For Quick Alerts
ALLOW NOTIFICATIONS  
For Daily Alerts

ಹೂವೊಂದು ಬೇಕು ಬಳ್ಳಿಗೆ, ಮಗುವೊಂದು ಬೇಕು ಹೆಣ್ಣಿಗೆ!

By Jaya
|

ಮಗುವಿನ ತಾಯಿಯಾಗುವಂತಹ ನೈಸರ್ಗಿಕ ಪ್ರಕ್ರಿಯೆ ಕ್ಷಣ ಮಾತ್ರದಲ್ಲಿ ಸಂಭವಿಸುವಂತಹ ಪವಾಡವಲ್ಲ. ಸಿನಿಮಾಗಳಲ್ಲಿ ಧಾರವಾಹಿಗಳಲ್ಲಿ ಸ್ತ್ರೀಯು ಗರ್ಭಿಣಿಯಾಗುವುದು ನಂತರ ಆಕೆ ಶಿಶುವನ್ನು ಹೆರುವುದು, ಆ ಮಗು ದೊಡ್ಡದಾಗಿ ಬೆಳೆಯುವುದು ಇದೆಲ್ಲವೂ ಕೆಲವೇ ಗಂಟೆಗಳಲ್ಲಿ ಸಂಭವಿಸಿಬಿಡುತ್ತದೆ. ಆದರೆ ನಿಜ ಜೀವನದಲ್ಲಿ ಗರ್ಭಿಣಿಯಾಗುವುದು ಕಂದಮ್ಮನನ್ನು ಒಡಲಿನಲ್ಲಿ ಒಂಬತ್ತು ತಿಂಗಳು ಹೊರುವುದು ಹೆರುವುದು ತುಂಬಾ ದೀರ್ಘ ಕಾಲದ ಕ್ರಿಯೆಯಾಗಿದೆ, ಎಂಬುದು ವಾಸ್ತವ ಸತ್ಯ. ಗರ್ಭಾವಸ್ಥೆ: 'ಆಹಾರ ಪಥ್ಯ' ಕಡ್ಡಾಯವಾಗಿ ಪಾಲಿಸಲೇಬೇಕು....

ನಮ್ಮೆಲ್ಲರಿಗೂ ತಿಳಿದಿರುವ ಹಾಗೆ, ತಾಯ್ತನವೆಂಬುದು ಹೆಣ್ಣಿಗೆ ದೇವರು ನೀಡಿದ ವರ, ಅದರಲ್ಲೂ ಮಹಿಳೆಯರಿಗೆ ಮದುವೆಯಾದ ಬಳಿಕ ಮಗುವನ್ನು ಪಡೆಯುವುದು ಜೀವನ ಸಾರ್ಥಕಗೊಳಿಸಿದಂತೆ. ಮದುವೆಯಾದ ಪ್ರತಿಯೊಬ್ಬ ಮಹಿಳೆಯೂ ತನಗೆ ಮಗು ಬೇಕೆಂದು ಬಯಸುತ್ತಾಳೆ. ಗರ್ಭಿಣಿಯಾದರಂತೂ ಆಕೆಯ ಸಂತೋಷಕ್ಕೆ ಪಾರವೇ ಇಲ್ಲ. ತನ್ನ ಮಗು ಹೇಗಿರಬೇಕು, ಅದಕ್ಕೆ ಯಾವ ರೀತಿಯ ಬಟ್ಟೆ ಹಾಕಬೇಕು, ಅದಕ್ಕೆ ಯಾವ್ಯಾವ ಆಭರಣ ಹಾಕಬೇಕು ಹೀಗೆ ಕಂದಮ್ಮನ ನಿರೀಕ್ಷೆಯಲ್ಲಿರುವ ಪ್ರತಿಯೊಬ್ಬ ಮಹಿಳೆಯೂ ಆಸೆ ಪಡುತ್ತಾಳೆ. ಗರ್ಭಾವಸ್ಥೆಯಲ್ಲಿ ಇದೆಲ್ಲಾ ಮಾಮೂಲು, ಭಯಪಡದಿರಿ!

ಆದರೆ ಇಂದಿನ ದಿನಗಳಲ್ಲಿ, ಹೆಚ್ಚುತ್ತಿರುವ ಒತ್ತಡದ ಜೀವನ ಶೈಲಿ, ಗರ್ಭನಿರೋಧಕ ಮಾತ್ರೆಗಳ ಅತಿಯಾದ ಬಳಕೆ ಹೀಗೆ ಹೆಚ್ಚಿನ ಸಮಸ್ಯೆಗಳು ತಾಯಿಯಾಗುವಲ್ಲಿ ಸ್ತ್ರೀಗೆ ನಿರ್ಬಂಧವನ್ನು ಹೇರುತ್ತಿವೆ. ಚಿಂತಿಸದಿರಿ ತಾಯ್ತನದ ಈ ಮಹತ್ವದ ಘಟಕ್ಕೆ ನಿಮ್ಮನ್ನು ನೀವು, ಹೇಗೆ ತಯಾರಿ ಮಾಡಿಕೊಳ್ಳುವುದು ಎಂಬುದನ್ನು ಈ ಕೆಳಗಿನ ಸ್ಲೈಡರ್‎ಗಳಲ್ಲಿ ನೀಡುತ್ತಿದ್ದೇವೆ ಮುಂದೆ ಓದಿ....

ಆರೋಗ್ಯ ಪೂರ್ಣ ಆಹಾರ

ಆರೋಗ್ಯ ಪೂರ್ಣ ಆಹಾರ

ಅನಾರೋಗ್ಯಕರ ಆಹಾರವು ಹೆಚ್ಚಿನ ಕೊಬ್ಬನ್ನು ಹೊಂದಿರುತ್ತದೆ, ಸಕ್ಕರೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವ ಅಂಶಗಳನ್ನು ಇದು ಪಡೆದುಕೊಂಡಿರುತ್ತದೆ. ಆದಷ್ಟು ನ್ಯೂಟ್ರೀನ್ ಯುಕ್ತ ಆಹಾರಗಳನ್ನು ಸೇವಿಸುವುದರತ್ತ ಗಮನ ಹರಿಸಿ ಮತ್ತು ರಾಸಾಯನಿಕ ಆಹಾರಗಳಿಂದ ದೂರವಿರಿ.

ಕರುಳನ್ನು ಸ್ವಚ್ಛಮಾಡುವ ಆಹಾರ ಸೇವಿಸಿ

ಕರುಳನ್ನು ಸ್ವಚ್ಛಮಾಡುವ ಆಹಾರ ಸೇವಿಸಿ

ನಿಮ್ಮ ಕರುಳು ಸ್ವಚ್ಛ ಮತ್ತು ಆರೋಗ್ಯಪೂರ್ಣವಾಗಿರುವಂತೆ ನೋಡಿಕೊಳ್ಳಿ, ನೀವು ಮಗುವನ್ನು ಹೊಂದಲು ಪರಿಪೂರ್ಣರಾಗಿ ಸಿದ್ಧರಾಗಿದ್ದೀರಿ ಎಂದಾದಲ್ಲಿ ನೀವು ಪ್ರೋಬಯಾಟಿಕ್ ಆಹಾರ, ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಕರುಳನ್ನು ಶುದ್ಧ ಮಾಡುವ ಪ್ರಮುಖ 10 ಆಹಾರಗಳು

ಫೋಲಿಕ್ ಆಸಿಡ್ ಭರ್ತಿಮಾಡಿ

ಫೋಲಿಕ್ ಆಸಿಡ್ ಭರ್ತಿಮಾಡಿ

ನಿಮ್ಮ ವೈದ್ಯರೊಂದಿಗೆ ಸಂದರ್ಶನ ನಡೆಸಿದ ನಂತರ, ಫೋಲಿಕ್ ಆಸಿಡ್ ಪೂರೈಕೆಗಳನ್ನು ನೀವು ಸೇವಿಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ, ಗರ್ಭವನ್ನು ಹೊಂದುವ ಮುನ್ನ ನೀವು ಸೂಕ್ತ ಸಮಾಲೋಚನೆಗಳನ್ನು ವೈದ್ಯರೊಂದಿಗೆ ನಡೆಸಬೇಕು. ಇದರಿಂದ ಆರೋಗ್ಯಪೂರ್ಣ ಗರ್ಭವನ್ನು ನೀವು ಹೊಂದುತ್ತೀರಿ.

ಯೋಗಾಭ್ಯಾಸ

ಯೋಗಾಭ್ಯಾಸ

ಡಬಲ್ ಪಿಜನ್, ಬಟರ್ ಫ್ಲೈ, ಸೊಂಟವನ್ನು ತಿರುಗಿಸುವುದು ಮೊದಲಾದ ವ್ಯಾಯಾಮಗಳು ಸಂತಾನೋತ್ಪತ್ತಿ ಅಂಗಗಳಿಗೆ ರಕ್ತದ ಹರಿವನ್ನು ಹೆಚ್ಚಿಸಿ ನಿಮ್ಮ ಫಲವತ್ತತೆಯನ್ನು ವೃದ್ಧಿಸುತ್ತದೆ.

ಒತ್ತಡರಹಿತರಾಗಿರಿ

ಒತ್ತಡರಹಿತರಾಗಿರಿ

ಬಂಜೆತನ ಮತ್ತು ಗರ್ಭಪಾತದಂತಹ ಸಮಸ್ಯೆಗಳಿಗೆ ಮುಖ್ಯ ಕಾರಣ ಒತ್ತಡವಾಗಿದ್ದು, ಆದಷ್ಟು ಶಾಂತರಾಗಿರಿ. ಧ್ಯಾನವನ್ನು ಅಭ್ಯಾಸ ಮಾಡಿ ಮತ್ತು ಯಾವಾಗಲೂ ಧನಾತ್ಮಕವಾಗಿ ಚಿಂತಿಸಿ

ಅಕ್ಯುಪಂಕ್ಚರ್ ಪ್ರಯತ್ನಿಸಿ

ಅಕ್ಯುಪಂಕ್ಚರ್ ಪ್ರಯತ್ನಿಸಿ

ವೃತ್ತಿಪರರಲ್ಲಿಗೆ ಭೇಟಿ ನೀಡಿ ನಿಯಮಿತ ಆಕ್ಯುಪಂಕ್ಚರ್ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ. ನೀವು ಗರ್ಭಿಣಿಯಾಗಲು ಇದು ಸಹಾಯ ಮಾಡುತ್ತದೆ ಮತ್ತು ನಿಮ್ಮ ಸಂಪೂರ್ಣ ಆರೋಗ್ಯಕ್ಕೂ ಉತ್ತಮವಾಗಿದೆ.

ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಿ

ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಿ

ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಮೋಜುದಾಯಕವಾಗಿರುತ್ತದೆ ಮತ್ತು ಫಲವತ್ತತೆ ವೃದ್ಧಿಸಲು ನಿರ್ದಿಷ್ಟ ಹಾರ್ಮೋನುಗಳನ್ನು ಪ್ರಚೋದಿಸುತ್ತದೆ. ಆದರೆ ಆನಂದವನ್ನು ಪಡೆದುಕೊಳ್ಳುವಂತಿರಲಿ.

English summary

How To Prepare Your Body For Pregnancy?

Are you a woman who has been yearning to have a child for a while now? Are you and your partner finally ready to start a family? Well, you may have heard of the popular saying about getting pregnant, "the bun in the oven". It refers to the womb being the oven and the baby being the bun. So, even in the literal sense, the bun can be made only if the oven is well-heated, right?
X
Desktop Bottom Promotion