For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕಾಡುವ ಸಮಸ್ಯೆಗೆ, ಒಂದಿಷ್ಟು ಸಲಹೆ

By Manu
|

ಗರ್ಭಿಣಿಯರು ಎಂದರೆ ಸಾಕು ನಮಗೆ ಅತ್ಯಂತ ಹುಷಾರಾಗಿ ನೋಡಿಕೊಳ್ಳಬೇಕಾದ ಹೆಂಗಸರ ಚಿತ್ರಣ ಕಣ್ಣ ಮುಂದೆ ಹಾಯ್ದು ಹೋಗುತ್ತದೆ. ಗರ್ಭಿಣಿಯರೆಂದರೆ ಹಾಗೆ, ಅವರನ್ನು ನಾವು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತೇವೆಯೋ, ಅಷ್ಟು ಚೆನ್ನಾಗಿ ಅವರ ಆರೋಗ್ಯ ಇರುತ್ತದೆ ಮತ್ತು ಅವರ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ. ಅದರಲ್ಲೂ ಗರ್ಭಿಣಿಯಾಗಿರುವಾಗ ಮಹಿಳೆಯರ ದೇಹದಲ್ಲಿ ಹಲವಾರು ಬದಲಾವಣೆಗಳು ಕಂಡು ಬರುತ್ತವೆ. ಈ ಅವಧಿಯಲ್ಲಿ ತ್ವಚೆಯ ಸಮಸ್ಯೆಗಳು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳಲ್ಲಿ ಒಂದಾಗಿರುತ್ತದೆ.

ಇದರ ಜೊತೆಗೆ ಮಹಿಳೆಯರಿಗೆ ಹಿಂದೆ ಕಾಣಿಸಿಕೊಂಡಿರುವ ತ್ವಚೆಯ ಸಮಸ್ಯೆಗಳು ಈ ಅವಧಿಯಲ್ಲಿ ಮತ್ತೆ ಹೆಚ್ಚಾಗಲು ಆರಂಭಿಸುತ್ತವೆ. ಈ ಬದಲಾವಣೆಗಳಿಗೆ ಪ್ರಮುಖ ಕಾರಣ, ಗರ್ಭಿಣಿಯರ ದೇಹದಲ್ಲಿ ಕಂಡು ಬರುವ ಹಾರ್ಮೋನ್‌ಗಳ ಏರುಪೇರೇ ಮುಖ್ಯ ಕಾರಣವಾಗಿರುತ್ತದೆ. ಈ ಹಾರ್ಮೋನ್‌ಗಳು ತ್ವಚೆ, ಕೂದಲು ಮತ್ತು ಉಗುರುಗಳ ಮೇಲೆ ಪರಿಣಾಮವನ್ನು ಬೀರುತ್ತವೆ.

Common Skin Problems That Occur In Pregnancy

ಈ ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಸಮಸ್ಯೆಗಳು ಮಗು ಹುಟ್ಟಿದ ಮೇಲೆ ತನ್ನಷ್ಟಕ್ಕೆ ತಾನೇ ಹೋಗುತ್ತವೆ. ಅದಲ್ಲದೆ ಈ ತ್ವಚೆಯ ಸಮಸ್ಯೆಗಳು ಮಗುವಿನ ಆರೋಗ್ಯದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ತ್ವಚೆಯನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲು ಗರ್ಭಿಣಿಯರು ಸಮರ್ಪಕವಾದ ಮತ್ತು ಆರೋಗ್ಯಕರವಾದ ಡಯಟ್ ಅನ್ನು ಪಾಲಿಸಬೇಕಾದುದು ಅಗತ್ಯ. ಬನ್ನಿ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ತ್ವಚೆಯ ಸಮಸ್ಯೆಗಳು ಯಾವುವು ಮತ್ತು ಅವುಗಳನ್ನು ಹೇಗೆ ನಿವಾರಿಸಿಕೊಳ್ಳುವುದು ಎಂದು ತಿಳಿದುಕೊಳ್ಳೋಣ. ಗರ್ಭಾವಸ್ಥೆಯಲ್ಲಿ ಕಾಡುವ ವಿಚಿತ್ರ ಲಕ್ಷಣಗಳು, ನಿರ್ಲಕ್ಷಿಸಬೇಡಿ

ಸ್ಟ್ರೆಚ್ ಕಲೆಗಳು
ಗರ್ಭಿಣಿಯರಲ್ಲಿ ಸ್ಟ್ರೆಚ್ ಕಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ಹೊಟ್ಟೆ, ಸೊಂಟ ಮತ್ತು ತೊಡೆಗಳ ಮೇಲೆ ಕಾಣಿಸಿಕೊಳ್ಳುತ್ತದೆ. ಇದನ್ನು ನಿವಾರಿಸಿಕೊಳ್ಳಲು ಯಾವುದೇ ಪರಿಪೂರ್ಣವಾದ ಚಿಕಿತ್ಸೆ ಇಲ್ಲ. ಇದನ್ನು ವ್ಯಾಯಾಮ ಮತ್ತು ವಿಟಮಿನ್ ಎ ಇರುವ ಲೋಷನ್ ಲೇಪಿಸುವ ಮೂಲಕ ನಿವಾರಿಸಿಕೊಳ್ಳಬಹುದು.

ವೆರಿಕೊಸ್ ವೇನ್ಸ್
ವೇರಿಕೊಸ್ ಗೆರೆಗಳು ಎಂಬುದು ಗರ್ಭಿಣಿಯರಲ್ಲಿ ಅವರ ಕಾಲಿನ ಮೇಲೆ ಕಾಣಿಸಿಕೊಳ್ಳುವ ನೇರಳೆ ಮತ್ತು ನೀಲಿ ಬಣ್ಣದ ಗೆರೆಗಳಾಗಿವೆ. ಇದು ಅಧಿಕ ರಕ್ತ ಪ್ರಸರಣದಿಂದ ಕಂಡುಬರುವ ಸಮಸ್ಯೆಯಾಗಿದೆ. ಇದು ಗರ್ಭಿಣಿಯರಿಗೆ ನೋವುಂಟು ಮಾಡುತ್ತದೆ ಮತ್ತು ಅಸೌಖ್ಯವನ್ನು ಸಹ ತರುತ್ತದೆ. ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಇದನ್ನು ನಿವಾರಿಸಿಕೊಳ್ಳಬಹುದು. ಜೊತೆಗೆ ಗರ್ಭಿಣಿಯರು ತಮಗಿರುವ ಅಧಿಕ ತೂಕವನ್ನು ಸಹ ಪರೀಕ್ಷಿಸಿಕೊಂಡು ಇತಿ ಮಿತಿಯಲ್ಲಿರುವುದು ಒಳ್ಳೆಯದು.

ಮೊಡವೆಗಳು
ಹೆಚ್ಚುವರಿ ಹಾರ್ಮೋನ್‌ಗಳು ಗರ್ಭಿಣಿಯರಲ್ಲಿ ಬಿಡುಗಡೆಯಾಗುತ್ತಿರುತ್ತವೆ. ಇವು ಮೊಡವೆಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಸ್ಥಿತಿಯನ್ನು ಬೆಳಗ್ಗೆ ಮತ್ತು ಸಂಜೆ ತ್ವಚೆಯನ್ನು ಸರಿಯಾಗಿ ತೊಳೆಯುವುದರಿಂದ ನಿವಾರಿಸಿಕೊಳ್ಳಬಹುದು.

ತ್ವಚೆಯಲ್ಲಿ ತುರಿಕೆ
ಗರ್ಭಿಣಿಯರಲ್ಲಿ ತ್ವಚೆಯ ತುರಿಕೆಯು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಹೊಟ್ಟೆಯ ಭಾಗಕ್ಕೆ ಮೊಯಿಶ್ಚರೈಸರ್ ಲೇಪಿಸಿ ಇರಿಸಿಕೊಳ್ಳುವುದರಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ತುರಿಕೆ ನಿವಾರಕ ಕ್ರೀಮ್‌ಗಳು ಸಹ ನಿಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ.

ತ್ವಚೆ ಕಪ್ಪಗಾಗುವಿಕೆ
ತ್ವಚೆ ಕಪ್ಪಗಾಗುವಿಕೆಯು ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳಲ್ಲಿ ಒಂದಾಗಿದೆ. ಇದನ್ನು ಮೆಲಸ್ಮ ಎಂದು ಕರೆಯುತ್ತಾರೆ. ಕಪ್ಪು ಕಲೆಗಳು ಸಾಮಾನ್ಯವಾಗಿ ಹಣೆ ಮತ್ತು ಗಲ್ಲದ ಮೇಲೆ ಕಾಣಿಸಿಕೊಳ್ಳುತ್ತವೆ. ಇವುಗಳು ಅಧಿಕ ಪ್ರಮಾಣದ ಪಿಗ್‌ಮೆಂಟೇಶನ್ ಕಾರಣದಿಂದಾಗಿ ಕಂಡು ಬರುತ್ತವೆ. ಆದರೂ ಇದನ್ನು ಮೆದು ಸನ್‌ಸ್ಕ್ರೀನ್ ಲೋಷನ್ ಹಚ್ಚುವುದರಿಂದ ನಿವಾರಿಸಿಕೊಳ್ಳಬಹುದು.

English summary

Common Skin Problems That Occur In Pregnancy

During pregnancy, a lot of changes may take place in a woman's body. Skin problems are the most obvious changes that happen during pregnancy. Therefore, in this article, we at Boldsky will be listing out some of the skin problems that affect a woman during her pregnancy and the ways to prevent it. Read on to know more about it.
Story first published: Thursday, February 4, 2016, 10:25 [IST]
X
Desktop Bottom Promotion