ಗರ್ಭಾವಸ್ಥೆಯಲ್ಲಿ ಮೀನು ಸೇವನೆ-ಒಂದಿಷ್ಟು ಸಂಗತಿ ನೆನಪಿರಲಿ

ಗರ್ಭಿಣಿಯರು ಸೇವಿಸುವ ಆಹಾರವೇ ಒಡಲ ಕಂದನಿಗೂ ಆಹಾರವಾಗಿರುವುದರಿಂದ ಆಹಾರದ ಮೂಲಕ ಅನೈಚ್ಛಿಕವಾಗಿ ಸೇರುವ ವಿಷಕಾರಿ ಪದಾರ್ಥಗಳು ಕಂದನ ಹೊಟ್ಟೆಯನ್ನೂ ಸೇರುತ್ತವೆ,ಮುಂಜಾಗ್ರತಾ ಕ್ರಮವಾಗಿ ಮೀನು ಸೇವನೆಗೆ ಮಿತಿ ಇಡಿ.

By: Jaya subramanya
Subscribe to Boldsky

ಗರ್ಭಾವಸ್ಥೆಯಲ್ಲಿ ಹೆಣ್ಣಿನ ದೇಹಾರೋಗ್ಯಕ್ಕೆ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಆಕೆಯ ಆಹಾರದ ಮೇಲೆ ಹೆಚ್ಚಿನ ಕಾಳಜಿಯನ್ನು ವಹಿಸಲಾಗಿರುತ್ತದೆ. ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದರ ಮೇಲೆ ನಿಗಾವಹಿಸಬೇಕು. ಇದರಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಕೂಡ ಅತಿಮುಖ್ಯದ್ದಾಗಿರುತ್ತದೆ.

ಇಂದಿನ ಲೇಖನದಲ್ಲಿ ಗರ್ಭಿಣಿ ಮಹಿಳೆ ಇಲ್ಲವೇ ಹಾಲೂಣಿಸುತ್ತಿರುವ ತಾಯಿ ಮೀನು ತಿನ್ನಬಹುದೇ, ತಿನ್ನಬಾರುದೇ ಎಂಬುದರ ಮೇಲೆ ಚರ್ಚಿಸಲಾಗಿದೆ. ಕೆಲವರು ಹೇಳುವ ಪ್ರಕಾರ ಮೀನಿನಲ್ಲಿರುವ ಮರ್ಕ್ಯುರಿ ತಾಯಿಗೆ ಅಪಾಯಕಾರಿ ಎಂಬುದಾಗಿದೆ. ಆದರೆ ತಜ್ಞರು ಮೀನು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅತ್ಯುತ್ತಮ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಗರ್ಭಾವಸ್ಥೆಯಲ್ಲಿ ಇಂತಹ ಆಹಾರಗಳನ್ನು ಆದಷ್ಟು ಪಕ್ಕಕ್ಕೆ ಸರಿಸಿ

ಇಂದಿನ ಲೇಖನದಲ್ಲಿ ಮೀನು ಸೇವನೆಯನ್ನು ಗರ್ಭಿಣಿ ಸ್ತ್ರೀಯು ಏಕೆ ಮಾಡಬೇಕು ಎಂಬುದನ್ನು ತಿಳಿಸಲಾಗಿದ್ದು, ಇದರಿಂದ ದೊರೆಯುವ ಪೋಷಕಾಂಶಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

Pregnant Women
 

ಗರ್ಭಾವಸ್ಥೆಯಲ್ಲಿ ಮೀನು ಸೇವನೆ ಏಕೆ ಅತ್ಯವಶ್ಯಕ
ಮೀನು ಒಮೇಗಾ - 3 ಫ್ಯಾಟಿ ಆಸಿಡ್ ಅನ್ನು ಒಳಗೊಂಡಿದ್ದು, ಪ್ರೊಟೀನ್, ಮಿನರಲ್ಸ್, ಐರನ್, ಕ್ಯಾಲ್ಶಿಯಮ್ ಮತ್ತು ಮೆಗ್ನೇಶಿಯಮ್ ಹಾಗೂ ವಿಟಮಿನ್ಸ್ ಎ ಮತ್ತು ಡಿಯನ್ನು ಹೊಂದಿದೆ. ಮಗುವನ್ನು ನಿರೀಕ್ಷಿಸುತ್ತಿರುವ ತಾಯಂದಿರಿಗೆ ಇದು ಹೆಚ್ಚುವರಿ ಅಗತ್ಯದ ಆಹಾರ ಎಂದೆನಿಸಿದ್ದು ಹುಟ್ಟಲಿರುವ ಮಗುವಿಗೆ ಉತ್ತಮ ಆರೋಗ್ಯವನ್ನು ಒದಗಿಸಲಿದೆ.

ಒಮೇಗಾ - 3 ಮಗುವಿನ ಮೆದುಳಿಗೆ ಅತ್ಯವಶ್ಯಕ
ಮೀನಿನಲ್ಲಿರುವ ಒಮೇಗಾ - 3 ಮಗುವಿನ ಮೆದುಳಿಗೆ ಅತ್ಯುತ್ತಮ ಆಹಾರ ಎಂದೆನಿಸಿದ್ದು ಗರ್ಭಿಣಿಯರಿಗೆ ಮುಖ್ಯ ನ್ಯೂಟ್ರೀನ್ ಆಗಿದೆ. ಇಂತಹ ಕೊಬ್ಬನ್ನು ಅವರು ಹೆಚ್ಚು ಸೇವಿಸಿದಷ್ಟು, ಮಗುವಿನ ಬಾಲ್ಯಕಾಲ ಬೆಳವಣಿಗೆಗೆ ಇದು ಪೂರಕವಾಗಲಿದೆ. ಡೆಕೊಹೆಕ್ಸಾನಿಕ್ ಆಸಿಡ್ (ಡಿಎಚ್‎ಎ) ಅನ್ನು ರಕ್ತದಲ್ಲಿ ಹೆಚ್ಚು ಪ್ರಮಾಣದಲ್ಲಿದ್ದು, ಒಮೇಗಾ -3 ಆಸಿಡ್ ಜೊತೆಯಾಗಿರುವಾಗ ತಾಯಂದಿರಿಗೆ ಮಗುವಿನ ಹೆರಿಗೆ ಅನುಕೂಲಕರವಾಗಿರುತ್ತದೆ.

Pregnant Women

ಕಡಿಮೆ (ಡಿಎಚ್‎ಎ) ಮಟ್ಟವನ್ನು ಹೊಂದಿರುವ ತಾಯಂದಿರಿಗಿಂತ ಎರಡು ತಿಂಗಳು ಮುಂದಕ್ಕೆ ತಮ್ಮ ಪ್ರತಿರೂಪಿಗಳಂತೆ ಪರಿಗಣಿಸಲಾಗುತ್ತದೆ. ಮಗುವಿನ ಮೆದುಳು ಮತ್ತು ರೆಟೀನಾದ ಅಭಿವೃದ್ಧಿಗೆ ಇವುಗಳು ಅತ್ಯಮೂಲ್ಯ ಸಾರಗಳಾಗಿವೆ. ಮಗುವಿನ ಜನನದ ಮೊದಲ ಎರಡು ವರ್ಷಗಳಲ್ಲಿ ಮೆದುಳಿನಲ್ಲಿರುವ (ಡಿಎಚ್‎ಎ) ಮಗುವಿನ ಭವಿಷ್ಯದ ಬೆಳವಣಿಗೆಯನ್ನು ಸಾರುತ್ತದೆ.

ಮರ್ಕ್ಯುರಿಯನ್ನು ಸೇವಿಸದೇ ಇರುವುದು
ಬೇರೆ ಬೇರೆ ಸಾಧನಗಳ ಮೂಲಕ ಮರ್ಕ್ಯುರಿಯು ನೀರಿನಲ್ಲಿ ಬಿಡುಗಡೆಯಾಗುತ್ತದೆ ಮತ್ತು ಬ್ಯಾಕ್ಟೀರಿಯಾದೊಂದಿಗೆ ಮಿಥೇಲ್ ಮರ್ಕ್ಯುರಿಯಾಗಿ ಇದು ಪರಿವರ್ತನೆಗೊಳ್ಳುತ್ತದೆ. ನೀರಿನಲ್ಲಿರುವ ಮೀನು ಮಿಥೇಲ್ ಮರ್ಕ್ಯುರಿಯನ್ನು ಹೀರಿಕೊಳ್ಳುತ್ತದೆ ಮತ್ತು ಮೀನಿನ ದೇಹದಲ್ಲಿರುವ ಪ್ರೊಟೀನ್ ಇದನ್ನು ಹೀರಿಕೊಂಡು ಬೇಯಿಸಿದ ನಂತರವೂ ಹಾಗೆಯೇ ಇರುತ್ತದೆ. 

fish
 

ನಮ್ಮ ದೇಹವು ಮಿಥೇಲ್ ಮರ್ಕ್ಯುರಿಯನ್ನು ಅತಿ ಬೇಗನೇ ಹೀರಿಕೊಳ್ಳುತ್ತದೆ ಮತ್ತು ಗರ್ಭಿಣಿಯರಿಗೆ ಇದು ಅತ್ಯವಶ್ಯಕ ಪ್ರೊಟೀನ್ ಎಂದೆನಿಸಿದೆ. ಜರಾಯುವನ್ನು ಸೇರಿ ಮಗುವನ್ನು ತಲುಪುವುದರಿಂದ ತಾಯಿಗೆ ಮತ್ತು ಮಗುವಿಗೆ ಅತ್ಯುತ್ತಮ ಅಂಶವಾಗಿದೆ. ಗರ್ಭಿಣಿಯರೇ, ಆಹಾರದ ವಿಷಯದಲ್ಲಿ ಉದಾಸೀನ ಮಾಡಬೇಡಿ 

ಮಿಥೇಲ್ ಮರ್ಕ್ಯುರಿಯ ಅತಿ ಕಡಿಮೆ ಪ್ರಮಾಣ ಕೂಡ ಮಗುವಿನ ಮೆದುಳು ಮತ್ತು ನರಕೋಶ ವ್ಯವಸ್ಥೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಇದರಿಂದಾಗಿ ಮಗುವಿನಲ್ಲಿ ಸೀಮಿತ ಅರಿವಿನ ಕೌಶಲ್ಯ, ದೃಷ್ಟಿ ಮತ್ತು ಭಾಷೆಯಲ್ಲಿ ತೊಂದರೆಯುಂಟಾಗುವ ಸಾಧ್ಯತೆ ಇರುತ್ತದೆ.

ಗರ್ಭಿಣಿಯರು ಸಂಪೂರ್ಣವಾಗಿ ಮೀನನ್ನು ಏಕೆ ತಿರಸ್ಕರಿಸಬಾರದು?
ಏಕೆಂದರೆ ಇದರಲ್ಲಿರುವ ನ್ಯೂಟ್ರೀನ್ ಅಂಶಗಳನ್ನು ಗರ್ಭಿಣಿಯರು ಸೇವಿಸದೇ ಇದ್ದಲ್ಲಿ ಅವರಿಗೆ ಬೇಕಾದ ಪೋಷಕಾಂಶಗಳು ನಷ್ಟಗೊಳ್ಳುತ್ತದೆ. ಆದ್ದರಿಂದ ಇದರ ಮೂಲಕ ಬೇಕಾದ ಪೂರೈಕೆಗಳನ್ನು ಅವರಿಗೆ ಪಡೆದುಕೊಳ್ಳಬಹುದಾಗಿದೆ. ಮೀನು ತಿಂದರೆ ದೊರೆಯುವ ಪ್ರಮುಖ ಗುಣಗಳು    

Fish
 

ಗರ್ಭಾವಸ್ಥೆಯಲ್ಲಿ ಯಾವ ಮೀನನ್ನು ಸೇವಿಸಬಾರದು?
ಸಾಲ್ಮನ್, ಟ್ಯೂನಾ, ಸಾರ್ಡಿಯನ್ಸ್, ಟ್ರೋಟ್, ಶ್ರಿಂಪ್, ತಿಲಾಪಿಯಾ ಮೊದಲಾದ ಮೀನುಗಳನ್ನು ಸೇವಿಸಬಹುದಾಗಿದೆ. ಕಿಂಗ್ ಮೆಕ್ರಾಲ್, ಟೆಲಿಫಿಶ್, ಸ್ವಾರ್ಡ್ ಫಿಶ್, ರೆಫ್ರಿಜರೇಟ್ ಮಾಡಿದ ಸ್ಮೋಕ್‎ಡ್ ಫಿಶ್ ಮೊದಲಾದ ಮೀನುಗಳನ್ನು ಸೇವಿಸಬಾರದು.

Story first published: Wednesday, November 2, 2016, 15:05 [IST]
English summary

Why Pregnant Women Cannot Afford To Overlook Fish

Why Is Fish So Vital During Pregnancy? Fish contains omega-3 fatty acids, proteins, minerals like iron, calcium and magnesium and vitamins A and D. These are extremely necessary for expecting mothers, as they boost the baby's health and bless him/her with a good health.
Please Wait while comments are loading...
Subscribe Newsletter