For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಎಚ್ಚರ, ನಿಮಗೂ ಇದೇ ಸಮಸ್ಯೆ ಎದುರಾಗಬಹುದು!

By Arshad
|

ನಾವು ಈ ಜಗತ್ತಿಗೆ ಬರುವಾಗ ತಾಯಿಗೆ ಅತಿಹೆಚ್ಚು ನೋವು ನೀಡಿ ಬಂದಿರುತ್ತೇವೆ, ಹಾಗಾಗಿ ಯಾರಿಗೂ ನೋವು ನೀಡಬಾರದು ಎಂದು ಒಂದು ಧರ್ಮೋಪದೇಶ ಹೇಳುತ್ತದೆ. ಹೌದು, ಜಗತ್ತಿನ ಅತ್ಯಂತ ದೊಡ್ಡ ನೋವು ಎಂದರೆ ಹೆರಿಗೆ ನೋವು. ಆದರೆ ಮಗುವನ್ನು ಪಡೆಯಲು ಯಾವುದೇ ತಾಯಿ ಈ ನೋವನ್ನು ಸಹಿಸಲು ಸಿದ್ಧಳಿರುತ್ತಾಳೆ. ನಿಮ್ಮ ತಾಯಿಯ ಬಳಿ ಹೆರಿಗೆಗಳ ಬಗ್ಗೆ ಹೇಳಿ ಎಂದು ಒಂದು ಮಾತು ತೆಗೆದರೆ ಆಕೆಯ ಮತ್ತು ಇನ್ನೂ ಅನೇಕರ ಹೆರಿಗೆಯ ಕುರಿತಾದ ನೂರಾರು ಕಥೆಗಳು ಹೊರಬರುತ್ತವೆ.

ಏಕೆಂದರೆ ಹೆರಿಗೆ ಒಂದು ಜೀವವನ್ನು ಜಗತ್ತಿಗೆ ತರುವ, ಇಷ್ಟು ದಿನ ತಾಯಿಯ ಗರ್ಭದಲ್ಲಿ ಸುಖವಾಗಿ ಆಕೆಯ ರಕ್ತ, ಉಸಿರನ್ನು ಹಂಚಿ ಜೀವಿಸುತ್ತಿದ್ದ ಕಂದ ಈಗ ಸ್ವತಂತ್ರವಾಗಿ ಉಸಿರಾಡಲು ಜಗತ್ತಿಗೆ ಬರುವ ಸಂದರ್ಭವಾಗಿದೆ. ಹೆರಿಗೆ ನೋವು ಪ್ರಾರಂಭವಾದ ಬಳಿಕ ತಾಯಿ ನೋವನ್ನಲ್ಲದೇ ಬೇರೇನನ್ನೂ ಅನುಭವಿಸಲು ಸಾಧ್ಯವಿಲ್ಲ. ಗರ್ಭಾವಸ್ಥೆಯಲ್ಲಿ ನಿರ್ಲಕ್ಷ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ

ಆದರೆ ಈ ಹೊತ್ತಿನಲ್ಲಿ ಸಹಾಯಕ್ಕಿರುವ ದಾದಿಯರು ಮತ್ತು ಪ್ರಸೂತಿ ತಜ್ಞರು ಇನ್ನೂ ಹಲವು ಸಂಗತಿಗಳನ್ನು ಗಮನಿಸುತ್ತಾರೆ. ಹೆರಿಗೆಗೂ ಮುನ್ನ ಊಟ ಮಾಡದಿರಲು ಮತ್ತು ಶೌಚಾಲಯಕ್ಕೆ ಹೋಗಿ ಬರಲು ಗರ್ಭಿಣಿಗೆ ಹೇಳಿರುತ್ತಾರೆ. ಆದರೆ ಇದನ್ನು ಪಾಲಿಸದ, ಅಥವಾ ಹೆರಿಗೆ ನೋವು ಅನಿರೀಕ್ಷಿತವಾಗಿ ಕಾಣಿಸಿಕೊಂಡು ಥಟ್ಟನೇ ಪ್ರಸೂತಿಗೃಹಕ್ಕೆ ಗರ್ಭಿಣಿಯನ್ನು ಕರೆತಂದಾಗ ಹೆರಿಗೆಕಾಲದಲ್ಲಿ ಅನೈಚ್ಛಿಕ ಮಲವಿಸರ್ಜನೆ, ಅಪಾನವಾಯು ಅಥವಾ ವಾಂತಿ ಮೊದಲಾದ ತೊಂದರೆಗಳು ಎದುರಾಗಬಹುದು. ಒಂಬತ್ತನೇ ತಿಂಗಳಲ್ಲಿ ಗರ್ಭಿಣಿಯರು ಪಾಲಿಸಬೇಕಾದ ಎಚ್ಚರಿಕೆಗಳೇನು?

ಈ ತೊಂದರೆಗಳು ಗರ್ಭಿಣಿಯ ನೋವನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಇನ್ನಷ್ಟು ಕಷ್ಟಕರವಾಗುವಂತೆ ಮಾಡುತ್ತವೆ. ಈ ತೊಂದರೆಗಳಿಂದ ಪಾರಾಗಲು ಮತ್ತು ಸಾಧ್ಯವಾದಷ್ಟು ಸುಲಭವಾದ ಹೆರಿಗೆಯಾಗಲು ಪ್ರಸೂತಿತಜ್ಞರು ಕೆಲವು ಸಲಹೆಗಳನ್ನು ನೀಡುತ್ತಾರೆ. ಅವರ ಅಪಾರ ಅನುಭವದ ಪ್ರಯೋಜನಗಳನ್ನು ಪಡೆಯಲು ಕೆಳಗಿನ ಸ್ಲೈಡ್ ಶೋ ನಿಮಗೆ ನೆರವಾಗಬಲ್ಲದು...

ಕೆಲವೊಮ್ಮೆ ಮಲವಿಸರ್ಜನೆ ಅನಿವಾರ್ಯವಾಗುತ್ತದೆ

ಕೆಲವೊಮ್ಮೆ ಮಲವಿಸರ್ಜನೆ ಅನಿವಾರ್ಯವಾಗುತ್ತದೆ

ಹೆರಿಗೆಗೆ ಗರ್ಭಿಣಿಯ ಒಳಹೊಟ್ಟೆಯಿಂದ ಹೊರನೂಕಲು ಒತ್ತಡವನ್ನು ಹೇರಬೇಕಾಗುತ್ತದೆ. ಈ ಒತ್ತಡ ಮಗುವನ್ನು ದೂಡುವುದರ ಜೊತೆಗೇ ಕರುಳುಗಳಿಗೂ ಕೊಂಚ ಒತ್ತಡವನ್ನು ನೀಡುತ್ತದೆ. ಈ ಒತ್ತಡ ಕರುಳುಗಳಲ್ಲಿದ್ದ ಮಲಿನವನ್ನು ಸಹಾ ಹೊರಹಾಕುತ್ತದೆ. ಹೆರಿಗೆ ಸಂದರ್ಭದಲ್ಲಿ ಇದು ಸಾಮಾನ್ಯವಾಗಿದ್ದು ದಾದಿಯರು ಇದಕ್ಕೆ ಸಿದ್ಧರಾಗಿಯೇ ಇರುತ್ತಾರೆ. ಮುಂದೆ ಓದಿ

ಕೆಲವೊಮ್ಮೆ ಮಲವಿಸರ್ಜನೆ ಅನಿವಾರ್ಯವಾಗುತ್ತದೆ

ಕೆಲವೊಮ್ಮೆ ಮಲವಿಸರ್ಜನೆ ಅನಿವಾರ್ಯವಾಗುತ್ತದೆ

ಇದನ್ನು ತಡೆಯಲು ಹೆರಿಗೆಯ ಸಂಭಾವ್ಯ ಸಮಯಕ್ಕೂ ಆರು ಗಂಟೆಗೆ ಮುನ್ನ ಏನನ್ನೂ ತಿನ್ನದಿರಲು ಮತ್ತು ಹೆರಿಗೆಯ ಸಮಯಕ್ಕೆ ಮುನ್ನ ಶೌಚಾಲಯವನ್ನು ಬಳಸಲು ಪ್ರಸೂತಿತಜ್ಞರು ಸಲಹೆ ನೀಡುತ್ತಾರೆ. ಇದರಿಂದ ಹೆರಿಗೆಗೆ ಅಗತ್ಯವಾದ ಒತ್ತಡ ಪೂರ್ಣವಾಗಿ ಮಗುವನ್ನು ಹೊರತಳ್ಳಲು ಉಪಯೋಗಿಸಲ್ಪಡುವುದರಿಂದ ಹೆರಿಗೆ ಸುಲಭವಾಗುತ್ತದೆ.

ನಿಮ್ಮ ರಕ್ತದೊತ್ತಡ ವಿಪರೀತ ಏರುಪೇರು ಕಾಣುತ್ತದೆ

ನಿಮ್ಮ ರಕ್ತದೊತ್ತಡ ವಿಪರೀತ ಏರುಪೇರು ಕಾಣುತ್ತದೆ

ಹೆರಿಗೆಯ ಸಮಯದಲ್ಲಿ ರಕ್ತಸ್ರಾವವೂ ಆಗುವುದರಿಂದ ಅಧಿಕ ರಕ್ತದೊತ್ತಡ ಕಂಡುಬರುತ್ತದೆ. ಕೆಲವರಿಗೆ ಸಾಮಾನ್ಯಕ್ಕೂ ಕಡಿಮೆ ಆಗಬಹುದು. ಆದ್ದರಿಂದ ವೈದ್ಯರು ನಿಮ್ಮ ರಕ್ತದೊತ್ತಡವನ್ನು ಸತತವಾಗಿ ಪರಿಶೀಲಿಸುತ್ತಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿರುತ್ತಾರೆ. ಆದ್ದರಿಂದ ಹೆರಿಗೆಗೂ ಮುನ್ನ ನಿಮ್ಮ ರಕ್ತದೊತ್ತಡವನ್ನು ತಪಾಸಣೆಗೊಳಪಡಿಸಿಕೊಂಡು ಹೆಚ್ಚು ಕಡಿಮೆಯಿದ್ದರೆ ಸೂಕ್ತ ಔಷಧಿಗಳ ಮೂಲಕ ತಹಬಂದಿಗೆ ತರುವುದು ಅತಿ ಅಗತ್ಯ.

ಮೂತ್ರವಿಸರ್ಜನೆಯೂ ಆಗಬಹುದು

ಮೂತ್ರವಿಸರ್ಜನೆಯೂ ಆಗಬಹುದು

ಹೆರಿಗೆಯ ಸಮಯದಲ್ಲಿ ಮೂತ್ರವಿಸರ್ಜನೆ ಸಾಮಾನ್ಯವಾಗಿದ್ದು ಆತಂಕಗೊಳ್ಳಬೇಕಾದ ಯಾವುದೇ ಕಾರಣವಿಲ್ಲ.

ಅಪಾನವಾಯು ಕಂಡುಬರಬಹುದು

ಅಪಾನವಾಯು ಕಂಡುಬರಬಹುದು

ಹಲವು ಸಂದರ್ಭಗಳಲ್ಲಿ ಹೆರಿಗೆಯ ಬಳಿಕ ಅಪಾನವಾಯುವಿನ ತೊಂದರೆ ಕಂಡುಬರಬಹುದು. ಇದು ಸಹಾ ಸಾಮಾನ್ಯವಾಗಿದ್ದು ಹೆಚ್ಚಿನ ತೊಂದರೆ ಇರುವುದಿಲ್ಲ. ಆದರೆ ಎಂದಿಗೂ ತಡೆಯಲು ಹೋಗಬೇಡಿ. ಹೆಚ್ಚಿನ ಸಂದರ್ಭದಲ್ಲಿ ಸೊಂಟದ ಕೆಳಭಾಗಕ್ಕೆ ಅರವಳಿಕೆ ನೀಡಿರುವುದರಿಂದ ಇದನ್ನು ತಡೆಯಲು ಸಾಧ್ಯವೂ ಇಲ್ಲ.

ಮಾಸು ಹೊರಬರುವ ಎರಡನೇ ಹೆರಿಗೆ

ಮಾಸು ಹೊರಬರುವ ಎರಡನೇ ಹೆರಿಗೆ

ಒಂಬತ್ತು ತಿಂಗಳು ನಿಮ್ಮ ಕಂದನನ್ನು ತನ್ನೊಂದಿಗೆ ಅಂಟಿಸಿಕೊಂಡು ಕಾಪಾಡಿದ್ದ ಮಾಸು (placenta) ಈಗ ಒಂದು ತ್ಯಾಜ್ಯವಾಗಿದ್ದು ಇದು ಸಹಾ ಗರ್ಭದಿಂದ ಹೊರಬರಬೇಕು. ಇದನ್ನು ಹೆರಿಗೆಯ ಎರಡನೆಯ ಭಾಗ ಅಥವಾ ಎರಡನೇ ಹೆರಿಗೆ ಎಂದೂ ತಿಳಿದುಕೊಳ್ಳಬಹುದು. ಕೆಲವೊಮ್ಮೆ ಮಗುವಿನ ಹಿಂದೆ ಹಿಂದೆಯೇ ಬಂದರೆ ಕೆಲವೊಮ್ಮೆ ಅರ್ಧ ಗಂಟೆಗೂ ಹೆಚ್ಚು ಕಾಲ ತೆಗೆದುಕೊಳ್ಳಬಹುದು. ಈ ಕಾಯುವಿಕೆ ಅಸಹನೀಯವಾಗಿರುತ್ತದೆ.

ವಾಕರಿಕೆ ಅತೀವವಾಗಿರುತ್ತದೆ

ವಾಕರಿಕೆ ಅತೀವವಾಗಿರುತ್ತದೆ

ಹೆರಿಗೆಯ ಸಮಯದಲ್ಲಿ ವಾಕರಿಕೆ ಬರುವುದು ಸಹಾ ಸಾಮಾನ್ಯವಾಗಿದೆ. ಆದರೆ ಈ ವಾಕರಿಕೆ ಹೆಚ್ಚಿನ ಮಹಿಳೆಯರಿಗೆ ಅಸಹನೀಯವಾಗಿದ್ದು ಹೊಟ್ಟೆಯೊಳಗಿದ್ದುದನ್ನು ಬಾಯಿಯ ಮೂಲಕ ಹೊರಹಾಕಲು ಒತ್ತಡ ಆವರಿಸುತ್ತದೆ. ಪರಿಣಾಮವಾಗಿ ವಾಂತಿಯಾಗುತ್ತದೆ. ಇದೇ ಕಾರಣಕ್ಕೆ ಹೆರಿಗೆಯ ಆರು ಗಂಟೆಗೂ ಮೊದಲು ಏನನ್ನೂ ಸೇವಿಸದಿರಲು ತಜ್ಞರು ಸಲಹೆ ನೀಡುತ್ತಾರೆ.

English summary

Things That Happen While Giving Birth

while giving birth to a healthy 2 and half kilo child. but Women are thrown in another world where they experience pain and nothing else. With this traumatizing pain tags along uncanny things no one likes to see, which is poop, vomit and at times even a gassy fart.
X
Desktop Bottom Promotion