ತರ್ಕಕ್ಕೆ ನಿಲುಕದ್ದು-ಮಂಗಳಮುಖಿ ವ್ಯಕ್ತಿಗಳು ಗರ್ಭ ಧರಿಸಬಲ್ಲರೇ?

By: Arshad
Subscribe to Boldsky

ಬಹಳ ಹಿಂದಿನಿಂದಲೂ ಮಂಗಳಮುಖಿ ವ್ಯಕ್ತಿಗಳನ್ನು ಸಮಾಜ ನೋಡುವ ಪರಿಯೇ ಬೇರೆಯಾಗಿದೆ. ಹೆಚ್ಚನ ಸಂದರ್ಭದಲ್ಲಿ ಹಣಕ್ಕಾಗಿ ಪೀಡಿಸುವ ಹಿಜಡಾಗಳೆಂದೇ ಇವರನ್ನು ಹೆಚ್ಚಿನವರು ಗುರುತಿಸುತ್ತಾರೆ. ಮಂಗಳಮುಖಿ ಎಂದರೆ ಯಾರು ಎಂದು ಮಕ್ಕಳು ಕೇಳುವ ಪ್ರಶ್ನೆಗೆ ಸರಿಯಾಗಿ ಉತ್ತರ ಹೇಳಲು ಹಿರಿಯರು ತಬ್ಬಿಬ್ಬಾಗಬಹುದು.     ಇವರು ಹುಟ್ಟುವಾಗ ಗಂಡು, ಈಗ ಕಣ್ಮನ ಸೆಳೆಯುವ ಹೆಣ್ಣು!

ಏಕೆಂದರೆ ನಾವೆಲ್ಲರೂ ತಿಳಿದಿರುವಂತೆ ಇವರು ಅತ್ತ ಪುರುಷರೂ ಅಲ್ಲದ, ಇತ್ತ ಮಹಿಳೆಯೂ ಅಲ್ಲದ ನಡುವಿನ ಗುಂಪಿನವರು. ಆದರೆ ಇವರ ಉಡುಗೆ ತೊಡಿಗೆಗಳು ಹೆಚ್ಚಿನಾಂಶ ಮಹಿಳೆಯರದ್ದೇ ಇರುತ್ತವೆ. ಹಾಗಾದರೆ ಇವರು ಪುರುಷರ ಮತ್ತು ಮಹಿಳೆಯರ ಗುಣಗಳನ್ನು ಹೊಂದಿರುತ್ತಾರೆಯೇ? ಮಹಿಳೆಯರಂತೆ ಇವರು ಗರ್ಭ ಧರಿಸಬಲ್ಲರೇ? ಈ ಪ್ರಶ್ನೆಗೆ ಜನಸಾಮಾನ್ಯರಲ್ಲಿ ಉತ್ತರವಿಲ್ಲ. ಆದರೆ ವೈದ್ಯವಿಜ್ಞಾನದ ಬಳಿ ಇದೆ ಮುಂದೆ ಓದಿ....

ವಾಸ್ತವ ಏನು?

ಎಷ್ಟೋ ಲಕ್ಷದಲ್ಲಿ ಕೆಲವು ಜನರು ದೈಹಿಕವಾಗಿ ಪುರುಷ/ಮಹಿಳೆಯಾಗಿದ್ದು ಮಾನಸಿಕವಾಗಿ ಹೆಣ್ಣು/ಗಂಡಾಗಿರುತ್ತಾರೆ. ಇವರು ದೇವರು ಗಂಡಾದ/ಹೆಣ್ಣಾದ ತನ್ನ ಆತ್ಮವನ್ನು ತಪ್ಪಾಗಿ ಹೆಣ್ಣಿನ/ಗಂಡಿನ ದೇಹದಲ್ಲಿ ಇರಿಸಿದ್ದಾನೆ ಎಂದೇ ನಂಬಿರುತ್ತಾರೆ. ಇದು ಕೇವಲ ಮಾನಸಿಕವಾದ ನಂಬಿಕೆಯಾಗಿದ್ದು ದೈಹಿಕವಾಗಿ ಇವರು ಎಲ್ಲಾ ರೀತಿಯಲ್ಲಿ ಇತರರಂತೆ ಆರೋಗ್ಯವಂತರೇ ಆಗಿರುತ್ತಾರೆ.....

ಡಿ ಎನ್ ಎ ಗಳಲ್ಲಿರುವ ಕ್ರೋಮೋಸೋಮ್....

ಆದರೆ ದೈಹಿಕವಾಗಿ ಪುರುಷನೂ ಅಲ್ಲದ, ಅತ್ತ ಮಹಿಳೆಯೂ ಅಲ್ಲದ ಸ್ಥಿತಿ ಜೀವಕೋಶಗಳ ಡಿ ಎನ್ ಎ ಗಳಲ್ಲಿರುವ ಕ್ರೋಮೋಸೋಮ್ ಗಳ ರಚನೆಯಲ್ಲಿಯೇ ಆಗಿರುತ್ತದೆ. ಇವರು ದೈಹಿಕವಾಗಿಯೂ ಮಾನಸಿಕರಾಗಿಯೂ ಮಂಗಳಮುಖಿಯರೇ ಆಗಿರುತ್ತಾರೆ. ಅತ್ಯಪರೂಪ ಸ್ಥಿತಿಯಲ್ಲಿ ಮಂಗಳಮುಖಿಯೇ ಆಗಿದ್ದು ತಾನು ಗಂಡು ಅಥವಾ ಹೆಣ್ಣು ಎಂದು ಬಲವಾಗಿ ನಂಬಿರುವ ವ್ಯಕ್ತಿಗಳೂ ಇದ್ದಾರೆ.

ಮಂಗಳಮುಖಿ-ಹೆಣ್ಣು v/s ಮಂಗಳಮುಖಿ ಗಂಡು

ಉದಾಹರಣೆಗೆ ಮಗು ಹುಟ್ಟಿದಾಗ ಬಾಹ್ಯ ಲಕ್ಷಣಗಳಿಂದ ಇದು ಗಂಡು ಮಗು ಎಂದು ಕಂಡುಕೊಂಡರೂ ಇತರ ಲಕ್ಷಣಗಳೆಲ್ಲಾ ಹೆಣ್ಣನವಾಗಿರುತ್ತದೆ. ಆದರೆ ಈ ಮಗುವಿನ ಕ್ರೋಮೋಸೋಮ್ 'XY' ಅಥವಾ ಗಂಡಿನ ಲಕ್ಷಣಗಳೇ ಇರುತ್ತವೆ. ಈ ಮಗುವಿನಲ್ಲಿ ಗರ್ಭಕೋಶವಿರುವುದಿಲ್ಲ.

ಮಂಗಳಮುಖಿ-ಹೆಣ್ಣು v/s ಮಂಗಳಮುಖಿ ಗಂಡು

ಈ ಮಗುವನ್ನು ಮಂಗಳಮುಖಿ-ಹೆಣ್ಣು (trans-woman) ಎಂದು ಕರೆಯುತ್ತಾರೆ. ಇದಕ್ಕೆ ವಿರುದ್ಧವಾಗಿ ಹುಟ್ಟಿದಾಗ ಹೆಣ್ಣಿನ ಬಾಹ್ಯ ಲಕ್ಷಣಗಳನ್ನು ಹೊಂದಿದ್ದು ಇತರ ಲಕ್ಷಣಗಳು ಹೆಣ್ಣಾಗಿರುವ ಮಗುವಿನ ಕ್ರೋಮೋಸೋಮ್ 'XX' ಅಥವಾ ಗಂಡಿನದ್ದಾಗಿರುತ್ತದೆ. ಈ ಮಗುವನ್ನು ಮಂಗಳಮುಖಿ ಗಂಡು (trans-man) ಎಂದು ಕರೆಯುತ್ತಾರೆ.

ಈ ಮಗುವಿನಲ್ಲಿ ಕಂಡುಬರುವ ಲಕ್ಷಣಗಳು.....

ಈ ಮಗುವಿನಲ್ಲಿ ಗರ್ಭಕೋಶ ಮತ್ತು ಅಂಡಾಶಯಗಳೂ ಇರುತ್ತವೆ. ಆದರೆ ಈ ಮಗು ಬೆಳೆಯುತ್ತಿದ್ದಂತೆ ಗಂಡು ಮಕ್ಕಳ ಇತರ ಲಕ್ಷಣಗಳನ್ನು ಅಂದರೆ ಗಡಸು ಗಂಟಲು, ಗಡ್ಡ ಮೀಸೆ ಬೆಳೆಯುತ್ತವೆ. ಕೆಲವು ಸಂದರ್ಭಗಳಲ್ಲಿ ಇವರಲ್ಲಿ ಪರಿಪೂರ್ಣವಾಗಿ ಬೆಳೆಯದ ಗಂಡಿನ ಜನನಾಂಗವೂ ಇರುತ್ತದೆ.

ಈ ಮಗುವಿನಲ್ಲಿ ಕಂಡುಬರುವ ಲಕ್ಷಣಗಳು.....

ಆದ್ದರಿಂದ ಮಂಗಳಮುಖಿ ಗಂಡು (trans-man) ಮಗುವಿನಲ್ಲಿ 'XX' ಕ್ರೋಮೋಸೋಮ್ ಇದ್ದರೂ (ಅಂದರೆ ಗಂಡಿನ ಕ್ರೋಮೋಸೋಮ್) ಗರ್ಭಾಶಯ ಇರುವ ಕಾರಣ ಈ ಮಗು ಬೆಳೆದ ಬಳಿಕ ಗರ್ಭ ಧರಿಸುವ ಸಾಧ್ಯತೆಯೂ ಇದೆ. ಆದರೆ ಇದು ನೈಸರ್ಗಿಕ ವಿಧಾನದಿಂದ ಸಾಧ್ಯವಾಗುವುದಿಲ್ಲ. ಬದಲಿಗೆ ಕೆಲವಾರು ವೈದ್ಯಕೀಯ ವಿಧಾನಗಳನ್ನು ಅನುಸರಿಸಿ, ಗರ್ಭವನ್ನು ಕೃತಕವಾಗಿ ಸೃಷ್ಟಿಸಿ ಕೃತಕವಾಗಿಯೇ ಗರ್ಭಾಶಯದಲ್ಲಿರಿಸಿ ಹಾರ್ಮೋನು ಥೆರಪಿ ಎಂಬ ಚಿಕಿತ್ಸೆಯನ್ನೂ ಅನುಸರಿಸಿದಾಗ ಮಾತ್ರ ಸಾಧ್ಯ.

ಈ ಬಗೆಯ ಚಿಕಿತ್ಸೆ ಅತ್ಯಂತ ಅಪಾಯಕಾರಿ....

ಆದರೆ ಈ ಬಗೆಯ ಚಿಕಿತ್ಸೆ ಅತ್ಯಂತ ಅಪಾಯಕಾರಿಯಾಗಿದ್ದು ಜೀವಕ್ಕೇ ಅಪಾಯಕಾರಿಯಾಗಿರುತ್ತದೆ. ಅಲ್ಲದೇ ಮುಖ್ಯವಾಗಿ ಹೆಣ್ಣಿನ ಗರ್ಭಾಶಯ ಹೊಂದಿದ್ದರೂ ಸೊಂಟದ ಮೂಳೆ ಗಂಡಿನಷ್ಟೇ ಇರುವ ಕಾರಣದಿಂದಾಗಿ ಗರ್ಭ ಬೆಳೆಯುವ ಸಮಯದಲ್ಲಿ ಇತರ ಅಂಗಗಳಿಗೆ ಭಾರೀ ಆಘಾತವುಂಟುಮಾಡಬಹುದು. (ಹೆಣ್ಣು ಮತ್ತು ಗಂಡು ಅಸ್ಥಿಪಂಜರಗಳಲ್ಲಿ ಹಣ್ಣಿನ ಸೊಂಟದ ಮೂಳೆ ವಿಶಾಲವಾಗಿದ್ದು ಮಗುವಿನ ದೇಹ ಸುಲಭವಾಗಿ ತೂರುವಷ್ಟು ದೊಡ್ಡದಿರುತ್ತದೆ, ದೊಡ್ಡದಿರಲೂಬೇಕು. ಅದೇ ಗಂಡಿನ ಸೊಂಟದ ಮೂಳೆ ಕಿರಿಯದಾಗಿರುತ್ತದೆ)

ಗರ್ಭ ಧರಿಸಲು ಇಚ್ಛಿಸಿದರೆ ಇದು ಅಪಾಯಕಾರಿ!

ಇದಕ್ಕೆ ವ್ಯತಿರಿಕ್ತವಾಗಿ ಮಂಗಳಮುಖಿ-ಹೆಣ್ಣು (trans-woman) ಗರ್ಭ ಧರಿಸಲು ಇಚ್ಛಿಸಿದರೆ ಇದು ಅತ್ಯಂತ ಅಪಾಯಕಾರಿಯಾದ ಆಯ್ಕೆಯಾಗಿದೆ.

ಗರ್ಭ ಧರಿಸಲು ಇಚ್ಛಿಸಿದರೆ ಇದು ಅಪಾಯಕಾರಿ!

ಏಕೆಂದರೆ ಇವರಲ್ಲಿ ಗರ್ಭಾಶಯವೇ ಇಲ್ಲದಿರುವ ಕಾರಣ ಗರ್ಭ ಧರಿಸುವುದಾದರೂ retinue cavity ಅಥವಾ ಗರ್ಭನಾಳದ ಹೊರಗೇ ಬೆಳೆಯಬೇಕಾಗಿರುತ್ತದೆ. ಒಂದು ವೇಳೆ ಗರ್ಭ ಬೆಳೆದರೂ (ectopic pregnancy) ಇದು ಜೀವಕ್ಕೇ ಅಪಾಯ ತಂದೊಡ್ದುವ ಬೆಳವಣಿಗೆಯಾಗಿರುತ್ತದೆ.

ಕೇವಲ ಮಂಗಳಮುಖಿ ಗಂಡು (trans-man) ವ್ಯಕ್ತಿಗಳಿಗೆ ಮಾತ್ರ ಗರ್ಭ ಧರಿಸಲು ಸಾಧ್ಯ!

ಆದ್ದರಿಂದ ಗರ್ಭ ಧರಿಸುವುದು ಕೇವಲ ಮಂಗಳಮುಖಿ ಗಂಡು (trans-man) ವ್ಯಕ್ತಿಗಳಿಗೆ ಮಾತ್ರ ಸಾಧ್ಯ. ಅದೂ ಅವರ ಅಂಡಾಶಯ ಮತ್ತು ಗರ್ಭಾಶಯ ಪೂರ್ಣ ಬೆಳವಣಿಗೆ ಪಡೆದಿದ್ದು ಸಕ್ರಿಯವಾಗಿದ್ದರೆ ಮಾತ್ರ. ಸಾಮಾನ್ಯ ಹೆಣ್ಣಿನ ದೇಹದಲ್ಲಿ ಆಗುವಂತಹ ಹಾರ್ಮೋನುಗಳ ಸ್ರವಿಕೆ ಇವರಲ್ಲಿ ಸರಿಯಾಗಿ ಆಗದಿದ್ದರೆ ಹಾರ್ಮೋನ್ ಥೆರಪಿ ವಿಧಾನದಿಂದ ಕೃತಕವಾಗಿ ಸ್ರವಿಸುವಂತೆ ಮಾಡಿ ಈ ಗರ್ಭಾಶಯದಿಂದಲೂ ಆರೋಗ್ಯವಂತ ಮಗುವನ್ನು ಪಡೆಯಲು ಸಾಧ್ಯವಿದೆ.

ಸಮಾಜ ಅಷ್ಟು ಸುಲಭವಾಗಿ ಸ್ವೀಕರಿಸುತ್ತದೆಯೇ?

ಆದರೆ ಈ ಸಾಧ್ಯತೆಯ ಮೂಲಕ ಜನಿಸಿದ ಮಗುವನ್ನು ಸಮಾಜ ಸ್ವೀಕರಿಸುತ್ತದೆಯೇ ಎಂಬುದು ಇನ್ನೊಂದು ದೊಡ್ಡ ಸವಾಲು. ಏಕೆಂದರೆ ಮಂಗಳಮುಖಿಯರು ಎಂದರೆ ಗರ್ಭ ಧರಿಸಲು ಸಾಧ್ಯವಿಲ್ಲದವರು ಎಂದು ಎಲ್ಲರೂ ಖಚಿತವಾದ ಅಭಿಪ್ರಾಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಗರ್ಭ ಧರಿಸುವ ಸಾಧ್ಯತೆ ಇರುವ ಮಂಗಳಮುಖಿ ಗಂಡು (trans-man) ವ್ಯಕ್ತಿಗಳೂ ಈ ಬಗ್ಗೆ ಕನಸನ್ನೇ ಕಾಣುವುದಿಲ್ಲ.

ತಮ್ಮ ಮಕ್ಕಳಿಗೂ ಅವಗಣನೆಗೆ ಉಂಟಾದರೆ?

ಏಕೆಂದರೆ ತಾವು ಸಮಾಜದಲ್ಲಿ ಎದುರಿಸುತ್ತಿರುವ ಅವಗಣನೆಯನ್ನು ತಮ್ಮ ಮಕ್ಕಳು ಎದುರಿಸುವುದನ್ನು ಯಾವುದೇ ತಾಯಿ ಸಹಿಸುವುದಿಲ್ಲ. ಅಲ್ಲದೇ ಈ ಮಗುವೂ ತನ್ನಂತೆಯೇ ಮಂಗಳಮುಖಿಯೇ ಆದರೆ ಎಂಬ ಇನ್ನೊಂದು ಆತಂಕವೂ ಅವರನ್ನು ಕಾಡುತ್ತದೆ. ಆದರೆ ಈ ವಾದದಲ್ಲಿ ಹುರುಳಿಲ್ಲ ಎಂದು ವೈದ್ಯರು ತಿಳಿಸಿದರೂ ಮಗುವನ್ನು ಪಡೆಯಲು ಈ ವ್ಯಕ್ತಿಗಳು ಮುಂದೆ ಬರದಿರುವುದು ವಾಸ್ತವದ ಸಂಗತಿಯಾಗಿದೆ.

 

English summary

Can A Transgender Person Get Pregnant?

Most of us might have come across transgender people, more commonly known as 'hijras' in India. Have you ever wondered if a transgender person can get pregnant? Well, we may be aware that transgender people usually come with gender identities that are different from what was assigned to them at birth, by the doctors.
Please Wait while comments are loading...
Subscribe Newsletter