For Quick Alerts
ALLOW NOTIFICATIONS  
For Daily Alerts

ಯಶಸ್ವಿ ಗರ್ಭಧಾರಣೆಗೆ ಉಪಯುಕ್ತ ಸಲಹೆಗಳು

By Super
|

ಹೂವೊಂದು ಬೇಕು ಬಳ್ಳಿಗೆ, ಮಗುವೊಂದು ಬೇಕು ಹೆಣ್ಣಿಗೆ ಎಂಬ ಹಾಡು ತಾಯ್ತನದ ಮಹತ್ವವನ್ನು ತಿಳಿಸುತ್ತದೆ. ವೈವಾಹಿಕ ಬಂಧನಕ್ಕೆ ಒಳಪಟ್ಟ ಬಳಿಕ ವರ್ಷದಲ್ಲಿಯೇ ಅಜ್ಜ ಅಜ್ಜಿಯರಾಗುವುದು ತಂದೆತಾಯಿಗಳ ಅಪೇಕ್ಷೆಯಾಗಿರುತ್ತದೆ. ಆದರೆ ಎಲ್ಲವೂ ಅಂದುಕೊಂಡಂತೇ ಆಗುವುದಿಲ್ಲ. ಹಲವು ಪರಿಸ್ಥಿತಿಗಳು, ಆರೋಗ್ಯ ಸ್ಥಿತಿಗಳು ಮಗುವನ್ನು ಹೊಂದಲು ಸೂಕ್ತ ಸಮಯ, ವೃತ್ತಿಯಲ್ಲಿ ಏಳ್ಗೆಗೆ ಅಡ್ಡಿಯಾಗುವ ಭಯ ಮೊದಲಾದ ಹತ್ತು ಹಲವು ಕಾರಣಗಳಿಂದ ಎಷ್ಟೋ ದಂಪತಿಗಳು ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲು ಹಿಂದೇಟು ಹಾಕುತ್ತಾರೆ.

ಎಷ್ಟೋ ದಂಪತಿಗಳು ಮೊದಲ ಬಾರಿ ಗರ್ಭ ಧರಿಸಿದಾಗ ಬೇಡವೆಂದು ಗರ್ಭಪಾತಗೊಳಿಸಿ ನಂತರದ ವರ್ಷದಲ್ಲಿ ಬೇಕೆಂದಾಗ ಗರ್ಭಧಾರಣೆ ಸಾಧ್ಯವಾಗದೇ ಜೀವನಪೂರ್ತಿ ಕಣ್ಣೀರು ಹಾಕಿರುವಂತಹ ಉದಾಹರಣೆಗಳೂ ಇವೆ. ಆದ್ದರಿಂದ ಸೂಕ್ತ ಸಮಯ ಆರಿಸಿ ಪುಟ್ಟ ಕಂದನ ತಂದೆತಾಯಿಗಳಾಗುವತ್ತ ಗಮನ ಹರಿಸುವುದು ಎಲ್ಲರಿಗೂ ಶ್ರೇಯಸ್ಕರ.

ಒಂದು ಸಲ ಈ ಬಗ್ಗೆ ನಿರ್ಣಯ ತೆಗೆದುಕೊಂಡ ಬಳಿಕ ಇದಕ್ಕೆ ಸೂಕ್ತವಾದ ದೈಹಿಕ ಸ್ಥಿತಿ ಮತ್ತು ಇತರ ರೀತಿಯ ತಯಾರಿಗಳನ್ನು ಮಾಡಬೇಕಾಗುತ್ತದೆ. ಅದರಲ್ಲೂ ಈಗಲೇ ಮಗು ಬೇಡವೆಂದು ಗರ್ಭನಿರೋಧಕ ಗುಳಿಗೆ ಮತ್ತು ಇತರ ವಿಧಾನಗಳನ್ನು ಅನುಸರಿಸುತ್ತಿದ್ದವರಿಗೆ ಈ ವಿಧಾನಗಳನ್ನು ನಿಲ್ಲಿಸಿದ ಬಳಿಕವೂ ಯಶಸ್ಸು ಸಿಗದಿರುವುದಕ್ಕೂ ದೇಹ ಮೊದಲಿನ ಸ್ಥಿತಿಗೆ ಹಿಂದಿರುಗದಿರುವುದೇ ಆಗಿದೆ. ಅದರಲ್ಲೂ ತಾಯಿಯಾಗುವವರಿಗೆ ಈ ನಿರ್ಣಯ ತೆಗೆದುಕೊಂಡ ತಕ್ಷಣವೇ ಯಶಸ್ಸು ಸಿಗದಿದ್ದರೆ ಮಾನಸಿಕವಾಗಿ ಕುಗ್ಗತೊಡಗುತ್ತಾರೆ. ಗರ್ಭಿಣಿಯರೇ ತರಕಾರಿ-ಹಣ್ಣುಗಳಿಗೆ ಹೆಚ್ಚಿನ ಆದ್ಯತೆ ನೀಡಿ

Tips For A Healthy And Fast Conception

ಇದು ಅವರ ನಿತ್ಯದ ಚಟುವಟಿಕೆಯಲ್ಲಿಯೂ ಬಾಧೆಯುಂಟುಮಾಡಬಹುದು. ಈ ತೊಂದರೆಗಳನ್ನು ಅರಿತು ಸೂಕ್ತ ಆಹಾರ, ಔಷಧಿ ಮತ್ತು ಸೂಕ್ತವಾದ ಸಮಯವನ್ನು ಆರಿಸಿಕೊಂಡರೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಮುಂದೆ ಓದಿ..

ಗರ್ಭಧಾರಣೆಗೆ ದೈಹಿಕ ಕ್ಷಮತೆ ಪರೀಕ್ಷಿಸಿಕೊಳ್ಳಿ
ಹೊರಗಿನಿಂದ ನಮ್ಮ ದೇಹ ಹೇಗಿದ್ದರು ಒಳಗಿನ ಅಂಗಗಳ ಕ್ಷಮತೆಯ ಬಗ್ಗೆ ನಮಗೆ ಅರಿವಿರುವುದಿಲ್ಲ. ಗರ್ಭಧಾರಣೆಗೆ ನಿಮ್ಮ ದೇಹ ಸಕ್ಷಮವಾಗಿದೆಯೇ ಎಂದು ಅರಿಯಲು ವೈದರ ಕೆಲವು ಪರೀಕ್ಷೆಗಳಿಂದ ಮಾತ್ರ ಕಂಡುಹಿಡಿಯಲು ಸಾಧ್ಯ. ನಿಮ್ಮ ಕುಟುಂಬ ವೈದ್ಯರ ಅಥವಾ ಸ್ತ್ರೀರೋಗತಜ್ಞರನ್ನು ಕಂಡು ದೇಹದ ತಪಾಸಣೆ ಮಾಡಿಸಿಕೊಳ್ಳಿ. ಕೆಲವು ವಿಟಮಿನ್ ಅಥವಾ ಫೋಲಿಕ್ ಆಮ್ಲದ ಸಹಿತ ಯಾವುದಾದರೂ ಕೊರತೆಯಿದ್ದರೆ ಅದನ್ನು ಪೂರ್ಣಗೊಳಿಸಲು ಅವರು ಸಲಹೆ ನೀಡುವ ಆಹಾರ ಮತ್ತು ಔಷಧಿಗಳನ್ನು ಪಡೆದುಕೊಳ್ಳಿ. ನಿಮ್ಮ ದೇಹ ಸಕ್ಷಮವಾಗಿದೆ ಎಂದು ಖಾತರಿಯಾದ ಬಳಿಕವೇ ಮುಂದಿನ ಕಾರ್ಯಕ್ಕೆ ಅಣಿಯಾಗಿ.

ಮಾಸಿಕ ದಿನಗಳ ವೇಳಾಪಟ್ಟಿಯನ್ನು ನಿಖರವಾಗಿ ಅರಿಯಿರಿ
ಗರ್ಭಕೋಶದಲ್ಲಿರುವ ಅಂಡಾಶಯ ಸುಮಾರು ಹದಿನಾಲ್ಕನೆಯ ದಿನದಿಂದ ಪೂರ್ಣ ಬೆಳವಣಿಗೆಯನ್ನು ಪಡೆದು ವೀರ್ಯಾಣುವಿನ ನಿರೀಕ್ಷೆಯಲ್ಲಿರುತ್ತದೆ. ಈ ದಿನಗಳು ಪ್ರತಿಯೊಬ್ಬರಲ್ಲಿಯೂ ಕೊಂಚ ವ್ಯತ್ಯಾಸವಿರುತ್ತದೆ. ಇದನ್ನು ಕಂಡುಕೊಳ್ಳಲು ಉತ್ತಮ ವಿಧಾನವೆಂದರೆ ಬೆಳಿಗ್ಗೆ ಎಚ್ಚರಾದ ತಕ್ಷಣ ದೇಹದ ತಾಪಮಾನವನ್ನು ಅಳೆಯುವುದು. ಇತರ ದಿನಗಳಿಗಿಂತ ಫಲವತ್ತಾದ ದಿನಗಳಲ್ಲಿ ಇದು ಕೊಂಚವೇ ಹೆಚ್ಚಾಗುತ್ತದೆ. ಇದು ಅತಿ ಹೆಚ್ಚು ಇರುವ ದಿನಗಳು ಅತಿ ಫಲವತ್ತತೆಯ ದಿನಗಳೆಂದು ಅರಿತುಕೊಳ್ಳಬಹುದು.

ವೈದ್ಯರು ಅನುಸರಿಸುವ ಇನ್ನೊಂದು ವಿಧಾನವೆಂದರೆ ಗರ್ಭಕೋಶದ ಕಂಠದ ಬಳಿಯ ಸ್ರಾವವನ್ನು ಪರೀಕ್ಷಿಸುವುದು. ಇದು ಇತರ ದಿನಗಳಲ್ಲಿ ತಿಳಿಹಳದಿ ಬಣ್ಣದಲ್ಲಿದ್ದರೆ ಈಗ ಅತ್ಯಂತ ಪಾರದರ್ಶಕವಾಗಿದ್ದು ಮೊಟ್ಟೆಯ ಬಿಳಿಭಾಗದಂತೆ ಲೋಳೆಲೋಳೆಯಾಗಿರುತ್ತದೆ. ಇದು ಫಲವತ್ತತೆಯನ್ನು ಪ್ರಕಟಿಸುತ್ತದೆ. ಈಗ ಮಾರುಕಟ್ಟೆಯಲ್ಲಿ ಈ ಪರೀಕ್ಷೆಯನ್ನು ಮಾಡುವ ಸಲಕರಣೆ ಲಭ್ಯವಿದ್ದು ಮನೆಯಲ್ಲಿಯೇ ಸುಲಭವಾಗಿ ಪರೀಕ್ಷಿಸಿಕೊಳ್ಳಬಹುದು. ಹೆರಿಗೆಯ ಸ್ಪಷ್ಟ ಸೂಚನೆಗಳಿವು-ನಿರ್ಲಕ್ಷಿಸಬೇಡಿ

ಕೂಡಲು ಸೂಕ್ತವಾದ ಸಮಯವನ್ನು ಆರಿಸಿ
ನಿಮ್ಮ ಅಂಡಾಶಯದಲ್ಲಿ ಅಂಡಾಣು ಬಿಡುಗಡೆಯಾಗುವ ದಿನವನ್ನು ಅರಿತ ಬಳಿಕ ಅದಕ್ಕೂ ಸುಮಾರು ಮೂರರಿಂದ ನಾಲ್ಕು ದಿನಗಳ ಮುನ್ನಾದಿನದಿಂದ ಕೂಡುವುದು ಉತ್ತಮ. ಏಕೆಂದರೆ ಗರ್ಭಕೋಶದ ಬಳಿ ಆಗಮಿಸಿದ ವೀರ್ಯಾಣು ಸುಮಾರು ಮೂರರಿಂದ ಆರು ದಿನಗಳವರೆಗೆ ಜೀವಂತವಿರುತ್ತವೆ. ಆದರೆ ಅಂಡಾಣು ಮಾತ್ರ ಒಂದೇ ದಿನ ಇರುತ್ತದೆ. ಆದ್ದರಿಂದ ಅಂಡಾಣು ಆಗಮಿಸುವ ಮೊದಲೇ ವೀರ್ಯಾಣುಗಳನ್ನು ಕಾದಿರಿಸಿದರೆ ಫಲವತ್ತತೆಯ ಸಾಧ್ಯತೆಗಳು ಹೆಚ್ಚುತ್ತದೆ. ಆದ್ದರಿಂದ ನಿಮ್ಮ ಫಲವತ್ತತೆಯ ಸಂಭವವನ್ನು ಹೆಚ್ಚಿಸಲು ಈ ದಿನಕ್ಕೂ ಆರು ದಿನಗಳ ಮುನ್ನಾದಿನದಿಂದ ದಿನ ಬಿಟ್ಟು ದಿನ ಕೂಡುವುದು ಉತ್ತಮ.

ಈ ಅವಧಿಯಲ್ಲಿ ಮದ್ಯಪಾನ, ಧೂಮಪಾನ, ಕೆಫೀನ್ ತ್ಯಜಿಸಿ

ಈ ಮೂರೂ ನಿಮ್ಮ ಫಲವತ್ತತೆಯ ಸಾಧ್ಯತೆಯನ್ನು ಅಪಾರವಾಗಿ ಪ್ರಭಾವಗೊಳಿಸಬಹುದು. ಇದು ಪತಿ ಅಥವಾ ಪತ್ನಿ ಇಬ್ಬರಿಗೂ ಸಮಾನವಾಗಿ ಅನ್ವಯವಾಗುತ್ತದೆ. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿಮುಖ ಮತ್ತು ಮಹಿಳೆಯರಲ್ಲಿ ಅಂಡಾಣು ಬೇಗನೇ ಜಾರಿಹೋಗುವ ಸಾಧ್ಯತೆಗಳು ಹೆಚ್ಚುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. ವ್ಯಸನಿಗಳಾಗಿದ್ದು ಮದ್ಯಪಾನ ಅಥವಾ ಕೆಫೇನ್ ಇಲ್ಲದೇ ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ಮುಟ್ಟಿರುವವರು ವೈದ್ಯರ ಅನುಮತಿ ಪಡೆದು ಕೊಂಚ ಪ್ರಮಾಣದಲ್ಲಿ ಸೇವಿಸಬಹುದಾದರೂ ಧೂಮಪಾನ ಮಾತ್ರ ಕಟ್ಟುನಿಟ್ಟಾಗಿ ಸಲ್ಲದು.
English summary

Tips For A Healthy And Fast Conception

Having a baby is supposed to be the happiest time in a person’s life and the decision when to have one completely lies in the hands of the parents. It definitely is a life altering choice as once the baby comes, you can never go back to being completely independent and being how you were. However, once you have decided that it is the right time to bring a new life into the world, you need to prepare yourself for a number of tasks. 
Story first published: Monday, October 26, 2015, 9:42 [IST]
X
Desktop Bottom Promotion