For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಆರೋಗ್ಯಕ್ಕೆ ಗಿಡಮೂಲಿಕೆಯ ಉಪಚಾರ

By Manu
|

ಹೂವೊಂದು ಬೇಕು ಬಳ್ಳಿಗೆ, ಮಗುವೊಂದು ಬೇಕು ಹೆಣ್ಣಿಗೆ ಎಂಬ ಹಾಡು ತಾಯ್ತನದ ಮಹತ್ವವನ್ನು ತಿಳಿಸುತ್ತದೆ. ಹೌದು ತಾಯಿಯಾಗುವುದು ಪ್ರತಿಯೊಂದು ಹೆಣ್ಣಿಗೂ ಇರುವ ಮಹತ್ವಾಕಾಂಕ್ಷೆ. ಆಕೆಯ ಜೀವನವನ್ನು ಪರಿಪೂರ್ಣವಾಗಿಸುವ ಒಂದು ಸುಂದರ ಅನುಭವ. ಆದರೂ ಈ ಅವಧಿಯಲ್ಲಿ ಗರ್ಭಿಣಿಯರು ತೀವ್ರ ತೆರನಾದ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದರಲ್ಲಿಯೂ ಮೊದಲ ಮೂರು ತಿಂಗಳ ಅವಧಿಯು ನಿಜಕ್ಕೂ ಕತ್ತಿಯ ಮೇಲಿನ ನಡಿಗೆಯಿದ್ದಂತೆ. ಏಕೆಂದರೆ ಈ ಅವಧಿಯಲ್ಲಿ ಗರ್ಭವು ಪೂರ್ಣ ಪ್ರಮಾಣದಲ್ಲಿ ಬೆಳೆದಿರುವುದಿಲ್ಲ. ಆದ್ದರಿಂದ ನೀವು ಸೇವಿಸುವ ಆಹಾರಗಳ ಕುರಿತು ಸ್ವಲ್ಪ ಮಟ್ಟಿಗೆ ಹೆಚ್ಚಿನ ಜಾಗರೂಕತೆಯನ್ನು ವಹಿಸಬೇಕಾಗುತ್ತದೆ.

ಮಗುವಿನ ಬೆಳವಣಿಗೆಯ ಮೇಲೆ ಅಡ್ಡ ಪರಿಣಾಮವನ್ನು ಬೀರುವ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಸೇವಿಸಲು ಹೋಗಬೇಡಿ. ಇದೀಗ ನಿಮ್ಮ ಗರ್ಭಾವಧಿಯಲ್ಲಿ ನಿಮಗೆ ಸಹಾಯ ಮಾಡಲು ಟನ್‌ಗಟ್ಟಲೆ ಮಾತ್ರೆಗಳು ಲಭ್ಯವಿವೆ. ಆದರೆ ಅವುಗಳಿಂದ ನಿಮಗೆ ಅಡ್ಡಪರಿಣಾಮಗಳು ಕಂಡು ಬರಬಹುದು. ಅದು ಮುಂದೆ ಇನ್ನಷ್ಟು ಅವಘಡಗಳಿಗೆ ದಾರಿ ಮಾಡಿಕೊಡಬಹುದು. ಹಾಗಾಗಿ ಗರ್ಭಾವಧಿಯಲ್ಲಿ ಸುರಕ್ಷಿತವಾದ ಔಷಧಿಗಳನ್ನು ಸೇವಿಸಲು ಆರಂಭಿಸಿ. ಗರ್ಭಾವಸ್ಥೆಯಲ್ಲಿ ಕಾಡುವ ಶೀತ-ಕೆಮ್ಮಿಗೆ ಫಲಪ್ರದ ಸಲಹೆ

Top Herbs To Consume During Pregnancy

ಆದರೂ ಈ ನಿಟ್ಟಿನಲ್ಲಿ ನೀವು ಸ್ವಾಭಾವಿಕವಾದ ಔಷಧಿಗಳನ್ನು ಸೇವಿಸುವುದು ಒಳ್ಳೆಯದು. ಅವುಗಳನ್ನು ಗರ್ಭಾವಧಿಯಲ್ಲಿ ಸೇವಿಸುವುದರಿಂದ ಯಾವುದೇ ಅಡ್ಡಪರಿಣಾಮಗಳು ಕಂಡು ಬರುವುದಿಲ್ಲ. ಈ ಸ್ವಾಭಾವಿಕ ಔಷಧಿಗಳು ಬಹುತೇಕವು ಸಸ್ಯ ಜನ್ಯವಾಗಿರುತ್ತವೆ, ಇವು ಕಡಿಮೆ ದರದಲ್ಲಿ ದೊರೆಯುತ್ತವೆ ಮತ್ತು ಆರೋಗ್ಯಕಾರಿಯಾಗಿ ಸಹ ಇರುತ್ತವೆ. ಇವುಗಳು ಪುಡಿ, ಮಾತ್ರೆ, ಕ್ಯಾಪ್ಯೂಲ್, ಟೀ ಮತ್ತು ದ್ರಾವಣದ ರೂಪದಲ್ಲಿ ಲಭ್ಯವಿರುತ್ತದೆ. ಗರ್ಭಿಣಿಯರ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ ನಿಟ್ಟಿನಲ್ಲಿ ಇವುಗಳ ಪಾತ್ರ ದೊಡ್ಡದು. ವಿಟಮಿನ್‌ಗಳು ಮತ್ತು ಖನಿಜಾಂಶಗಳು ಈ ಗಿಡಮೂಲಿಕೆಗಳಲ್ಲಿ ಯಥೇಚ್ಛವಾಗಿ ಇರುತ್ತವೆ. ಇವು ಗರ್ಭಿಣಿಯರಲ್ಲಿ ಸಹಜವಾಗಿ ಕಾಣಿಸಿಕೊಳ್ಳುವ ನಾಸಿಯಾ, ವಾಂತಿ, ಒತ್ತಡ, ಮೈ-ಕೈ ನೋವುಗಳನ್ನು ದೂರ ಮಾಡುತ್ತವೆ.

ಆದರೂ ಒಂದು ವಿಚಾರವನ್ನು ನೆನಪಿಡಿ. ಈ ಗಿಡಮೂಲಿಕೆಗಳು ಸಸ್ಯ ಜನ್ಯವಾಗಿದ್ದರೂ ಸಹ ಎಲ್ಲಾ ಗಿಡಮೂಲಿಕೆಗಳು ಗರ್ಭಿಣಿಯರು ಸೇವಿಸಲು ಒಳ್ಳೆಯದಲ್ಲ. ಈ ಗಿಡಮೂಲಿಕೆಗಳನ್ನು ಸೇವಿಸುವ ಮೂದಲು ವೈದ್ಯರ ಪಡೆದು ಮುಂದುವರಿಯುವುದು ಉತ್ತಮ. ಈ ಅಂಕಣದಲ್ಲಿ ಬೋಲ್ಡ್‌ಸ್ಕೈ ನಿಮಗಾಗಿ ಗರ್ಭಿಣಿಯರು ಸೇವಿಸಬಹುದಾದ ಗಿಡಮೂಲಿಕೆಗಳ ಪಟ್ಟಿಯನ್ನು ನಿಮಗಾಗಿ ನೀಡುತ್ತಿದ್ದೇವೆ. ಇವುಗಳ ಕುರಿತು ತಿಳಿದುಕೊಳ್ಳಲು ಮುಂದೆ ಓದಿ.

ಶುಂಠಿ
ಶುಂಠಿಯು ಗರ್ಭಿಣಿಯರು ಸೇವಿಸಬೇಕಾದ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಗರ್ಭಿಣಿಯರಲ್ಲಿ ನಾಸಿಯಾವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ನಾಸಿಯಾವನ್ನು ಶಮನ ಮಾಡಲು ಶುಂಠಿಯು ಒಳ್ಳೆಯ ಮದ್ದಾಗಿದೆ. ಶುಂಠಿಯನ್ನು ಜಗಿದು ತಿನ್ನಬಹುದು ಅಥವಾ ಟೀ ರೂಪದಲ್ಲಿ ಮಾಡಿಕೊಂಡು ಸೇವಿಸಬಹುದು. ಇದರಿಂದ ನಾಸಿಯಾವು ಉಪಶಮನಗೊಳ್ಳುತ್ತದೆ.

ಶುಂಠಿ ಟೀ ಮಾಡುವ ವಿಧಾನ
ಸುಮಾರು ಮಧ್ಯಮಗಾತ್ರದ ಶುಂಠಿಯನ್ನು ತೊಳೆದು ಸಿಪ್ಪೆ ಸುಲಿಯಿರಿ. ಇದನ್ನು ತೆಂಗಿನಕಾಯಿ ತುರಿದಂತೆ ಚಿಕ್ಕ ಚಿಕ್ಕ ಎಳೆಗಳಾಗಿ ತುರಿಯಿರಿ ಅಥವಾ ಸಾಧ್ಯವಾದಷ್ಟು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ. ಇದನ್ನು ಒಂದು ಲೋಟದಷ್ಟು ಕುದಿಸಿದ ನೀರಿಗೆ ಹಾಕಿ ಮುಚ್ಚಳ ಮುಚ್ಚಿ ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಡಿ (ಮತ್ತೆ ಕುದಿಸಬಾರದು) ಈ ನೀರು ನಿಧಾನವಾಗಿ ತಣ್ಣಗಾಗಲು ಬಿಡಿ. ಬಳಿಕ ಈ ನೀರನ್ನು ನೋಸಿ ಕುಡಿಯಿರಿ. ರುಚಿಗೆ ಸ್ವಲ್ಪ ಜೇನು, ತುಳಸಿ ಎಲೆಗಳು ಅಥವಾ ಲಿಂಬೆರಸವನ್ನೂ ಸೇರಿಸಿ ಸವಿಯಬಹುದು. ಸ್ವಲ್ಪ ಒಗರು ಅನಿಸಿದರೆ ಸ್ವಲ್ಪ ಬೆಲ್ಲವನ್ನೂ ಸೇರಿಸಬಹುದು.

ಪುದಿನಾ
ಪುದಿನಾದಲ್ಲಿರುವ ಚೇತೋಹಾರಿ ಗುಣಗಳು ಗರ್ಭಿಣಿಯರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದು ನಾಸಿಯಾವನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆ ತೊಳೆಸುವಿಕೆಯನ್ನು ಸಹ ಕಡಿಮೆ ಮಾಡುತ್ತದೆ. ಇದರ ಜೊತೆಗೆ ಇದು ಹೊಟ್ಟೆಯಲ್ಲಿರುವ ಗ್ಯಾಸ್ ಅನ್ನು ನಿವಾರಿಸಿ, ಹೊಟ್ಟೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದು ಎದೆ ಉರಿಯನ್ನು ಕಡಿಮೆ ಮಾಡುತ್ತದೆ ಮತ್ತು ದೇಹವನ್ನು ಸಹ ಶುದ್ಧಿಗೊಳಿಸುತ್ತದೆ.

ಪುದಿನ(ಪೆಪ್ಪರ್ಮಿಂಟ್) ಚಹಾ ತಯಾರಿಸುವ ವಿಧಾನ
ಸುಮಾರು ನಾಲ್ಕು ಲೋಟ ಕುದಿಯುವ ನೀರಿಗೆ ಎರಡು ದೊಡ್ಡಚಮಚ ಒಣ ಎಲೆಗಳನ್ನು ಸೇರಿಸಿ ಸುಮಾರು ಇಪ್ಪತ್ತು ನಿಮಿಷಗಳವರೆಗೆ ಹಾಗೇ ಬಿಡಿ (ಮತ್ತೆ ಕುದಿಸಬಾರದು). ಬಳಿಕ ಸೋಸಿ ನೀರನ್ನು ಬಾಟಲಿಯಲ್ಲಿ ಶೇಖರಿಸಿ ಫ್ರಿಜ್ ನಲ್ಲಿಡಬಹುದು. ಕುಡಿಯುವ ಅಗತ್ಯವಿದ್ದಾಗ ಬಾಟಲಿ ಹೊರತೆಗೆದು ಮತ್ತೊಮ್ಮೆ ಬಿಸಿಮಾಡಿ ಸೇವಿಸಿ. ರುಚಿಗಾಗಿ ಕೆಲವು ತೊಟ್ಟು ಲಿಂಬೆರಸ ಮತ್ತು ಸಕ್ಕರೆ ಅಥವಾ ಕಲ್ಲುಸಕ್ಕರೆಯನ್ನೂ ಸೇರಿಸಬಹುದು.

ಚಾಮೋಮೈಲ್

ಚಾಮೋಮೈಲ್ ಗಂಟಲು ನೋವಿಗೆ ತುಂಬಾ ಒಳ್ಳೆಯದು.ಇದು ಗರ್ಭಿಣಿಯರಲ್ಲಿ ಕಂಡು ಬರುವ ಒತ್ತಡವನ್ನು ನಿವಾರಿಸುತ್ತದೆ. ಜೊತೆಗೆ ಇನ್ಸೋಮ್ನಿಯಾ ಮತ್ತು ಮಲಬದ್ಧತೆಯನ್ನು ಸಹ ನಿವಾರಿಸುತ್ತದೆ.

ತಳಸಿ ಚಹಾ
ತನ್ನ ಮತ್ತು ಮಗುವಿನ ಆರೋಗ್ಯವನ್ನು ಕುರಿತು ಹೆಚ್ಚಿನ ಕಾಳಜಿಯ ಬಗ್ಗೆ ಮುತುವರ್ಜಿಯನ್ನು ಪ್ರತಿಯೊಬ್ಬ ಗರ್ಭಿಣಿ ಸ್ತ್ರೀ ಕೂಡ ವಹಿಸಬೇಕಾಗುತ್ತದೆ. ತಮ್ಮ ಆರೋಗ್ಯಕ್ಕೆ ಕೆಟ್ಟ ಪರಿಣಾಮವನ್ನು ಬೀರುವ ಕೆಲವೊಂದು ಪಾನೀಯಗಳು ಮತ್ತು ಆಹಾರವನ್ನು ತೆಗೆದುಕೊಳ್ಳುವುದು ಕೂಡ ಹಾನಿಕರವಾಗಿರುತ್ತದೆಂದು ತಜ್ಞರು ಹೇಳುತ್ತಾರೆ. ಒಂದು ಕಪ್‌ನಷ್ಟು ತುಳಸಿ ಚಹಾವನ್ನು ತಯಾರಿಸುವುದು ಕಷ್ಟದ ಕೆಲಸವೇನಲ್ಲ. ಕೆಲವರ ಮನೆಯಲ್ಲಿ ಧಾರ್ಮಿಕ ನಂಬಿಕೆಗಳಿಗಾಗಿ ಪೂಜೆ ಪುನಸ್ಕಾರಕ್ಕಾಗಿ ತುಳಸಿ ಗಿಡವನ್ನು ಬೆಳೆಸಿರುತ್ತಾರೆ.


ತುಳಸಿ ಗಿಡವನ್ನು ತಮ್ಮ ಮನೆಗಳಲ್ಲಿ ಹೊಂದಿರದೇ ಇರುವವರು ಪೂರ್ವ ಪ್ಯಾಕೇಜ್ ಮಾಡಿದ ಅಥವಾ ಒಣಗಿದ ತುಳಸಿಯನ್ನು ಮಾರುಕಟ್ಟೆಯಿಂದ ಖರೀದಿಸಬೇಕಾಗುತ್ತದೆ. ಈ ಚಹಾವನ್ನು ತಯಾರಿಸಲು, ಒಂದು ಕಪ್‌ನಷ್ಟು ನೀರನ್ನು ಕುದಿಸಿಕೊಳ್ಳಿ ಮತ್ತು ತುಳಸಿ ಚಹಾದ ಬ್ಯಾಗ್ ಅನ್ನು ಇದಕ್ಕೆ ಮುಳುಗಿಸಿ. ಐದು ನಿಮಿಷಗಳ ಕಾಲ ಇದನ್ನು ಹಾಗೆಯೇ ಇರಿಸಿ. ಪೂರ್ವವಾಗಿ ಪ್ಯಾಕ್ ಮಾಡಿದ ಚಹಾವನ್ನು ನೀವು ಬಳಸುತ್ತಿಲ್ಲವೆಂದಾದಲ್ಲಿ, ತಾಜಾ ತುಳಸಿ ಎಲೆಗಳನ್ನು ಕಿತ್ತುಕೊಳ್ಳಿ ಮತ್ತು ಇದನ್ನು ಕಪ್‌ನಷ್ಟು ನೀರಿನಲ್ಲಿ ಕವರ್ ಮಾಡಿಕೊಳ್ಳಿ. ಎರಡು ನಿಮಿಷಗಳಷ್ಟು ಕಾಲ ಈ ಎಲೆಗಳು ನೀರಿನಲ್ಲಿರಲಿ.
English summary

Top Herbs To Consume During Pregnancy

Pregnancy is a stage that demands a lot of care and attention. The first trimester of pregnancy is very crucial because the foetus is not fully developed, and, therefore, it is necessary to be careful about the foods you consume. There are tons of medications and supplements available these days, but they may contain certain side effects, which can be dangerous if consumed in excess.
Story first published: Friday, December 4, 2015, 15:50 [IST]
X
Desktop Bottom Promotion