For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಉರಿ ಬಿಸಿಲಿನ ತಾಪಕ್ಕೆ ಬೇಸತ್ತು ಹೋಗಿರುವಿರಾ?

|

ಬೇಸಿಗೆಯಲ್ಲಿ ಗರ್ಭಿಣಿಯರಿಗೆ ತಡೆಯಲಾಸಾಧ್ಯವಾದ ಕಾಲವಾಗಿರುತ್ತದೆ. ಈ ಕಾಲದಲ್ಲಿ ಗರ್ಭಿಣಿಯರ ದೇಹದಲ್ಲಿ ಎಸ್ಟ್ರೊಜೆನ್ ಮತ್ತು ಇನ್ನಿತರ ಹಾರ್ಮೊನುಗಳು ಅಧಿಕ ಪ್ರಮಾಣದಲ್ಲಿ ಸ್ರವಿಸುವ ಕಾರಣದಿಂದಾಗಿ

ಇವರಿಗೆ ಈ ಕಾಲವು ಅಷ್ಟಾಗಿ ಹೊಂದಿಕೊಳ್ಳುವುದಿಲ್ಲ. ಈ ಸಮಯದಲ್ಲಿ ಎಷ್ಟೇ ಏರ್ ಕಂಡೀಶನರ್ ಆನ್ ಮಾಡಿದ್ದರು, ಅವರಿಗೆ ಬಿಸಿಲಿನ ತಾಪ ಮತ್ತು ಸೆಖೆಯ ತಾಪ ತಟ್ಟುತ್ತದೆ. ಬೇಸಿಗೆಗೆ ಹೋಲಿಸಿಕೊಂಡರೆ, ಚಳಿಗಾಲದಲ್ಲಿ ಗರ್ಭಿಣಿಯಾರಾಗುವುದು ಒಳ್ಳೆಯದು ಎನಿಸುತ್ತದೆ.

ಈ ನಿಟ್ಟಿನಲ್ಲಿ ಗರ್ಭಿಣಿಯರು ಬೇಸಿಗೆಯಲ್ಲಿ ಕೆಲವೊಂದು ಸಲಹೆಗಳನ್ನು ಪಾಲಿಸುವುದು ಉತ್ತಮ. ಅದರ ಕುರಿತು ಹೆಚ್ಚಿಗೆ ತಿಳಿದುಕೊಳ್ಳಲು ಮುಂದೆ ಓದಿ. ಇದರಿಂದ ತಮ್ಮ ಸಂಗಾತಿ ಅನುಭವಿಸುವ ಕಷ್ಟವನ್ನು ಗಂಡಸರು ಸಹ ತಿಳಿದುಕೊಳ್ಳುವುದು ಉತ್ತಮ. ಒಬ್ಬ ಹೆಣ್ಣು ಗರ್ಭಿಣಿಯಾದಾಗ ಈ ಸಲಹೆಗಳು ಆಕೆಯ ನೆರವಿಗೆ ಬರುತ್ತವೆ. ಆಕೆಯ ದೇಹದ ಉಷ್ಣಾಂಶಕ್ಕಿಂತ, ಆಕೆಯ ದೇಹದ ಅಡಿಯ ತಾಪ ಹೆಚ್ಚಿಗಿರುವುದನ್ನು

 Summer Tips For Pregnant Women

ಸಾಮಾನ್ಯವಾಗಿ ನಾವು ಗಮನಿಸಬಹುದು. ಆ ದೇಹದ ತಾಪಮಾನದ ಜೊತೆಗೆ ಹೊರಗಿನ ಪ್ರಕೃತಿಯ ತಾಪಮಾನ ಎರಡೂ ಸೇರಿ ಆಕೆಗೆ ಸಹಿಸಿಕೊಳ್ಳಲಾಗದಷ್ಟು ವೇದನೆಯನ್ನು ನೀಡುತ್ತದೆ. ಅಧಿಕ ತಾಪಮಾನವನ್ನು ತಡೆಯಲು ಗರ್ಭಿಣಿಯರಿಗಾಗಿ ಕೆಲವೊಂದು ಸಲಹೆಗಳು, ಓದಿ ಎಚ್ಚರ: ಗರ್ಭಿಣಿಯರ ಪಾಲಿಗೆ ಹ೦ದಿ ಜ್ವರ ಬಹುದೊಡ್ಡ ಅಪಾಯಕಾರಿ!

ಟಿ-ಶರ್ಟ್ ಮತ್ತು ಟಾಪ್‌


ಹೌದು, ಬೇಸಿಗೆಯಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಲಘುವಾಗಿರುವ, ತಾಪಮಾನವನ್ನು ತಡೆಯುವ ಟಿ-ಶರ್ಟ್ ಧರಿಸಿ. ಇದರಿಂದ ನೀವು ಆರಾಮವಾಗಿ ಇರಬಹುದು. ಇದು ಉಷ್ಣಾಂಶವನ್ನು ತಡೆಯಲು ನಿಮಗೆ ನೆರವಾಗುತ್ತದೆ.

ತಿಳಿ ಬಣ್ಣದ ಬಟ್ಟೆಗಳು
ಗರ್ಭಿಣಿ ಹೆಂಗಸರು ಈ ಬೇಸಿಗೆಯಲ್ಲಿ ಆದಷ್ಟು ತಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು. ಕಡು ಬಣ್ಣದ ಬಟ್ಟೆಗಳು ಉಷ್ಣಾಂಶವನ್ನು ಅಧಿಕಗೊಳಿಸುತ್ತವೆ. ಆದರೆ ತಿಳಿ ಬಣ್ಣದ ಬಟ್ಟೆಗಳು ಉಷ್ಣಾಂಶವನ್ನು ತಡೆಯುತ್ತವೆ. ನಿಮ್ಮ ಪುಟಾಣಿಯ ಮನಸ್ಸನ್ನು ಅಧ್ಯಯನದ ಕಡೆ ಆಕರ್ಷಿಸುವ ಬಗೆ ಹೇಗೆ?

ಹತ್ತಿ ಅಥವಾ ಲಿನೆನ್
ಹತ್ತಿ ಅಥವಾ ಲಿನೆನ್ ಫ್ಯಾಬ್ರಿಕ್‌ಗಳು ಬೇಸಿಗೆಯಲ್ಲಿ ಗರ್ಭಿಣಿ ಹೆಂಗಸರಿಗೆ ಒಪ್ಪುತ್ತದೆ. ಇದು ಬೆವರನ್ನು ಹೀರಿಕೊಳ್ಳುತ್ತದೆ ಮತ್ತು ಮೈಮೇಲೆ ಭಾರವನ್ನು ಸಹ ಉಂಟು ಮಾಡುವುದಿಲ್ಲ. ಜೊತೆಗೆ ಬಿಸಿಲನ್ನು ತಡೆಯುತ್ತವೆ.

ಒಳಾಂಗಣವು ಉತ್ತಮ
ಆದಷ್ಟು ಒಳಾಂಗಣದಲ್ಲಿ ಇರಲು ಪ್ರಯತ್ನಿಸಿ. ಅದೇ ನಿಮಗೂ ಒಳ್ಳೆಯದು. ನಿಮ್ಮಿಂದ ಮಾಡಲು ಸಾಧ್ಯವಾಗುವ ಕೆಲಸಗಳನ್ನು ಮಾತ್ರ ಮಾಡಿ, ಅದು ಅಡುಗೆಯಾಗಿರಲಿ. ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ ನಿದ್ದೆ ಏಕೆ ಅತ್ಯವಶ್ಯಕ?

ನೀರನ್ನು ಅಧಿಕವಾಗಿ ಸೇವಿಸಿ


ಹೌದು, ಹೇಳಿ ಕೇಳಿ ಬೇಸಿಗೆ. ನೀರನ್ನು ಮತ್ತು ಹಣ್ಣಿನ ರಸಗಳಂತಹ ಪಾನೀಯಗಳನ್ನು ಸೇವಿಸಿ. ಇದರಿಂದ ನಿರ್ಜಲೀಕರಣದ ಸಮಸ್ಯೆ ತಪ್ಪುತ್ತದೆ. ಜೊತೆಗೆ ಅಧಿಕ ಬೆವರಿನಿಂದ ನಿಮ್ಮ ದೇಹದಿಂದ ಖಾಲಿಯಾಗುವ ನೀರು ಇದರಿಂದ ಮತ್ತೆ ನಿಮಗೆ ಸೇರ್ಪಡೆಗೊಳ್ಳುತ್ತದೆ.
English summary

Summer Tips For Pregnant Women

Pregnancy can be overwhelming during summers due to high levels of estrogen and other hormones in the body. At the moment, it doesn’t matter how high the air conditioner is turned on,So here are some summer wear for pregnant women that would help them beat the heat
Story first published: Saturday, March 14, 2015, 10:06 [IST]
X
Desktop Bottom Promotion