For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಸಮಸ್ಯೆಗಳಿಗೆ ದಿವ್ಯೌಷಧ ಜೀರಿಗೆ ನೀರು

By Jaya Subramanya
|

ಜೀರಿಗೆ ಮೂರ್ತಿ ಚಿಕ್ಕದಾದರೂ ಕೀರ್ತಿ ಅಪಾರವಾದುದು. ದಕ್ಷಿಣ ಭಾಗಗಳಲ್ಲಿ ಇದು ಹೆಚ್ಚು ಬಳಕೆಯಾಗುವ ಸಾಂಬಾರ ಪದಾರ್ಥವಾಗಿದ್ದು ಮದ್ದಿನ ವಿಷಯದಲ್ಲೂ ಎತ್ತಿದ ಕೈ ಎಂದೆನಿಸಿದೆ. ಇದನ್ನು ಬಳಸಿ ಮಾಡದ ಖಾದ್ಯವಿಲ್ಲ ಅಂತೆಯೇ ಇದು ಗುಣಪಡಿಸದ ರೋಗಗಳೇ ಇಲ್ಲ ಎಂಬುದು ಚಾಲ್ತಿಯಲ್ಲಿರುವ ಮಾತಾಗಿದೆ. ಹೊಟ್ಟೆಯ ಗ್ಯಾಸ್ ಸಮಸ್ಯೆ, ಮುಟ್ಟಿನ ನೋವು, ಹೊಟ್ಟೆಯುಬ್ಬರ ಹೀಗೆ ಯಾವುದೇ ಸಮಸ್ಯೆಗೂ ರಾಮಬಾಣವಾಗಿದೆ ಜೀರಿಗೆ. ಇದೀಗ ಗರ್ಭಿಣಿಯರಿಗೂ ಈ ವಸ್ತು ಫಲಪ್ರದ ಕೊಡುಗೆ ಎಂದೆನಿಸಿದೆ. ಶೀತ, ಗಂಟಲು ಕೆರೆತ ಸಮಸ್ಯೆಗೆ, ಜೀರಿಗೆ ಕಷಾಯ ಸಾಕು

ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯ ಸಂದರ್ಭದಲ್ಲಿ ಎದುರಿಸುವ ಸಕಲ ಸಂಕಷ್ಟಗಳಿಗೂ ಜೀರಿಗೆ ಹಾಕಿದ ನೀರು ಅತ್ಯುತ್ತಮ ಔಷಧಿ ಎಂದೆನಿಸಿದೆ. ಇದು ಹೆಚ್ಚು ಪರಿಣಾಮಕಾರಿ ಮಾತ್ರವಾಗಿಲ್ಲದೆ ತಾಯಿ ಮತ್ತು ಭ್ರೂಣಕ್ಕೂ ಸುರಕ್ಷಿತವಾದುದಾಗಿದೆ ಎಂಬುದಾಗಿ ಜೀರಿಗೆಯ ಔಷಧೀಯ ಗುಣಗಳು ಸಾಬೀತು ಪಡಿಸಿವೆ. ಈ ನೀರನ್ನು ತಯಾರು ಪಡಿಸಲು ನಿಮಗೆ 1 ಲೀಟರ್ ನೀರು ಮತ್ತು 1 ಚಮಚ ಜೀರಿಗೆ ಸಾಕು. ನೀರನ್ನು ಜೀರಿಗೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ನಂತರ ಅದನ್ನು ತಣಿಸಿ ಜೀರಿಗೆಯನ್ನು ತೆಗೆದು ನೀರನ್ನು ಸೇವಿಸಬೇಕು. ಜೀರಿಗೆ: ಸೌಂದರ್ಯದ ಸರ್ವ ಸಮಸ್ಯೆಗೆ ಒಂದೇ ಪರಿಹಾರ

ರಾತ್ರಿ ನೀರನ್ನು ಕುದಿಸುತ್ತೀರಿ ಎಂದಾದಲ್ಲಿ ಅದು ಇನ್ನೂ ಉತ್ತಮ, ನೀರು ತಣ್ಣಗಾಗಲು ಸಾಕಷ್ಟು ಸಮಯ ದೊರೆಯುತ್ತದೆ. ಹಾಗಿದ್ದರೆ ಜೀರಿಗೆ ನೀರನ್ನು ಕುಡಿಯುವುದರ ಪ್ರಯೋಜನಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ರಕ್ತಹೀನತೆಗೆ ಚಿಕಿತ್ಸೆ

ರಕ್ತಹೀನತೆಗೆ ಚಿಕಿತ್ಸೆ

ರಕ್ತನಾಳ ಮತ್ತು ದೇಹದ ಇತರ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುವ ಮೂಲಕ ದೇಹದಲ್ಲಿರುವ ಹಿಮೋಗ್ಲೋಬಿನ್ ಅನ್ನು ಸುಧಾರಿಸುವ ಮೂಲಕ ರಕ್ತಹೀನತೆ ಸಮಸ್ಯೆಯನ್ನು ಜೀರಿಗೆ ನೀರು ಹೋಗಲಾಡಿಸುತ್ತದೆ. ಕಬ್ಬಿಣದ ಅಂಶ ಜೀರಿಗೆಯಲ್ಲಿ ಹೆಚ್ಚು ಇದ್ದು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಇದು ಅತ್ಯಗತ್ಯವಾದುದು.

ಮಗುವಿನ ಜನನ ದೋಷಗಳ ನಿವಾರಣೆ

ಮಗುವಿನ ಜನನ ದೋಷಗಳ ನಿವಾರಣೆ

ನಿತ್ಯವೂ ಗರ್ಭಾವಸ್ಥೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದರಿಂದ ಮಗುವಿನ ಜನನ ದೋಷಗಳನ್ನು ಇದು ನಿವಾರಿಸುತ್ತದೆ ಮತ್ತು ತಡೆಗಟ್ಟುತ್ತದೆ.

ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತರುತ್ತದೆ

ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತರುತ್ತದೆ

ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತರುವಲ್ಲಿ ಜೀರಿಗೆ ನೀರಿನ ಪಾತ್ರ ಹಿರಿದಾದುದು. ಜೀರಿಗೆಯಲ್ಲಿರುವ ಪೊಟಾಶಿಯಮ್ ಭ್ರೂಣದ ಮೃದು ಅಂಗಾಂಶಗಳಿಗೆ ಹಾನಿಯನ್ನುಂಟು ಮಾಡುವ ಹೈಪರ್ ಟೆನ್ಶನ್‎ನಿಂದ ನಿರಾಳತೆಯನ್ನು ನೀಡುತ್ತದೆ.

ರೋಗನಿರೋಧಕ ಶಕ್ತಿಯ ಸುಧಾರಣೆ

ರೋಗನಿರೋಧಕ ಶಕ್ತಿಯ ಸುಧಾರಣೆ

ಕಬ್ಬಿಣದ ಅಂಶವನ್ನು ಜೀರಿಗೆಯು ಹೊಂದಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಇದು ಸುಧಾರಿಸುತ್ತದೆ. ಕಬ್ಬಿಣವಲ್ಲದೆ, ವಿಟಮಿನ್ ಎ, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಿ ಅಂಶಗಳೂ ಇದರಲ್ಲಿವೆ.

ಆಮ್ಲತೆಯನ್ನು ನಿವಾರಿಸುತ್ತದೆ

ಆಮ್ಲತೆಯನ್ನು ನಿವಾರಿಸುತ್ತದೆ

ಜೀರಿಗೆಯು ಗ್ಯಾಸ್ಟ್ರಿಕ್ ಮತ್ತು ಆಮ್ಲತೆಯನ್ನು ನಿವಾರಿಸುತ್ತದೆ. ಗರ್ಭಿಣಿಯು ಸ್ತ್ರೀಯು ಆಮ್ಲತೆ, ಹೊಟ್ಟೆಯುಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಸಾಮಾನ್ಯವಾಗಿ ಅನುಭವಿಸುತ್ತಿರುತ್ತಾರೆ. ಇಂತಹ ಪರಿಸ್ಥಿತಿಗಳಲ್ಲಿ ಜೀರಿಗೆ ನೀರು ಉತ್ತಮ ಪರಿಹಾರವನ್ನು ನೀಡುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಜೀರಿಗೆ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ನಿತ್ಯವೂ ಜೀರಿಗೆ ನೀರನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ವೇಗವಾಗಿಸುವ ಕಿಣ್ವಗಳ ಸ್ರವಿಸುವಿಕೆಯಲ್ಲಿ ನೆರವು ನೀಡುತ್ತದೆ ಹಾಗೂ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

ಲಾಲಾರಸ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ

ಲಾಲಾರಸ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ

ಜೀರಿಗೆ ಮತ್ತು ನೀರಿನ ಮಿಶ್ರಣ ಲಾಲಾರಸದ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ, ಇದರಿಂದ ಹಸಿವು ಹೆಚ್ಚಾಗುತ್ತದೆ ಮತ್ತು ಜೀರ್ಣಕ್ರಿಯೆ ತೊಂದರೆ ಕಡಿಮೆಯಾಗುತ್ತದೆ.

ಮಲಬದ್ಧತೆ ಸಮಸ್ಯೆ ನಿವಾರಣೆ

ಮಲಬದ್ಧತೆ ಸಮಸ್ಯೆ ನಿವಾರಣೆ

ಗರ್ಭಿಣಿ ಸ್ತ್ರೀಯರು ಸಾಮಾನ್ಯವಾಗಿ ಅನುಭವಿಸುವ ಮಲಬದ್ಧತೆ ಸಮಸ್ಯೆಯನ್ನು ಜೀರಿಗೆ ಸುಧಾರಿಸುತ್ತದೆ.

ರಕ್ತದಲ್ಲಿರುವ ಸಕ್ಕರೆ ನಿಯಂತ್ರಣ

ರಕ್ತದಲ್ಲಿರುವ ಸಕ್ಕರೆ ನಿಯಂತ್ರಣ

ಜೀರಿಗೆ ನೀರು ರಕ್ತದಲ್ಲಿರುವ ಸಕ್ಕರೆ ನಿಯಂತ್ರಣವನ್ನು ಸುಧಾರಿಸುತ್ತದೆ. ರಕ್ತದಲ್ಲಿರುವ ಸಕ್ಕರೆ ಏರಿಕೆಯು ತಾಯಿ ಮತ್ತು ಮಗುವಿಗೆ ಒಳ್ಳೆಯದಲ್ಲ. ಜೀರಿಗೆ ನೀರು ಈ ಪರಿಸ್ಥಿತಿಯನ್ನು ಸುಧಾರಿಸುತ್ತದೆ.

ಹೆಚ್ಚಿನ ಕಾಯಿಲೆಗಳಿಗೆ ರಾಮಬಾಣ

ಹೆಚ್ಚಿನ ಕಾಯಿಲೆಗಳಿಗೆ ರಾಮಬಾಣ

ವಾಕರಿಕೆ, ಅತಿಸಾರ, ಬೆಳಗಿನ ಬೇನೆ ಮೊದಲಾದ ಸಮಸ್ಯೆಗಳಿಗೆ ಉಪಚಾರವನ್ನು ಜೀರಿಗೆ ನೀರು ನೀಡುತ್ತದೆ. ಪ್ರತೀದಿನದ ವೈದ್ಯಕೀಯ ಸಮಸ್ಯೆಗಳಿಗೆ ಈ ಸರಳ ಮಿಶ್ರಣ ತ್ವರಿತ ಪರಿಹಾರವನ್ನು ಒದಗಿಸುತ್ತದೆ.

English summary

Benefits Of Drinking Jeera Water During Pregnancy

One among the most important part of cooking in the Asian region is the use of the seeds of Cumin in every dish that is prepared. It is well known for its strong pungent aroma and slightly bitter yet spicy taste, thus making it a very popular spice to be used in various dishes. But even more than tingling the taste buds, Cumin or Jeera fulfills a number of medicinal purposes. The medicinal properties of cumin have been well known, making it a very valuable spice.
X
Desktop Bottom Promotion