ಗರ್ಭಧಾರಣೆ ಪರೀಕ್ಷೆ: ನೀವು ತಿಳಿದುಕೊಳ್ಳಬೇಕಾದ ಮಾಹಿತಿಗಳು

ಗರ್ಭ ನಿಂತಿದೆ ಎಂದು ತಿಳಿಯುವುದು ಹೇಗೆ? ಎಪ್ಪತ್ತರ ದಶಕದಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳಲ್ಲೆಲ್ಲಾ 'ನನಗೀಗ ಮೂರು ತಿಂಗಳು' ಎಂದು ನಾಯಕಿ ಹೇಳುತ್ತಿದ್ದಂತೆ ಈಗ ಮೂರು ತಿಂಗಳು ಕಾಯಬೇಕಾಗಿಲ್ಲ...!

By: Hemanth
Subscribe to Boldsky

ಮಾನವನ ಜೀವನದಲ್ಲಿ ಬಾಲ್ಯ, ಯೌವನ ಮತ್ತು ಮದುವೆ ಈ ಮೂರು ಮಹತ್ವದ ಭಾಗಗಳು. ಅದರಲ್ಲೂ ಮಹಿಳೆಯರಿಗೆ ಮದುವೆಯಾದ ಬಳಿಕ ಮಗುವನ್ನು ಪಡೆಯುವುದು ಜೀವನ ಸಾರ್ಥಕಗೊಳಿಸಿದಂತೆ. ಮದುವೆಯಾದ ಪ್ರತಿಯೊಬ್ಬ ಮಹಿಳೆಯೂ ತನಗೆ ಮಗು ಬೇಕೆಂದು ಬಯಸುತ್ತಾಳೆ.

ಗರ್ಭಿಣಿಯಾದರಂತೂ ಆಕೆಯ ಸಂತೋಷಕ್ಕೆ ಪಾರವೇ ಇಲ್ಲ. ತನ್ನ ಮಗು ಹೇಗಿರಬೇಕು, ಅದಕ್ಕೆ ಯಾವ ರೀತಿಯ ಬಟ್ಟೆ ಹಾಕಬೇಕು, ಅದಕ್ಕೆ ಯಾವ್ಯಾವ ಆಭರಣ ಹಾಕಬೇಕು ಹೀಗೆ ಗರ್ಭಿಣಿಯಾಗಿರುವಾಗಲೇ ಹಲವಾರು ರೀತಿಯ ತಯಾರಿಗಳನ್ನು ನಡೆಸಲು ಆರಂಭಿಸುತ್ತಾಳೆ. ಗರ್ಭಧಾರಣೆ ಪರೀಕ್ಷೆಗಳನ್ನು, ಮನೆಯಲ್ಲಿಯೇ ಮಾಡಬಹುದು!

ಹೌದು, ನಮಗೆಲ್ಲಾ ಗೊತ್ತಿರುವ ಹಾಗೆ ಮದುವೆಯ ಬಳಿಕದ ಜೀವನ ಮುಂದೆ ಸಾಗಲು ಗರ್ಭಧಾರಣೆ, ಮಗು ಪ್ರಮುಖವಾಗಿರುತ್ತದೆ. ಮಗು ದಂಪತಿಗಳ ನಡುವಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಆದರೆ ಗರ್ಭಧಾರಣೆಯಾಗಲು ಮೊದಲು ಮಾಡಬೇಕಾದ ಕೆಲಸವೆಂದರೆ ಅಂಡೋತ್ಪತ್ತಿಯ ದಿನಗಳನ್ನು ಲೆಕ್ಕ ಹಾಕುವುದು. ಅಂಡೋತ್ಪತ್ತಿಯ ಕೆಲವು ದಿನಗಳ ಬಳಿಕ ನೀವು ಗರ್ಭಧಾರಣೆಯ ಪರೀಕ್ಷೆ ಮಾಡಿಕೊಂಡರೆ ಗರ್ಭಧರಿಸಿರುವುದು ನಿಮಗೆ ತಿಳಿಯುತ್ತದೆ. ಗರ್ಭ ಧರಿಸಿದ್ದೀರಾ ಎಂದು ತಿಳಿಯಲು ಇರುವಂತಹ ಇನ್ನು ಕೆಲವು ಮಾರ್ಗಗಳು ಯಾವುದು ಎಂದು ಇಲ್ಲಿ ತಿಳಿದುಕೊಳ್ಳುವ....  


ರಕ್ತ ಪರೀಕ್ಷೆ

ಗರ್ಭಧಾರಣೆಯನ್ನು ತಿಳಿಯಲು ರಕ್ತ ಪರೀಕ್ಷೆಯು ಅತೀ ಉತ್ತಮ ವಿಧಾನವಾಗಿದೆ. ರಕ್ತಪರೀಕ್ಷೆಯಲ್ಲಿ ಎಚ್ ಸಿಜಿ ಮಟ್ಟವು ಕಂಡುಬಂದರೆ ಗರ್ಭಧರಿಸಿರುವುದನ್ನು ವೈದ್ಯರು ದೃಢಪಡಿಸುತ್ತಾರೆ. ಅಂಡೋತ್ಪತ್ತಿಯ 11 ದಿನಗಳ ಬಳಿಕ ರಕ್ತ ಪರೀಕ್ಷೆ ಮಾಡಿಕೊಂಡರೆ ನಿಮಗೆ ಫಲಿತಾಂಶ ಸಿಗುವುದು.

ಮೂತ್ರ ಪರೀಕ್ಷೆ

ಮೂತ್ರ ಪರೀಕ್ಷೆಯಲ್ಲಿ ಎಚ್ ಸಿಜಿ ಮಟ್ಟವು ಕಂಡುಬಂದರೆ ಗರ್ಭಧರಿಸಿರುವುದು ಸ್ಪಷ್ಟವಾಗುತ್ತದೆ. ಮೂತ್ರ ಪರೀಕ್ಷೆಯನ್ನು ಅಂಡೋತ್ಪತ್ತಿಯ 13ನೇ ದಿನದ ಬಳಿಕ ಮಾಡಿಕೊಳ್ಳಬಹುದಾಗಿದೆ.

ಕಿಟ್ ಬಳಕೆ

ಮನೆಯಲ್ಲಿಯೇ ಗರ್ಭಧಾರಣೆ ಪರೀಕ್ಷೆಯ ಕಿಟ್ ಬಳಕೆ ಮಾಡಿಕೊಂಡು ತಿಳಿಯಬಹುದಾಗಿದೆ. ಕಿಟ್ ಗೆ ಮೂತ್ರದ ಹನಿಗಳನ್ನು ಹಾಕಿದಾಗ ಗರ್ಭಧಾರಣೆಯಾಗಿದೆಯಾ? ಇಲ್ಲವಾ ಎಂದು ತಿಳಿಯುತ್ತದೆ. ಆದರೆ ಈ ಪರೀಕ್ಷೆ ನಿಖರ ಫಲಿತಾಂಶವನ್ನು ನೀಡುವುದಿಲ್ಲ.

ತಿಂಗಳ ಮುಟ್ಟು ಆಗದಿರುವುದು

ತಿಂಗಳ ಮುಟ್ಟು ಆಗದೆ ಇರುವುದು ಗರ್ಭಧರಿಸಿರುವುದನ್ನು ಪರೀಕ್ಷಿಸುವ ಮತ್ತೊಂದು ವಿಧಾನವಾಗಿದೆ. ಆದರೆ ಮುಟ್ಟು ಆಗದೆ ಇರಲು ಹಲವಾರು ಕಾರಣಗಳು ಇರಬಹುದು. ಇದರಿಂದ ವೈದ್ಯರಲ್ಲಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯುತ್ತಮ ವಿಧಾನವಾಗಿದೆ.

 

English summary

Ways To Know Whether You’re Pregnant

Tracking the ovulation days is the first step to plan pregnancy. If you are eager to know whether you are pregnant, then after a few days from the date of ovulation, you can go for a pregnancy test. What are the different options available to detect pregnancy? Well, here are a few of them.
Please Wait while comments are loading...
Subscribe Newsletter