ಗರ್ಭಿಣಿಯರು ಆದಷ್ಟು 'ಬದನೆಕಾಯಿ' ಸೇವಿಸದಿರುವುದೇ ಒಳ್ಳೆಯದು

ಬದನೆಕಾಯಿಯಲ್ಲಿ ಹಲವಾರು ಪೋಷಕಾಂಶಗಳು ಇವೆ, ಎಂಬುದು ಈಗಾಗಲೇ ಆರೋಗ್ಯ ತಜ್ಞರು ಖಚಿತ ಪಡಿಸಿದ್ದಾರೆ. ಆದರೆ ಗರ್ಭಿಣಿಯರು ಮಾತ್ರ ಬದನೆಕಾಯಿಯನ್ನು ಅತಿಯಾಗಿ ತಿನ್ನಬಾರದು. ಯಾಕೆಂದರೆ ಇದರಿಂದ ದುಷ್ಪರಿಣಾಮ ಉಂಟಾಗಬಹುದು.

By: Hemanth
Subscribe to Boldsky

ಪ್ರತಿಯೊಂದು ತರಕಾರಿಯೂ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಆದರೆ ಕೆಲವು ತರಕಾರಿಗಳನ್ನು ಕೆಲವೊಂದು ಸಂದರ್ಭಗಳಲ್ಲಿ ತಿನ್ನುವುದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಬದನೆಕಾಯಿಯನ್ನು ಹೆಚ್ಚಿನವರು ಇಷ್ಟಪಡುವುದು ಕಡಿಮೆ. ಆದರೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ, ಎಂಬುದು ಈಗಾಗಲೇ ಆರೋಗ್ಯ ತಜ್ಞರು ಖಚಿತ ಪಡಿಸಿದ್ದಾರೆ.

Brinjal

ಆದರೆ ಗರ್ಭಿಣಿಯರು ಮಾತ್ರ ಬದನೆಕಾಯಿಯನ್ನು ಅತಿಯಾಗಿ ತಿನ್ನಬಾರದು. ಯಾಕೆಂದರೆ ಇದರಿಂದ ದುಷ್ಪರಿಣಾಮ ಉಂಟಾಗಬಹುದು. ಬದನೆಕಾಯಿಯಲ್ಲಿ ಜನನದ ವೇಳೆ ಉಂಟಾಗುವ ತೊಂದರೆ, ಗರ್ಭದಲ್ಲಿ ಶಿಶುವಿನ ಬೆಳವಣಿಗೆ, ಗರ್ಭದಲ್ಲಿ ಕಾಣಿಸಿಕೊಳ್ಳುವ ಮಧುಮೇಹ ಮತ್ತು ಮಲಬದ್ಧತೆಗೆ ತುಂಬಾ ಪರಿಣಾಮಕಾರಿ. ಆದರೆ ಇದರಿಂದ ಕೆಲವೊಂದು ಅಡ್ಡಪರಿಣಾಮಗಳೂ ಇದೆ. ಗರ್ಭಿಣಿಯರೇ ದಿನ ನಿತ್ಯದ ಆಹಾರ ಕ್ರಮ ಹೀಗಿರಲಿ

Brinjal

ಬದನೆಕಾಯಿ ತಿನ್ನಬೇಕೆಂದು ನಿಮಗನಿಸಿದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಮಬದನೆಕಾಯಿಯಿಂದ ಆಗುವಂತಹ ಕೆಲವೊಂದು ಅಡ್ಡಪರಿಣಾಮಗಳನ್ನು ಇಲ್ಲಿ ನೀಡಲಾಗಿದೆ. ಬದನೆಕಾಯಿಯಲ್ಲಿರುವ ಪೈಥೋ ಹಾರ್ಮೋನು ಮಾಸಿಕ ಋತುವನ್ನು ಪ್ರೇರೇಪಿಸುತ್ತದೆ. ಇದರಿಂದ ಗರ್ಭಿಣಿಯರು ಅತಿಯಾಗಿ ಬದನೆಕಾಯಿ ತಿಂದರೆ ಗರ್ಭಪಾತವಾಗುವ ಸಂಭವವಿದೆ.

pregnant women

ಇದು ಗರ್ಭಕೋಶದಲ್ಲಿ ಕುಗ್ಗುವಿಕೆಯನ್ನು ಉಂಟು ಮಾಡುತ್ತದೆ. ಇದರಿಂದ ಗರ್ಭಪಾತ ಅಥವಾ ಅಕಾಲಿಕ ಹೆರಿಗೆಯಾಗಬಹುದು. ಅಷ್ಟೇ ಅಲ್ಲದೆ, ಆಸಿಡಿಟಿ ಉಂಟುಮಾಡುವ ಕಾರಣದಿಂದ ಗರ್ಭಿಣಿ ಮಹಿಳೆಯರು ಇದರಿಂದ ತೊಂದರೆ ಅನುಭವಿಸಬಹುದು. ಇದು ಗರ್ಭಿಣಿ ಮಹಿಳೆಯರಿಗೆ ಬೇರೆ ಸಮಸ್ಯೆ ಕೂಡ ಉಂಟು ಮಾಡಬಹುದು, ಜೊತೆಗೆ ಅಜೀರ್ಣಕ್ಕೂ ಕಾರಣವಾಗಬಹುದು.

pregnant women

ಅದರಲ್ಲೂ ಇದನ್ನು ಸರಿಯಾಗಿ ಬೇಯಿಸದೆ ಇದ್ದಾಗ ಇದು ಅಲರ್ಜಿ ಉಂಟು ಮಾಡುವ ಸಾಧ್ಯತೆಯಿದೆ. ಗರ್ಭಿಣಿ ಮಹಿಳೆಯರು ಆದಷ್ಟು ಮಟ್ಟಿಗೆ ಬದನೆಕಾಯಿಯಿಂದ ದೂರವಿರಿ. ತಿನ್ನಲೇಬೇಕಿದ್ದರೆ ವೈದ್ಯರ ಸಲಹೆ ಪಡೆಯಿರಿ.

Story first published: Saturday, December 10, 2016, 13:00 [IST]
English summary

Is Brinjal Safe During Pregnancy?

Eggplant is known as brinjal and is consumed more in India. Well, is it safe to eat it during pregnancy? Moderation is okay but excessive consumption isn't safe! The benefits of eggplant are: it can minimise the risk of birth defects, helps in foetal development, prevents gestational diabetes, and prevents constipation.
Please Wait while comments are loading...
Subscribe Newsletter