For Quick Alerts
ALLOW NOTIFICATIONS  
For Daily Alerts

ಕಿತ್ತಳೆ ಹಣ್ಣು, ಗರ್ಭಿಣಿಯರ ಪಾಲಿಗೆ ಇದು ಚಿನ್ನದಂತಹ ಹಣ್ಣು

By Arshad
|

ಹುಳಿ ತಿನ್ನುವ ಬಯಕೆ ಗರ್ಭಾವಸ್ಥೆಯಲ್ಲಿ ಸ್ವಾಭಾವಿಕ. ಅಷ್ಟೇ ಅಲ್ಲ, ದಿನ ಕಳೆದಂತೆ ಈ ಬಯಕೆ ಹೆಚ್ಚುತ್ತಾ ಹೋಗುತ್ತದೆ ಹಾಗೂ ಇತರ ಆಹಾರಗಳ ಸೇವನೆಯ ಪ್ರಮಾಣವೂ ಹೆಚ್ಚುತ್ತದೆ. ಹುಳಿ ಇರುವ ಆಹಾರಗಳಲ್ಲಿ ಗರ್ಭಿಣಿಯರಿಗೆ ಕಿತ್ತಳೆ ಎಂದರೆ ಪಂಚಪ್ರಾಣ. ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಕೊಟ್ಟಿದ್ದೂ ಹಾಲು ಅನ್ನ ಎಂಬಂತೆ ಹುಳಿ ಇರುವ ಕಿತ್ತಳೆ ಹಣ್ಣು ಗರ್ಭಿಣಿಯ ಬಯಕೆಯನ್ನು ಪೂರ್ಣಗೊಳಿಸುವ ಜೊತೆಗೇ

ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನೂ ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಕಿತ್ತಳೆ ರಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ಗರ್ಭಿಣಿ ಮತ್ತು ಗರ್ಭದಲ್ಲಿರುವ ಕಂದನ ರೋಗ ನಿರೋಧಕ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ. ಅಲ್ಲದೇ ಇತರ ಆಹಾರಗಳಿಂದ ಸತು ಮತ್ತು ಕಬ್ಬಿಣವನ್ನು ಹೀರಿಕೊಳ್ಳಲೂ ನೆರವಾಗುತ್ತದೆ. ಸರ್ವ ವಿಧದಲ್ಲೂ ಪ್ರಯೋಜನಕಾರಿಯಾಗಿರುವ ಕಿತ್ತಳೆ ಸಿಪ್ಪೆ

ಒಂದು ಸಂಶೋಧನೆಯ ಪ್ರಕಾರ ಗರ್ಭಾವಸ್ಥೆಯಲ್ಲಿ ಎಷ್ಟು ಹೆಚ್ಚು ವಿಟಮಿನ್ ಸಿ ಗರ್ಭಿಣಿಯ ದೇಹ ಸೇರುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಶಿಶುವಿನ ದೇಹ ಅಲರ್ಜಿಗೆ ಒಳಗಾಗುವ ಸಂಭವನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ಮಗುವಿನ ಮೆದುಳು ಮತ್ತು ಇತರ ಪ್ರಮುಖ ಅಂಗಗಳ ಬೆಳವಣಿಗೆ ಆರೋಗ್ಯಕರವಾಗಿರುವಲ್ಲಿ ಸಹಕರಿಸುತ್ತದೆ. ಇದರ ಹೊರತಾಗಿಯೂ ಕಿತ್ತಳೆ ರಸದಿಂದ ಇನ್ನೂ ಹಲವಾರು ಪ್ರಯೋಜನಗಳಿವೆ.

ಗರ್ಭಿಣಿಯರಿಗೆ ನಿತ್ಯವೂ ಕನಿಷ್ಠ ಎಂಭತ್ತೈದು ಮಿಲಿಗ್ರಾಂ ವಿಟಮಿನ್ ಸಿ ಅಗತ್ಯವಿದೆ. ಇದಕ್ಕಿಂತಲೂ ಕಡಿಮೆಯಾದರೆ ಮಗುವಿನ ಮೆದುಳಿನ ಬೆಳವಣಿಗೆ ಕುಂಠಿತಗೊಳ್ಳಬಹುದು. ಆದ್ದರಿಂದ ಗರ್ಭಾವಸ್ಥೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಿತ್ತಳೆಯ ಸೇವನೆ ಗರ್ಭಿಣಿಯರಿಗೆ ಉತ್ತಮ. ಇಂದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಬೋಲ್ಡ್ ಸ್ಕೈ ತಂಡ ಹೆಮ್ಮೆಪಡುತ್ತದೆ. ಬನ್ನಿ, ಕೆಳಗಿನ ಸ್ಲೈಡ್ ಶೋ ಮೂಲಕ ಹೆಚ್ಚಿನ ಮಾಹಿತಿಯನ್ನು ಈಗ ನೋಡೋಣ:

ದೇಹದಲ್ಲಿ ನೀರಿನ ಕೊರತೆಯನ್ನು ನೀಗಿಸುತ್ತದೆ

ದೇಹದಲ್ಲಿ ನೀರಿನ ಕೊರತೆಯನ್ನು ನೀಗಿಸುತ್ತದೆ

ಗರ್ಭಾವಸ್ಥೆಯಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ಅತಿ ಅಗತ್ಯ. ಕಿತ್ತಳೆ ಹಣ್ಣುಗಳಲ್ಲಿ ಉತ್ತಮ ಪ್ರಮಾಣದ ನೀರು ಲಭ್ಯವಿದ್ದು ಗರ್ಭಿಣಿಯ ಅಗತ್ಯದ ನೀರಿನ ಕೊರತೆಯನ್ನು ನೀಗಿಸುತ್ತದೆ ಹಾಗೂ ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ಪೊಟ್ಯಾಶಿಯಂ ಮತ್ತು ಸೋಡಿಯಂ ಲವಣಗಳು ದೇಹದಲ್ಲಿ ಸಂತುಲಿತ ಪ್ರಮಾಣದ ನೀರು ಲಭ್ಯವಿರುವಂತೆ ನೋಡಿಕೊಳ್ಳುತ್ತದೆ.

ಉತ್ತಮ ಪ್ರಮಾಣ ಫೋಲೇಟ್‌ಗಳನ್ನು ಒದಗಿಸುತ್ತದೆ

ಉತ್ತಮ ಪ್ರಮಾಣ ಫೋಲೇಟ್‌ಗಳನ್ನು ಒದಗಿಸುತ್ತದೆ

ಗರ್ಭಿಣಿಯರಿಗೆ ಫೋಲೇಟ್ ಒಂದು ಅಗತ್ಯವಾದ ಮತ್ತು ಉತ್ತಮವಾದ ಪೋಷಕಾಂಶವಾಗಿದ್ದು ಕಿತ್ತಳೆ ರಸದಲ್ಲಿ ಇದು ಹೇರಳವಾಗಿದೆ. ಇದು ಗರ್ಭಿಣಿಯ ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ರಕ್ತದ ಕೆಂಪು ಕಣಗಳನ್ನು ಉತ್ಪಾದಿಸಲು ನೆರವಾಗುತ್ತದೆ ಹಾಗೂ ಹೊಸ ಅಂಗಾಶಗಳ ಬೆಳವಣಿಗೆಗೂ ನೆರವಾಗುತ್ತದೆ. ಅಲ್ಲದೇ ಶಿಶು ಮತ್ತು ಗರ್ಭಕೋಶದ ಒಳಗೋಡೆಯ ನಡುವೆ ಇರುವ ಜರಾಯು (placenta)ವಿನ ಉತ್ಪಾದನೆಗೆ ಇದು ಅವಶ್ಯವಾದ ಪೋಷಕಾಂಶವಾಗಿದೆ.

ಮೂತ್ರಪಿಂಡದಲ್ಲಿ ಕಲ್ಲುಗಳಾಗದಿರಲು ನೆರವಾಗುತ್ತದೆ

ಮೂತ್ರಪಿಂಡದಲ್ಲಿ ಕಲ್ಲುಗಳಾಗದಿರಲು ನೆರವಾಗುತ್ತದೆ

ಗರ್ಭಾವಸ್ಥೆಯಲ್ಲಿ ನಿಯಮಿತವಾಗಿ ಕಿತ್ತಳೆ ಹಣ್ಣುಗಳನ್ನು ಸೇವಿಸುವ ಕಾರಣ ಮೂತ್ರಕೋಶದಲ್ಲಿನ ದ್ರವದ ಪಿಎಚ್ ಮಟ್ಟ (ಆಮ್ಲೀಯತೆ ಮತ್ತು ಕ್ಷಾರೀಯತೆ ಅಳೆಯುವ ಮಾಪಕ) ವನ್ನು ಹೆಚ್ಚಿಸುತ್ತದೆ. ಕಿತ್ತಳೆ ರಸದಲ್ಲಿರುವ ಸಿಟ್ರಿಕ್ ಆಮ್ಲ ಈ ದ್ರವವನ್ನು ಕೊಂಚ ಆಮ್ಲೀಯವಾಗಿಸುತ್ತದೆ. ಈ ಆಮ್ಲೀಯ ದ್ರವ ಮೂತ್ರಪಿಂಡಗಳ ಮೂಲಕ ಹಾದು ಹೋದಾಗ ಮೂತ್ರಪಿಂಡಗಳಲ್ಲಿ ಬೇರೆ ಕಾರಣಗಳಿಂದ ಉಂಟಾಗಿದ್ದ ಕಲ್ಲುಗಳನ್ನು ಕರಗಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಇದು ಮೂತ್ರಪಿಂಡದಲ್ಲಿ ಮುಂದೆ ಆಗಬಹುದಾಗಿದ್ದ ದೊಡ್ಡ ತೊಂದರೆಯಿಂದ ಕಾಪಾಡುತ್ತದೆ.

ಕ್ಯಾರೋಟಿನಾಯ್ಡುಗಳ ಭಂಡಾರವಾಗಿದೆ

ಕ್ಯಾರೋಟಿನಾಯ್ಡುಗಳ ಭಂಡಾರವಾಗಿದೆ

ಕ್ಯಾರೆಟ್ಟುಗಳಿಗೆ ಪ್ರಖರ ಬಣ್ಣ ಬರಲು ಕಾರಣವಾದ ಕ್ಯಾರೋಟಿನ್ ಎಂಬ ಪೋಷಕಾಂಶಗಳು ಕಿತ್ತಳೆಯಲ್ಲಿಯೂ ಇವೆ. ಇವು ಉತ್ತಮವಾದ ಆಮ್ಲಜನಕ ವಾಹಕಗಳಾಗಿದ್ದು ವಿಶೇಷವಾಗಿ ಶ್ವಾಸವ್ಯವಸ್ಥೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಗರ್ಭಿಣಿಯರಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿರುವ ಕಾರಣ ನಿತ್ಯವೂ ಕಿತ್ತಳೆಯನ್ನು ಸೇವಿಸುವ ಮೂಲಕ ಅಗತ್ಯವಾದ ಪ್ರಮಾಣದ ಕ್ಯಾರೋಟಿನಾಯ್ಡುಗಳನ್ನು ಪಡೆಯಬಹುದು.

ಅತಿರಕ್ತದೊತ್ತಡ ಮತ್ತು ಮಲಬದ್ಧತೆಯಿಂದ ಕಾಪಾಡುತ್ತದೆ

ಅತಿರಕ್ತದೊತ್ತಡ ಮತ್ತು ಮಲಬದ್ಧತೆಯಿಂದ ಕಾಪಾಡುತ್ತದೆ

ಕಿತ್ತಳೆಯಲ್ಲಿರುವ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಗರ್ಭಾವಸ್ಥೆಯಲ್ಲಿ ಎದುರಾಗುವ ಅಧಿಕ ರಕ್ತದೊತ್ತಡದ ತೊಂದರೆಯನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದ ಕರಗದ ನಾರು (ಒಟ್ಟು ಶೇಖಡಾ 9ರಷ್ಟು) ಇರುವ ಕಾರಣ ಜೀರ್ಣಕ್ರಿಯೆ ಹಾಗೂ ವಿಸರ್ಜನೆ ಕಾರ್ಯ ಉತ್ತಮಗೊಂಡು ಮಲಬದ್ದತೆಯಾಗದಂತೆ ತಡೆಯುತ್ತದೆ.

English summary

Amazing Benefits Of Orange During Pregnancy

The cravings for food increases during pregnancy. Orange is one of the fruits women crave for during pregnancy. They are the safest fruits that pregnant women are advised to have. An orange is the power house of vitamin C. It is loaded with nutrition that provides great health benefits during pregnancy. In this article, we at Boldsky are sharing with you some of the health benefits of consuming oranges during pregnancy. Read on to know more about it.
X
Desktop Bottom Promotion