ಗರ್ಭಿಣಿಯರೇ, ಆಹಾರದ ವಿಷಯದಲ್ಲಿ ಉದಾಸೀನ ಮಾಡಬೇಡಿ....

ಗರ್ಭಿಣಿ ಮಹಿಳೆಯರು ಸಾಮಾನ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಆಹಾರವನ್ನು ತಿನ್ನಬೇಕು. ಸುಮಾರು ಹತ್ತು ಕೆಜಿಯಷ್ಟು ಭಾರ ಹೆಚ್ಚಿಸಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ.

By: Hemanth
Subscribe to Boldsky

ಗರ್ಭ ಧರಿಸಿರುವಂತಹ ಮಹಿಳೆಯರು ಮತ್ತೊಂದು ಜೀವವು ದೇಹದೊಳಗೆ ಬೆಳೆಯುತ್ತಾ ಇರುತ್ತದೆ ಎಂದು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಯಾಕೆಂದರೆ ಆ ಜೀವಕ್ಕೆ ನೀವು ತಿನ್ನುವಂತಹ ಆಹಾರ, ನಿಮ್ಮ ಮನಸ್ಥಿತಿ ಎಲ್ಲವೂ ತುಂಬಾ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. 

ಗರ್ಭಿಣಿ ಮಹಿಳೆಯರು ಸಾಮಾನ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಆಹಾರವನ್ನು ತಿನ್ನಬೇಕು. ಸುಮಾರು ಹತ್ತು ಕೆಜಿಯಷ್ಟು ಭಾರ ಹೆಚ್ಚಿಸಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ. ಮನೆಯಲ್ಲಿಯೇ ಇರುವಂತಹ ಮಹಿಳೆಯರು ಏನಾದರೂ ತಿನ್ನುತ್ತಾ ಇರಬಹುದು. ಆದರೆ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ಇದು ಸಾಧ್ಯವಾಗುವುದಿಲ್ಲ.  ಮೂರನೆಯ ತಿಂಗಳಲ್ಲಿ ಗರ್ಭಿಣಿಯರ ಆಹಾರ ಕ್ರಮ ಹೀಗಿರಲಿ...   

Pregnant
 

ಯಾಕೆಂದರೆ ಕಚೇರಿ ಅಥವಾ ಕೆಲಸದ ಕಡೆ ಆಗಾಗ ತಿನ್ನಲು ಅವಕಾಶ ಇರುವುದು ತುಂಬಾ ಕಡಿಮೆ. ಆದರೆ ಗರ್ಭದರಲ್ಲಿರುವ ಮಗುವಿನ ಬಗ್ಗೆ ಕಾಳಜಿ ತುಂಬಾ ಮುಖ್ಯ. ಗರ್ಭಿಣಿಯಾಗಿರುವಾಗ ಸರಿಯಾದ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗದೆ ಇದ್ದರೆ ಅದರಿಂದ ಹಲವಾರು ಸಮಸ್ಯೆಗಳು ಎದುರಾಗಬಹುದು. ಗರ್ಭಿಣಿ ಮಹಿಳೆಯರು ಸರಿಯಾದ ಆಹಾರ ಕ್ರಮ ಪಾಲಿಸದೆ ಇದ್ದರೆ ಏನಾಗಬಹುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ.  

Pregnant
 

ನರಸಂಬಂಧಿ ಕಾಯಿಲೆ
ಗರ್ಭಿಣಿ ಮಹಿಳೆಯರು ಸರಿಯಾಗಿ ತಿನ್ನದೆ ಇದ್ದರೆ ಪೋಷಕಾಂಶಗಳ ಕೊರತೆಯಿಂದಾಗಿ ನರಸಂಬಂಧಿ ಕಾಯಿಲೆಗಳು ಬರಬಹುದು. ಮಗುವಿನ ಮೆದುಳಿನ ನರಗಳು ಹಾಗೂ ಬೆನ್ನೆಲುಬಿನ ಬೆಳವಣಿಗೆ ಸರಿಯಾಗಿ ಆಗದೆ ಇರಬಹುದು. ಕೆಲವೊಂದು ಸಂದರ್ಭಗಳಲ್ಲಿ ಎಲ್ಲವೂ ಸರಿಯಾಗಿ ಇದೆ ಎಂದು ನಿಮಗೆ ಅನಿಸಬಹುದು. ಆದರೆ ಮಗುವಿನ ಕಲಿಕೆಯಲ್ಲಿ ಸಮಸ್ಯೆಯಾಗಬಹುದು. 

Pregnant
 

ಗರ್ಭಪಾತ ಅಥವಾ ಮಗುವಿನ ಸಾವು
ಸರಿಯಾದ ಪೋಷಕಾಂಶಗಳು ಸಿಗದೆ ಇರುವಂತಹ ಗರ್ಭಿಣಿ ಮಹಿಳೆಯರಿಗೆ ಗರ್ಭಪಾತವಾಗಬಹುದು ಅಥವಾ ಜನನದ ಬಳಿಕ ಮಗು ಸಾವನ್ನಪ್ಪಬಹುದು. ಆದರೆ ಇಂತಹ ಪರಿಸ್ಥಿತಿ ಇಂದಿನ ದಿನಗಳಲ್ಲಿ ತುಂಬಾ ವಿರಳ. ಆದರೂ ಗರ್ಭಿಣಿ ಮಹಿಳೆಯರು ತಮ್ಮ ಆಹಾರ ಕ್ರಮದ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕು.     

Pregnant
 

ಮಗುವಿನ ತೂಕ ಕಡಿಮೆ
ಗರ್ಭಿಣಿಯಾಗಿದ್ದಾಗ ಸರಿಯಾದ ಆಹಾರ ಕ್ರಮವನ್ನು ಅನುಸರಿಸದೆ ಪೋಷಕಾಂಶಗಳ ಕೊರತೆ ಎದುರಿಸಿದ್ದರೆ ಮುಂದೆ ಜನಿಸಲಿರುವ ಮಗುವು ಕಡಿಮೆ ತೂಕವನ್ನು ಹೊಂದುವುದರಲ್ಲಿ ಸಂಶಯವೇ ಇಲ್ಲ. ಜನನದ ವೇಳೆ ತೂಕ ಕಡಿಮೆ ಇರುವ ಮಕ್ಕಳು ತೀವ್ರವಾದ ಸಮಸ್ಯೆಯನ್ನು ಎದುರಿಸಬಹುದು. ಬಾಲ್ಯದ ಕೆಲವೇ ವರ್ಷಗಳಲ್ಲಿ ಇಂತಹ ಮಕ್ಕಳ ಸಾವು ಸಂಭವಿಸಬಹುದು.   ಗರ್ಭಿಣಿಯರ ಆಹಾರ ಹೀಗಿದ್ದರೆ, ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ    

kids
 

ಕುಂಠಿತ ಬೆಳವಣಿಗೆ
ಗರ್ಭಿಣಿಯಾಗಿರುವಾಗ ನೀವು ಸರಿಯಾದ ರೀತಿಯಲ್ಲಿ ಆಹಾರ ಕ್ರಮವನ್ನು ಅನುಸರಿಸದೆ ಇದ್ದರೆ ಮತ್ತು ವಿಟಮಿನ್ ಹಾಗೂ ಇತರ ಕೆಲವೊಂದು ಪೋಷಕಾಂಶಗಳು ಮಗುವಿಗೆ ಸಿಗದಿದ್ದರೆ ಅದರಿಂದ ಮುಂದೆ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಉಂಟಾಗಬಹುದು. ಗರ್ಭದಲ್ಲಿರುವಾಗ ಮಗುವಿಗೆ ಸರಿಯಾದ ಪೋಷಕಾಂಶಗಳು ಸಿಗದೇ ಇರುವುದೇ ಇದಕ್ಕೆ ಕಾರಣವಾಗಿದೆ.

Story first published: Thursday, November 24, 2016, 11:34 [IST]
English summary

What Happens When Pregnant Mothers Don't Eat Properly?

Are you pregnant? Are you eating properly? You may be a working woman who is super busy with all your daily meetings, projects, etc., however, when it comes to motherhood, you can't ignore it. You just want to give your best to it, isn't it?
Please Wait while comments are loading...
Subscribe Newsletter