For Quick Alerts
ALLOW NOTIFICATIONS  
For Daily Alerts

ಬಹುಪಯೋಗಿ ಕೇಸರಿ, ಗರ್ಭಿಣಿಯರ ಪಾಲಿನ ಸಂಜೀವಿನಿ

By Super
|

ವಿಶ್ವದ ಅತ್ಯಂತ ದುಬಾರಿ ಮಸಾಲೆ ಅಥವಾ ಗಿಡಮೂಲಿಕೆಯಾದ ಕೇಸರಿಯು ಹಲವಾರು ಔಷಧಿಯ ಗುಣಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುತ್ತದೆ. ಬಹುತೇಕ ಕಡೆ ಇದನ್ನು ಜನರು ತಮ್ಮ ತ್ವಚೆಯ ಬಣ್ಣವನ್ನು ಹೆಚ್ಚಿಸಿಕೊಳ್ಳಲು ಬಳಸುತ್ತಾರೆ.

ಇದರಲ್ಲಿರುವ ಥಿಯಮಿನ್ ಮತ್ತು ರಿಬೊಫ್ಲಾವ್ ಎನ್ನುವ ಔಷಧೀಯ ಗುಣಗಳು ಅಧಿಕವಾಗಿದ್ದು ಆರೋಗ್ಯದ ಬೆಳವಣಿಗೆಗೆ ತುಂಬಾ ಸಹಾಯಕ. ಬಹುತೇಕ ಮಂದಿಯ ಪ್ರಕಾರ ಕೇಸರಿಯನ್ನು ಗರ್ಭಿಣಿಯರಿಗೆ ನೀಡುವುದರಿಂದ ಬೆಳ್ಳಗೆ ಇರುವ ಮಗುವನ್ನು ಹೆರಲು ಸಹಕಾರಿಯಾಗುತ್ತದೆಯಂತೆ. ಆದರೆ ಯಾವುದೇ ಸಂಶೋಧನೆಗಳು ಈ ನಂಬಿಕೆಗೆ ಪುಷ್ಠಿಯನ್ನು ನೀಡಿಲ್ಲ. ಹಾಗಾಗಿ ಇದು ಒಂದು ಮಿಥ್ಯೆ ಅಥವಾ ಕಟ್ಟು ಕಥೆ ಎಂದು ಭಾವಿಸಬಹುದು.

ಹಾಗೆಂದು ಗರ್ಭಿಣಿಯರಿಗೆ ಕೇಸರಿಯನ್ನು ನೀಡಬೇಡಿ ಎಂದು ನಾವು ಹೇಳುತ್ತಿಲ್ಲ. ಏಕೆಂದರೆ ಇದು ಮಗುವಿಗೆ ಬಣ್ಣವನ್ನು ನೀಡುತ್ತದೆಯೋ, ಇಲ್ಲವೋ ಎಂಬ ಬಗ್ಗೆ ವಾದಗಳಿದ್ದರು ಗರ್ಭಿಣಿಯರಿಗೆ ಇದನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳು ದೊರೆಯುತ್ತವೆ ಎಂಬ ಮಾತಿದೆ. ಅವುಗಳು ಏನು ಎಂದು ಇಂದು ತಿಳಿದುಕೊಳ್ಳೋಣ ಬನ್ನಿ..

ಕಣ್ಣಿನ ಸಮಸ್ಯೆಗಳು

ಕಣ್ಣಿನ ಸಮಸ್ಯೆಗಳು

ಕೇಸರಿಯು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಸಂಶೋಧನಾಕಾರರ ಪ್ರಕಾರ ಕೇಸರಿಯನ್ನು ಗರ್ಭಿಣಿಯರಿಗೆ ನೀಡುವುದರಿಂದ ಕ್ಯಾಟರಕ್ಟ್ ಮುಂತಾದ ಸಮಸ್ಯೆಗಳು ಬಂದಾಗ ಮತ್ತು ಇನ್ನಿತರ ದೃಷ್ಟಿಯ ಸಮಸ್ಯೆಗಳಲ್ಲಿ ನಿಮ್ಮ ಕಣ್ಣುಗಳಿಗೆ ಉತ್ತಮ ಆರೋಗ್ಯವನ್ನು ನೀಡುತ್ತದೆಯಂತೆ.

ಜೀರ್ಣಕ್ರಿಯೆ

ಜೀರ್ಣಕ್ರಿಯೆ

ಗರ್ಭಿಣಿ ಸ್ತ್ರೀಯರಲ್ಲಿ ಕೇಸರಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹಸಿವನು ಹೆಚ್ಚಿಸುತ್ತದೆ. ಜೊತೆಗೆ ಇದು ಇಡೀ ದೇಹದಲ್ಲಿ ರಕ್ತವು ಸಮ ಪ್ರಮಾಣದಲ್ಲಿ ಪಸರಿಸುವಂತೆ ಮಾಡುತ್ತದೆ. ಜೊತೆಗೆ ಇದು ಗ್ಯಾಸ್ಟ್ರೊಇಂಟೆಸ್ಟೆನಿಲ ಆಸಿಡಿಟಿಯನ್ನು ತಡೆಯುತ್ತದೆ. ಹೀಗೆ ಮಾಡಲು ಇದು ಜಠರದಲ್ಲಿ ಒಂದು ಪೊರೆಯನ್ನು ಸೃಷ್ಟಿಸುತ್ತದೆ.

ಮೂತ್ರಪಿಂಡ ಮತ್ತು ಕರುಳಿನ ಸಮಸ್ಯೆ

ಮೂತ್ರಪಿಂಡ ಮತ್ತು ಕರುಳಿನ ಸಮಸ್ಯೆ

ಕೇಸರಿಯು ಒಳ್ಳೆಯ ವಾಸನೆಯನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು ಮತ್ತು ತ್ವಚೆಯನ್ನು ಸಹ ಬೆಳ್ಳಗೆ ಮಾಡುತ್ತದೆ. ಈ ರಕ್ತವನ್ನು ಶುದ್ಧಿಗೊಳಿಸುವ ಕೇಸರಿಯು, ಕರುಳು, ಮೂತ್ರಾಶಯ ಮತ್ತು ಮೂತ್ರಪಿಂಡಗಳ ಸಮಸ್ಯೆಯನ್ನು ನಿವಾರಿಸುತ್ತದೆ.

ಹೊಟ್ಟೆ ನೋವು

ಹೊಟ್ಟೆ ನೋವು

ಇದು ಗರ್ಭಿಣಿಯರಲ್ಲಿ ಹಾಲನ್ನು ಹೆಚ್ಚು ಉತ್ಪಾದಿಸಲು ನೆರವು ನೀಡುತ್ತದೆ. ಜೊತೆಗೆ ಹೊಟ್ಟೆನೋವನ್ನು ಸಹ ನಿವಾರಣೆ ಮಾಡುತ್ತದೆ. ಇದರಲ್ಲಿರುವ ಆಂಟಿ-ಸ್ಪಾಸ್ಮೊಡಿಕ್ ಪರಿಣಾಮಗಳು ಹೊಟ್ಟೆ ನೋವನ್ನು ಕಡಿಮೆ ಮಾಡಲು ನೆರವು ನೀಡುತ್ತವೆ.

ಮಗುವಿನ ಚಲನವಲನಗಳು

ಮಗುವಿನ ಚಲನವಲನಗಳು

ಗರ್ಭಿಣಿ ಮಹಿಳೆಯರು 5 ತಿಂಗಳ ನಂತರ ಮಗುವಿನ ಚಲನವಲನವನ್ನು ತಮ್ಮ ಹೊಟ್ಟೆಯಲ್ಲಿಯೇ ಅನುಭವಿಸಬಹುದು. ಕೇಸರಿಯನ್ನು ಹಾಲಿನಲ್ಲಿ ಬೆರೆಸಿಕೊಂಡು ಸೇವಿಸುವುದರಿಂದ ಇದರ ಪರಿಣಾಮ ಉತ್ತಮವಾಗಿರುತ್ತದೆ. ಇದು ದೇಹದ ಉಷ್ಣಾಂಶವನ್ನು ಅಧಿಕ ಮಾಡುತ್ತದೆ. ಹಾಗಾಗಿ ಗರ್ಭಿಣಿಯರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಲು ಹೋಗಬಾರದು.

ರಕ್ತದೊತ್ತಡ

ರಕ್ತದೊತ್ತಡ

ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಲು ಹಾಲಿನೊಂದಿಗೆ 3-4 ಎಳೆಗಳನ್ನು ಬೆರೆಸಿಕೊಂಡು ಸೇವಿಸಿ. ಇದರಿಂದ ಜೊತೆಗೆ ಮಹಿಳೆಯರಲ್ಲಿ ಮೂಡ್ ಸ್ವಿಂಗ್ ಆಗುವ ಸಮಸ್ಯೆಯು ಸಹ ಕಡಿಮೆಯಾಗುತ್ತದೆ. ಜೊತೆಗೆ ಇದರಲ್ಲಿ ಸ್ನಾಯುಗಳನ್ನು ವಿಶ್ರಾಂತಿ ನೀಡುವ ಹಲವಾರು ಅಂಶಗಳು ಇರುತ್ತವೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಗರ್ಭಕೋಶದ ಉದ್ಧೀಪಕವಾಗಿ ಕೆಲಸ ಮಾಡುತ್ತದೆ.

English summary

Top 6 Health Benefits Of Saffron For Pregnant Women

A world’s most expensive spice or herb that has good medicinal values is saffron. This is most probably used to improve the fairness and skin tone of a person. Here we have piled Top 6 Health Benefits Of Saffron For Pregnant Women.
Story first published: Wednesday, July 1, 2015, 20:11 [IST]
X
Desktop Bottom Promotion