For Quick Alerts
ALLOW NOTIFICATIONS  
For Daily Alerts

ಕಾಸ್ಮೆಟಿಕ್ಸ್ ವ್ಯಾಮೋಹ, ಸಂತಾನ ಫಲವನ್ನೇ ಕಸಿಯಬಹುದು!

By Arshad
|

ಸಂತಾನಹೀನತೆ ಇಂದು ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಬಹಳ ಪ್ರಮಾಣದಲ್ಲಿ ಕಂಡುಬರುತ್ತಿದೆ. ಇದಕ್ಕೆ ಕಾರಣಗಳು ಹಲವಾರು ಇವೆಯಾದರೂ ನಮ್ಮ ಜೀವನಶೈಲಿ, ವಾತಾವರಣದಲ್ಲಿರುವ ಪ್ರದೂಷಣೆ, ಕುಡಿಯುವ ನೀರಿನಲ್ಲಿ ಕರಗಿರುವ ಪಾದರಸ, ಎಲೆಕ್ಟ್ರಾನಿಕ್ ವಸ್ತುಗಳ ವಿಕಿರಣ ಮೊದಲಾದ ಹಲವು ಕಾರಣಗಳಿರಬಹುದು. ವಯಸ್ಸು ದಂಪತಿಗಳ ಫಲವತ್ತತೆಯ ಮೇಲೆ ಪ್ರಭಾವ ಬೀರಬಹುದೇ?

ಆದರೆ ಇತ್ತೀಚಿನ ಸಂಶೋಧನೆಯೊಂದರಲ್ಲಿ ಕಂಡುಕೊಂಡಿರುವ ಪ್ರಕಾರ ಸೌಂದರ್ಯವೃದ್ಧಿಗಾಗಿ ನಡೆಸುವ ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾಗುವ ಕೆಲವು ರಾಸಾಯನಿಕಗಳೂ ಮಹಿಳೆಯರಲ್ಲಿ ಸಂತಾಫಲವನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ. ಆದ್ದರಿಂದ ಈ ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಿಗಳನ್ನು ಹಾಗೂ ಈ ಔಷಧಿಗಳಲ್ಲಿರುವ ರಾಸಾಯನಿಕಗಳ ಬಗ್ಗೆ ತಜ್ಞರಿಂದ ಪರಿಶೀಲಿಸಿಕೊಂಡು ಸುರಕ್ಷಿತ ಎಂದು ಪ್ರಮಾಣೀಕರಿಸಿಕೊಳ್ಳುವುದು ಉತ್ತಮ ಕ್ರಮ. ಗರ್ಭಪಾತದ ಬಳಿಕ ಫಲವತ್ತತೆಯನ್ನು ನಿರೀಕ್ಷಿಸಬಹುದೇ?

ಸಾಧ್ಯವಾದರೆ ಮತ್ತು ಅನಿವಾರ್ಯವಲ್ಲದಿದ್ದರೆ ಈ ಶಸ್ತ್ರಚಿಕಿತ್ಸೆಯಿಂದ ದೂರವೇ ಉಳಿಯಿರಿ. ಏಕೆಂದರೆ ನಿಮ್ಮ ಸೌಂದರ್ಯದ ಉಳಿವಿಗಿಂತಲೂ ನಿಮಗೆ ಬರಲಿರುವ ಸಂತಾನವೇ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ಸೌಂದರ್ಯವೃದ್ಧಿಗಾಗಿ ಸಾಧ್ಯವಾದಷ್ಟು ನೈಸರ್ಗಿಕ ಸೌಂದರ್ಯವರ್ಧಕಗಳನ್ನೇ ಬಳಸಿ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಉಗುರಿನ ಬಣ್ಣ

ಉಗುರಿನ ಬಣ್ಣ

ಉಗುರಿನ ಬಣ್ಣದಲ್ಲಿ ಬೆಂಜೀನ್ ಮತು ಟೌಲೀನ್ ಎಂಬ ರಾಸಾಯನಿಕಗಳಿವೆ. ಈ ರಾಸಾಯನಿಕಗಳು ಕಮಟು ವಾಸನೆ ಹೊಂದಿದ್ದು ಮೂಗಿನ ಮೂಲಕ ಇದರ ಹಬೆ ದೇಹ ಸೇರಿದರೂ ಮಹಿಳೆಯರ ಮಾಸಿಕ ದಿನಗಳ ಅವಧಿಯೇ ಏರುಪೇರಾಗುತ್ತದೆ. ಅಲ್ಲದೇ ಇದು ಗರ್ಭಾಪಾತದ ಸಾಧ್ಯತೆಯನ್ನೂ ಅಪಾರವಾಗಿ ಹೆಚ್ಚಾಗಿಸುತ್ತದೆ.

ಕೂದಲ ಬಣ್ಣ

ಕೂದಲ ಬಣ್ಣ

ಕೆಲವು ಬಣ್ಣಗಳಲ್ಲಿ ಸೀಸದ ಅಂಶವಿರುತ್ತದೆ (lead). ಇದು ಮೊದಲು ಪೆಟ್ರೋಲಿನ ಹೊಗೆಯಲ್ಲಿಯೂ ಇತ್ತು. ಇದೇ ಕಾರಣಕ್ಕೆ ಸೀಸರಹಿತವಾಗಿಸಿ (unleaded) ವಾಹನಗಳಿಗೆ ಹಾಕಬೇಕು ಎಂಬ ಕಾನೂನು ಜಾರಿಗೆ ಬಂದಿದೆ. ಪತ್ರಿಕೆಗಳ ಇಂಕ್‌ನಲ್ಲಿಯೂ ಸೀಸವಿದೆ. ಇವುಗಳಲ್ಲಿ ಸುತ್ತಿಕೊಟ್ಟ ಆಹಾರಗಳ ಮೂಲಕವೂ ಹೊಟ್ಟೆ ಸೇರಬಲ್ಲವು. ಇವು ಯಾವುದೇ ರೂಪದಲ್ಲಿರಲಿ, ನಮ್ಮ ಚರ್ಮದ ಮೂಲಕ ರಕ್ತಕ್ಕೆ ಇಳಿಯುವ ಸಾಮರ್ಥ್ಯ ಹೊಂದಿದೆ. ಈ ಸೀಸದ ಅಂಶ ಹೆಚ್ಚಾದಷ್ಟೂ ಮಹಿಳೆಯರ ಸಂತಾನಫಲದ ಕ್ಷಮತೆ ಕಡಿಮೆಯಾಗುತ್ತಾ ಹೋಗುತ್ತದೆ.

ಇತರ ಸೌಂದರ್ಯ ಪ್ರಸಾಧನಗಳು

ಇತರ ಸೌಂದರ್ಯ ಪ್ರಸಾಧನಗಳು

ನಿಮ್ಮ ಇತರ ಪ್ರಸಾದನಗಳಲ್ಲಿರುವ ರಾಸಾಯನಿಕಗಳ ಪಟ್ಟಿಯನ್ನೊಮ್ಮೆ ಪರಾಮರ್ಶಿಸಿ. ಒಂದು ವೇಳೆ ಇದರಲ್ಲಿ Formaldehyde ಎಂಬ ಪದ ಕಂಡುಬಂದಿತೋ, ಆ ಪ್ರಸಾದನದ ಬಳಕೆಯನ್ನು ತಕ್ಷಣದಿಂದ ನಿಲ್ಲಿಸಿಬಿಡಿ. ಏಕೆಂದರೆ ಇದು ಮಹಿಳೆಯರಲ್ಲಿ ಸಂತಾನಹೀನತೆಯನ್ನು ಹೆಚ್ಚಿಸುತ್ತದೆ.

ಸ್ಪ್ರೇ ಮತ್ತು ಸುಗಂಧದ್ರವ್ಯಗಳು

ಸ್ಪ್ರೇ ಮತ್ತು ಸುಗಂಧದ್ರವ್ಯಗಳು

ಕೂದಲಿಗೆ, ಕಂಕುಳಿಗೆ ಮತ್ತು ಮೈಗೆ ಪೂಸಿಕೊಳ್ಳುವ ಸುಗಂಧ ಅಥವಾ ಬೆವರು ಸಾಲೆ ತಡೆಯುವ ಪ್ರಸಾದನಗಳ ರಾಸಾಯನಿಕಗಳ ಪಟ್ಟಿ ಪರಿಶೀಲಿಸಿ. ಒಂದು ವೇಳೆ ಇದರಲ್ಲಿ phthalates (ಥಾಲೇಟ್ಸ್) ಎಂಬ ಕಣ ಇದ್ದರೆ ಇವು ಮಹಿಳೆಯರ ಹಾರ್ಮೋನುಗಳ ಸ್ರವಿಕೆಯ ಮೇಲೆ ಪ್ರಭಾವ ಬೀರಿ ಸಂತಾನ ಹೀನತೆಗೆ ಕಾರಣವಾಗುತ್ತದೆ.

ಕ್ರೀಂಗಳು

ಕ್ರೀಂಗಳು

ನಿಮ್ಮ ಸೌಂದರ್ಯ ಹೆಚ್ಚಿಸುವ ಕ್ರೀಂಗಳು ಅಥವಾ ತೇವಕಾರಗಳು ಗಾಢವಾಗಿ ಸುವಾಸನೆ ಬೀರುತ್ತಿದೆಯೇ ಗಮನಿಸಿ. ಏಕೆಂದರೆ ಇದು ಸುವಾಸನೆ ಬೀರಲಿ ಎಂದೇ ಕೆಲವು ಪ್ರಬಲ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಇವು ಚರ್ಮಕ್ಕೆ ಮತ್ತು ಸಂತಾನಫಲಕ್ಕೆ ಸರ್ವಥಾ ಒಳ್ಳೆಯದಲ್ಲ. ಬದಲಿಗೆ ಉತ್ತಮ ಗುಣಮಟ್ಟದ ಹಾಗೂ ಯಾವುದೇ ಸುವಾಸನೆ ಬೀರದ ಕ್ರೀಂ ಆಯ್ದುಕೊಳ್ಳಿ.

ಗಾಢಗೊಳಿಸುವ ಕ್ರೀಮ್

ಗಾಢಗೊಳಿಸುವ ಕ್ರೀಮ್

ಸೌಂದರ್ಯಪ್ರಸಾಧನಗಳು ನೀರಾಗಿದ್ದರೆ ಇದರ ಜಿಗುಟುತನ ಹೆಚ್ಚಿಸಲು thickener ಎಂಬ ಪ್ರಸಾದನವನ್ನು ಬಳಸಲಾಗುತ್ತದೆ. ಇದರಲ್ಲಿ polyethylene glycol ಎಂಬ ರಾಸಾಯನಿಕ ಇದೆಯೇ ಗಮನಿಸಿ. ಇದ್ದರೆ ಇದು ಸಂತಾನಫಲಕ್ಕೆ ವಿರುದ್ದ ಕೆಲಸ ಮಾಡುವುದರಿಂದ ಸಂತಾನ ಪಡೆಯುವ ಹುನ್ನಾರದವರು ಈ ಪ್ರಸಾದನಗಳನ್ನು ಬಿಟ್ಟೇ ಬಿಡುವುದು ಅನಿವಾರ್ಯ.

English summary

Do Cosmetics Affect Female Fertility?

Today, a lot of men and women are suffering from fertility issues. Putting aside other reasons behind this, the environmental toxins could also be the reason. Certain studies suggest that certain substances in cosmetics and beauty products can also harm fertility in women. We all know that certain chemicals in foods and food containers cause fertility issues. In the same way, there are beauty products that contain harmful chemicals which may affect your fertility. May be it is time you carefully pick your beauty products. If possible, try to stay away form artificial products and switch to the ones that contain natural ingredients.
X
Desktop Bottom Promotion