For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೆ ಶೀಘ್ರ ಸಂತಾನಭಾಗ್ಯ ಕರುಣಿಸುವ 'ಹಣ್ಣು-ತರಕಾರಿಗಳು'!

ಕೆಲವೊಮ್ಮೆ ಮಹಿಳೆಯರ ದೇಹದಲ್ಲಿ ಹಾರ್ಮೋನುಗಳ ಸ್ರವಿಕೆಯಲ್ಲಿ ಏರುಪೇರು, ಸಾಕಷ್ಟು ಪೌಷ್ಟಿಕ ಆಹಾರವಿಲ್ಲದಿರುವುದು, ಋತುಚಕ್ರದಲ್ಲಿ ಏರುಪೇರು, ಗರ್ಭನಾಳದಲ್ಲಿ ಸೋಂಕು ಮೊದಲಾದ ಹಲವು ತೊಂದರೆಗಳಿಂದ ಮಕ್ಕಳಾಗದೇ ಇರುವುದು...

By Manu
|

ತಾಯಿಯಾಗುವುದು ಪ್ರತಿಯೊಂದು ಹೆಣ್ಣಿನ ಕನಸಾಗಿದೆ. ವಿವಾಹವಾದ ಬಳಿಕ ಅನಿವಾರ್ಯ ಕಾರಣಗಳಿಲ್ಲದೇ ಆದಷ್ಟು ಶೀಘ್ರ ಮಗುವೊಂದನ್ನು ಹೊಂದಲು ಎಲ್ಲರೂ ಬಯಸುತ್ತಾರೆ. ಆದರೆ ಕಾರಣಾಂತರಗಳಿಂದ ಎಲ್ಲರಲ್ಲೂ ಈ ಬಯಕೆ ಈಡೇರುವುದಿಲ್ಲ.

ಬಂಜೆತನಕ್ಕೆ ಪುರುಷ ಮತ್ತು ಸ್ತ್ರೀ ಇಬ್ಬರೂ ಸಮಾನವಾಗಿ ಕಾರಣರಾಗಿದ್ದಾರೆ. ಒಂದು ವೇಳೆ ತೊಂದರೆ ಮಹಿಳೆಯಲ್ಲಿದೆ ಎಂದರೆ ಅದಕ್ಕೆ ಹಲವಾರು ಕಾರಣಗಳಲ್ಲಿವೆ. ದೇಹದಲ್ಲಿ ಹಾರ್ಮೋನುಗಳ ಸ್ರವಿಕೆಯಲ್ಲಿ ಏರುಪೇರು, ಸಾಕಷ್ಟು ಪೌಷ್ಟಿಕ ಆಹಾರವಿಲ್ಲದಿರುವುದು, ಋತುಚಕ್ರದಲ್ಲಿ ಏರುಪೇರು, ಗರ್ಭನಾಳದಲ್ಲಿ ಸೋಂಕು ಮೊದಲಾದ ಹಲವು ತೊಂದರೆಗಳಿವೆ.

ಇದರಲ್ಲಿ ಮುಖ್ಯವಾಗಿ ಪೌಷ್ಟಿಕ ಆಹಾರದ ಕೊರತೆ ಮುಖ್ಯವಾದ ತೊಡಕಾಗಿದೆ. ದೇಹದ ಆರೋಗ್ಯದ ಜೊತೆ ಸಂತಾನಫಲಕ್ಕೆ ನೆರವಾಗುವ ಇಪ್ಪತ್ತೊಂದು ಆಹಾರಗಳನ್ನು ಆಹಾರ ತಜ್ಞರ ಪ್ರಕಾರ ಕೆಲವೊಂದು ಆಹಾರಗಳ ಸಮರ್ಪಕ ಸೇವನೆಯಿಂದ ಹಾರ್ಮೋನುಗಳ ಏರುಪೇರು ಸರಿಯಾಗಿ ಸಂತಾನಫಲ ಬಯಸುವ ಪ್ರತಿ ಹೆಣ್ಣಿಗೂ ಆಶಾಭಾವನೆ ಮೂಡಿಸುತ್ತದೆ.

ಚೆನ್ನಾಗಿ ಎಲೆಕೋಸು ಪಲ್ಯ ತಿನ್ನಿ!

ಚೆನ್ನಾಗಿ ಎಲೆಕೋಸು ಪಲ್ಯ ತಿನ್ನಿ!

ನಿಮ್ಮ ಗಮನಕ್ಕೆ ಬಂದಿರಬಹುದು ಹೋಟೆಲುಗಳಲ್ಲಿ ಸಾಂಬಾರ್ ಮತ್ತು ಪಲ್ಯ ಮಾಡಲು ಅಗ್ಗದ ತರಕಾರಿಗಳನ್ನೇ ಹೆಚ್ಚಾಗಿ ಆಯ್ದುಕೊಳ್ಳುವ ಕಾರಣ ಹೆಚ್ಚಿನ ದಿನಗಳಲ್ಲಿ ಮೂಲಂಗಿ ಸಾಂಬಾರ್ ಮತ್ತು ಎಲೆಕೋಸು ಪಲ್ಯ ತಯಾರಾಗಿರುತ್ತದೆ. ಆದರೆ ಅಗ್ಗವಾದ ಮಾತ್ರಕ್ಕೆ ಇದರ ಆರೋಗ್ಯಕರ ಗುಣಗಳೇನೂ ಕಡಿಮೆಯಲ್ಲ. ಇದರಲ್ಲಿರುವ ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ವಿಟಮಿನ್ ಕೆ ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ. ಅಷ್ಟೇ ಅಲ್ಲದೆ ಇದರಲ್ಲಿರುವ di-indole methane ಎಂಬ ಪೋಷಕಾಂಶ ಮಹಿಳೆಯರ ದೇಹದಲ್ಲಿ ಸ್ರವಿತವಾಗುವ ಈಸ್ಟ್ರೋಜೆನ್ ಎಂಬ ಹಾರ್ಮೋನು ಸೂಕ್ತಪ್ರಮಾಣದಲ್ಲಿ ಹಾಗೂ ಕ್ಲುಪ್ತಕಾಲದಲ್ಲಿ ಸ್ರವಿಸಿ fibroids ಮತ್ತು endometriosis ಎಂಬ ಕಾರ್ಯಗಳು ಜರುಗಲು ನೆರವಾಗುತ್ತದೆ.

ಬೇಯಿಸಿದ ಆಲೂಗಡ್ಡೆ

ಬೇಯಿಸಿದ ಆಲೂಗಡ್ಡೆ

ಗರ್ಭವತಿಯಾಗ ಬಯಸುವ ಪ್ರತಿಯೊಬ್ಬ ಮಹಿಳೆಯೂ ನಿಯಮಿತವಾಗಿ ಬೇಯಿಸಿದ ಆಲೂಗಡ್ಡೆಯನ್ನು ತಮ್ಮ ಆಹಾರದಲ್ಲಿ ಕಡ್ಡಾಯವಾಗಿ ಸೇರಿಸಬೇಕು. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಬಿ ಮತ್ತು ಇ ಜೀವಕೋಶಗಳ ಉತ್ಪತ್ತಿಗೆ ಸಹಕರಿಸುತ್ತವೆ. ಅಂಡಾಶಯದಲ್ಲಿ ಆರೋಗ್ಯವಂತ ಅಂಡ ಉತ್ಪತ್ತಿಯಾಗಲು ಈ ಎರಡು ವಿಟಮಿನ್ ಗಳು ಅತ್ಯಗತ್ಯವಾಗಿವೆ.

ಚುಕ್ಕೆ ಬಿದ್ದ ಬಾಳೆಹಣ್ಣು

ಚುಕ್ಕೆ ಬಿದ್ದ ಬಾಳೆಹಣ್ಣು

ವರ್ಷವಿಡೀ, ಎಲ್ಲೆಡೆ ಮತ್ತು ಅಗ್ಗವಾಗಿ ಸಿಗುವ ಹಣ್ಣು ಎಂದರೆ ಬಾಳೆಹಣ್ಣು. ಬಾಳೆಗೊನೆ ಹಣ್ಣಾಗಿದ್ದರೂ ಒಂದು ವೇಳೆ ಇದರಲ್ಲಿ ಚುಕ್ಕೆ ಬಿದ್ದಿದ್ದರೆ ಹೆಚ್ಚಿನವರು ಈ ಬಾಳೆಹಣ್ಣುಗಳನ್ನು ಮುಟ್ಟಲಿಕ್ಕೇ ಹೋಗುವುದಿಲ್ಲ...ಏಕೆಂದರೆ ಇವರ ಪ್ರಕಾರ 'ಇದು ಒಳಗಿನಿಂದ ಕೊಳೆತಿದೆ'! ಆದರೆ ವಾಸ್ತವವಾಗಿ ಒಳಗಣ ತಿರುಳು ಹಣ್ಣಾಗಿರುವ ಸಂಕೇತವೇ ಚುಕ್ಕೆಗಳು..ಹಾಗಾಗಿ ಇಂತಹ ಬಾಳೆಹಣ್ಣನ್ನು ಗರ್ಭ ಧರಿಸಲು ಬಯಸುವ ಮಹಿಳೆಯರು ಹೆಚ್ಚಾಗಿ ಸೇವಿಸಬೇಕು. ಏಕೆಂದರೆ ಇದರಲ್ಲಿರುವ ವಿಟಮಿನ್ B6 ನಿಯಮಿತವಾದ ಋತುಚಕ್ರವನ್ನು ಪಾಲಿಸಲು ನೆರವಾಗುತ್ತದೆ.

ಮೊಟ್ಟೆ

ಮೊಟ್ಟೆ

ದಿನಕ್ಕೊಂದು ಮೊಟ್ಟೆ ತಿಂದರೆ ತುಂಬುವುದು ಹೊಟ್ಟೆ ಎನ್ನುವ ಮಾತನ್ನು ಕೇಳಿರಬಹುದು. ಮೊಟ್ಟೆ ತಿಂದರೆ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಸಿಗುತ್ತದೆ ಎನ್ನುವುದು ತಿಳಿದಿರುವ ವಿಚಾರವಾಗಿದೆ.. ಅಲ್ಲದೇ ಕೋಳಿಮೊಟ್ಟೆ ಫಲವತ್ತತೆಗೆ ಅತ್ಯುತ್ತಮವಾದ ಆಹಾರವಾಗಿದೆ... ದಿನಿನಿತ್ಯ ಒಂದು ಮೊಟ್ಟೆ ತಪ್ಪದೇ ಸೇವಿಸಿ

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರುವ ಸೆಲೆನಿಯಂ ಎಂಬ ಖನಿಜ ಫಲಿತವಾಗಿದ್ದ ಅಂಡಾಣು ಸುಲಭವಾಗಿ ದೇಹದಿಂದ ಹೊರಹೋಗದಂತೆ ತಡೆಯುತ್ತದೆ. ಇದರಿಂದಾಗಿ ಗರ್ಭ ನಿಲ್ಲುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಫಲವತ್ತತೆಯ ನಿಟ್ಟಿನಲ್ಲಿ ಬೆಳ್ಳುಳ್ಳಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.

ಹಸಿರು ಎಲೆತರಕಾರಿಗಳು

ಹಸಿರು ಎಲೆತರಕಾರಿಗಳು

ತಜ್ಞರ ಪ್ರಕಾರ ಗಾಢ ಹಸಿರು ಬಣ್ಣದ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೋಲಿಕ್ ಆಮ್ಲ ಮತ್ತು ಕಬ್ಬಿಣ ಇರುವುದರಿಂದ ಗರ್ಭಧರಿಸಲು ಬಯಸುವ ಮಹಿಳೆಯರಿಗೆ ಅತ್ಯುತ್ತಮವಾದ ಆಹಾರವಾಗಿದೆ. ಈ ಪೋಷಕಾಂಶಗಳು ಗರ್ಭಾಶಯದ ಒಳಭಾಗದ ಪದರವನ್ನು ಬಲಪಡಿಸುತ್ತದೆ. ವಿಶೇಷವಾಗಿ ಕಬ್ಬಿಣ ಅಂಡವನ್ನು ಗರ್ಭಾಶಯದಲ್ಲಿ ಅಂಟಿಕೊಂಡಿರಲು ಸಹಕರಿಸುತ್ತದೆ. ಬಸಲೆ, ಪಾಲಕ್ ಮೊದಲಾದ ಸೊಪ್ಪುಗಳು ಉತ್ತಮವಾಗಿವೆ.

ಅರಿಶಿನ

ಅರಿಶಿನ

ಭಾರತೀಯರು ಹೆಚ್ಚಾಗಿ ತಮ್ಮ ಅಡುಗೆಗಳಲ್ಲಿ ಅರಿಶಿನವನ್ನು ಹಿಂದಿನಿಂದಲೂ ಬಳಸುತ್ತಾ ಬಂದಿದ್ದಾರೆ. ಆರೋಗ್ಯವನ್ನು ದೃಷ್ಟಿಯಲ್ಲಿರಿಸಿಕೊಂಡೇ ಅರಿಶಿನವನ್ನು ಅಡುಗೆಯಲ್ಲಿ ಬಳಸಲಾಗುತ್ತಿದೆ. ಅದರಲ್ಲೂ ನಿಯಮಿತವಾಗಿ ಅರಿಶಿನವನ್ನು ದಿನನಿತ್ಯದ ಅಡುಗೆಯಲ್ಲಿ ಬಳಸುವುದರಿಂದ ಇದರಲ್ಲಿರುವ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮಹಿಳೆಯರಲ್ಲಿ ಗರ್ಭಧರಿಸುವ ಸಂಭವತೆಯನ್ನು ಹೆಚ್ಚಿಸುತ್ತದೆ.

ಸಿಟ್ರಸ್ ಆಮ್ಲ ಹೆಚ್ಚಿರುವ ಹಣ್ಣುಗಳು

ಸಿಟ್ರಸ್ ಆಮ್ಲ ಹೆಚ್ಚಿರುವ ಹಣ್ಣುಗಳು

ಗರ್ಭವತಿಯಾಗಬಯಸುವ ಮಹಿಳೆಯರಿಗೆ ಹೆಚ್ಚಿನ ವಿಟಮಿನ್ ಸಿ. ಅಗತ್ಯವಿದೆ. ಗರ್ಭಾಶಯದಿಂದ ಅಂಡಾಣು ಬಿಡುಗಡೆಗೊಳ್ಳಲು ವಿಟಮಿನ್ ಸಿ ಅಗತ್ಯವಾಗಿದೆ. ವಿಟಮಿನ್ ಸಿ. ಹೆಚ್ಚಿರುವ ಮೂಸಂಬಿ, ಲಿಂಬೆ, ಕಿತ್ತಳೆ, ಕಿವಿ ಮೊದಲಾದ ಹಣ್ಣುಗಳು ಫಲಕಾರಿಯಾಗಿವೆ.

English summary

Foods can help you get pregnant faster

Did you know there are few fertility foods which can help you get pregnant fast? Take a look at the fertility foods which can be included in your diet while you are trying to conceive...
X
Desktop Bottom Promotion