For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ನಿರ್ಲಕ್ಷ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ

By Super
|

ಗರ್ಭಿಣಿಯಾದ ಪ್ರತಿಯೊಬ್ಬ ಮಹಿಳೆಯೂ ತನ್ನ ದೇಹದಲ್ಲಿ ಆಗುತ್ತಿರುವಂತಹ ಸಣ್ಣ ಸಣ್ಣ ಬದಲಾವಣೆಗಳಿಂದ ಭೀತಿಗೊಳಗಾಗುವುದು ಸಹಜ. ಆದರೆ ಗರ್ಭಿಣಿಯಾದ ಪ್ರತಿಯೊಬ್ಬ ಮಹಿಳೆಯಲ್ಲೂ ಇಂತಹ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಮನೆಯವರು ಮತ್ತು ಸ್ನೇಹಿತರಿಂದ ಇದೆಲ್ಲವೂ ಗರ್ಭಧಾರಣೆ ವೇಳೆ ಸಹಜವೆಂದು ತಿಳಿದುಕೊಂಡ ಬಳಿಕ ನೀವು ನಿರಾಳವಾಗುತ್ತೀರಿ.

ಆದರೆ ಕೆಲವೊಂದು ಲಕ್ಷಣಗಳನ್ನು ನೀವು ಕಡೆಗಣಿಸುವಂತಿಲ್ಲ. ಕೆಲವೊಂದು ಲಕ್ಷಣಗಳು ಸಾಮಾನ್ಯವೆಂದು ನಿಮಗನಿಸಿದರೂ ಅದು ಆಗಿರುವುದಿಲ್ಲ. ಗರ್ಭಧಾರಣೆ ವೇಳೆ ಕಂಡು ಬರುವಂತಹ ಈ ಎಚ್ಚರಿಕೆಯ ಲಕ್ಷಣಗಳನ್ನು ನೀವು ಸರಿಯಾದ ಸಮಯಕ್ಕೆ ವೈದ್ಯರಿಗೆ ತೋರಿಸಿದರೆ ಆಗ ಮಗು ಮತ್ತು ತಾಯಿಯ ಪ್ರಾಣವನ್ನು ರಕ್ಷಿಸಬಹುದಾಗಿದೆ.

ಗರ್ಭಧಾರಣೆ ವೇಳೆ ಕಂಡುಬರುವಂತಹ ಕೆಲವೊಂದು ಅಸಾಮಾನ್ಯ ಲಕ್ಷಣಗಳ ಬಗ್ಗೆ ನೀವು ವೈದ್ಯರಿಗೆ ತಿಳಿಸಲೇಬೇಕಾಗಿದೆ. ಯಾಕೆಂದರೆ ನೀವು ವಿಳಂಬ ಮಾಡಿದರೆ ಅದು ಮಗು ಮತ್ತು ತಾಯಿಯ ಜೀವವನ್ನು ಅಪಾಯಕ್ಕೀಡುಮಾಡಬಹುದು. ಗರ್ಭಧಾರಣೆ ವೇಳೆ ಕೆಲವೊಂದು ದೇಹದಲ್ಲಾಗುವ ಬದಲಾವಣೆ ಕಾಣಿಸಿಕೊಂಡಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲಿ ಕೊಟ್ಟಿರುವ ಕೆಲವೊಂದು ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ ನಿದ್ದೆ ಏಕೆ ಅತ್ಯವಶ್ಯಕ?

Warning Signs During Pregnancy

ಮಗು ಚಲನೆ ನಿಲ್ಲಿಸಿದಲ್ಲಿ
ಗರ್ಭಧಾರಣೆ ವೇಳೆ 28 ವಾರಕ್ಕಿಂತ ಕಡಿಮೆಯಾಗಿದ್ದರೆ ಆಗ ಮಗುವಿನ ಚಲನೆ ಅಸಮಾನ್ಯವಾಗಿರುತ್ತದೆ ಮತ್ತು ನೀವು ವಿಶ್ರಾಂತಿ ಪಡೆಯುತ್ತಿರುವ ವೇಳೆ ಮಾತ್ರ ಮಗುವಿನ ಚಲನೆ ಗಮನಿಸಬಹುದು. ಆದರೆ 28 ವಾರಗಳ ಬಳಿಕ ಮಗು ಚಟುವಟಿಕೆಯಿಂದ ಇದ್ದು, ಯಾವಾಗಲೂ ಚಲನೆಯಲ್ಲಿರುತ್ತದೆ. ಈ ವೇಳೆ ಮಗುವಿನ ಚಲನವಲನದ ಬಗ್ಗೆ ನಿಮಗೆ ತಿಳಿಯುತ್ತದೆ. ಚಲನೆ ಕಡಿಮೆ ಇದ್ದರೆ ಆಗ ವೈದ್ಯರನ್ನು ಭೇಟಿಯಾಗಿ.
ನಿಯಮಿತವಾಗಿ ಕುಗ್ಗುವಿಕೆ ಉಂಟಾಗುವುದು

ವೈದ್ಯರ ಸಲಹೆ ಪಡೆಯಿರಿ
ಹೆರಿಗೆ ದಿನಾಂಕ ಬಂದಾಗ ಕುಗ್ಗುವಿಕೆ ಉಂಟಾಗುವುದು ಗರ್ಭಧಾರಣೆ ವೇಳೆ ಸಾಮಾನ್ಯ ಪ್ರಕ್ರಿಯೆ. ಇದು ನೋವನ್ನು ಉಂಟುಮಾಡಬಹುದು. ಆದರೆ ನಿಯಮಿತವಾಗಿರಬಾರದು. ಗಂಟೆಯೊಳಗೆ ಆರಕ್ಕಿಂತ ಹೆಚ್ಚು ಸಲ ಕುಗ್ಗುವಿಕೆ ಉಂಟಾಗುವುದು ಎಚ್ಚರಿಕೆಯ ಲಕ್ಷಣ ಮತ್ತು ಇದು ಅಕಾಲಿಕ ಹೆರಿಗೆಗೆ ಕಾರಣವಾಗಬಹದು. ಹಾಗಾಗಿ ಇಂತಹ ಸಂದರ್ಭದಲ್ಲಿ ನಿಮ್ಮ ವೈದ್ಯರಿಗೆ ಕರೆ ಮಾಡಿದರೆ ಮನೆಯಲ್ಲಿ ಏನು ಮಾಡಬೇಕೆಂದು ಸಲಹೆ ನೀಡುತ್ತಾರೆ ಮತ್ತು ಯಾವಾಗ ಆಸ್ಪತ್ರೆಗೆ ದಾಖಲಾಗಬೇಕೆಂದು ತಿಳಿಸುತ್ತಾರೆ. ಹದಿಹರೆಯದಲ್ಲಿ ಗರ್ಭಿಣಿಯರಿಗೆ ಕಾಡುವ ಸಮಸ್ಯೆಗಳೇನು?

ಅತಿಯಾದ ರಕ್ತಸ್ರಾವ
ಗರ್ಭಧಾರಣೆ ವೇಳೆ ರಕ್ತಸ್ರಾವವಾಗುವುದು ಗಂಭೀರ ಸಮಸ್ಯೆಯೇನಲ್ಲ. ಅದಾಗ್ಯೂ ನಿಮಗೆ ತಿಂಗಳಿನ ಮುಟ್ಟಿನಂತೆ ತುಂಬಾ ರಕ್ತಸ್ರಾವವಾಗುತ್ತಿದ್ದರೆ ಆಗ ಅದು ಚಿಂತೆಯ ವಿಷಯ. ಅತಿಯಾಗಿ ರಕ್ತಸ್ರಾವವಾಗುತ್ತಿದ್ದರೆ ಅಥವಾ ಮಾಸುಚೀಲವು ಸರಿಯಾದ ಜಾಗದಲ್ಲಿ ಇಲ್ಲದೆ ಇದ್ದಲ್ಲಿ ಆಗ ನೀವು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಇಲ್ಲವಾದಲ್ಲಿ ಮಗು ಮತ್ತು ತಾಯಿಗೆ ಅಪಾಯ ತಪ್ಪಿದ್ದಲ್ಲ.

ರಕ್ತದಲ್ಲಿನ ಸಕ್ಕರೆ ಮಟ್ಟವು ಅತ್ಯಧಿಕ ಅಥವಾ ಕಡಿಮೆಯಾಗುವುದು
ನಿಮಗೆ ಗರ್ಭಧಾರಣೆ ವೇಳೆ ಮಧುಮೇಹವಿದ್ದರೆ ಆಗ ರಕ್ತದಲ್ಲಿನ ಸಕ್ಕರೆ ಅಂಶವು ಕಡಿಮೆಯಿರುತ್ತದೆ. ಈ ವೇಳೆ ನೀವು ಯಾವಾಗಲೂ ಸಕ್ಕರೆಮಟ್ಟವನ್ನು ಪರೀಕ್ಷಿಸುತ್ತಾ ಇರಬೇಕು. ಗರ್ಭಧಾರಣೆ ವೇಳೆ ಮಧುಮೇಹವು ಮಗು ಮತ್ತು ತಾಯಿಗೆ ಅಪಾಯಕಾರಿ. ರಕ್ತದ ಸಕ್ಕರೆ ಮಟ್ಟದಲ್ಲಿ ಏರಿಳಿತವು ತುಂಬಾ ಅಪಾಯಕಾರಿ ಮತ್ತು ಇಂತಹ ಸಂದರ್ಭದಲ್ಲಿ ನೀವು ವೈದ್ಯರನ್ನು ಸಂಪರ್ಕಿಸಬೇಕು. ನೀವು ಗರ್ಭಿಣಿ ಎಂಬುದನ್ನು ಸೂಚಿಸುವ ದೈಹಿಕ ಲಕ್ಷಣಗಳೇನು?

ತೀವ್ರವಾದ ಹೊಟ್ಟೆನೋವು
ಗರ್ಭಧಾರಣೆ ವೇಳೆ ಸಣ್ಣ ಮಟ್ಟದ ಹೊಟ್ಟೆನೋವು ಸಾಮಾನ್ಯವಾಗಿರುಂತಹದ್ದಾಗಿದೆ. ಮಲಬದ್ಧತೆ, ಅಸ್ಥಿರಜ್ಜುವಿನ ಸುತ್ತಲು ನೋವು ಮತ್ತು ಸಣ್ಣ ಕುಗ್ಗುವಿಕೆಯಿಂದಾಗಿ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಆದರೆ ಹೊಟ್ಟೆಯಲ್ಲಿ ತೀವ್ರ ರೀತಿಯಲ್ಲಿ ನೋವಿದ್ದರೆ ಅದನ್ನು ಕಡೆಗಣಿಸಬಾರದು.

English summary

Warning Signs During Pregnancy

If you are pregnant, you probably are scared of every little thing that will happen to you. However, after hearing from your friends and family that this is normal during pregnancy will let you have a breath of relief. However, there are some signs during pregnancy that you should never ignore. Here are some signs for which you need to call your doctor immediately.
X
Desktop Bottom Promotion