ಗರ್ಭಾವಸ್ಥೆಯಲ್ಲಿ ಆಂಟಿಬಯಾಟಿಕ್‌ ಸೇವನೆ ಎಷ್ಟು ಸೂಕ್ತ?

ಗರ್ಭಾವಸ್ಥೆಯಲ್ಲಿ ಇರುವ ಮಹಿಳೆ ತಿನ್ನುವ ಎಲ್ಲಾ ವಸ್ತುಗಳ ಮೇಲೆ ಗಮನವಿರಿಸಬೇಕಾಗಿದೆ. ತಾಯಿ ತೆಗೆದುಕೊಳ್ಳುವ ಪ್ರತಿ ಆಹಾರ ಮತ್ತು ಮಾತ್ರೆ ಔಷಧಿಗಳಿಂದಾಗಿ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ.

By: Jaya
Subscribe to Boldsky

ಮಗುವಿನ ತಾಯಿಯಾಗುವಂತಹ ನೈಸರ್ಗಿಕ ಪ್ರಕ್ರಿಯೆ ಕ್ಷಣ ಮಾತ್ರದಲ್ಲಿ ಸಂಭವಿಸುವಂತಹ ಪವಾಡವಲ್ಲ. ಸಿನಿಮಾಗಳಲ್ಲಿ ಧಾರವಾಹಿಗಳಲ್ಲಿ ಸ್ತ್ರೀಯು ಗರ್ಭಿಣಿಯಾಗುವುದು ನಂತರ ಆಕೆ ಶಿಶುವನ್ನು ಹೆರುವುದು, ಆ ಮಗು ದೊಡ್ಡದಾಗಿ ಬೆಳೆಯುವುದು ಇದೆಲ್ಲವೂ ಕೆಲವೇ ಗಂಟೆಗಳಲ್ಲಿ ಸಂಭವಿಸಿಬಿಡುತ್ತದೆ.

ಆದರೆ ನಿಜ ಜೀವನದಲ್ಲಿ ಗರ್ಭಿಣಿಯಾಗುವುದು ಕಂದಮ್ಮನನ್ನು ಒಡಲಿನಲ್ಲಿ ಒಂಬತ್ತು ತಿಂಗಳು ಹೊರುವುದು ಹೆರುವುದು ತುಂಬಾ ದೀರ್ಘ ಕಾಲದ ಕ್ರಿಯೆಯಾಗಿದೆ, ಎಂಬುದು ವಾಸ್ತವ ಸತ್ಯ. ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತವೆ. ತಲೆನೋವು, ಹೊಟ್ಟೆನೋವು ಈ ರೀತಿಯ ವಿಷಯಗಳಿಗೆ ವೈದ್ಯರನ್ನು ಕಂಡು ಅದಕ್ಕೆ ಅವರು ಸೂಚಿಸಿದಂತೆ ನಡೆದುಕೊಳ್ಳುವುದು ಸೂಕ್ತ. 

Antibiotics During Pregnancy
 

ಅದರಲ್ಲೂ ಈ ಸಮಯದಲ್ಲಿ ಬೇಕಾಬಿಟ್ಟಿಯಾಗಿ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಆದಷ್ಟು ಕಡೆಗಣಿಸಬೇಕು. ಈ ಸಮಯದಲ್ಲಿ ಪ್ರತಿಜೀವಕಗಳನ್ನು (ಆಂಟಿಬಯಾಟಿಕ್ಸ್) ಗಳನ್ನು ತೆಗೆದುಕೊಳ್ಳಬಹುದೇ ಬೇಡವೇ ಎಂಬುದು ಹೆಚ್ಚಿನ ಗರ್ಭಿಣಿಯರ ಚಿಂತೆಯಾಗಿರುತ್ತದೆ. ತೆಗೆದುಕೊಳ್ಳಬೇಕು ಎಂದಾದಲ್ಲಿ ಭಯ ಬೇಡ ಇಂದಿಲ್ಲಿ ನೀಡುವ ಸಲಹೆಗಳು ನಿಮಗೆ ಈ ಬಗೆಯಾಗಿ ಸಹಕಾರವನ್ನು ನೀಡಲಿವೆ. ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳಬಾರದ 10 ಔಷಧಿಗಳು    

Antibiotics During Pregnancy
 

ಗರ್ಭಿಣಿಯರು ತಾಯ್ತನದ ಸಮಯದಲ್ಲಿ ಹಲವಾರು ದೈಹಿಕ ಬದಲಾವಣೆಗಳಿಗೆ ಒಳಗಾಗಬೇಕಾಗುತ್ತದೆ ಈ ಸಮಯದಲ್ಲಿ ಆಂಟಿಬಯಾಟಿಕ್ಸ್‌ಗಳು ಅವರುಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ಹಾಗಿದ್ದರೆ ಆಂಟಿಬಯಾಟಿಕ್ಸ್ ತೆಗೆದುಕೊಳ್ಳುವುದು ಸೂಕ್ತವೇ ಇಲ್ಲವೇ ಎಂಬುದನ್ನು ಅರಿತುಕೊಳ್ಳೋಣ. 

Antibiotics During Pregnancy
 

1.ಆಂಟಿಬಯಾಟಿಕ್ಸ್ ಎಂದರೇನು?
ಬ್ಯಾಕ್ಟಿರಿಯಾಗಳಿಂದ, ವೈರಸ್ ಮತ್ತು ಇತರ ಮೈಕ್ರೋಬ್‌ಗಳಿಂದ ಉಂಟಾಗುವ ಸೋಂಕುಗಳಿಂದ ಸಂರಕ್ಷಣೆಯನ್ನು ಪಡೆದುಕೊಳ್ಳಲು ಆಂಟಿಬಯಾಟಿಕ್ಸ್ ಸಹಕಾರಿಯಾಗಲಿದೆ. ಆಂಟಿಬಯಾಟಿಕ್ಸ್ ರೋಗ ಹರಡುವ ಮೈಕ್ರೋಬ್‌ಗಳನ್ನು ನಾಶ ಮಾಡಿ ಅವುಗಳ ಬೆಳವಣಿಗೆಯನ್ನು ತಡೆಯುತ್ತದೆ.

Antibiotics During Pregnancy

ನಿತ್ಯವೂ ಈ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಇವುಗಳ ಪರಿಣಾಮ ದೇಹದಲ್ಲಿ ಉಂಟಾಗುವುದಿಲ್ಲ. ಇಷ್ಟಲ್ಲದೆ ಆಂಟಿಬಯಾಟಿಕ್ಸ್‌ಗಳು ಬಲವಾದ ರಾಸಾಯನಿಕಗಳನ್ನು ಒಳಗೊಂಡಿರುವುದರಿಂದ ಇವುಗಳು ಸೈಡ್ ಇಫೆಕ್ಟ್‌ಗಳನ್ನು ಉಂಟುಮಾಡಲಿವೆ. 

2.ಗರ್ಭಾವಸ್ಥೆ ಸಮಯದಲ್ಲಿ ಆಂಟಿಬಯಾಟಿಕ್ಸ್‌ಗಳು
ತಮಗೆ ಬರುವ ರೋಗಗಳ ಬಗ್ಗೆ ಗರ್ಭಿಣಿ ಮಹಿಳೆಯರಿಗೆ ಮೊದಲೇ ಅರಿವು ಇರುವುದಿಲ್ಲ. ಅವರುಗಳಲ್ಲಿ ವೈರಲ್ ಜ್ವರ ಕೂಡ ಉಂಟಾಗುತ್ತದೆ. ಯೀಸ್ಟ್ ಸೋಂಕುಗಳು ಅಥವಾ ಯಾವುದೇ ಬ್ಯಾಕ್ಟೀರಿಯಾಗಳಿಂದ ಕೂಡ ರೋಗ ಉಂಟಾಗಬಹುದು. ಈ ಸೋಂಕು ಹೆಚ್ಚು ಪ್ರಮಾಣದಲ್ಲಿದೆ ಎಂದಾದಲ್ಲಿ ಆಂಟಿಬಯಾಟಿಕ್ಸ್ ಅಗತ್ಯವಿರುತ್ತದೆ. 

Antibiotics During Pregnancy
 

3.ಹಾಗಿದ್ದರೆ ಗರ್ಭಿಣಿಯರು ಆಂಟಿಬಯಾಟಿಕ್ಸ್ ತೆಗೆದುಕೊಳ್ಳುವುದು ಸೂಕ್ತವೇ?
ನಿರ್ದಿಷ್ಟ ಆಂಟಿಬಯಾಟಿಕ್‌ಗಳನ್ನು ಗರ್ಭಿಣಿಯರು ತೆಗೆದುಕೊಳ್ಳುವುದರಿಂದ ಮಗುವಿನ ಜನನದ ನಂತರ ಅವರುಗಳಲ್ಲಿ ಅಸ್ತಮಾ ಉಂಟಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಇಂತಹ ಔಷಧಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಮಾಲೋಚಿಸಿ ಮತ್ತು ಅತಿ ಕಡಿಮೆ ಪ್ರಮಾಣದಲ್ಲಿ ಆಂಟಿಬಯಾಟಿಕ್‌ಗಳನ್ನು ತೆಗೆದುಕೊಳ್ಳಿ. ಮೂರನೇ ತ್ರೈಮಾಸಿಕದ ನಂತರ ಆಂಟಿಬಯಾಟಿಕ್‌ಗಳನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಿ.

Story first published: Tuesday, November 29, 2016, 10:44 [IST]
English summary

Is It Safe To Take Antibiotics During Pregnancy?

As we may know, antibiotics are strong medications that are prescribed by the doctors in order to help the body fight against microbial infections that can cause diseases in humans. So, let us find out here if it is actually safe to take antibiotics or not during pregnancy.
Please Wait while comments are loading...
Subscribe Newsletter