For Quick Alerts
ALLOW NOTIFICATIONS  
For Daily Alerts

ಬಂಜೆತನಕ್ಕೆ ಮಹಿಳೆಯರು ಮಾತ್ರವಲ್ಲ ಪುರುಷರೂ ಕಾರಣ..

By Super
|

ಮಹಿಳೆಯರಲ್ಲಿ ಮಾತ್ರ ಬಂಜೆತನ ಕಾಣಿಸಿಕೊಳ್ಳುತ್ತದೆ ಎನ್ನುವ ಕಾಲವೊಂದಿತ್ತು. ಆಗ ದಂಪತಿಗೆ ಮಕ್ಕಳಗಾದಿದ್ದರೆ ಮಹಿಳೆಯನ್ನೇ ದೂಷಿಸುತ್ತಿದ್ದರು. ಆದರೆ ಕಾಲ ಬದಲಾದಂತೆ ವೈದ್ಯಕೀಯ ಬೆಳವಣಿಗೆಗಳಿಂದ ಪುರುಷರಲ್ಲಿಯೂ ಬಂಜೆತನ ಉಂಟು ಎನ್ನುವುದು ಬೆಳಕಿಗೆ ಬಂತು. ಬಂಜೆತನವಿರುವ ಪುರುಷರ ಒತ್ತಡದ ಮಟ್ಟ ಹೆಚ್ಚಾಗುತ್ತದೆ. ಕೋಪ, ನಿರಾಸಕ್ತಿ, ಮತ್ತು ಖಿನ್ನತೆಯಿಂದಾಗಿ ದಾಂಪತ್ಯ ಜೀವನದಲ್ಲಿ ಸರಿಯಾಗಿ ಲೈಂಗಿಕ ಸುಖವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಬಂಜೆತವು ಅತ್ಯಂತ ಕೆಟ್ಟ ಮಟ್ಟಕ್ಕೆ ತಲುಪುವ ಮೊದಲು ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಚಿಕಿತ್ಸೆ ಪಡೆದುಕೊಂಡು ಆರೋಗ್ಯಕರ ಜೀವನಶೈಲಿಯನ್ನು ನಡೆಸಬಹುದಾಗಿದೆ. ಮಹಿಳೆಯರಲ್ಲಿ ಬಂಜೆತನ ತಡೆಯುವ ವಿಧಾನಗಳು

ಮಾನಸಿಕವಾಗಿ ಬಂಜೆತನವು ಆಘಾತವನ್ನು ಉಂಟುಮಾಡುವುದು. ಆದರೆ ಇದೊಂದು ದೈಹಿಕ ಕಾಯಿಲೆಯಾಗಿರುವ ಹಿನ್ನೆಲೆಯಲ್ಲಿ ಇದಕ್ಕೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ. ಬಂಜೆತನ ಬರುವ ಐದು ಕಾರಣಗಳು ಮತ್ತು ಅದನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಹೋದರೆ ಮುಂದೆ ಬಂಜೆತನ ನಿವಾರಣೆಯಾಗಿ ಆರೋಗ್ಯಕರ ಜೀವನ ನಡೆಸಬಹುದು. ವಯಸ್ಸು ದಂಪತಿಗಳ ಫಲವತ್ತತೆಯ ಮೇಲೆ ಪ್ರಭಾವ ಬೀರಬಹುದೇ?

ಒತ್ತಡ ಕಡಿಮೆ ಮಾಡಿ

ಒತ್ತಡ ಕಡಿಮೆ ಮಾಡಿ

ಬಂಜೆತನವನ್ನು ಕಡಿಮೆ ಮಾಡಿಕೊಳ್ಳಲು ಮುಖ್ಯವಾಗಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ಲೈಂಗಿಕ ಕ್ರಿಯೆಗೆ ಮೊದಲು ಆರಾಮವಾಗಿ ಇದ್ದು, ಕೆಲವು ನಿಮಿಷ ರಸವತ್ತಾಗಿ ಮಾತನಾಡುತ್ತಿದ್ದರೆ ಅಂತಿಮವಾಗಿ ನೀವು ಬೇಕಾದೆಡೆ ಗಮನಹರಿಸಬಹುದಾಗಿದೆ.

ಔಷಧಿ

ಔಷಧಿ

ಯುವ ಜನರಲ್ಲಿ ಬಂಜೆತನ ಕಾಣಿಸಿಕೊಳ್ಳಲು ಹಲವಾರು ಕಾರಣಗಳಿದ್ದರೂ ಅದರಲ್ಲಿ ಒಂದು ಔಷಧಿ. ನಾವು ಸೇವಿಸುವಂತಹ ಸುಮಾರು 150 ಔಷಧಿಗಳಲ್ಲಿ ಬಂಜೆತನವನ್ನು ಉಂಟುಮಾಡುವಂತಹ ಅಂಶಗಳಿವೆ ಎಂದು ವೈದ್ಯಕೀಯ ಮೂಲಗಳು ಹೇಳಿವೆ. ನೀವು ತೆಗೆದುಕೊಳ್ಳುತ್ತಿರುವ ಔಷಧಿ ಬಗ್ಗೆ ವೈದ್ಯರಲ್ಲಿ ಮಾತನಾಡಿ ಲೈಂಗಿಕ ಆಸಕ್ತಿಗೆ ಇದರಿಂದ ಕುಂದು ಉಂಟಾಗುತ್ತದೆಯಾ ಎಂದು ತಿಳಿದುಕೊಳ್ಳಿ. ವೈದ್ಯರು ಬೇರೆ ಔಷಧಿಯನ್ನು ನೀಡಿ ನಿಮ್ಮ ಸಮಸ್ಯೆಯನ್ನು ಪರಿಹರಿಸಬಹುದು.

ಮದ್ಯ

ಮದ್ಯ

ಅತಿಯಾಗಿ ಮದ್ಯ ಸೇವನೆ ಮಾಡುತ್ತಿದ್ದರೆ ನೀವು ಅದರಿಂದ ದೂರ ಉಳಿಯುವುದು ಉತ್ತಮ. ಆಗ ಬಂಜೆತನವು ತನ್ನಿಂದತಾನೆ ದೂರ ಓಡಿಹೋಗುತ್ತದೆ.

ಧೂಮಪಾನ

ಧೂಮಪಾನ

ಮದ್ಯಪಾನದಂತೆ ಧೂಮಪಾನ ಕೂಡ ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ಲೈಂಗಿಕ ಆಸಕ್ತಿ ಮೇಲೂ ಪರಿಣಾಮ ಬೀರಬಲ್ಲದು. ಸಿಗರೇಟಿನಲ್ಲಿರುವ ನಿಕೋಟಿನ್ ಎನ್ನುವ ಅಂಶವು ರಕ್ತನಾಳಗಳನ್ನು ಕುಗ್ಗಿಸಿ ನಿಮ್ಮ ಜನನಾಂಗಕ್ಕೆ ರಕ್ತ ಪರಿಚಲನೆಯಾಗದಂತೆ ತಡೆಯುತ್ತದೆ. ಬಂಜೆತನವನ್ನು ದೂರವಿಡಬೇಕಾದರೆ ನೀವು ಸಿಗರೇಟ್ ನ್ನು ದೂರಕ್ಕೆ ಎಸೆಯಬೇಕು.

ಅನಾರೋಗ್ಯಕರ ಆಹಾರ

ಅನಾರೋಗ್ಯಕರ ಆಹಾರ

ಆರೋಗ್ಯ ಸಮಸ್ಯೆಯಿಂದಾಗಿ ಉಂಟಾಗುವಂತಹ ಬಂಜೆತವನ್ನು ನಾವು ಆರೋಗ್ಯಕರ ಜೀವನಶೈಲಿಯಿಂದ ಪರಿಹರಿಸಿಕೊಳ್ಳಬಹುದಾಗಿದೆ. ಸರಿಯಾದ ಆಹಾರ ಪಥ್ಯ ಮತ್ತು ವ್ಯಾಯಾಮದಿಂದ ಬಂಜೆತನ ದೂರವಿಡಬಹುದು. ವ್ಯಾಯಾಮ ಮಾಡದೆ ಅನಾರೋಗ್ಯಕರ ಆಹಾರವನ್ನು ತಿನ್ನುತ್ತಿದ್ದರೆ ಆಗ ಖಂಡಿತವಾಗಿಯೂ ಬಂಜೆತನ ಬರಲಿದೆ. ಆರೋಗ್ಯಕರ ಜೀವನಶೈಲಿ, ಆಹಾರ ಹಾಗೂ ವ್ಯಾಯಾಮದಿಂದ ದೇಹದ ತೂಕ ನಿಯಂತ್ರಣದಲ್ಲಿ ಇಟ್ಟುಕೊಂಡು ಬಂಜೆತನ ಬರದಂತೆ ನೋಡಿಕೊಳ್ಳಬಹುದು.

English summary

5 Major Causes Behind Male Impotency

Nevertheless, there's need to be knowledgeable as to the causes of this serious health condition in and steps you may take to avoid them, so you may enjoy a good and healthful lifestyle. Impotence is the inability of a male to achieve and sustain an Attention. This condition may increase your stress level, frustration and discouragement, provoke depression, and make you less inclined to manage your sexual relationship perfectly. You can in fact lessen your risk of developing impotence, prevent it from worsening or safely and efficiently cure it, helping you to lead a healthful lifestyle.
X
Desktop Bottom Promotion