ಎಚ್ಚರ: ಗರ್ಭಾವಸ್ಥೆಯ ಏಳು ಲಕ್ಷಣಗಳನ್ನು ಕಡೆಗಣಿಸಲೇಬಾರದು

By: Jaya subramanya
Subscribe to Boldsky

ಗರ್ಭ ಧರಿಸಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ತಾಯಿಯಾಗುತ್ತಿರುವವಳಿಗೆ ಆಗುವ ಸಂತಸ ಅಷ್ಟಿಷ್ಟಲ್ಲ. ತನ್ನ ಕುಡಿಯೊಂದು ತನ್ನ ಒಡಲಲ್ಲಿ ಬೆಳೆಯಲಿದೆ ಎಂಬ ಕಲ್ಪನೆಯೇ ಅತಿ ಮಧುರ. ಆದರೆ ಈ ಸಂಭ್ರಮದಲ್ಲಿ ತಾಯಿಯಾಗುವವಳು ತನ್ನ ಆರೋಗ್ಯವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ.     ಹೆರಿಗೆಯ ದಿನಗಳು ಹತ್ತಿರ ಬರುತ್ತಿದ್ದಂತೆ ಕಂಡು ಬರುವ ಲಕ್ಷಣಗಳು....

ಅದರಲ್ಲೂ ಪೂರ್ಣ ನವಮಾಸಗಳಲ್ಲಿ ವಿವಿಧ ಆಹಾರಗಳನ್ನು ಸೇವಿಸಬೇಕು ಮತ್ತು ಕೆಲವು ಆಹಾರಗಳನ್ನು ಸರ್ವಥಾ ಸೇವಿಸಬಾರದು. ಏಕೆಂದರೆ ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಆರೋಗ್ಯ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ಅರಿವಿಲ್ಲದೇ ಒಂದು ಚಿಕ್ಕ ತಪ್ಪು ಹೆಜ್ಜೆ ಇಟ್ಟರೂ ಈ ಸಂತಸ ಹೊಳೆಯಲ್ಲಿ ಹುಣಸೆ ಹಣ್ಣು ಕಿವುಚಿದ ಹಾಗೆ ಆಗಬಹುದು!   ಗರ್ಭಿಣಿಯರ ಆರೋಗ್ಯಕ್ಕೆ ಗಿಡಮೂಲಿಕೆಯ ಉಪಚಾರ

ಹಾಗಾಗಿ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕಾಗಿದ್ದು ಅವರಿಗೆ ಆರೋಗ್ಯ ಸಮಸ್ಯೆಗಳುಂಟಾದಲ್ಲಿ ಕೂಡಲೇ ಪರಿಹಾರವನ್ನು ಕಂಡುಕೊಳ್ಳಬೇಕಾಗಿರುವುದು ಅತ್ಯಗತ್ಯ. ಬನ್ನಿ ಇಂದಿನ ಲೇಖನದಲ್ಲಿ ಗರ್ಭಾವಸ್ಥೆಯ ಸಮಸ್ಯೆಗಳ ಬಗ್ಗೆ ಕೆಲವೊಂದು ಎಚ್ಚರಿಕೆಯ ಮಾಹಿತಿಗಳನ್ನು ನಾವು ನೀಡುತ್ತಿದ್ದು ಯಾವೆಲ್ಲಾ ವಿಚಾರದಲ್ಲಿ ತಾಯಿಯು ಮುತುವರ್ಜಿಯನ್ನು ವಹಿಸಬೇಕು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.....

ರಕ್ತಸ್ರಾವ

ಗರ್ಭಾವಸ್ಥೆಯಲ್ಲಿ ನಿಮಗೆ ರಕ್ತಸ್ರಾವ ಉಂಟಾಗುತ್ತಿದೆ ಎಂದಾದಲ್ಲಿ ವೈದ್ಯರನ್ನು ಸಂಪರ್ಕಿಸಿ. ಇದು ಗರ್ಭಪಾತದ ಲಕ್ಷಣವಾಗಿರಲಿಕ್ಕೂ ಸಾಧ್ಯತೆ ಇದೆ. ನೋವು ಮತ್ತು ರಕ್ತಸ್ರಾವವು ಏಳನೇ ಮತ್ತು ಎಂಟನೇ ತಿಂಗಳಲ್ಲಿ ಸಂಭವಿಸಿದಲ್ಲಿ ಜರಾಯು ಮುರಿದು ಹೋಗುವಿಕೆಯಿಂದ ಸಂಭವಿಸಿರಲೂಬಹುದು. ಗರ್ಭಾವಸ್ಥೆಯ ಯಾವುದೇ ಹಂತದಲ್ಲಿ ರಕ್ತಸ್ರಾವ ಉಂಟಾದಾಗ ತುರ್ತು ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿಕೊಳ್ಳಿ.   ಗರ್ಭಾವಸ್ಥೆಯಲ್ಲಿ ರಕ್ತಸ್ರಾವ ಮತ್ತು ಅದರ ಲಕ್ಷಣಗಳು

ವಾಂತಿ

ಗರ್ಭಾವಸ್ಥೆಯಲ್ಲಿ ವಾಂತಿ ಸಾಮಾನ್ಯವಾಗಿದೆ. ನಿಮಗೆ ಇದು ಸರಿಯಾಗಿ ತಿನ್ನಲು ಕುಡಿಯಲು ಆಗುತ್ತಿಲ್ಲ ಎಂದಾದಲ್ಲಿ ಎರಡು ಸಮಸ್ಯೆಗಳು ಉಂಟಾಗಬಹುದು. ಮೊದಲನೆಯದ್ದು, ಡಿಹೈಡ್ರೇಟ್ ಅನ್ನು ಉಂಟುಮಾಡಬಹುದು ಮತ್ತು ಪೋಷಣೆಯ ಕೊರತೆಯನ್ನು ನೀವು ಎದುರಿಸಬಹುದು. ಆ ಸಮಯದಲ್ಲಿ ವೈದ್ಯರನ್ನು ಕಾಣುವುದು ಸೂಕ್ತವಾದುದಾಗಿದೆ.  ಗರ್ಭಿಣಿಯರ ಪ್ರಾಣ ಹಿಂಡುವ ವಾಂತಿ ಸಮಸ್ಯೆಗೆ ಕಡಿವಾಣ ಹಾಕುವುದು ಹೇಗೆ?

ಮಗುವಿನ ಚಟುವಟಿಕೆ ಹಂತ

ಕೆಲವೊಂದು ಪರಿಕರಗಳನ್ನು ಬಳಸಿಕೊಂಡು ಭ್ರೂಣದ ಚಲನವಲನಗಳನ್ನು ನಮಗೆ ಕಂಡುಕೊಳ್ಳಬಹುದಾಗಿದೆ. ಹೊಟ್ಟೆಯೊಳಗೆ ಮಗುವಿನ ಒದೆತದ ಅನುಭವ ತಾಯಿಗೆ ಉಂಟಾಗುತ್ತಿಲ್ಲ ಎಂದಾದಲ್ಲಿ ವೈದ್ಯರನ್ನು ಕಾಣಿ.

ಪೂರ್ವ ಸಂಕುಚಿತ

ಕೊನೆಯ ತ್ರೈಮಾಸಿಕದಲ್ಲಿ ಕುಗ್ಗುವಿಕೆಯು ಆರಂಭಿಕ ಪ್ರಸವವನ್ನು ಸೂಚಿಸುತ್ತದೆ. ಆ ಸಮಯದಲ್ಲಿ ನಿಮ್ಮ ವೈದ್ಯರನ್ನು ಕರೆಸಿಕೊಳ್ಳುವುದು ಉತ್ತಮ.

ನೀರಿನ ಒಡೆತ

ಕೆಲವು ಮಹಿಳೆಯರಲ್ಲಿ, ಗರ್ಭಾವಸ್ಥೆಯಲ್ಲಿ ವಿಸ್ತಾರವಾದ ಗರ್ಭಕೋಶವು ಮೂತ್ರಕೋಶವನ್ನು ಒತ್ತಿದಾಗ ಮೂತ್ರದ ಅನಿರೀಕ್ಷಿತ ಸೋರಿಕೆ ಸಂಭವಿಸುತ್ತದೆ. ಈ ಸಮಯದಲ್ಲಿ ಮೂತ್ರಕೋಶವನ್ನು ಖಾಲಿಮಾಡಿ ಮತ್ತು ವೈದ್ಯರನ್ನು ಸಂಪರ್ಕಿಸಿ.

ವಿಪರೀತ ತಲೆನೋವು ಮತ್ತು ಕಿಬ್ಬೊಟ್ಟೆ ನೋವು

ಹೆಚ್ಚುವರಿ ರಕ್ತದೊತ್ತಡ ಮತ್ತು ತೀವ್ರ ತಲೆನೋವು ಮೂರನೇ ತ್ರೈಮಾಸಿಕದಲ್ಲಿ ಕಂಡುಬಂದಿತು ಎಂದಾದಲ್ಲಿ ಇದು ಪ್ರಿಕ್ಲಾಂಪ್ಸಿಯಾ ಆಗಿರಬಹುದು. ಆಗ ವೈದ್ಯರ ಆಗಮನ ಆಗಲೇಬೇಕು.

ಜ್ವರ

ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು ಜ್ವರಕ್ಕೆ ತುತ್ತಾಗುತ್ತಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ನಿಮಗೆ ಜ್ವರದ ಲಕ್ಷಣಗಳು ಕಂಡುಬಂದಿತು ಎಂದಾದಲ್ಲಿ ವೈದ್ಯರನ್ನು ಸಂಪರ್ಕಿಸಿ.

 

Story first published: Thursday, November 17, 2016, 13:08 [IST]
English summary

Pregnancy Problems That Shouldn't Be Ignored!

During pregnancy, every single single day is important as the health of the woman must be carefully monitored till the day of delivery. Also Read: How To Strengthen Your Bond With Your Baby During that phase, some abnormal signs and symptoms may need immediate medical attention.
Please Wait while comments are loading...
Subscribe Newsletter