For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಎಚ್ಚರ..! ಅಪ್ಪಿತಪ್ಪಿಯೂ ಹಾಗಲಕಾಯಿ ಸೇವಿಸಬೇಡಿ

By Super
|

ಹಾಗಲಕಾಯಿ ನಮ್ಮ ದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ತರಕಾರಿಗಳಲ್ಲಿ ಒಂದಾಗಿದೆ. ಇದು ಕಹಿಯಾಗಿದ್ದರು ಸಹ, ಇದರಲ್ಲಿ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳ ಸಲುವಾಗಿ ಇದು ಅತ್ಯಂತ ಜನಪ್ರಿಯವಾಗಿದೆ. ಹಾಗಲಕಾಯಿಯಲ್ಲಿ ಸಮೃದ್ಧವಾದ ಪೋಷಕಾಂಶಗಳು ಮತ್ತು ಫೋಲಿಕ್ ಆಮ್ಲ, ಮ್ಯಾಂಗನೀಸ್, ಮೆಗ್ನಿಶಿಯಂ ಹಾಗು ಸತುವಿನಂತಹ ಖನಿಜಾಂಶಗಳು ಇವೆ.

ಇದರ ಜೊತೆಗೆ ಪ್ರಮುಖವಾದ ವಿಟಮಿನ್‍ಗಳು ಮತ್ತು ಖನಿಜಾಂಶಗಳು ಸಹ ಈ ಅದ್ಭುತವಾದ ತರಕಾರಿಯಲ್ಲಿ ಲಭ್ಯವಿದೆ. ಹಾಗಲಕಾಯಿಯು ಗರ್ಭಿಣಿಯರಲ್ಲಿ ನಿಶ್ಯಕ್ತಿಯನ್ನು ಮತ್ತು ಗಂಭೀರವಾದ ಆರೋಗ್ಯದ ಸಮಸ್ಯೆಯನ್ನು ಉಂಟು ಮಾಡುತ್ತದೆ. ಹಾಗಲಕಾಯಿಯಲ್ಲಿ ರೆಸಿನ್‍ಗಳು, ಕ್ವಿನೈನ್‍ಗಳು, ಸಪೊನಿಕ್, ಗ್ಲಿಸೊಸೈಡ್‍ಗಳು ಮತ್ತು ಮೊರೊಡಿಸೈನ್‍ನಂತಹ ಅಲ್ಕಾಲೈನ್‍ಗಳು ಇರುತ್ತವೆ.

Side Effects Of Bitter Gourd Juice During Pregnancy

ಇವು ನಮ್ಮ ದೇಹದಲ್ಲಿ ಸೇರಿ ವಿಷವಾಗಿ ಪರಿವರ್ತನೆಯಾಗುತ್ತವೆ. ಮೊದಲ ಬಾರಿಗೆ ಹಾಗಲಕಾಯಿಯನ್ನು ಸೇವಿಸುವವರಲ್ಲಿ ಹೊಟ್ಟೆ ನೋವು ಮತ್ತು ಗ್ಯಾಸ್ಟ್ರಿಕ್ಟ್ ಸಹ ಕಾಣಿಸಿಕೊಳ್ಳುವುದನ್ನು ನಾವು ನೋಡಬಹುದು. ಹಾಗಲಕಾಯಿಯನ್ನು ಸೇವಿಸುವುದರಿಂದ ಗರ್ಭಿಣಿಯರಲ್ಲಿ ಕಂಡು ಬರುವ ಅಡ್ಡ ಪರಿಣಾಮಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದು.

ಡಯೇರ್ರಿಯಾ
ಹಾಗಲಕಾಯಿಯ ರಸವು ಗರ್ಭಿಣಿಯರಲ್ಲಿ ಡಯೇರ್ರಿಯಾವನ್ನು ತರುತ್ತದೆ. ಹೊಟ್ಟೆ ತೊಳೆಸುವಿಕೆಯು ಗರ್ಭಿಣಿಯರಿಗೆ ಅಸೌಖ್ಯವನ್ನುಂಟು ಮಾಡುತ್ತದೆ. ವೈದ್ಯರನ್ನು ಕಾಣಬೇಕಾದ ಪ್ರಸಂಗ ಇದರಿಂದ ಎದುರಾಗಬಹುದು. ಗರ್ಭಿಣಿಯರೇ, ಈ ಆಹಾರಗಳನ್ನು ತಿನ್ನಬೇಡಿ!

ಹೊಟ್ಟೆ ನೋವು ಮತ್ತು ಸೆಳೆತ
ಹಾಗಲಕಾಯಿಯ ರಸವು ಗರ್ಭಿಣಿಯರಲ್ಲಿ ಹೊಟ್ಟೆನೋವು ಮತ್ತು ಸೆಳೆತವನ್ನುಂಟು ಮಾಡುತ್ತದೆ. ಇದರ ಜೊತೆಗೆ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಆಸಿಡಿಟಿ ಎಲ್ಲವೂ ಸೇರಿ ಹೊಟ್ಟೆಯ ಸ್ಥಿತಿಯನ್ನು ಹಾಳು ಮಾಡಿ ಬಿಡುತ್ತವೆ.

ವಾಂತಿ
ವಾಂತಿ ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಒಂದು ಸಮಸ್ಯೆಯಾಗಿದೆ. ಆದರೆ ಹಾಗಲಕಾಯಿಯನ್ನು ಸೇವಿಸುವುದರಿಂದ ಈ ವಾಂತಿಯನ್ನು ತಡೆದು ನಿಲ್ಲಿಸುವುದು ಕಷ್ಟವಾಗುತ್ತದೆ.

ದೃಷ್ಟಿ ಮಂದವಾಗುತ್ತದೆ
ಹಾಗಲಕಾಯಿಯಲ್ಲಿರುವ ಆಲ್ಕಾಲೈನ್‍ಗಳು ದೃಷ್ಟಿಯನ್ನು ಮಂದ ಮಾಡುತ್ತವೆ. ಇದು ಗರ್ಭಿಣಿಯರಲ್ಲಿ, ಉದ್ವೇಗಕ್ಕೆ ಕಾರಣವಾಗುತ್ತದೆ ಮತ್ತು ಅವರಿಗೆ ಅಸೌಖ್ಯವನ್ನುಂಟು ಮಾಡುತ್ತದೆ. ಗರ್ಭಿಣಿಯಾಗಿರುವಾಗ ಮೂಗಿನಲ್ಲಿ ರಕ್ತ ಸೋರುವುದು ಸಹಜವೇ?

ನಾಸಿಯಾ
ವಾಂತಿ ಬರುವಂತೆ ಆಗುವ ಈ ಸ್ಥಿತಿಯು ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಹಾಗಲಕಾಯಿ ಸೇವನೆಯಿಂದಾಗಿ ಇದು ಮತ್ತಷ್ಟು ಹೆಚ್ಚಾಗುತ್ತದೆ.

ಸ್ನಾಯುಗಳು ದುರ್ಬಲವಾಗುವಿಕೆ
ನೋವುಗಳು ಮತ್ತು ಸೆಳೆತಗಳು ಗರ್ಭಿಣಿಯರನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತವೆ.ಹಾಗಲಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಸ್ನಾಯುಗಳು ದುರ್ಬಲವಾಗುತ್ತವೆ ಮತ್ತು ಸೆಳೆತಗಳು ಅಧಿಕಗೊಳ್ಳುತ್ತವೆ.

ಒಂದು ವೇಳೆ ನೀವು ಇದುವರೆಗೂ ಹಾಗಲಕಾಯಿಯನ್ನು ಸೇವಿಸದೆ ಇದ್ದ ಪಕ್ಷದಲ್ಲಿ, ನಿಮ್ಮ ಪ್ರಸೂತಿ ತಜ್ಞರನ್ನು ಕೇಳಿ ಇದನ್ನು ಸೇವಿಸುವುದು ಉತ್ತಮ. ಅದಕ್ಕಿಂತ ಮುಖ್ಯವಾಗಿ ನೀವು ಗರ್ಭಿಣಿಯಾದ ಕೂಡಲೆ, ಯಾವುದನ್ನು ಸೇವಿಸಬೇಕು ಮತ್ತು ಸೇವಿಸಬಾರದು ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಆಗ ಮುಂದಿನ ಅಪಾಯಗಳನ್ನು ನೀವು ತಪ್ಪಿಸಿಕೊಳ್ಳಬಹುದು!!!.

English summary

Side Effects Of Bitter Gourd Juice During Pregnancy

Bitter gourd or karela is one of the most famous vegetables in our country. Although it is bitter but many people consume it due to its extensive health benefits.The major bitter gourd juice side effects in pregnancy could be summed up in the following
X
Desktop Bottom Promotion