For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಬೆಳಗ್ಗೆ ಕಾಡುವ ಸುಸ್ತು

|
Pregnancy Morning Sickness
ಗರ್ಭಿಣಿಯಾದ ಮೊದಲ 3 ತಿಂಗಳಿನಲ್ಲಿ ವಾಂತಿ ಸಮಸ್ಯೆ ಹೆಚ್ಚಿನವರಲ್ಲಿ ಕಂಡುಬರುತ್ತದೆ. ಈ ರೀತಿ ತಿಂದಿದ್ದೆಲ್ಲ ವಾಂತಿ ಮಾಡಿಕೊಳ್ಳುವುದರಿಂದ ಸುಸ್ತು ಕಾಣಿಸಿಕೊಳ್ಳುವುದು. ಏನೂ ತಿನ್ನಬೇಡ ಅನಿಸುತ್ತಿರುತ್ತದೆ. ತಿಂದರೆ ವಾಂತಿಯಾಗುತ್ತದೆ ಎಂದು ಹೆದರಿ ಹೆಚ್ಚಿನವರು ತಿನ್ನುವುದಕ್ಕೇ ಹೆದರುತ್ತಾರೆ. ಆದರೆ ಈ ರೀತಿ ಮಾಡಿದರೆ ದೇಹಕ್ಕೆ ಸರಿಯಾದ ರೀತಿಯಲ್ಲಿ ಪೋಷಕಾಂಶಗಳು ದೊರೆಯದೆ ಮಗು ಮತ್ತು ತಾಯಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುವುದು.

ಆದ್ದರಿಂದ ಬೆಳಗ್ಗೆ ಕಾಣಿಸಿಕೊಳ್ಳುವ ವಾಂತಿ ಮತ್ತು ಸುಸ್ತನ್ನು ತಡೆಗಟ್ಟಿ ಆರೋಗ್ಯವನ್ನು ರಕ್ಷಿಸಲು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.

1. ಬೆಳಗ್ಗೆ ತಿನ್ನದೆ ಇರಬಾರದು: ಬೆಳಗ್ಗೆ ತಿನ್ನದೆ ಇರುವುದರಿಂದ ಹೊಟ್ಟೆಯಲ್ಲಿ ಆಸಿಡ್ ಉತ್ಪತ್ತಿ ಅಧಿಕಯಾಗುವುದು.ಇದರಿಂದಾಗಿ ಹೊಟ್ಟೆನೋವು ಉಂಟಾಗುವುದು, ಬಾಯಲ್ಲಿ ಕಹಿ ನೀರು ಬಂದು ವಾಂತಿ ಬಂದ ಹಾಗೇ ಅನಿಸುವುದು.

2. ಆಗಾಗ ತಿನ್ನುತ್ತಿರಬೇಕು: ಸ್ವಲ್ಪ-ಸ್ವಲ್ಪ ಆಹಾರವನ್ನು ಆಗಾಗ ತಿನ್ನುತ್ತಿರಬೇಕು. ವಾಂತಿ ಮಾಡಿದರೂ ಚಿಂತೆಯಿಲ್ಲ, ತಿನ್ನುತ್ತಿದ್ದರೆ ಅಷ್ಟು ಸುಸ್ತು ಅನಿಸುವುದಿಲ್ಲ.

3. ದೇಹದಲ್ಲಿ ನೀರಿನಂಶ:
ವಾಂತಿ ಮಾಡುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು. ಆದ್ದರಿಂದ ಸಾಕಷ್ಟು ನೀರು ಕುಡಿಯಬೇಕು. ನಿಂಬೆ ಹಣ್ಣಿನ ಜ್ಯೂಸ್, ಕಿತ್ತಳೆ ಜ್ಯೂಸ್ ಮಾಡಿ ಕುಡಿಯುವುದು ಒಳ್ಳೆಯದು.

4. ಖಾರ: ತುಂಬಾ ಖಾರವಿರುವ ಆಹಾರವನ್ನು ತಿನ್ನಬಾರದು. ಪಪ್ಪಾಯಿ ಹಣ್ಣು ತಿನ್ನಬಾರದು.

5. ಶುಂಠಿ: ಶುಂಠಿ ರಸ, ಶುಂಠಿ ಕಾಫಿ ಮಾಡಿ ಕುಡಿಯುವುದು ಒಳ್ಳೆಯದು.

6. ಸ್ವ ಚಿಕಿತ್ಸೆ: ಮೆಡಿಕಲ್ ಶಾಪ್‌ಗಲ್ಲಿ ಸಿಗುವ ಮಾತ್ರೆಗಳನ್ನು ತಂದು ಸ್ವಚಿಕಿತ್ಸೆ ಮಾಡಲು ಹೋಗಬಾರದು. ಆರೋಗ್ಯಕರ ಆಹಾರಕ್ರಮ ಪಾಲಿಸಬೇಕು.

English summary

Tips To Overcome Pregnancy Morning Sickness | Tips For Pregnancy | ಗರ್ಭಿಣಿಯರಿಗೆ ಬೆಳಗ್ಗೆ ಕಾಣಿಸಿಕೊಳ್ಳುವ ಸುಸ್ತು ನಿವಾರಣೆಗೆ ಕೆಲ ಸಲಹೆಗಳು | ಗರ್ಭಿಣಿಯರಿಗೆ ಕೆಲ ಸಲಹೆಗಳು

Pregnancy women in their first trimester will face lots of health problem. For mothers who are pregnant, here are some tips to treat nausea during pregnancy,especially in the morning.
Story first published: Thursday, May 17, 2012, 11:39 [IST]
X
Desktop Bottom Promotion