For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಟೀ-ಕಾಫಿಯಿಂದ ಸಾಧ್ಯವಾದಷ್ಟು ದೂರವಿರಿ!

ಟೀ ಕಾಫಿ ಸೇವನೆ ಗರ್ಭಾವಸ್ಥೆಯಲ್ಲಿ ಕೆಟ್ಟದೇ ಸರಿ, ಆದರೆ ಈ ಪ್ರಮಾಣ ಅಲ್ಪವಿದ್ದರೆ ಹೆಚ್ಚಿನ ತೊಂದರೆ ಇಲ್ಲವೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ....

By Manu
|

ದಿನದ ಚಟುವಟಿಕೆಯ ನಡುವೆ ಕೊಂಚ ಆಲಸಿತನ ಮೂಡಿದರೆ, ನಿದ್ದೆ ಬಂದಂತಾದರೆ, ಚೈತನ್ಯ ಕಡಿಮೆಯಾದಂತೆ ಅನ್ನಿಸಿದಾಗ ಟೀ ಮತ್ತು ಕಾಫಿ ಕುಡಿಯುವುದರಿಂದ ಉಲ್ಲಸಿತರಾಗುತ್ತೇವೆ. ಗರ್ಭವತಿಯರಿಗೂ ದಿನದಲ್ಲಿ ಕೆಲವಾರು ಬಾರಿ ಆಲಸಿತನ, ನಿದ್ದೆ, ಸುಸ್ತು ಆವರಿಸುತ್ತದೆ. ಆದರೆ ಇತರ ವೇಳೆಯಂತೆ ಈ ಸಮಯದಲ್ಲಿ ಟೀ ಕಾಫಿ ಸೇವನೆ ಉತ್ತಮವೇ? ಈ ಪ್ರಶ್ನೆಗೆ ತಜ್ಞರು ನೀಡುವ ಉತ್ತರವನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ. ಗರ್ಭಿಣಿಯರು ಸೇವಿಸಲೇಬೇಕಾದ ಆಹಾರಗಳಿವು, ಮಿಸ್ ಮಾಡಬೇಡಿ

ಏಕೆಂದರೆ ತಾಯಿಯಾಗುವವಳು ಸೇವಿಸುವ ಯಾವುದೇ ಆಹಾರ ಗರ್ಭದಲ್ಲಿನ ಶಿಶುವಿನ ಬೆಳವಣಿಗೆಯ ಮೇಲೂ ಪ್ರಭಾವ ಬೀರುತ್ತದೆ. ತಾಯಿಯ ರಕ್ತದಿಂದ ಕರುಳುಬಳ್ಳಿಯ ಮೂಲಕ ಪೋಷಕಾಂಶಗಳು ಮಾತ್ರವೇ ಶಿಶುವಿನ ದೇಹ ಸೇರಬೇಕೇ ವಿನಃ ಕಲ್ಮಶಗಳು ಸೇರಬಾರದು.

ಟೀ ಕಾಫಿ ಸೇವನೆ ಗರ್ಭಾವಸ್ಥೆಯಲ್ಲಿ ಕೆಟ್ಟದೇ ಸರಿ, ಆದರೆ ಈ ಪ್ರಮಾಣ ಅಲ್ಪವಿದ್ದರೆ ಹೆಚ್ಚಿನ ತೊಂದರೆ ಇಲ್ಲವೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಹಾಗಾದರೆ ಅಲ್ಪ ಪ್ರಮಾಣ ಎಂದರೆ ಎಷ್ಟು? ಹೆಚ್ಚಿನ ಪ್ರಮಾಣವೆಂದರೆ ಎಷ್ಟು? ಈ ಪ್ರಶ್ನೆಗೆ ತಜ್ಞರು ಯಾವ ಉತ್ತರ ನೀಡುತ್ತಾರೆ ನೋಡೋಣ...

ಕಾಫಿ ಎಷ್ಟು ಕುಡಿಯಬಹುದು?

ಕಾಫಿ ಎಷ್ಟು ಕುಡಿಯಬಹುದು?

ತಜ್ಞರ ಪ್ರಕಾರ ಕಾಫಿಯ ಮೂಲಕ ಸೇವಿಸಬಹುದಾದ ಕೆಫೀನ್ 200 mg ದಾಟಬಾರದು. ಅಂದರೆ ಒಂದು ದಿನಕ್ಕೆ ಎರಡು ಮಗ್ ಇನ್‌ಸ್ಟೆಂಟ್ ಕಾಫಿ ಅಥವಾ ಒಂದು ಮಗ್ ಕಾಫಿಪುಡಿ ಕುದಿಸಿ ತಯಾರಿಸಿದ ಕಾಫಿ ಕುಡಿಯಬಹುದು. ಆದ್ದರಿಂದ ಕಾಫಿ ಕುಡಿಯಲೇ ಬೇಕೆನಿಸಿದರೆ ಮಾತ್ರ ಅಲ್ಪವೇ ಕಾಫಿಪುಡಿ ಹಾಕಿದ ಕಾಫಿ ಕುಡಿಯಬಹುದು. ಆದರೆ ಮನಸ್ಸು ಗಟ್ಟಿಮಾಡಿ ಕಾಫಿ ಕುಡಿಯದೇ ಇರುವುದು ಅತ್ಯಂತ ಕ್ಷೇಮ ಹಾಗೂ ಆರೋಗ್ಯಕರ.

ಕಾಫಿ ಎಷ್ಟು ಕುಡಿಯಬಹುದು?

ಕಾಫಿ ಎಷ್ಟು ಕುಡಿಯಬಹುದು?

ಅತಿ ನುಣ್ಣಗೆ ಪುಡಿಮಾಡಿದ ಕಾಫಿಪುಡಿಯಿಂದ ತಯಾರಿಸಿದ ಕಾಫಿ, ಫಿಲ್ಟರ್ ಕಾಫಿ, ಎಕ್ಸ್ಪ್ರೆಸ್ಸೋ ಮೊದಲಾದ ಕಾಫಿಗಳನ್ನು ಕುಡಿಯದಿರಿ, ಏಕೆಂದರೆ ಇದರಲ್ಲಿ ಕೆಫೀನ್ ಹೆಚ್ಚಿರುತ್ತದೆ. ಬದಲಿಗೆ ಲೈಟ್ ಕಾಫಿಯನ್ನು 200-mlಗೆ ಮೀರದಷ್ಟು ಪ್ರಮಾಣವನ್ನು ಕುಡಿಯಬಹುದು. ಇದಕ್ಕೂ ಹೆಚ್ಚಿನ ಪ್ರಮಾಣದ ಕಾಫಿ ಗರ್ಭವತಿಗೆ ಸೂಕ್ತವಲ್ಲ.

ಇದಕ್ಕೂ ಹೆಚ್ಚು ಕುಡಿದರೆ ಏನಾಗುತ್ತದೆ?

ಇದಕ್ಕೂ ಹೆಚ್ಚು ಕುಡಿದರೆ ಏನಾಗುತ್ತದೆ?

ಒಂದು ವೇಳೆ ದಿನಕ್ಕೆ 200 mg ಗೂ ಮೀರಿದ ಕೆಫೀನ್ ಸೇವನೆಯಿಂದ ಗರ್ಭಾಪಾತದ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಅಲ್ಲದೇ ಮಗುವಿನ ಜನನದ ಸಮಯದಲ್ಲಿ ಅತಿ ಕಡಿಮೆ ತೂಕ ಇರುವ ಸಾಧ್ಯತೆಯೂ ಹೆಚ್ಚುತ್ತದೆ.

ಕೆಫೀನ್ ತಾಯಿಗಿಂತಲೂ ಮಗುವಿಗೇ ಹೆಚ್ಚು ಹಾನಿಕರ

ಕೆಫೀನ್ ತಾಯಿಗಿಂತಲೂ ಮಗುವಿಗೇ ಹೆಚ್ಚು ಹಾನಿಕರ

ಕಾಫಿಯ ಸೇವನೆಯಿಂದ ತಾಯಿಗಿಂತಲೂ ಗರ್ಭದಲ್ಲಿರುವ ಮಗುವಿನ ಆರೋಗ್ಯ ಹೆಚ್ಚು ಕೆಡುತ್ತದೆ. ಏಕೆಂದರೆ ಕೆಫೀನ್ ಸುಲಭವಾಗಿ ಕರುಳುಬಳ್ಳಿಯಿಂದ ದಾಟಿ ಮಗುವಿನ ದೇಹವನ್ನು ತಲುಪುತ್ತದೆ ಹಾಗೂ ಮಗುವಿನ ರಕ್ತವನ್ನು ಸೇರಿಕೊಳ್ಳುತ್ತದೆ.

ಲೈಟ್ ಟೀ ಕುಡಿಯಬಹುದು

ಲೈಟ್ ಟೀ ಕುಡಿಯಬಹುದು

ಗರ್ಭಾವಸ್ಥೆಯಲ್ಲಿ ಕಾಫಿಗಿಂತಲೂ ಟೀ ಸೇವನೆ ಹೆಚ್ಚು ಸುರಕ್ಷಿತ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ ಈ ಟೀ ಲಘು ಅಥವಾ ಲೈಟ್ ಆಗಿರಬೇಕು ಹಾಗೂ ಹಾಲಿಲ್ಲದ ಕಪ್ಪು ಟೀ ಆಗಿದ್ದಷ್ಟೂ ಉತ್ತಮ. ಅಲ್ಲದೇ ಗರ್ಭಾವಸ್ಥೆಯಲ್ಲಿ ಹಸಿರು ಟೀ ಕುಡಿಯುವುದು ಉತ್ತಮವಲ್ಲ, ಏಕೆಂದರೆ ಹಸಿರು ಟೀಯಲ್ಲಿಯೂ ಕೆಫೀನ್ ಇದೆ. ಇದರೊಂದಿಗೆ ಇತರ ಪೋಷಕಾಂಶಗಳೂ ಗರ್ಭಾಪಾತಕ್ಕೆ ಪ್ರಚೋದನೆ ನೀಡುವುದರಿಂದ ಹಸಿರು ಟೀ ಬೇಡ.

English summary

Is Tea And Coffee Safe During Pregnancy?

Coffee and tea are great mental stimulators, especially when we feel sleepy or dizzy. Pregnant women also love to have coffee or tea when they feel tired and sleepy. But, is the consumption of coffee or tea safe during pregnancy? In this article, you will find an answer to this crucial question...
X
Desktop Bottom Promotion