ಗರ್ಭಾವಸ್ಥೆಯಲ್ಲಿ ಅಧಿಕ ತೂಕ, ಯಾವುದಕ್ಕೂ ಇರಲಿ ಎಚ್ಚರ....

ಸಾಮಾನ್ಯವಾಗಿ ತಾಯಿ ಗರ್ಭದೊಳಗಿರುವ ಶಿಶು, ರಕ್ತದ ಹೆಚ್ಚಳ, ಬೆಳೆಯುತ್ತಿರುವ ಗರ್ಭಕೋಶ ಮತ್ತು ಆಮ್ನಿಯೋಟಿಕ್ ದ್ರವ ಮುಂತಾದ ಅಂಶಗಳು ಆಕೆಯ ದೇಹದ ತೂಕವನ್ನು ಹೆಚ್ಚಿಸುತ್ತವೆ. ಆದರೆ ಇದು ಆರೋಗ್ಯದ ಮೇಲೆ ಕೆಟ್ಟ ಪ್ರಭಾವವನ್ನು ಬೀರುತ್ತದೆ....

By: suma
Subscribe to Boldsky

ತಾಯ್ತನೆಂಬುದು ಸ್ತ್ರೀಯ ಜೀವನದಲ್ಲಿ ಒಂದು ಪ್ರಮುಖವಾದ ಘಟ್ಟ. ಹೆಣ್ಣು ತಾಯಿಯಾಗುತ್ತಾಳೆ ಎಂಬುದು ಸಂಭ್ರಮದ ಸುದ್ದಿಯಾಗಿದ್ದರೂ ಇದರೊಂದಿಗೆ ಸೂಕ್ತ ಎಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲೇಬೇಕಾಗಿರುವುದನ್ನು ಮಾತ್ರ ಆಕೆ ಮರೆಯಬಾರದು

ತನ್ನ ಆರೋಗ್ಯವೇ ಮಗುವಿನ ಆರೋಗ್ಯಕ್ಕೆ ಬೆಂಗಾವಲಾಗಿ ಇರುವುದರಿಂದ ಆದಷ್ಟು ಕಾಳಜಿಯನ್ನು ವಹಿಸಬೇಕಾಗುತ್ತದೆ. ತೆಗೆದುಕೊಳ್ಳುವ ಆಹಾರ, ನಿತ್ಯದ ಜೀವನ ಕ್ರಮದಲ್ಲಿ ಪಾಲಿಸಬೇಕಾದ ನಿಯಮಗಳು ಹೀಗೆ ಹೆಜ್ಜೆ ಹೆಜ್ಜೆಗೂ ಜಾಗ್ರತೆಯನ್ನು ಪಾಲಿಸಬೇಕು.... ಆದರೆ ಕೆಲವೊಮ್ಮೆ ಎಷ್ಟೇ ಆರೈಕೆ ಮಾಡಿದರೂ, ಈ ಸಮಯದಲ್ಲಿ ಗರ್ಭಿಣಿಯರ ದೇಹದ ತೂಕ ಹೆಚ್ಚಾಗುವುದು ಸಹಜ ಪ್ರಕ್ರಿಯೆ... ಇದಕ್ಕೆ ಅಷ್ಟೊಂದು ಕಳವಳಪಡಬೇಕಾದ ಅಗತ್ಯವಿಲ್ಲ, ಹಾಗಂತ ನಿರ್ಲಕ್ಷ್ಯವನ್ನೂ ಮಾಡುವಂತಿಲ್ಲ....   ಗರ್ಭಧಾರಣೆಯ ಸಮಯದಲ್ಲಿ ತೂಕ ಕಡಿಮೆ ಮಾಡುವ ಸರಳೋಪಾಯಗಳು

Pregnancy

ಸಾಮಾನ್ಯವಾಗಿ ತಾಯಿ ಗರ್ಭದೊಳಗಿರುವ ಶಿಶು, ರಕ್ತದ ಹೆಚ್ಚಳ, ಬೆಳೆಯುತ್ತಿರುವ ಗರ್ಭಕೋಶ ಮತ್ತು ಆಮ್ನಿಯೋಟಿಕ್ ದ್ರವ ಮುಂತಾದ ಅಂಶಗಳು ಆಕೆಯ ದೇಹದ ತೂಕವನ್ನು ಹೆಚ್ಚಿಸುತ್ತವೆ. ಆದರೆ ಕೆಲಮೊಮ್ಮೆ ಇದು ಆರೋಗ್ಯದ ಮೇಲೆ ಕೆಟ್ಟ ಪ್ರಭಾವವನ್ನು ಬೀರುತ್ತದೆ. ಹಾಗಿದ್ದರೆ ಅಧಿಕ ತೂಕಕ್ಕೆ ಕಾರಣವಾಗಿರುವ ಅಂಶಗಳನ್ನು ಇಂದಿನ ಲೇಖನದಲ್ಲಿ ನಾವು ಪಟ್ಟಿ ಮಾಡುತ್ತಿದ್ದು ನೀವು ಈ ಅಂಶಗಳನ್ನು ಗಮನಿಸಿಕೊಳ್ಳಬಹುದಾಗಿದೆ.

ಬೊಜ್ಜು
ನೀವು ಈಗಾಗಲೇ ಹೆಚ್ಚಿನ ತೂಕವನ್ನು ಹೊಂದಿದ್ದಲ್ಲಿ, ಗರ್ಭಾವಸ್ಥೆಯಲ್ಲಿ ಹೆಚ್ಚಿನ ತೂಕವನ್ನು ನೀವು ಪಡೆದುಕೊಳ್ಳುತ್ತೀರಿ, ನಿಮ್ಮ ಬಿಎಮ್‏ಐ 30 ಕ್ಕಿಂತ ಹೆಚ್ಚಿನದ್ದಾಗಿದ್ದರೆ ನಿಮ್ಮ ತೂಕ 5-9 ಮೇಲ್ಮಟ್ಟವನ್ನು ತಲುಪಾರದು. ನಿಮ್ಮ ತೂಕವನ್ನು ನೀವು ಪರಿಶೀಲಿಸಿಕೊಂಡಿಲ್ಲ ಎಂದಾದಲ್ಲಿ, ಗರ್ಭಾವಸ್ಥೆ ಸಂಬಂಧಿ ಹೆಚ್ಚಿನ ತೊಂದರೆಗಳನ್ನು ನೀವು ಅನುಭವಿಸಬಹುದಾಗಿದೆ.

pregnancy women
 

ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವನೆ
ಮನೆಯಲ್ಲಿ ಹಿರಿಯರು ಗರ್ಭಾವಸ್ಥೆ ಸಮಯದಲ್ಲಿ ಕೊಂಚ ಅಧಿಕವೇ ಕಾಳಜಿಯನ್ನು ತೋರಿಸುತ್ತಾರೆ. ಇದರಿಂದ ಗರ್ಭಿಣಿಯರು ಅಧಿಕಕ್ಕಿಂತ ಹೆಚ್ಚಾಗಿಯೇ ಆಹಾರ ಸೇವನೆ ಮಾಡುತ್ತಾರೆ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಗರ್ಭಾವಸ್ಥೆಯಲ್ಲಿ ಹೆಚ್ಚುವರಿ ಆಹಾರ ಸೇವನೆ ಮಾಡುತ್ತಿದ್ದೀರಿ ಎಂದಾದಲ್ಲಿ ವೈದ್ಯರನ್ನು ಅಥವಾ ಡಯೆಟೀಶಿಯನ್ ಅನ್ನು ಕಾಣುವುದು ಒಳಿತು

Drinking milk
 

ಸಿಹಿ, ಹಾಲು ಮತ್ತು ಉಪ್ಪಿನ ಅಂಶಗಳನ್ನು ಅಧಿಕವಾಗಿ ಸೇವಿಸುವುದು
ಗರ್ಭಾವಸ್ಥೆಯಲ್ಲಿ ಹಾಲು ಅತ್ಯಧಿಕವಾಗಿ ಬೇಕಾಗಿರುವ ಆಹಾರವಾದರೂ, ಕಡಿಮೆ ಪ್ರಮಾಣದಲ್ಲಿ ಹಾಲನ್ನು ಬಳಸಿಕೊಳ್ಳಿ ಅಥವಾ ಸ್ಕಿಮ್ ಹಾಲು ಇಲ್ಲವೇ ಕೊಬ್ಬು ರಹಿತ ಹಾಲಿನ ಸೇವನೆಯನ್ನು ಮಾಡಿ. ಚೀಸ್ ಬಳಸುತ್ತಿದ್ದೀರಿ ಎಂದಾದಲ್ಲಿ ಕೊಬ್ಬು ರಹಿತಕ್ಕೆ ಹೆಚ್ಚಿನ ಒತ್ತು ನೀಡಿ. ಸಿಹಿ ಪದಾರ್ಥಗಳ ಸೇವನೆಯನ್ನು ಆದಷ್ಟು ಮಿತವಾಗಿ ಮಾಡಿ. ಉಪ್ಪು ಸೇವನೆಯನ್ನು ಅಗತ್ಯಕ್ಕಿಂತ ಹೆಚ್ಚುವರಿಯಾಗಿ ಮಾಡಬೇಡಿ. 

pregnancy women
 

ನಿದ್ದೆಯ ಕೊರತೆ
ರಾತ್ರಿ ಹೊತ್ತು ಹೆಚ್ಚು ಸಮಯ ನಿದ್ದೆಗೆಡುವುದೂ ಕೂಡ ಹೆಚ್ಚುವರಿ ತೂಕಕ್ಕೆ ಕಾರಣವಾಗುತ್ತದೆ. ನಿಮ್ಮ ನಿದ್ದೆಯ ಪ್ರಮಾಣ ಕಡಿಮೆಯಾದಲ್ಲಿ, ನೀವು ಸೇವಿಸುವ ಅಧಿಕ ಸಕ್ಕರೆ ಮತ್ತು ಕೊಬ್ಬಿನ ಪದಾರ್ಥಗಳು ಚಯಾಪಚಯ ವ್ಯವಸ್ಥೆಗೆ ತೊಂದರೆಯನ್ನುಂಟು ಮಾಡಬಹುದು. ಏಳರಿಂದ ಎಂಟು ಗಂಟೆ ಸಾಮಾನ್ಯ ನಿದ್ದೆಯನ್ನು ಪಡೆದುಕೊಳ್ಳಿ, ಇದರಿಂದ ಚಯಾಪಚಯ ಕ್ರಿಯೆ ಅತ್ಯುತ್ತಮಗೊಳ್ಳುತ್ತದೆ.

pregnancy women sleeping
 

ಹೆಚ್ಚು ಒತ್ತಡ
ನೀವು ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದಲ್ಲಿ ಕುಳಿತಲ್ಲೇ ಕುಳಿತಿದ್ದಲ್ಲಿ ಹೆಚ್ಚುವರಿ ತೂಕಕ್ಕೆ ಕಾರಣವಾಗುತ್ತದೆ. ಗರ್ಭಾವಸ್ಥೆಯಲ್ಲಿ ನಿಮ್ಮ ಚಲನವಲನಗಳು ನಿಧಾನಗೊಂಡಾಗ ಅಧಿಕ ಒತ್ತಡಕ್ಕೆ ನೀವು ಒಳಗಾದಾಗ ನಿಮ್ಮ ಚಯಾಪಚಯ ಕ್ರಿಯೆ ಕುಂಠಿತಗೊಳ್ಳುತ್ತದೆ ಮತ್ತು ನಿಮ್ಮನ್ನು ಬೊಜ್ಜಿಗೆ ಒಳಪಡಿಸುತ್ತದೆ. ನೀವು ಗರ್ಭಾವಸ್ಥೆಗೆ ಸಿದ್ಧರಾಗಿದ್ದೀರಿ ಎಂದಾದಲ್ಲಿ ಅತ್ತಿತ್ತ ನಡೆದಾಡಲು ಆರಂಭಿಸಿ. ಧ್ಯಾನ, ಯೋಗ ಚಟುವಟಿಕೆಗಳನ್ನು ಮಾಡಿ. ಇದರಿಂದ ಒತ್ತಡವನ್ನು ನಿಮಗೆ ನಿರಾಯಾಸವಾಗಿ ನೀಗಿಸಬಹುದಾಗಿದೆ.   ಹೆರಿಗೆಯ ಬಳಿಕ ಹೆಚ್ಚಿದ ತೂಕ ಕಮ್ಮಿ ಮಾಡಲು ಟಿಪ್ಸ್

Read more about: pregnancy
English summary

Signs Of Weight Gain During Pregnancy

Here are five signs that will tell whether you will gain fat during pregnancy. Have a look at these signs and we suggest you to make lifestyle changes to treat the issue better during pregnancy.
Please Wait while comments are loading...
Subscribe Newsletter