ಹೀಗೂ ಗರ್ಭ ಧರಿಸುವ ಸಂಭವವಿದೆ! ಯಾವುದಕ್ಕೂ ಎಚ್ಚರವಿರಲಿ...

ಗರ್ಭನಿರೋಧಕಗಳನ್ನು ಉಪಯೋಗಿಸದೆ ಇದ್ದಾಗ ಮಾತ್ರ ಗರ್ಭ ಧರಿಸುತ್ತೇವೆ ಎಂದು ಹೆಚ್ಚಿನ ಮಹಿಳೆಯರು ಭಾವಿಸಿದ್ದಾರೆ. ಆದರೆ ಗರ್ಭನಿರೋಧಕಗಳನ್ನು ಬಳಸಿಯೂ ಕೆಲವು ಮಹಿಳೆಯರು ಗರ್ಭಿಣಿಯರಾದ ಬಗ್ಗೆ ಉದಾಹರಣೆಗಳು ಇವೆ..!

By: Hemanth
Subscribe to Boldsky

ಗರ್ಭಿಣಿಯಾಗುವುದನ್ನು ಪ್ರತಿಯೊಬ್ಬ ಮಹಿಳೆಯೂ ತನ್ನ ಭಾಗ್ಯ ಎಂದುಕೊಳ್ಳುತ್ತಾಳೆ. ಎಲ್ಲಾ ನೋವನ್ನು ನುಂಗಿ ಮತ್ತೊಂದು ಜೀವಕ್ಕೆ ಜನ್ಮ ನೀಡುವ ಕಾರ್ಯವನ್ನು ಮಹಿಳೆಯರು ಮಾಡುತ್ತಾರೆ. ಆದರೆ ಕೆಲವೊಮ್ಮೆ ಅನಿರೀಕ್ಷಿತವಾಗಿ ಗರ್ಭ ಧರಿಸಬೇಕಾಗುತ್ತದೆ. ಇದಕ್ಕೆ ಯಾವುದೇ ತಯಾರಿ ಕೂಡ ನಡೆಸಿರುವುದಿಲ್ಲ. ವಿವಿಧ ರೀತಿಯಿಂದ ನಿಮಗೆ ತಿಳಿಯದಂತೆ ಗರ್ಭ ಧರಿಸಬಹುದು ಎಂದು ನಿಮಗೆ ತಿಳಿದಿದೆಯಾ?

ಗರ್ಭನಿರೋಧಕಗಳನ್ನು ಉಪಯೋಗಿಸದೆ ಇದ್ದಾಗ ಮಾತ್ರ ಗರ್ಭ ಧರಿಸುತ್ತೇವೆ ಎಂದು ಹೆಚ್ಚಿನ ಮಹಿಳೆಯರು ಭಾವಿಸಿದ್ದಾರೆ. ಆದರೆ ಗರ್ಭನಿರೋಧಕಗಳನ್ನು ಬಳಸಿಯೂ ಕೆಲವು ಮಹಿಳೆಯರು ಗರ್ಭಿಣಿಯರಾದ ಬಗ್ಗೆ ಉದಾಹರಣೆಗಳು ಇವೆ.  ಗರ್ಭಧಾರಣೆ ಯಶಸ್ವಿಯಾಗುವುದು ಹೇಗೆ ?

ಅನಿರೀಕ್ಷಿತವಾಗಿ ನೀವು ಹೇಗೆ ಗರ್ಭ ಧರಿಸಬಹುದು ಎಂದು ಸರಿಯಾಗಿ ತಿಳಿದಿದ್ದರೆ ಲೈಂಗಿಕ ಕ್ರಿಯೆಯ ವೇಳೆ ಸೂಕ್ತ ರಕ್ಷಣಾ ಕ್ರಮವನ್ನು ಅನುಸರಿಸಬಹುದಾಗಿದೆ. ಗರ್ಭ ಧರಿಸುವ ಕೆಲವೊಂದು ಮಾರ್ಗಗಳ ಬಗ್ಗೆ ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. ಅದರ ಬಗ್ಗೆ ಒಮ್ಮೆ ಓದಿಕೊಂಡು ತಿಳಿಯಿರಿ.....

ಗುದ ಸಂಭೋಗ

ಗುದ ಸಂಭೋಗ ಮಾಡಿದರೆ ಅದರಿಂದ ಗರ್ಭಧಾರಣೆಯಾಗುವುದಿಲ್ಲವೆಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ಗುದ ಸಂಭೋಗದಿಂದಲೂ ಗರ್ಭಧರಿಸುವ ಸಾಧ್ಯತೆಯಿದೆ. ವೀರ್ಯವು ಗುದನಾಳದಿಂದ ಯೋನಿಗೆ ಪ್ರವೇಶಿಸಿದರೆ ಗರ್ಭ ಧರಿಸುವ ಸಾಧ್ಯತೆಯಿದೆ.

ಕಾಂಡೋಮ್ ಬಿರುಕುಬಿಡುವುದು

ಕಾಂಡೋಮ್‌ನ ಪ್ಯಾಕೇಟ್ ಅನ್ನು ತುಂಬಾ ಬಲ ಪ್ರಯೋಗ ಮಾಡಿ ತೆಗೆಯಲು ಪ್ರಯತ್ನಿಸಬಾರದು. ಅದರಲ್ಲೂ ಬಾಯಿಯಲ್ಲಿ ಕಚ್ಚಿ ಕಾಂಡೋಮ್ ಪ್ಯಾಕೇಟ್ ಹೊಡೆದರೆ ಆಗ ಕಾಂಡೋಮ್ ನಲ್ಲಿ ತೂತು ಬೀಳುವ ಸಾಧ್ಯತೆಗಳು ಇವೆ. ಇದರಿಂದ ಅನಿರೀಕ್ಷಿತವಾಗಿ ಗರ್ಭಧಾರಣೆ ಸಂಭವವಿದೆ.

ಒಣಕ್ರಿಯೆ

ಕೆಲವು ಮಂದಿ ಗರ್ಭಧಾರಣೆಯನ್ನು ಮುಂದೂಡುವ ಕಾರಣದಿಂದಾಗಿ ಪುರುಷರು ಅಂಡರ್ ವೇರ್ ಹಾಕಿಕೊಂಡೇ ಲೈಂಗಿಕ ಕ್ರಿಯೆ ನಡೆಸುತ್ತಾರೆ. ಈ ವೇಳೆ ವೀರ್ಯವು ಹೊರಬಂದು ಅದು ಯೋನಿಯೊಳಗೆ ಪ್ರವೇಶಿಸಿದರೆ ಗರ್ಭಧರಿಸುವ ಸಾಧ್ಯತೆಯಿದೆ.

ಗರ್ಭಿಣಿಯಾಗಿರುವಾಗ ಗರ್ಭಧರಿಸುವುದು!

ಇದು ಅಸಾಧ್ಯವೆಂದು ನಿಮಗೆ ಅನಿಸಬಹುದು. ಆದರೆ ಮಹಿಳೆಯೊಬ್ಬಳು ಗರ್ಭಧರಿಸಿರುವಾಗಲೇ ಮತ್ತೊಮ್ಮೆ ಗರ್ಭಿಣಿಯಾಗಬಹುದು. ಇಂತಹ ಪರಿಸ್ಥಿತಿಯನ್ನು ಸೂಪರ್ ಫೆಟೇಷನ್ ಎಂದು ಕರೆಯಲಾಗುತ್ತದೆ.

ತೈಲ ಮೂಲದ ಲೂಬ್ರಿಕೆಂಟ್

ಕಾಂಡೋಮ್ ನೊಂದಿಗೆ ನೀವು ತೈಲ ಹೊಂದಿರುವ ಲೂಬ್ರಿಕೆಂಟ್ ಬಳಸುತ್ತಾ ಇದ್ದರೆ ಆಗ ಕಾಂಡೋಮ್ ಜಾರಿ ಅದರಲ್ಲಿರುವ ಸಣ್ಣ ಸಣ್ಣ ರಂಧ್ರಗಳಿಂದ ವೀರ್ಯವು ಹೊರಹೋಗಿ ಗರ್ಭಧಾರಣೆಯಾಗುವ ಸಾಧ್ಯತೆಯಿದೆ.

ಒಂದೇ ಟಬ್ ನಲ್ಲಿ....

ಕೆಲವರು ವಿಶೇಷ ರೀತಿಯಲ್ಲಿ ಲೈಂಗಿಕ ಕ್ರಿಯೆ ಮಾಡಲು ಬಯಸುವ ಕಾರಣದಿಂದ ನೀರಿನ ಟಬ್ ನಲ್ಲಿ ಇಬ್ಬರು ಇಳಿಯುತ್ತಾರೆ. ಈ ವೇಳೆ ಪುರುಷರಲ್ಲಿ ವೀರ್ಯಸ್ಖಲನವಾಗಿ ಅದು ಯೋನಿಯೊಳಗೆ ಹೋದರೆ ಗರ್ಭ ಧರಿಸುವ ಸಾಧ್ಯತೆಯಿದೆ.

ಗರ್ಭ ನಿರೋಧಕ ಮಾತ್ರೆಗಳು

ಒಂದು ದಿನವೂ ಬಿಡದೆ ನೀವು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಇದ್ದರೂ ಗರ್ಭ ಧರಿಸುವ ಸಾಧ್ಯತೆಯಿದೆ. ಯಾಕೆಂದರೆ ಈ ಮಾತ್ರೆಗಳು ಅಷ್ಟು ಪರಿಣಾಮಕಾರಿಯಲ್ಲ.

ಕೈಬೆರಳು

ಇದು ಸ್ವಲ್ಪ ವಿಚಿತ್ರವೆನಿಸಬಹುದು. ಆದರೆ ಪುರುಷನು ಮೊದಲು ತನ್ನ ವೀರ್ಯವನ್ನು ಮುಟ್ಟಿದ ಬೆರಳನ್ನು ಯೋನಿಯೊಳಗೆ ಹಾಕಿದಾಗ ಗರ್ಭಧರಿಸುವ ಸಾಧ್ಯತೆಗಳು ಇರುತ್ತದೆ.

ಕಾಂಡೋಮ್ ಜಾಗ

ಕಾಂಡೋಮ್ ಧರಿಸುವಾಗ ತುದಿಯಲ್ಲಿ ಸ್ವಲ್ಪ ಜಾಗ ಬಿಡದೆ ಸಂಪೂರ್ಣವಾಗಿ ಎಳೆದುಕೊಂಡಿದ್ದರೆ ಆಗ ವೀರ್ಯವು ಹರಿದುಹೋಗಿ ಯೋನಿಯನ್ನು ಸೇರುವ ಸಾಧ್ಯತೆಗಳು ಇವೆ. ಇದರಿಂದ ಮಹಿಳೆಯರು ಗರ್ಭ ಧರಿಸಬಹುದು.

ಸಂತಾನಹರಣ ಶಸ್ತ್ರಚಿಕಿತ್ಸೆ

ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಪುರುಷರೊಂದಿಗೆ ನೀವು ಲೈಂಗಿಕ ಕ್ರಿಯೆ ನಡೆಸಿದರೂ ಕೆಲವೊಮ್ಮೆ ಗರ್ಭ ಧರಿಸುವ ಸಾಧ್ಯತೆಗಳು ಇದೆ. ಯಾಕೆಂದರೆ ತುಂಡು ಮಾಡಲ್ಪಟ್ಟ ನರಗಳು ಮತ್ತೆ ಜೋಡಣೆಯಾಗುವ ಸಾಧ್ಯತೆಗಳಿವೆ.

ಟ್ಯೂಬ್ ಚಿಕಿತ್ಸೆ

ನೀವು ಗರ್ಭನಿಯಂತ್ರಣ ಮಾಡಿಕೊಳ್ಳಲು ಟ್ಯೂಬ್ ನ್ನು ಬಂಧಿಸಿದ್ದರೂ ಅದರಿಂದ ಗರ್ಭಧಾರಣೆ ಸಾಧ್ಯವಿದೆ. ಯಾಕೆಂದರೆ ಇಂತಹ ಶಸ್ತ್ರಚಿಕಿತ್ಸೆ ಶೇ.100ರಷ್ಟು ಪರಿಣಾಮಕಾರಿಯಾಗಲ್ಲ.

ಸ್ನಾನದ ವೇಳೆ ಲೈಂಗಿಕ ಕ್ರಿಯೆ

ಸ್ನಾನದ ವೇಳೆ ಲೈಂಗಿಕ ಕ್ರಿಯೆ ನಡೆಸುವುದರಿಂದ ಗರ್ಭ ಧರಿಸುವ ಸಾಧ್ಯತೆ ಇಲ್ಲವೆಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ವೀರ್ಯವು ಒಳಹೋಗದೆ ಇದ್ದರೆ ಮಾತ್ರ ಇದು ಸಾಧ್ಯ.

 

English summary

Surprising Ways You Can Get Pregnant Without Knowing!

Getting pregnant can be a big deal, especially if you haven't planned for it, right? Well, did you know that there are various ways in which you could get pregnant without realising? Yes, it is true! Normally, we think that we can get pregnant only when you do not use protection; however, we may be wrong there, as there are many instances in which women do get pregnant, after taking all the necessary precautions to avoid it!
Please Wait while comments are loading...
Subscribe Newsletter