For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಪೆಡಂಭೂತವಾಗಿ ಕಾಡುವ ಮಧುಮೇಹ! ಯಾಕೆ ಹೀಗೆ?

By Jaya subramanya
|

ಹೆಣ್ಣಿನ ಜೀವನದಲ್ಲಿ ಗರ್ಭಾವಸ್ಥೆ ಎಂಬುದು ವರದಾನವಾಗಿದೆ. ತನ್ನೊಂದಿಗೆ ಇನ್ನೊಂದು ಜೀವವನ್ನು ಹೆಣ್ಣು ಈ ಸಮಯದಲ್ಲಿ ಕಾಪಾಡಬೇಕಾಗಿರುವುದರಿಂದ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ನೀವು ಯದ್ವಾತದ್ವಾ ಜೀವನ ಶೈಲಿಯನ್ನು ಅನುಸರಿಸುತ್ತಿದ್ದರೆ ಇದೆಲ್ಲದಕ್ಕೂ ಪೂರ್ಣ ವಿರಾಮವನ್ನು ಹಾಕಿ ಸಂಪೂರ್ಣ ಶ್ರದ್ಧೆಯನ್ನು ನಿಮ್ಮಡೆಗೆ ನೀವು ವಹಿಸಬೇಕಾಗುತ್ತದೆ. ಅಂತೆಯೇ ಪ್ರತಿಯೊಂದು ಕಾಲಮಾನಕ್ಕೆ ತಕ್ಕಂತೆ ಬೇಕಾದ ನಿಯಮಗಳನ್ನು ಪಾಲಿಸಿಕೊಂಡು ನೀವು ಶಿಸ್ತಾದ ಜೀವನ ಕ್ರಮಕ್ಕೆ ಹೊಂದಿಕೊಳ್ಳಲೇಬೇಕಾಗುತ್ತದೆ.

Pregnancy

ಬಿರು ಬೇಸಿಗೆಯ ಈ ಸಮಯದಲ್ಲಿ ಅದೂ ತಾಪಮಾನವು 24 ಡಿಗ್ರಿಗಳನ್ನು ಸಮೀಪಿಸುತ್ತಿದ್ದಲ್ಲಿ ಮತ್ತು ಅದಕ್ಕಿಂತ ಹೆಚ್ಚು ಇದ್ದಲ್ಲಿ ಗರ್ಭಿಣಿಯರು ಮಧುಮೇಹದಂತಹ ಅಪಾಯಕ್ಕೆ ಒಳಗಾಗುವ ತೀವ್ರತೆ ಹೆಚ್ಚು ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಇನ್ನು ಚಳಿಗಾಲದಲ್ಲಿ ತಾಪಮಾನವು ಮೈನಸ್ 10 ಡಿಗ್ರಿಯಾಗಿದಲ್ಲಿ ಈ ಕಾಯಿಲೆಯ ಅಭಿವೃದ್ಧಿ ಕಡಿಮೆ ಇದೆ ಎಂದಾಗಿದೆ.

ಅಧ್ಯಯನವು ತಿಳಿಸುವಂತೆ 7.7 ಶೇಕಡಾದಷ್ಟು ಬೆಚ್ಚಗಿನ ವಾತಾವರಣಕ್ಕಿಂತ 4.6 ಶೇಕಡಾದ ತಣ್ಣಗಿನ ವಾತಾವರಣವು ಗರ್ಭಿಣಿಯರಿಗೆ ಮಧುಮೇಹದಂತಹ ಅಪಾಯವನ್ನು ತಗ್ಗಿಸಲಿದೆ. ತಾಪಮಾನದಲ್ಲಿ ಪ್ರತಿ 10 ಡಿಗ್ರಿಯಷ್ಟು ಹೆಚ್ಚಳವುಂಟಾಗುವುದರಿಂದ ಈ ಬೆಚ್ಚಗಿನ ತಾಪಮಾವು ಗರ್ಭಿಣಿಯರಲ್ಲಿ ಈ ರೋಗವನ್ನು ಹೆಚ್ಚಿಸಲಿದೆ. ತಣ್ಣಗಿನ ವಾತಾವರಣದಲ್ಲಿ ಶಾಖವನ್ನು ಉತ್ಪಾದಿಸಲು ಚಪಾಪಚಯ ಕ್ರಿಯೆ ಚಾಲ್ತಿಯಲ್ಲಿರುತ್ತದೆ.

ಬೇಸಿಗೆ ಸಮಯದಲ್ಲಿ ಮಹಿಳೆಯರು ಹೆಚ್ಚು ಸಮಯ ಹೊರಗೆ ಇರುವುದರಿಂದ ಅವರಿಗೆ ತೂಕ ಇಳಿಸಲು ಇದು ಸಹಕಾರಿಯಾಗಲಿದೆ ಮತ್ತು ತೂಕ ಏರಿಕೆಯನ್ನು ಇದು ನಿಯಂತ್ರಣದಲ್ಲಿಡಲಿದೆ ಎಂಬುದಾಗಿ ಹೆಚ್ಚಿನವರು ಯೋಚಿಸುತ್ತಾರೆ. ಆದರೆ ಈ ವಾತಾವರಣವು ಆಕೆಯಲ್ಲಿ ಗರ್ಭಾವಸ್ಥೆಯ ಮಧುಮೇಹವನ್ನು ಉಂಟುಮಾಡಲಿದೆ. ಇದಕ್ಕೆ ಹೆಚ್ಚುವರಿಯಾಗಿ ತಣ್ಣಗಿನ ವಾತಾವರಣದಲ್ಲಿ ಗರ್ಭಿಣಿಯರಲ್ಲಿ ಈ ಮಧುಮೇಹದ ಕೊರತೆ ಇಳಿಮುಖವಾಗಿದ್ದು ಬಿಸಿಲಿನ ತಾಪಮಾನದಲ್ಲಿರುವವರ ಗರ್ಭಿಣಿಯರಲ್ಲಿ 6.3 ಶೇಕಡಾದಷ್ಟು ಹೆಚ್ಚಿದೆ.

English summary

Hot Weather May Up Risk Of Diabetes In Pregnancy

Pregnant women should not expose themselves to temperatures averaging 24 degrees Celsius or above, as they would run the risk of developing gestational diabetes, researchers said. In comparison, women who remained in colder climates with temperatures averaging minus 10 degrees or colder, stood less chances of developing the disease, a study found.
Story first published: Monday, May 22, 2017, 20:40 [IST]
X
Desktop Bottom Promotion