆಲವು ಆಹಾರಗಳನ್ನು ಸೇವಿಸುತ್ತಾರೆ. ಆದರೆ ಇವರಿಗೆ ಅರಿವೇ ಇಲ್ಲದೇ ಈ ಆಹಾರಗಳು ಮಾರಕ ಪರಿಣಾಮ ಬೀರಬಲ್ಲವು. ಆದ್ದರಿಂದ ಎಷ್ಟೇ ಪ್ರಬಲವಾದ ಬಯಕೆ ಮೂಡಿದರೂ ಗರ್ಭಿಣಿ ಹಿರಿಯರ ಮತ್ತು ವೈದ್ಯರಿಗೆ ಕೇಳದೇ ಯಾವುದೇ ಆಹಾರವನ್ನು ಸೇವಿಸುವುದು ಅಪಾಯಕಾರಿಯಾಗಿದೆ.

ಮನೆಯಲ್ಲಿ ಹಿರಿಯರಿದ್ದರೆ ತಮ್ಮ ಅನುಭವದಿಂದ ಯಾವುದನ್ನು ಸೇವಿಸಬಹುದು ಎಂದು ಹೇಳಬಹುದು. ಹಿರಿಯರು ಬಳಿ ಇಲ್ಲದೇ ಇದ್ದರೆ? ಬಯಕೆ ಮೂಡಿದಾಗ ವೈದ್ಯರ ಬಳಿ ಹೋಗುವಷ್ಟು ಸಮಯ ಅಥವಾ ವ್ಯವಧಾನ ಇಲ್ಲದೇ ಹೋದರೆ, ಆಗ ಗರ್ಭಿಣಿ ತನಗರಿವಿಲ್ಲದೇ ಕೆಲವು ಆಹಾರಗಳನ್ನು ಸೇವಿಸುವ ಅಪಾಯವಿದೆ. ಮನೆಯಲ್ಲೇ ತಯಾರಿಸಿ ರುಚಿಕರವಾದ ಮಾವಿನ ಹಣ್ಣಿನ ಜ್ಯೂಸ್!

ಹೀಗೆ ಸಾಮಾನ್ಯವಾಗಿ ಸೇವಿಸಲು ಬಯಕೆ ಮೂಡುವ ಒಂದು ಆಹಾರವೆಂದರೆ ಮಾವಿನ ಹಣ್ಣು. ಬೇಸಿಗೆಯಲ್ಲಿ ಮಾವಿನ ಹಣ್ಣು ಯಥೇಚ್ಛವಾಗಿದ್ದು ಇದರಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಗರ್ಭಿಣಿಗೆ ಹೆಚ್ಚಿನ ಶಕ್ತಿ ನೀಡುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತಿದೆ...

ಗರ್ಭಾವಸ್ಥೆಯ ಸಮಯದಲ್ಲಿ ಮಾವಿನ ಹಣ್ಣಿನ ಸೇವನೆ

ಗರ್ಭಾವಸ್ಥೆಯ ಸಮಯದಲ್ಲಿ ಮಾವಿನ ಹಣ್ಣಿನ ಸೇವನೆ

ಬೇಸಿಗೆಯಲ್ಲಿ ಲಭ್ಯವಾಗುವ ಮಾವಿನ ಹಣ್ಣಿನಲಿ ವಿಟಮಿನ್ ಸಿ, ಎ, ಬಿ6, ಪೊಟ್ಯಾಶಿಯಂ ಹಾಗೂ ಫೋಲಿಕ್ ಆಮ್ಲಗಳೂ ಇವೆ. ಗರ್ಭಿಣಿಗೆ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಬೇಕಾಗಿದ್ದು ಈ ಆವಧಿಯಲ್ಲಿ ಮಾವಿನ ಹಣ್ಣಿನ ಸೇವನೆ ಉತ್ತಮವಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಗರ್ಭಿಣಿಗೆ ಹೆಚ್ಚಿನ ಶಕ್ತಿ ನೀಡುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ

ಮಲಬದ್ಧತೆ ಹಾಗೂ ಜೀರ್ಣಕ್ರಿಯೆಗೆ ಸಹಕಾರಿ

ಮಲಬದ್ಧತೆ ಹಾಗೂ ಜೀರ್ಣಕ್ರಿಯೆಗೆ ಸಹಕಾರಿ

ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು ತಾತ್ಕಾಲಿಕ ಮಲಬದ್ಧತೆಯ ತೊಂದರೆಯನ್ನೂ ಅನುಭವಿಸುತ್ತಾರೆ. ಈ ತೊಂದರೆಯನ್ನು ಮಾವಿನ ಹಣ್ಣಿನ ಸೇವನೆ ನಿವಾರಿಸುತ್ತದೆ. ಈ ಹಣ್ಣಿನಲ್ಲಿರುವ ಕರಗದ ನಾರು ಮಲಬದ್ಧತೆಯಾಗದಂತೆ ತಡೆಯುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದು...

ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದು...

ಸಾಮಾನ್ಯವಾಗಿ ಗರ್ಭಿಣಿಯರಿಗೆ ಪ್ರಾರಂಭದ ದಿನದಲ್ಲಿ ಹುಳಿ ತಿನ್ನುವ ಮನಸ್ಸಾದರೂ ಎರಡನೆಯ ತಿಂಗಳಿನಿಂದ ಹೆರಿಗೆಯ ಸಮಯದವರೆಗೂ ಸಿಹಿ ತಿನ್ನುವ ಬಯಕೆ ಇರುತ್ತದೆ. ಆದರೆ ಸಿಹಿಪದಾರ್ಥಗಳನ್ನು ಸೇವಿಸುವುದು ಒಳ್ಳೆಯದಲ್ಲ. ಇವುಗಳರಲ್ಲಿರುವ ಹೆಚ್ಚಿನ ಸಕ್ಕರೆ ಗರ್ಭಿಣಿಯ ಆರೋಗ್ಯ ಕೆಡಿಸಬಹುದು ಅಥವಾ ತೂಕವನ್ನು ಅತಿಯಾಗಿ ಹೆಚ್ಚಿಸಬಹುದು. ಬದಲಿಗೆ ಸಿಹಿಯೂ ಆಗಿರುವ ಮಾವಿನ ಹಣ್ಣಿನ ಸೇವನೆಯಿಂದ ಗರ್ಭಿಣಿಯ ಬಯಕೆಯನ್ನೂ ಪೂರೈಸಿದಂತಾಗುತ್ತದೆ ಹಾಗೂ ಅಗತ್ಯ ಪೋಷಕಾಂಶಗಳನ್ನು ನೀಡಿದಂತೆಯೂ ಆಗುತ್ತದೆ. ಗರ್ಭಿಣಿಯರಲ್ಲಿ ಹುಳಿ ತಿನ್ನುವ ಬಯಕೆ; ಏನಿದರ ರಹಸ್ಯ?

ಗಮನದಲ್ಲಿಡಬೇಕಾದ ಅಂಶಗಳು

ಗಮನದಲ್ಲಿಡಬೇಕಾದ ಅಂಶಗಳು

*ಒಂದು ವೇಳೆ ಗರ್ಭಿಣಿ ಮಧುಮೇಹಿ ರೋಗಿಯಾಗಿದ್ದರೆ ಮಾವಿನ ಹಣ್ಣಿನ ಪ್ರಮಾಣವನ್ನು ಅತಿ ಕಡಿಮೆ ಸೇವಿಸಬೇಕು. ಏಕೆಂದರೆ ಮಾವಿನ ಹಣ್ಣಿನಲ್ಲಿ ಅತಿ ಹೆಚ್ಚಿನ ಸಕ್ಕರೆ ಅಂಶ ಇರುತ್ತದೆ. ಅಲ್ಲದೇ ನೀವು ಖರೀದಿಸುವ ಹಣ್ಣುಗಳು ನೈಸರ್ಗಿಕ ವಿಧಾನದಿಂದ ಬೆಳೆದವು ಮತ್ತು ಹಣ್ಣಾಗಿರುವಂತಹದ್ದಾಗಿರಬೇಕು.

ಗಮನದಲ್ಲಿಡಬೇಕಾದ ಅಂಶಗಳು

ಗಮನದಲ್ಲಿಡಬೇಕಾದ ಅಂಶಗಳು

*ಇಂದು ಮಾರುಕಟ್ಟೆಯಲ್ಲಿ ರಾಸಾಯನಿಕಗಳನ್ನು ಬಳಸಿ ಒಂದೇ ರಾತ್ರಿಯಲ್ಲಿ ಹಣ್ಣು ಮಾಡಲಾಗಿರುವ ಹಣ್ಣುಗಳೇ ಸುಂದರವಾಗಿ ಕಾಣುತ್ತವೆ. ಆದರೆ ಇವು ಆರೋಗ್ಯಕರವಲ್ಲ. ಆದ್ದರಿಂದ ದೊಡ್ಡಗಾತ್ರದ ಕಾಯಿಗಳನ್ನು ತಂದು ಮನೆಯಲ್ಲಿಯೇ ಹುಲ್ಲಿನಲ್ಲಿಟ್ಟು ಸ್ವಾಭಾವಿಕವಾಗಿ ಹಣ್ಣಾಗಲು ಬಿಟ್ಟು ಈ ಹಣ್ಣುಗಳನ್ನು ಸೇವಿಸುವುದೇ ಗರ್ಭಿಣಿ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಉತ್ತಮ.

English summary

Mango During Pregnancy: Is It Safe To Eat?

Mangoes are seasonal fruits that are rich in vitamins C, A and B6, along with potassium and folic acid. As most of us know, vitamin C and folic acid are very important for the health of a pregnant woman and her baby...
X
Desktop Bottom Promotion