For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ, ನೋವು ನಿವಾರಕ ಮಾತ್ರೆಯಿಂದ ದೂರವಿರಿ

By Manu
|

ಗರ್ಭಿಣಿ ಎಂದ ಕೂಡಲೆ ಆಕೆಗೆ ಯಾವುದು ಮಾಡಬೇಕು ಮತ್ತು ಯಾವುದು ಮಾಡಬಾರದು ಎಂಬ ದೊಡ್ಡ ಪಟ್ಟಿಯನ್ನು ಹಿರಿಯರು, ಸ್ನೇಹಿತರು ಮತ್ತು ವೈದ್ಯರು ಇಡುತ್ತಾರೆ. ಅದರಲ್ಲಿ ಒಂದು ಪೇನ್ ಕಿಲ್ಲರ್ ಅಥವಾ ನೋವು ನಿವಾರಕಗಳನ್ನು ತೆಗೆದುಕೊಳ್ಳಬೇಡಿ ಎಂಬುದಾಗಿರುತ್ತದೆ.

Can Taking Painkillers During Pregnancy Lead To Birth Defects?

ಇದು ಸ್ವಲ್ಪ ಅತಿಯಾದರು ಸರಿಯೆನಿಸುವ ಸಲಹೆಗಳ ಮಹಾಪೂರ ಇಂತಹ ಸಮಯದಲ್ಲಿ ಹರಿದು ಬರುತ್ತದೆ. ಎಷ್ಟೇ ಆದರು ತನ್ನ ಮತ್ತು ತನಗೆ ಹುಟ್ಟುವ ಮಗುವಿಗಾಗಿ ಈ ಸಲಹೆಗಳು ತಾನೇ ಎಂದು ಭಾವಿಸುವ ಗರ್ಭಿಣಿ ಅವುಗಳಲ್ಲಿ ಹಲವನ್ನು ಪಾಲಿಸುತ್ತಾಳೆ. ಹೀಗೆ ಆತಂಕ ಮತ್ತು ಉದ್ವೇಗಭರಿತವಾಗಿ ಸಾಗುತ್ತದೆ ಗರ್ಭಿಣಿಯ ಜೀವನ. ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳಬಾರದ 10 ಔಷಧಿಗಳು

ತಾಯಿಯಾಗುವವಳು ತನ್ನ ಗರ್ಭದ ಕುರಿತಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆರೋಗ್ಯಕರವಾಗಿರುವ ಆಹಾರ ಯಾವುದು, ಯಾವುದು ಗರ್ಭಕ್ಕೆ ಹಾನಿಕಾರಕ, ಯಾವುದನ್ನು, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂದು ತಿಳಿದಿರಬೇಕು. ಸ್ವಲ್ಪ ನಿಯಮಿತವಾಗಿ ವ್ಯಾಯಾಮ ಮಾಡಬೇಕು ಮತ್ತು ಹೆಚ್ಚು ಆಯಾಸ ಆಗಬಾರದು. ಧೂಮಪಾನ, ಮಧ್ಯಪಾನ ಮತ್ತು ಮಾದಕ ವಸ್ತುಗಳಿಂದ ದೂರವಿರಬೇಕು. ಇದರಿಂದ ಹುಟ್ಟುವ ಮಗುವಿಗೆ ತೊಂದರೆಗಳಾಗುವುದು ಸತ್ಯ.

ಆದರೆ ರೋಗ ನಿರೋಧಕ ಶಕ್ತಿ ಒಮ್ಮೊಮ್ಮೆ ಕಡಿಮೆಯಾಗಿ ಗರ್ಭಿಣಿಯರು ಹಲವಾರು ಅನಿರೀಕ್ಷಿತ ಡಿಸಾರ್ಡರ್‌ಗಳಿಗೆ ಮತ್ತು ನೋವುಗಳಿಗೆ ಗುರಿಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಗರ್ಭಿಣಿಯರು ನೋವು ನಿವಾರಕ ಔಷಧಗಳನ್ನು ತೆಗೆದುಕೊಂಡು ಆರಾಮವಾಗಿರಲು ಮನಸ್ಸು ಮಾಡುತ್ತಾರೆ. ಆದರೆ ಈ ನೋವು ನಿವಾರಕಗಳು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ? ಸತ್ಯಾಂಶವೆಂದರೆ, ಇಂತಹ ನೋವು ನಿವಾರಕಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಮಗುವಿನ ಜನನದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂಬುದು ಸತ್ಯ. ಅಮ್ಮ ಮಾತ್ರೆ ತಿಂದರೆ ಕಂದನಿಗೆ ಅಪಾಯ

ಮಗುವಿನ ಜನನದ ಮೇಲೆ ಪೇನ್ ಕಿಲ್ಲರ್ (ನೋವು ನಿವಾರಕಗಳು) ಏಕೆ ಪರಿಣಾಮ ಬೀರುತ್ತವೆ?
ಇತ್ತೀಚಿನ ಅಧ್ಯಯನ ಪ್ರಕಾರ ಮಗುವಿನ ಜನನದ ಮೇಲೆ ಪೇನ್ ಕಿಲ್ಲರ್ (ನೋವು ನಿವಾರಕಗಳು) ಪರಿಣಾಮ ಬೀರುತ್ತವೆ ಎಂದು ದೃಢಪಟ್ಟಿದೆ. ಗರ್ಭಿಣಿಯರ ಮೇಲೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಖಚಿತವಾಗಿದೆ. ನೋವು ನಿವಾರಕ ಸೇವಿಸಿದ 6% ಗರ್ಭಿಣಿಯರಲ್ಲಿ ಮಗುವಿನ ಜನನವು ಕುಂಠಿತವಾಗಿರುವುದು ಮತ್ತು ಇತರೆ ಸಮಸ್ಯೆಗಳು ಬಂದಿರುವುದು ಖಚಿತವಾಗಿದೆ.

ಆತಂಕ, ಖಿನ್ನತೆ, ಕಾಯಿಲೆ, ಬೈಪೋಲಾರ್ ಡಿಸಾರ್ಡರ್ ಇತ್ಯಾದಿ ಸಂದರ್ಭದಲ್ಲಿ ಸೇವಿಸಿದ ನೋವು ನಿವಾರಕಗಳು ಮಗುವಿನ ಜನನದ ಸಂದರ್ಭದಲ್ಲಿ ಸಮಸ್ಯೆಗಳನ್ನು ಉಂಟು ಮಾಡಿದೆ ಎಂದು ದೃಢಪಟ್ಟಿದೆ. ಹಾಗಾಗಿ ಗರ್ಭಿಣಿಯರು ತಮ್ಮ ಗರ್ಭಾವಧಿಯಲ್ಲಿ ಈ ನೋವು ನಿವಾರಕಗಳನ್ನು ಸೇವಿಸುವುದು ಒಳ್ಳೆಯದಲ್ಲ. ಈ ಔಷಧಗಳು ರಕ್ತದ ಮೂಲಕ ಗರ್ಭ ಸೇರುವ ಅಪಾಯ ಇರುತ್ತದೆ.

ಯಾವಾಗ ಈ ರಾಸಾಯನಿಕಗಳು ಗರ್ಭದಲ್ಲಿರುವ ಮಗುವಿಗೆ ಸೇರಿದಾಗ ಅವು ಮಗುವಿನ ನರಕೋಶವನ್ನು ಹಾನಿ ಮಾಡುತ್ತವೆ. ಆಗ ಮಗುವಿನ ಮೆದುಳಿಗೆ ಹಾನಿಯಾಗುತ್ತದೆ. ಹೀಗಾಗಿ ಒಟ್ಟಾರೆ ಸಾರಾಂಶ ಇಷ್ಟೇ. ಗರ್ಭಿಣಿಯಾಗಿರುವಾಗ ಯಾವುದೇ ಕಾರಣಕ್ಕು ನೋವು ನಿವಾರಕಗಳನ್ನು ಸೇವಿಸಬೇಡಿ. ಸೇವಿಸುವ ಮುನ್ನ, ವೈದ್ಯರ ಸಲಹೆ ಕೇಳಿ, ಅವರು ಸಹ ಇದಕ್ಕೆ ನೋ...ಎನ್ನುತ್ತಾರೆ.

English summary

Can Taking Painkillers During Pregnancy Lead To Birth Defects?

Many of you may have noticed, the minute a woman announces that she is pregnant, her loved ones, after the initial excitement, bombard her with advices and suggestions! It can be quite overwhelming, but, at the same time, the to-be mom pays heed to all the advice because she wants what is best for her baby! Pregnancy is also that phase in a woman's life that fills her with a lot of anxiety regarding health concerns about herself and her unborn baby.
X
Desktop Bottom Promotion