For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆ ಪರೀಕ್ಷೆಗಳನ್ನು, ಮನೆಯಲ್ಲಿಯೇ ಮಾಡಬಹುದು!

By Super Admin
|

ತಾಯಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಆಸೆ. ಗರ್ಭಾವಸ್ಥೆಯಲ್ಲಿ ಆಕೆ ತನ್ನ ಜೀವನ ಪರಿಪೂರ್ಣವಾದ ಅನುಭವ ಪಡೆಯುತ್ತಾಳೆ. ಇಂದಿನ ಯುವಜನಾಂಗ ತಮ್ಮ ಸಂತಾನದ ಬಗ್ಗೆ ಹತ್ತು ಹಲವು ಯೋಜನೆಗಳನ್ನಿರಿಸಿಯೇ ಆ ಪ್ರಕಾರವೇ ಮುಂದುವರೆಯುವುದನ್ನು ಗಮನಿಸಬಹುದು. ಎಷ್ಟೋ ಸಲ ಈ ಯೋಜನೆಗಳು ಫಲ ನೀಡುವುದಿಲ್ಲ. ಅಲ್ಲದೇ ಗರ್ಭ ನಿಲ್ಲಲು ಹತ್ತುಹಲವು ಬಗೆಯ ಅಡ್ಡಿ ಆತಂಕಗಳೂ ಹಿಂದಿನ ದಿನಗಳಿಗೆ ಹೋಲಿಸಿದರೆ ಹೆಚ್ಚೇ ಆಗಿವೆ. ಆದರೆ ಒಮ್ಮೆ ಗರ್ಭ ನಿಂತರೆ ಅತಿ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಈ ಸ್ಟೆಪ್ಸ್ ಬಳಿಕವಷ್ಟೇ ಗರ್ಭಿಣಿ ಎಂದು ಖಚಿತಪಡಿಸಬಹುದು

ಆದರೆ ಗರ್ಭ ನಿಂತಿದೆ ಎಂದು ತಿಳಿಯುವುದು ಹೇಗೆ? ಎಪ್ಪತ್ತರ ದಶಕದಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳಲ್ಲೆಲ್ಲಾ 'ನನಗೀಗ ಮೂರು ತಿಂಗಳು' ಎಂದು ನಾಯಕಿ ಹೇಳುತ್ತಿದ್ದಂತೆ ಈಗ ಮೂರು ತಿಂಗಳು ಕಾಯಬೇಕಾಗಿಲ್ಲ. ಪ್ರಥಮ ತಿಂಗಳ ರಜಾದಿನ ಮುಂದೆಹೋದಾಗಲೇ ಅನುಮಾನ ಮೂಡುತ್ತದೆ. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಉಪಕರಣ ಬಳಸಿ ಗರ್ಭವತಿ ಹೌದೋ ಅಲ್ಲವೋ ಎಂದು ತಕ್ಷಣ ಸುಲಭವಾಗಿ ತಿಳಿಯಬಹುದು. ಹೂವೊಂದು ಬೇಕು ಬಳ್ಳಿಗೆ, ಮಗುವೊಂದು ಬೇಕು ಹೆಣ್ಣಿಗೆ!

ಈ ಉಪಕರಣ HCG (Human Chorionic Gonadotropin) ಕೊಂಚ ದುಬಾರಿಯಾಗಿರುವ ಕಾರಣ ಎಲ್ಲರೂ ಕೊಳ್ಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಅಲಭ್ಯವಾಗಿರುವ ಕಾರಣ ಈ ಪ್ರದೇಶದ ಮಹಿಳೆಯರಿಗೆ ತಕ್ಷಣಕ್ಕೆ ಇದು ಸಿಗುವಂತೆಯೂ ಇಲ್ಲ. ಆದರೆ ಇದರ ಬದಲಿಗೆ ಕೆಲವು ಸುಲಭ ವಿಧಾನಗಳಿಂದ ಗರ್ಭ ನಿಂತಿರುವುದನ್ನು ಸುಲಭವಾಗಿ ಖಚಿತಪಡಿಸಿಕೊಳ್ಳಬಹುದು. ಬನ್ನಿ ಅದು ಹೇಗೆ ಎಂಬುದನ್ನು ಮುಂದೆ ಓದಿ...

ಏನಿದು HCG (Human Chorionic Gonadotropin)

ಏನಿದು HCG (Human Chorionic Gonadotropin)

ಸಾಮಾನ್ಯವಾಗಿ HCG ಉಪಕರಣ ಹೇಗೆ ಕೆಲಸ ಮಾಡುತ್ತದೆಂದರೆ ಗರ್ಭವತಿಯ ಮೂತ್ರದಲ್ಲಿ HCG (Human Chorionic Gonadotropin) ಎಂಬ ರಾಸಾಯನಿಕ ಇದೆಯೇ ಇಲ್ಲವೇ ಎಂದು ನೋಡುತ್ತದೆ ಅಷ್ಟೇ. ಗರ್ಭವತಿಯಾದ ಬಳಿಕ ದೇಹದಲ್ಲಿ ಸ್ರವಿಸುವ ಹಾರ್ಮೋನುಗಳ ಪ್ರಭಾವದಿಂದ ಈ ರಾಸಾಯನಿಕ ಮೂತ್ರದಲ್ಲಿ ಹರಿದುಹೋಗುತ್ತದೆ. ಉಪಕರಣದಲ್ಲಿರುವ ಇದಕ್ಕೆ ವಿರುದ್ಧವಾದ ರಾಸಾಯನಿಕದೊಂದಿಗೆ ಸಂಯೋಜನೆ ಹೊಂದಿದ ಬಳಿಕ ಉತ್ಪನ್ನವಾಗುವ ಉಪ್ಪು ಇದರಲ್ಲಿರುವ ಲಿಟ್ಮಸ್ ಕಾಗದದ ಬಣ್ಣವನ್ನು ಬದಲಿಸುವ ಮೂಲಕ ಗೆರೆಗಳು ಮೂಡುತ್ತವೆ. ಎರಡು ಗೆರೆಗಳಿದ್ದರೆ ಗರ್ಭಿಣಿ ಹೌದು ಎಂದು ಲೆಕ್ಕ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಏನಿದು HCG (Human Chorionic Gonadotropin)

ಏನಿದು HCG (Human Chorionic Gonadotropin)

ಇದರ ಹೊರತಾಗಿ ತಾಯಿಯಾಗುತ್ತಿರುವವಳಿಗೆ ತನ್ನ ಎರಡನೆಯ ತಿಂಗಳ ರಜಾದಿನವೂ ಬಾರದೇ ಇದ್ದರೆ, ಸ್ತನಗಳು ತುಂಬಿಕೊಂಡು ಇನ್ನಷ್ಟು ಮೃದು ಎನಿಸಿದರೆ, ವಾಕರಿಕೆ ಮೊದಲಾದವು ಅನುಭವಕ್ಕೆ ಬರುತ್ತವೆ. ಇದನ್ನು ಖಚಿತಪಡಿಸಿಕೊಳ್ಳಲು ಕೆಲವು ಸುಲಭ ವಿಧಾನಗಳಿದ್ದು ದುಬಾರಿ ಉಪಕರಣವನ್ನು ಕೊಳ್ಳುವುದು ಈಗ ಅಗತ್ಯವಿಲ್ಲ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಿನ ಸ್ಲೈಡ್ ಮೂಲಕ ನೋಡೋಣ....

ಸಕ್ಕರೆಯ ಮೂಲಕ ಗರ್ಭವತಿಯಾಗಿರುವ ಪರೀಕ್ಷೆ

ಸಕ್ಕರೆಯ ಮೂಲಕ ಗರ್ಭವತಿಯಾಗಿರುವ ಪರೀಕ್ಷೆ

ಮನೆಯಲ್ಲಿ ಕಂಡುಕೊಳ್ಳಬಹುದಾದ ವಿಧಾನಗಳಲ್ಲಿ ಇದು ಬಹುತೇಕ ಖಚಿತವಾಗಿದ್ದು ಸುಲಭವೂ ಆಗಿದೆ. ಈ ವಿಧಾನದಲ್ಲಿ ಬೆಳಿಗ್ಗೆ ಎದ್ದ ಬಳಿಕ ಪ್ರಥಮ ಮೂತ್ರವನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಸಂಗ್ರಹಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಕ್ಕರೆಯ ಮೂಲಕ ಗರ್ಭವತಿಯಾಗಿರುವ ಪರೀಕ್ಷೆ

ಸಕ್ಕರೆಯ ಮೂಲಕ ಗರ್ಭವತಿಯಾಗಿರುವ ಪರೀಕ್ಷೆ

ಇದರಿಂದ ಒಂದು ದೊಡ್ಡಚಮಚದಷ್ಟು ದ್ರವವನ್ನು ಒಂದು ಅಗಲವಾದ ಚಿಕ್ಕ ತಟ್ಟೆಯಲ್ಲಿ ಹಾಕಿ. ಇದಕ್ಕೆ ಒಂದು ದೊಡ್ಡಚಮಚ ಸಕ್ಕರೆಯನ್ನು ಹಾಕಿ ಕಲಕಿ. ಗರ್ಭವತಿಯ ಮೂತ್ರದಲ್ಲಿ ಸಕ್ಕರೆ ಪೂರ್ಣವಾಗಿ ಕರಗುವುದಿಲ್ಲ, ಬದಲಿಗೆ ನಡುವಿನಲ್ಲಿ ಕೊಂಚ ಉಳಿದುಕೊಳ್ಳುತ್ತದೆ. ಗರ್ಭವತಿಯಾಗಿಲ್ಲದಿದ್ದರೆ ಕೊಂಚ ಹೊತ್ತಿನಲ್ಲಿ ಸಕ್ಕರೆ ಪೂರ್ಣವಾಗಿ ಕರಗುತ್ತದೆ.

 ತೆಳುವಾದ ಪದರದ ವಿಧಾನದ

ತೆಳುವಾದ ಪದರದ ವಿಧಾನದ

ಈ ವಿಧಾನದಲ್ಲಿ ದಿನದ ಬೆಳಗ್ಗಿನ ಮೂತ್ರವನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಸಂಗ್ರಹಿಸಿ ಕನಿಷ್ಠ ನಾಲ್ಕು ಗಂಟೆ ಅಲ್ಲಾಡದಂತೆ ಒಂದು ಚಿಕ್ಕ ತಟ್ಟೆಯಿಂದ ಮುಚ್ಚಿಡಿ. ನಾಲ್ಕು ಘಂಟೆಗಳ ಬಳಿಕ ನಿಧಾನವಾಗಿ ಮುಚ್ಚಳ ಮುಚ್ಚಿ ಪರೀಕ್ಷಿಸಿ. ಗರ್ಭವತಿಯ ಮೂತ್ರವಾಗಿದ್ದರೆ ದ್ರವದ ಮೇಲೆ ತೆಳುವಾದ ಬಿಳಿಯ ಪದರವೊಂದು ಹಾಲಿನ ಕೆನೆಯಂತೆ ಮೂಡಿರುತ್ತದೆ. ಗರ್ಭವತಿಯಲ್ಲದಿದ್ದರೆ ಬೆಳಿಗ್ಗೆ ಹೇಗಿತ್ತೋ ಹಾಗೇ ಪಾರದರ್ಶಕವಾಗಿರುತ್ತದೆ.

ಶಿರ್ಕಾದ ಮೂಲಕ ಪರೀಕ್ಷೆ

ಶಿರ್ಕಾದ ಮೂಲಕ ಪರೀಕ್ಷೆ

ಈ ವಿಧಾನದಲ್ಲಿಯೂ ಬೆಳಗ್ಗಿನ ಪ್ರಥಮ ಮೂತ್ರವನ್ನೇ ಬಳಸಲಾಗುತ್ತದೆ. ಒಂದು ಚಿಕ್ಕ ಗಾಜಿನ ಲೋಟದಲ್ಲಿ ಕೊಂಚ ಬಿಳಿ (ಅಥವಾ ಪಾರದರ್ಶಕ) ಶಿರ್ಕಾ ಹಾಕಿ. ಈ ದ್ರವದಲ್ಲಿ ಬೆಳಗ್ಗಿನ ಮೂತ್ರವನ್ನು ಕೊಂಚ ಕೊಂಚವಾಗಿ ಹಾಕಿ ಕದಡುತ್ತಾ ಬನ್ನಿ. ಒಂದು ವೇಳೆ ಶಿರ್ಕಾದ ಬಣ್ಣ ಮೂತ್ರದ ಬಣ್ಣಕ್ಕೂ ಭಿನ್ನವಾದ ಬಣ್ಣ ಪಡೆದರೆ ಗರ್ಭಿಣಿಯಾಗಿರುವುದು ಖಚಿತ.

ಹಲ್ಲುಜ್ಜುವ ಪೇಸ್ಟ್ ಸಹಾ ಬಳಸಬಹುದು

ಹಲ್ಲುಜ್ಜುವ ಪೇಸ್ಟ್ ಸಹಾ ಬಳಸಬಹುದು

ಒಂದು ಚಿಕ್ಕ ತಟ್ಟೆಯಲ್ಲಿ ಕೊಂಚ ಹಲ್ಲುಜ್ಜುವ ಪೇಸ್ಟ್ (ಬಿಳಿಯದ್ದಾಗಿದ್ದಾಗಿರಬೇಕು, ಜೆಲ್ ಅಥವಾ ಇತರ ಬಣ್ಣದ ಪೇಸ್ಟ್ ಬೇಡ) ಸವರಿ ಬೆರಳಿನಲ್ಲಿ ಹರಡಿ ಚಿಕ್ಕ ಕೋಟೆ ನಿರ್ಮಿಸಿ. ಈಗ ಬೆಳಗ್ಗಿನ ಪ್ರಥಮ ಮೂತ್ರದ ಕೆಲ ಹನಿಗಳನ್ನು ಹಾಕಿ ವೃತ್ತಾಕಾರದಲ್ಲಿ ಮಿಶ್ರಣ ಮಾಡಿ. ಬಿಳಿಯ ಬಣ್ಣ ನೀಲಿಬಣ್ಣಕ್ಕೆ ತಿರುಗಿ ನೊರೆನೊರೆಯಾದರೆ ಗರ್ಭವತಿಯಾಗಿರುವುದು ಖಚಿತ. ಇಲ್ಲದಿದ್ದರೆ ಇಲ್ಲ.

ಬ್ಲೀಚಿಂಗ್ ಪೌಡರ್ ಪರೀಕ್ಷೆ

ಬ್ಲೀಚಿಂಗ್ ಪೌಡರ್ ಪರೀಕ್ಷೆ

ಬಿಳಿಚು-ಪುಡಿ ಅಥವಾ ಬ್ಲೀಚಿಂಗ್ ಪೌಡರ್ ಸಹಾ ಗರ್ಭಿಣಿಯಾಗಿರುವುದನ್ನು ಪರೀಕ್ಷಿಸಲು ಉತ್ತಮವಾಗಿದೆ. ಇದಕ್ಕಾಗಿ ಒಂದು ಚಿಕ್ಕ ತಟ್ಟೆಯಲ್ಲಿ ಕೊಂಚ ಬ್ಲೀಚಿಂಗ್ ಪೌಡರ್ ಹಾಕಿ ಬೆಳಗ್ಗಿನ ಪ್ರಥಮ ಮೂತ್ರದ ಕೆಲವು ಹನಿಗಳನ್ನು ಹಾಕಿ ಹಿಟ್ಟು ಕಲೆಸಿದಂತೆ ಮಿಶ್ರಣ ಮಾಡಿ. ಒಂದು ವೇಳೆ ಈ ಮಿಶ್ರಣ ನೊರೆನೊರೆಯಾದರೆ ಸಿಹಿಸುದ್ದಿಯನ್ನು ನಿಮ್ಮವರಿಗೆ ತಿಳಿಸಲು ಹಿಂದೇಟು ಹಾಕಬೇಡಿ.

 ಅಡುಗೆ ಸೋಡಾ ಪರೀಕ್ಷೆ

ಅಡುಗೆ ಸೋಡಾ ಪರೀಕ್ಷೆ

ಅಡುಗೆ ಮನೆಯಲ್ಲಿ ಸಾಮಾನ್ಯವಾಗಿರುವ ಅಡುಗೆಸೋಡಾಪುಡಿಯೂ ಗರ್ಭವತಿಯಾಗಿರುವುದನ್ನು ಖಚಿತಪಡಿಸಲು ಸಮರ್ಥವಾಗಿದೆ.ಒಂದು ಚಿಕ್ಕ ಬೋಗುಣಿಯಲ್ಲಿ ಒಂದು ಚಮಚದಷ್ಟು ಅಡುಗೆ ಸೋಡಾ ಸೇರಿಸಿ ಇದಕ್ಕೆ ಬೆಳಗ್ಗಿನ ಪ್ರಥಮ ಮೂತ್ರವನ್ನು ಹಾಕುತ್ತಾ ಕಲಕುತ್ತಾ ಬನ್ನಿ. ಮೂತ್ರದಲ್ಲಿ ಅಡುಗೆ ಸೋಡಾ ಕರಗುತ್ತಿದ್ದಂತೆಯೇ ನೊರೆನೊರೆಯಾಗುತ್ತಾ ಬರುತ್ತದೆ. ಹೆಚ್ಚು ಹೆಚ್ಚು ಮೂತ್ರ ಸೇರಿಸಿದಷ್ಟೂ ಹೆಚ್ಚು ಹೆಚ್ಚು ನೊರೆಯಾಗುತ್ತಾ ಬಂದರೆ ಸಿಹಿಸುದ್ದಿ ಹೌದು ಎಂದು ತಿಳಿಯಬಹುದು.

English summary

Simple Pregnancy Tests To Take At Home

There are few pregnancy tests that you can take up at home. These tests can confirm the presence of HCG (Human Chorionic Gonadotropin) that is the most vital indicators of pregnancy. Apart from that, if you get the early signs like missing periods, swollen and tender breasts, vomiting sensation, etc, these signs can also detect whether you're preganant or not. So, what are the simple pregnancy tests to take up at home? Here they are, so have a look.
X
Desktop Bottom Promotion