For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಆರೋಗ್ಯಕ್ಕೆ ಬೇಕು, ಒಂದಿಷ್ಟು ಖರ್ಜೂರ...

By Deepu
|

ಗರ್ಭಿಣಿಯರಿಗೆ ಸಾಮಾನ್ಯವಾಗಿ ಆಹಾರ ಸೇವಿಸುವ ಹಂಬಲ ಹೆಚ್ಚಾಗಿರುತ್ತದೆ. ಗರ್ಭಿಣಿಯರಿಗೆ ಬರುವ ಈ ತಿನ್ನುವ ಚಪಲವನ್ನು ಬಸರಿ ಬಯಕೆ ಎಂದು ಆಡು ಭಾಷೆಯಲ್ಲಿ ಕರೆಯುತ್ತಾರೆ. ಹಾಗೆಂದು ಇವರು ಕಂಡ ಕಂಡದ್ದನ್ನೆಲ್ಲ ತಿನ್ನಲು ಆಗುವುದಿಲ್ಲ. ಅವರು ತಾವು ಏನು ತಿನ್ನುತ್ತಾರೋ, ಅದರ ಕುರಿತು ಸ್ವಲ್ಪ ಜಾಗರೂಕರಾಗಿರುವುದು ಒಳ್ಳೆಯದು. ಅವರಿಗೆ ತಿನ್ನಬೇಕು ಎನಿಸಿದ್ದನ್ನೆಲ್ಲ ತಿನ್ನಲು ಆಗುವುದಿಲ್ಲ ಎಂಬುದನ್ನು ಅವರು ಸಹ ತಿಳಿದುಕೊಂಡಿರಬೇಕು. ಹಾಗೆ ಆಸೆಪಡುವ ಆಹಾರಗಳ ಪಟ್ಟಿಯಲ್ಲಿ ಖರ್ಜೂರಗಳು ಸಹ ಇರಬಹುದು.

ಈ ಖರ್ಜೂರವನ್ನು ಸೇವಿಸುವ ಮುನ್ನ ಖರ್ಜೂರದ ಕುರಿತಾಗಿ ಕೆಲವೊಂದು ಅಂಶಗಳನ್ನು ತಿಳಿದುಕೊಳ್ಳುವುದು ಉತ್ತಮ. ಖರ್ಜೂರಗಳಲ್ಲಿ ಸಮೃದ್ಧವಾದ ಪೋಷಕಾಂಶಗಳು ಇದ್ದು, ನಮ್ಮ ಆರೋಗ್ಯಕ್ಕೆ ಅಷ್ಟೇ ಅಲ್ಲದೆ ಗರ್ಭಿಣಿಯರ ಆರೋಗ್ಯಕ್ಕೂ ಸಹ ಒಳ್ಳೆಯದು. ಸಾಮಾನ್ಯವಾಗಿ ಖರ್ಜೂರಗಳಲ್ಲಿ, ಕೊಬ್ಬು ಕಡಿಮೆ ಪ್ರಮಾಣದಲ್ಲಿರುವುದರಿಂದ, ಸ್ವಾಭಾವಿಕವಾದ ಸಕ್ಕರೆ ಅಂಶವು ಇದರಲ್ಲಿ ಅಧಿಕ ಪ್ರಮಾಣದಲ್ಲಿ ಒಳಗೊಂಡಿದೆ, ಅಲ್ಲದೆ ಇದರಲ್ಲಿ ಪೊಟಾಶಿಯಂ ಅಧಿಕ ಪ್ರಮಾಣದಲಿದ್ದು, ಸೋಡಿಯಂ ಕಡಿಮೆ ಪ್ರಮಾಣದಲ್ಲಿದೆ.

ಇವು ಇಡೀ ನರವ್ಯೂಹವನ್ನು ವ್ಯವಸ್ಥಿತವಾಗಿ ಇಡುವಂತಹ ಕೆಲಸವನ್ನು ಮಾಡುತ್ತದೆ. ಹೀಗೆ ಖರ್ಜೂರಗಳನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳು ಇರುತ್ತವೆ. ಅದಕ್ಕಾಗಿ ಇಂದು ಬೋಲ್ಡ್‌ಸ್ಕೈ ನಿಮಗಾಗಿ ಖರ್ಜೂರ ಸೇವಿಸುವುದರಿಂದ ದೊರೆಯುವ ಪ್ರಯೋಜನಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದೆ, ಮುಂದೆ ಓದಿ.

Benefits Of Having Dates In Pregnancy

ಪೊಟಾಶಿಯಂ
ಪೊಟಾಶಿಯಂ ನಮ್ಮ ದೇಹದಲ್ಲಿರುವ ಅತ್ಯಂತ ಪ್ರಮುಖ ಎಲೆಕ್ಟ್ರೋಲೈಟ್‌ಗಳಲ್ಲಿ ಒಂದಾಗಿದೆ. ಇದು ನಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ. ಜೊತೆಗೆ ಇದು ನಿಮ್ಮ ದೇಹದಲ್ಲಿನ ನೀರಿನ ಅಂಶವನ್ನು ಸಮಪ್ರಮಾಣದಲ್ಲಿಡುತ್ತದೆ. ಜೊತೆಗೆ ಇದು ಹೃದಯ, ಜಠರ, ಕರುಳಿನ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ ಮತ್ತು ಸ್ನಾಯುಗಳ ಕಾರ್ಯವನ್ನು ಸರಾಗಗೊಳಿಸುತ್ತದೆ.

ನಾರಿನಂಶ
ನಾರಿನಂಶವು ಆರೋಗ್ಯಕರವಾದ ಜೀರ್ಣಕಾರಿ ವ್ಯವಸ್ಥೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಗರ್ಭಿಣಿಯರಿಗೆ ಸಂಬಂಧಿಸಿದ ಮಲಬದ್ಧತೆಯನ್ನು ನಿವಾರಿಸುವುದರ ಜೊತೆಗೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ದೇಹವನ್ನು ಇನ್‌ಫೆಕ್ಷನ್‌ಗಳಿಂದ ಕಾಪಾಡುತ್ತದೆ. ನಾರಿನಂಶವು ಗರ್ಭಿಣಿಯಾಗಿರುವಾಗ ಆರೋಗ್ಯಕರವಾದ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ.

ಫೋಲೆಟ್
ಖರ್ಜೂರಗಳಲ್ಲಿ ಫೋಲೆಟ್ ಅಂಶ ಅಧಿಕವಾಗಿರುತ್ತದೆ. ಫೋಲೆಟ್ ಹೊಸ ಕೋಶಗಳು ಉತ್ಪತ್ತಿಯಾಗಲು ನೆರವಾಗುತ್ತದೆ ಮತ್ತು ಅನಿಮಿಯಾವನ್ನು ತಡೆಯುತ್ತದೆ. ಇದು ಜನನದ ದೋಷಗಳನ್ನು ನಿವಾರಿಸುತ್ತದೆ ಮತ್ತು ಮಗುವಿಗೆ ಮೆದುಳು, ನರವ್ಯೂಹ ಮುಂತಾದ ಭಾಗಗಳ ಹಾನಿಯಾಗುವಿಕೆಯನ್ನು ತಪ್ಪಿಸುತ್ತದೆ.

ವಿಟಮಿನ್ ಕೆ
ವಿಟಮಿನ್ ಕೆಯು ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದು ಮೂಳೆಗಳನ್ನು ಸದೃಢವಾಗಿ ಇರಿಸುತ್ತದೆ. ವಿಟಮಿನ್ ಕೆಯು ಗರ್ಭಾವಧಿಯಲ್ಲಿ ಹೆಚ್ಚಾಗಿ ಬೇಕಾಗುತ್ತದೆ. ಇದು ಮಗುವಿನ ಮೂಳೆಗಳ ಬೆಳವಣಿಗೆಗು ಸಹ ಸಹಾಯ ಮಾಡುತ್ತದೆ. ಹೀಗೆ ಇದು ಇಡೀ ಮೂಳೆಗಳ ರಚನೆಯನ್ನು ರಚಿಸಲು ನೆರವಾಗುತ್ತದೆ.

ಪ್ರೋಟಿನ್‌ಗಳು
ಖರ್ಜೂರಗಳು ಪ್ರೋಟಿನ್‌ಗಳ ಉತ್ತಮ ಆಗರಗಳಾಗಿವೆ. ಪ್ರೋಟಿನ್‌ಗಳಲ್ಲಿ ಅಮೈನೊ ಆಮ್ಮಗಳು ಇರುತ್ತವೆ. ಇವು ನಮ್ಮ ದೇಹವನ್ನು ನಿರ್ಮಿಸುವ ಇಟ್ಟಿಗೆಗಳು ಎಂದು ಹೇಳಬಹುದು. ಹಾಗಾಗಿ ಖರ್ಜೂರಗಳು ನಿಮ್ಮ ಗರ್ಭವು ಬೆಳವಣಿಗೆಯಾಗಲು ಅಗತ್ಯವಾದ ಪ್ರೋಟಿನ್‌ಗಳನ್ನು ಒದಗಿಸುತ್ತದೆ.

English summary

Benefits Of Having Dates In Pregnancy

Dates is one of the foods that women crave for during pregnancy. But, little do we know about the importance of consuming dates during pregnancy. There are countless benefits of consuming dates during pregnancy. Therefore, in this article, we at Boldsky will be listing out some of the benefits of consuming dates during pregnancy. Read on to know more about it.
X
Desktop Bottom Promotion