ಗರ್ಭಿಣಿಯರ ಆಹಾರ ಹೀಗಿದ್ದರೆ, ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ

ಜನಿಸುವ ಮಗುವಿನ ಆರೋಗ್ಯದ ಸಂಪೂರ್ಣ ಜವಾಬ್ದಾರಿ ತಾಯಿಯ ಮೇಲಿರುವುರಿಂದ ಸ್ವಲ್ಪವೂ ಅಸಡ್ಡೆ ತೋರಬಾರದು ಮತ್ತು ತನ್ನ ಆರೋಗ್ಯವನ್ನು ಆಕೆ ಕಾಪಾಡಿಕೊಳ್ಳಬೇಕಾಗುತ್ತದೆ.

By: manu
Subscribe to Boldsky

ಗರ್ಭ ಧರಿಸಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ತಾಯಿಯಾಗುತ್ತಿರುವವಳಿಗೆ ಆಗುವ ಸಂತಸ ಅಷ್ಟಿಷ್ಟಲ್ಲ. ತನ್ನ ಕುಡಿಯೊಂದು ತನ್ನ ಒಡಲಲ್ಲಿ ಬೆಳೆಯಲಿದೆ ಎಂಬ ಕಲ್ಪನೆಯೇ ಅತಿ ಮಧುರ. ಆದರೆ ಈ ಸಂಭ್ರಮದಲ್ಲಿ ತಾಯಿಯಾಗುವವಳು ತನ್ನ ಆರೋಗ್ಯವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ.

ಪೂರ್ಣ ನವಮಾಸಗಳಲ್ಲಿ ವಿವಿಧ ಆಹಾರಗಳನ್ನು ಸೇವಿಸಬೇಕು ಮತ್ತು ಕೆಲವು ಆಹಾರಗಳನ್ನು ಸರ್ವಥಾ ಸೇವಿಸಬಾರದು. ಏಕೆಂದರೆ ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಆರೋಗ್ಯ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ಅರಿವಿಲ್ಲದೇ ಒಂದು ಚಿಕ್ಕ ತಪ್ಪು ಹೆಜ್ಜೆ ಇಟ್ಟರೂ ಈ ಸಂತಸ ಹೊಳೆಯಲ್ಲಿ ಹುಣಸೆ ಹಣ್ಣು ಕಿವುಚಿದ ಹಾಗೆ ಆಗಬಹುದು!    ಗರ್ಭಿಣಿಯರೇ ಹಣ್ಣು-ತರಕಾರಿಗಳೆಂದರೆ ಮುಖ ಸಿಂಡರಿಸಬೇಡಿ

ಆರೋಗ್ಯದ ರಕ್ಷಣೆಯಲ್ಲಿ ತಾಯಿಯ ಆಹಾರದ ಆಯ್ಕೆ ತುಂಬಾ ಮುಖ್ಯ. ಅಪ್ಪಿ ತಪ್ಪಿಯೂ ಗರ್ಭಾಪಾತಕ್ಕೆ ನೆರವು ನೀಡುವ ಆಹಾರಗಳನ್ನು ತಿನ್ನಬಾರದು. ಉದಾಹರಣೆಗೆ ಪಪ್ಪಾಯಿ, ಮೊಳಕೆ ಬಂದ ಆಲೂಗಡ್ಡೆ, ಅನಾನಸು, ಪೀಚ್ ಹಣ್ಣುಗಳು, ಬಿಳಿಎಳ್ಳು, ಕರಿ ಎಳ್ಳು, ಲೋಳೆಸರ, ನುಗ್ಗೇಕಾಯಿ, ನುಗ್ಗೇ ಸೊಪ್ಪು, ಮಾಂಸಾಹಾರದಲ್ಲಿ ಯಕೃತ್ ಮೊದಲಾದವುಗಳನ್ನು ಮುಂದಿನ ಒಂದು ವರ್ಷದವರೆಗೆ ಮರೆಯುವುದೇ ಉತ್ತಮ.  ಗರ್ಭಿಣಿಯರೇ ದಿನ ನಿತ್ಯದ ಆಹಾರ ಕ್ರಮ ಹೀಗಿರಲಿ

ಕೆಲವು ಆಹಾರಗಳನ್ನು ಹೆಚ್ಚು ಸೇವಿಸಬೇಕು, ಉದಾಹರಣೆಗೆ ಹಸಿರು ಸೊಪ್ಪುಗಳು. ಬನ್ನಿ, ಆಹಾರತಜ್ಞರು ತಾಯಿಯಾಗುವವಳಿಗೆ ಯಾವ ಆಹಾರಗಳನ್ನು ತಿನ್ನಬೇಕೆಂದು ಸಲಹೆ ಮಾಡುತ್ತಾರೆ ಎಂಬುದನ್ನು ನೋಡೋಣ..

ಮೊಟ್ಟೆಗಳು

ಮೊಟ್ಟೆಯಲ್ಲಿ ಅತಿ ಹೆಚ್ಚಿನ ಪ್ರೋಟೀನ್ ಅಂಶ ಇರುವ ಕಾರಣ ಇದು ಮಗುವಿನ ದೇಹದಲ್ಲಿ ಮೂಳೆ ಮತ್ತು ಸ್ನಾಯುಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ವಾರದಲ್ಲಿ ಎರಡು ಅಥವಾ ಮೂರು ಹೊತ್ತಾದರೂ ಮೊಟ್ಟೆ ಇರಲಿ.

ಮೀನು

ನಿಮ್ಮ ಆಹಾರದಲ್ಲಿ ತಾಜಾ ಮತ್ತು ಬಿಳಿಯ ಮೀನು ಸಾಧ್ಯವಾದಷ್ಟು ಇರಲಿ. ಮೀನಿನಲ್ಲಿರುವ ವಿಟಮಿನ್ ಇ ಮಗುವಿನ ನರವ್ಯವಸ್ಥೆ ಬಲಗೊಳ್ಳಲು ಸಹಕರಿಸುತ್ತದೆ.

ಸೇಬುಹಣ್ಣು

ಸೇಬಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಸಿಪ್ಪೆಯಲ್ಲಿರುವ ನಾರು ಮಗುವಿನ ಆರೋಗ್ಯಕ್ಕೂ ಉತ್ತಮ ಹಾಗೂ ಗರ್ಭಿಣಿಗೆ ಮಲಬದ್ದತೆಯಾಗದಂತೆ ನೋಡಿಕೊಳ್ಳುತ್ತದೆ.

ಬೀನ್ಸ್ ಕಾಳುಗಳು

ರಾಜ್ಮಾ ಎಂದೂ ಕರೆಯಲ್ಪಡುವ ಬೀನ್ಸ್ ಕಾಳುಗಳಲ್ಲಿಯೂ ಉತ್ತಮ ಪ್ರಮಾಣದ ಪ್ರೋಟೀನು ಇದ್ದು ಮಗುವಿನ ಬೆಳವಣಿಗೆಗೆ ಪೂರಕವಾಗಿದೆ.

ಗೆಣಸು

ಗೆಣಸಿನಲ್ಲಿ, ವಿಶೇಷವಾಗಿ ಕೆಂಪು ಗೆಣಸಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಫೋಲೇಟ್ ಇವೆ. ಇವು ಗರ್ಭಿಣಿಗೂ ಮಗುವಿಗೂ ಆರೋಗ್ಯಕರವಾಗಿದೆ.

ಬಾದಾಮಿ

ಬಾದಾಮಿಯಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಇ ಮತ್ತು ಪ್ರೋಟೀನುಗಳಿವೆ. ಇವೂ ಮಗುವಿನ ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿವೆ. ನಿತ್ಯವೂ ಒಂದೆರಡಾದರೂ ಬಾದಾಮಿಗಳನ್ನು ಗರ್ಭಿಣಿ ಸೇವಿಸಬೇಕು.

ಹಾಲು

ಹಾಲಿನಲ್ಲಿ ಉತ್ತಮ ಪ್ರಮಾಣದ ಪ್ರೋಟೀನು, ಖನಿಜಗಳು ಮತ್ತು ಕ್ಯಾಲ್ಸಿಯಂ ಇದೆ. ಹಾಲಿನೊಂದಿಗೆ ಕೊಂಚ ಜೇನು ಬೆರೆಸಿ ನಿತ್ಯವೂ ಕುಡಿಯುವ ಮೂಲಕ ಗರ್ಭಿಣಿಯ ಆರೋಗ್ಯ ಉತ್ತಮವಾಗಿರುತ್ತದೆ.

ಬಾರ್ಲಿ

ಬಾರ್ಲಿಯಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳಿದ್ದು ಗರ್ಭಿಣಿಯ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಅಲ್ಲದೇ ಮಗುವಿನ ಬೆಳವಣಿಗೆಗೂ ಸಹಕರಿಸುತ್ತದೆ. ಮೂತ್ರದ ಸಮಸ್ಯೆಯೇ? ಬಾರ್ಲಿಯ ಮೊರೆಹೋದರೆ ಫಲ ಖಂಡಿತ

ಬೆಣ್ಣೆಹಣ್ಣು

ಬೆಣ್ಣೆಹಣ್ಣಿನ ತಿರುಳಿನಲ್ಲಿ ಉತ್ತಮ ಪ್ರಮಾಣದ ಒಮೆಗಾ -3 ಕೊಬ್ಬಿನ ಆಮ್ಲಗಳಿವೆ. ಇವು ಗರ್ಭಿಣಿ ಮತ್ತು ಮಗುವಿನ ಆರೋಗ್ಯಕ್ಕೆ ಪೂರಕವಾಗಿವೆ.

 

Story first published: Tuesday, October 18, 2016, 10:45 [IST]
English summary

Best Foods To Eat During Pregnancy For A Healthy Baby!

That special moment when you find out that you are going to be a mother, is truly a memorable one! However, in all the excitement about your pregnancy, you must not forget to follow certain healthy diet tips. Pregnancy is a phase in a woman's life in which she needs to be extremely careful about everything she does, as both her health and her baby's health may be at stake. Even one small wrong step can put your health at risk, also affecting your baby's health indirectly.
Please Wait while comments are loading...
Subscribe Newsletter