For Quick Alerts
ALLOW NOTIFICATIONS  
For Daily Alerts

ಮಹಿಳೆಯರಲ್ಲಿ ಸಂತಾನೋತ್ಪತ್ತಿ ಹೆಚ್ಚಿಸುವ ಸೂಪರ್ ಫುಡ್‌!

By Deepak
|

ಯಾವಾಗ ಮಹಿಳೆಯರಿಗೆ ಸಂತಾನೋತ್ಪತ್ತಿ ಸಮಸ್ಯೆ ಕಾಡಲು ಆರಂಭಿಸುತ್ತದೆಯೋ, ಆಗ ಕೆಲವೊಂದು ಆಹಾರ ಪದಾರ್ಥಗಳು ಅವರ ಪಾಲಿಗೆ ಆಪತ್ಭಾಂಧವನಾಗಿ ಪರಿಣಮಿಸುತ್ತದೆ. ಸಂಶೋಧಕರ ಪ್ರಕಾರ ನಮ್ಮ ಡಯಟ್ ಮತ್ತು ಸಂತಾನೋತ್ಪತ್ತಿ ಎರಡೂ ಒಂದಕ್ಕೊಂದು ತಳಕು ಹಾಕಿಕೊಂಡಿರುತ್ತದೆಯಂತೆ. ಒಂದು ವೇಳೆ ನೀವು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸಂತಾನೋತ್ಪತಿಯನ್ನು ಉದ್ದೀಪಿಸುವ ಆಹಾರಗಳನ್ನು ಸೇವಿಸಿದರೆ, ನಿಮ್ಮ ಸಂತಾನೋತ್ಪತ್ತಿ ಅಂಗಗಳು ಆರೋಗ್ಯಕರಾವಾಗಿದ್ದು, ನೀವು ಸಹ ತಾಯಿಯಾಗುತ್ತೀರಿ. ಬನ್ನಿ ಅದಕ್ಕಾಗಿ 10 ಆಹಾರ ಪದಾರ್ಥಗಳ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ.

ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಇರುತ್ತದೆ, ಇದು ಮಹಿಳೆಯರಲ್ಲಿ ಫಲವಂತಿಕೆಯನ್ನು ತರುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಈ ವಿಟಮಿನ್ ಮಹಿಳೆಯರಲ್ಲಿನ ಹಾರ್ಮೋನುಗಳನ್ನು ಸಕ್ರಿಯಗೊಳಿಸುತ್ತದೆ. ಋತು ಚಕ್ರ ಸರಾಗವಾಗಿ ನಡೆಯುವಂತೆ ಮಾಡುತ್ತದೆ ಮತ್ತು ಅಂಡಾಣುಗಳ ಬೆಳವಣಿಗೆ ಕೊಡುಗೆ ನೀಡುತ್ತದೆ, ಹೀಗೆ ಇದು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಮಸ್ಯೆಯನ್ನು ದೂರ ಮಾಡುತ್ತದೆ.

 Superfoods That Can Boost Fertility in Women

ಮೊಟ್ಟೆ
ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರ ಪದಾರ್ಥವಾಗಿರುವ ಮೊಟ್ಟೆಯು ಮಹಿಳೆಯರಲ್ಲಿ ಕಂಡು ಬರುವ ಸಂತಾನೋತ್ಪತ್ತಿ ಸಮಸ್ಯೆಯ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ. ಇದರಲ್ಲಿ ವಿಟಮಿನ್ ಸಮೃದ್ಧವಾಗಿರುವುದರಿಂದ ಮಹಿಳೆಯರು ಇದನ್ನು ತಪ್ಪದೆ ಸೇವಿಸಬೇಕು.

ಬಾದಾಮಿ
ಬಾದಾಮಿಯು ಪುರುಷರಲ್ಲಿ ವೀರ್ಯಾಣುಗಳನ್ನು ಹೆಚ್ಚು ಮಾಡುವ ವಿಚಾರ ತಿಳಿದಿರುವುದೇ, ನಂತರ ಊಹೆ ಮಾಡಿ ನೋಡೋಣ? ಹೌದು ಕೇವಲ ಪುರುಷರಿಗಷ್ಟೇ ಅಲ್ಲ, ಮಹಿಳೆಯರಿಗು ಸಹ ಇದು ಸಂತಾನೋತ್ಪತ್ತಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಇ ಎಂಬ ಅದ್ಭುತ ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿರುತ್ತದೆ, ಇದು ಫ್ರೀ ರ‍್ಯಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ಡಿಎನ್‌ಎಗಳನ್ನು ರಕ್ಷಿಸುತ್ತದೆ. ಇದರಿಂದ ಮಹಿಳೆಯರಲ್ಲಿ ತಾಯಿಯಾಗುವ ಅವಕಾಶ ಹೆಚ್ಚಾಗುತ್ತದೆ. ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವ ಆಹಾರ ಯಾವುವು?

ಸಿಟ್ರಸ್ ಹಣ್ಣುಗಳು
ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಲಿಂಬೆ, ಮೂಸಂಬಿ ಇತ್ಯಾದಿಗಳಲ್ಲಿ ಮತ್ತೊಂದು ಆಂಟಿ ಆಕ್ಸಿಡೆಂಟ್ ವಿಟಮಿನ್ ಅಂದರೆ ವಿಟಮಿನ್ ಸಿ ಇರುತ್ತದೆ. ಇದು ಮಹಿಳೆಯರ ದೇಹದಲ್ಲಿ ಹಾರ್ಮೋನುಗಳ ಸ್ರವಿಸುವಿಕೆಗೆ ಕಾರಣವಾಗುತ್ತದೆ. ಇದರಿಂದ ಅವರು ಗರ್ಭ ಧರಿಸುವ ಸಾಧ್ಯತೆ ಹೆಚ್ಚಾಗುತ್ತದೆ.

ಸಾಲ್ಮನ್
ಹಲವು ಅಧ್ಯಯನಗಳಿಂದ ತಿಳಿದು ಬಂದಿರುವ ವಿಚಾರವೇನೆಂದರೆ, ಸಾಲ್ಮನ್‌ನಲ್ಲಿ ಸೆಲೆನಿಯಮ್ ಅಂಶವಿರುತ್ತದೆ. ಇದು ಮೂಲತಃ ಒಂದು ಮೈಕ್ರೋ ನ್ಯೂಟ್ರಿಯೆಂಟ್. ಇದು ನಿಮ್ಮ ದೇಹದಲ್ಲಿ ಆಂಟಿ ಆಕ್ಸಿಡೆಂಟ್ ಆಗಿ ವರ್ತಿಸುತ್ತದೆ ಮತ್ತು ನಿಮ್ಮ ಅಂಡಾಣುಗಳು ಹಾನಿಯಾಗದಂತೆ ತಡೆಯುತ್ತದೆ. ಫ್ರೀ ರ‍್ಯಾಡಿಕಲ್‌ಗಳಿಂದ ಉಂಟಾಗುವ ಹಾನಿಯನ್ನು ಇದು ತಡೆದು ಸಂತಾನೋತ್ಪತ್ತಿಗೆ ಸಹಾಯ ಮಾಡುತ್ತದೆ. ಇದರ ಜೊತೆಗೆ ಇದು ಅನುವಂಶಿಕ ಸಮಸ್ಯೆಯಿಂದ ಬರುವ ಗರ್ಭಪಾತ ಸಮಸ್ಯೆಗೆ ಸಹ ಪರಿಹಾರವನ್ನು ಒದಗಿಸುತ್ತದೆ.

English summary

Superfoods That Can Boost Fertility in Women

When it becomes tough for women to conceive, foods can work as the savior. Researchers have declared that our diet and fertility are closely linked to each other. If you can include certain fertile- boosting foods in your regular diet. Here are top choices to consider
X
Desktop Bottom Promotion