For Quick Alerts
ALLOW NOTIFICATIONS  
For Daily Alerts

ಹೆದರದಿರಿ! ಗರ್ಭಾವಸ್ಥೆಯಲ್ಲಿ ಈ ಲಕ್ಷಣಗಳು ಸರ್ವೇ ಸಾಮಾನ್ಯ

By Jaya subramanya
|

ಹೆಣ್ಣು ತಾಯಿಯಾಗುವಾಗ ಕೆಲವೊಂದು ಸೂಚನೆಗಳು ಉಂಟಾಗುವುದು ಸರ್ವೇ ಸಾಮಾನ್ಯವಾಗಿದೆ. ತಿಂಗಳ ಮುಟ್ಟಿನಲ್ಲಿ ವ್ಯತ್ಯಾಸ, ವಾಕರಿಕೆ, ತಲೆಸುತ್ತು, ಸುಸ್ತು ಹೀಗೆ ಅನೇಕ ಲಕ್ಷಣಗಳು ಉಂಟಾಗುತ್ತದೆ. ಆದರೆ ನಿಮಗೆ ಗೊತ್ತಿಲ್ಲದ ಕೆಲವೊಂದು ಗರ್ಭವಾಸ್ಥೆಯ ಲಕ್ಷಣಗಳನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದು ನಿಮಗಿದೂ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ.

ಹೆಚ್ಚುವರಿ ಯೋನಿ ವಿಸರ್ಜನೆ ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿದೆ. ನಿಮ್ಮ ದೇಹದಲ್ಲಿ ಉಂಟಾಗುತ್ತಿರುವ ಹಾರ್ಮೋನಲ್ ಬದಲಾವಣೆ ಇದಕ್ಕೆ ಕಾರಣವಾಗಿದೆ. ಗರ್ಭಾವಸ್ಥೆಯ ಕೊನೆಯ ಹಂತದಲ್ಲಿ ಯೋನಿ ವಿಸರ್ಜನೆ ತೀವ್ರವಾಗಿರುತ್ತದೆ.

Strange Pregnancy Symptoms That Are Nothing To Worry About

ಈ ವಿಸರ್ಜನೆಯು ಹಳದಿ ಅಥವಾ ಬಿಳಿ ಬಣ್ಣದಲ್ಲಿದ್ದರೆ ನೀವು ಹೆದರುವ ಅಗತ್ಯವಿಲ್ಲ. ಇದು ಹೆಚ್ಚು ತುರಿಕೆ ಮತ್ತು ವಾಸನೆಯದ್ದಾಗಿದ್ದರೆ ವೈದ್ಯರನ್ನು ಭೇಟಿಮಾಡಿ. ಇದು ಈಸ್ಟ್ ಸೋಂಕಾಗಿರಬಹುದಾಗಿದೆ. ಒಂದು ವೇಳೆ ಇದು ನಿರಂತರ ಮತ್ತು ನೀರಿನ ರೂಪದಲ್ಲಿದ್ದರೆ ಏನಾದರೂ ಕಾರಣವಾಗಿರುತ್ತದೆ. ಆಮ್ನಿಯೋಟಿಕ್ ದ್ರವ ಸೋರಿಕೆಯಾಗಿರಲೂಬಹುದಾಗಿದೆ. ನೀವು ಗರ್ಭಿಣಿ ಎಂದು ತೋರಿಸುವ ಕೆಲವೊಂದು ಲಕ್ಷಣಗಳು

ಗರ್ಭಾವಸ್ಥೆಯಲ್ಲಿ ಲಕ್ಷಣದ ಗೋಚರ ಸರ್ವೇ ಸಾಮಾನ್ಯವಾಗಿದೆ. ರಕ್ತಸ್ರಾವದ ಮುಟ್ಟು ಇದ್ದಲ್ಲಿ, ಜರಾಯು ಪ್ರಿವಿಯಾ (ಜರಾಯು ಆವರಿಸಿಕೊಂಡಿರುವ ಗರ್ಭಕಂಠದ ಆರಂಭಿಕ ಭಾಗ). ಆಗ ವೈದ್ಯರನ್ನು ಕೂಡಲೇ ಸಂಪರ್ಕಿಸಿ.

ಮೂಗಿನಲ್ಲೂ ರಕ್ತ ಸೋರಿಕೆ ಉಂಟಾಗಬಹುದು ಅಂತೆಯೇ ದವಡೆಯಲ್ಲೂ ರಕ್ತಸ್ರಾವ ಉಂಟಾಗುತ್ತದೆ. ಇದು ಗರ್ಭಾವಸ್ಥೆಯ ಹಾರ್ಮೋನು ಕಾರಣಗಳಿಂದ ಉಂಟಾಗಿರುವಂತಹದ್ದಾಗಿದೆ. ಇದಕ್ಕೆ ಚಿಂತಿಸಬೇಕಾದ ಅಗತ್ಯವಿಲ್ಲ. ಕಾಲುಗಳಲ್ಲಿ ಮತ್ತು ಯೋನಿಯಲ್ಲಿ ಉಬ್ಬಿರುವ ರಕ್ತನಾಳಗಳ ಸಮಸ್ಯೆಯಿಂದ ಶೇಕಡಾದಷ್ಟು ಗರ್ಭಿಣಿ ಸ್ತ್ರೀಯರು ಬಳಲುತ್ತಾರೆ. ಇದು ಕೂಡ ಸಂಪೂರ್ಣ ಸಹಜವಾಗಿದೆ.

ಗರ್ಭಾವಸ್ಥೆಯ ನಂತರದ ಸ್ಥಿತಿಗಳಲ್ಲಿ ಊತ ಮತ್ತು ನೋವು ಸಾಮಾನ್ಯವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಮಗುವನ್ನು ಹೆರಲು ತಾಯಿಗೆ ಸೊಂಟವನ್ನು ತೆರೆಯಲು ಹಾರ್ಮೋನು ಹಗರುಗೊಳ್ಳುವಾಗ ದೇಹದಲ್ಲಿರುವ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯಾಗುವುದರ ಲಕ್ಷಣಗಳನ್ನು ನೀವೆ ಪತ್ತೆ ಮಾಡಿ

ಇದು ಬೆನ್ನು ನೋವು ಮತ್ತು ವಾತವಾಗಿ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಮೊಲೆ ತೊಟ್ಟುಗಳು ದೊಡ್ಡದಾಗಿ ಕಪ್ಪಾಗಿ ಕಾಣಿಸಿಕೊಳ್ಳುತ್ತದೆ. ರಕ್ತದ ಪ್ರಮಾಣದಲ್ಲಿ ಹೆಚ್ಚಳವುಂಟಾಗುವುದು ಇದಕ್ಕೆ ಕಾರಣವಾಗಿದೆ. ನಿಮ್ಮ ಮಗುವಿಗೆ ಮೊಲೆಹಾಲನ್ನು ಉಣಿಸುವುದಕ್ಕಾಗಿ ನಿಮ್ಮ ದೇಹವನ್ನು ಪ್ರಕೃತಿಯು ಸಿದ್ಧಪಡಿಸುವ ವಿಧಾನ ಇದಾಗಿದೆ.

English summary

Strange Pregnancy Symptoms That Are Nothing To Worry About

A missed period is usually the first sign that indicates that you may be pregnant. Nausea or morning sickness is also a very common sign. You may also feel very tired and sleepy. These are very common signs that most of us are aware of but there are certain signs that are seen during pregnancy that might leave us confused and bewildered.
X
Desktop Bottom Promotion