For Quick Alerts
ALLOW NOTIFICATIONS  
For Daily Alerts

ಮೊದಲ ತ್ರೈಮಾಸಿಕ ಅವಧಿ: ತಾಯಿಯ ಜೀವಕ್ಕೆ ಅಪಾಯವಿದೆಯೇ?

|

ಗರ್ಭಿಣಿಯಾದ ಹೊಸತರಲ್ಲಿ ಫಲವತ್ತಾದ ಅಂಡಾಣುಗಳು ನಿಮ್ಮ ಗರ್ಭಾಶಯದ ಗೋಡೆಗಳಿಗೆ ಅಂಟಿಕೊಂಡು ಬೆಳೆಯಲು ಆರಂಭಿಸಿರುತ್ತವೆ. ಆಗ ಕಲೆಗಳು ಕಂಡು ಬರುವುದು ಸಹಜ. ಈ ಬಗೆಯ ಕಲೆಗಳು ಲಘು ಪ್ರಮಾಣದಲ್ಲಿದ್ದು, ಕೆಲ ಗಂಟೆಗಳಲ್ಲಿ ಮಾಯವಾಗುತ್ತವೆ. "ಮೊದಲ ತ್ರೈಮಾಸಿಕ ಅವಧಿಯಲ್ಲಿ ಕಂಡು ಬರುವ ಕಲೆಗಳು ಅಷ್ಟೇನು ಅಪಾಯಕಾರಿಯಲ್ಲ. ಆದರೆ ಇವು ನಿಮಗೆ ಒಂದು ಎಚ್ಚರಿಕೆಯ ಕರೆಗಂಟೆಯನ್ನು ಖಂಡಿತ ನೀಡುತ್ತವೆ. ಏಕೆಂದರೆ ಜನನಾಂಗದಲ್ಲಿ ಕಂಡು ಬರುವ ರಕ್ತಸ್ರಾವವು ನಿಮ್ಮ ಗರ್ಭವು ಮುಂದೆ ಎದುರಿಸಬಹುದಾದ ಅಪಾಯದ ಮುನ್ಸೂಚನೆಯನ್ನು ನೀಡುತ್ತದೆ.

ಒಂದು ವೇಳೆ ನೀವು ಒಂದು ಮುಟ್ಟನ್ನು ತಪ್ಪಿಸಿಕೊಂಡಲ್ಲಿ ಹಾಗೂ ನಿಮ್ಮ ಒಳ ಉಡುಪಿನಲ್ಲಿ ರಕ್ತದ ಕಲೆಗಳನ್ನು ಕಂಡಾಗ ಅದು ನೀವು ಗರ್ಭಿಣಿಯಾಗಿದ್ದೀರಾ ಎಂಬುದನ್ನು ಸೂಚಿಸಬಹುದು. ಬನ್ನಿ ಮೊದಲ ತ್ರೈಮಾಸಿಕದಲ್ಲಿ ಕಂಡು ಬರುವ ಕಲೆಗಳಿಗೆ ಕಾರಣಳೇನು ಎಂಬುದನ್ನು ತಿಳಿದುಕೊಳ್ಳೋಣ. ಗರ್ಭಾವಸ್ಥೆಯಲ್ಲಿ ರಕ್ತಸ್ರಾವ: ಮಗುವಿನ ಮೇಲೆ ಪರಿಣಾಮ ಬೀರಬಹುದೇ?

Reasons for spotting during the first trimester

ಹಾರ್ಮೋನ್ ಕೊರತೆ
ನೀವು ಗರ್ಭಿಣಿಯಾದಾಗ ಪ್ರೊಜೆಸ್ಟೀರೋನ್ ಮತ್ತು ಎಚ್‍ಸಿಜಿ ಅಥವಾ ಹ್ಯೂಮನ್ ಕ್ರೋನಿಕ್ ಗೊನಡೋಟ್ರೊಪಿನ್ ಎಂಬ ಹಾರ್ಮೋನುಗಳು ನಿಮ್ಮ ಇಡೀ ದೇಹವನ್ನು ನಿಯಂತ್ರಿಸುತ್ತವೆ. ಈ ಹಾರ್ಮೋನುಗಳ ಯಾವುದೇ ರೀತಿಯ ಕೊರತೆಯು ಕಲೆಗಳಿಗೆ ಕಾರಣವಾಗುತ್ತದೆ.

ದೈಹಿಕ ಚಟುವಟಿಕೆಗಳು
"ಭಾರ ಎತ್ತುವುದು, ವ್ಯಾಯಾಮ ಅಥವಾ ಪರಿಶ್ರಮದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಗರ್ಭಾಶಯದಲ್ಲಿರುವ ಭ್ರೂಣದ ಸ್ಥಾನಪಲ್ಲಟಕ್ಕೆ ಕಾರಣವಾಗಿ ರಕ್ತ ಸ್ರಾವವಾಗುವಂತೆ ಮಾಡುತ್ತವೆ. ಇದೇ ಕಾರಣಕ್ಕಾಗಿ ಗರ್ಭಿಣಿಯಾಗಿರುವ ಹೆಂಗಸು ಆಯಾಸ ಮಾಡಿಕೊಳ್ಳಬಾರದು ಎಂದು ವೈದ್ಯರು ಹೇಳುತ್ತಾರೆ.

ಗರ್ಭಕಂಠದ ಮೇಲೆ ಒತ್ತಡ
ಗರ್ಭಿಣಿಯಾಗಿರುವಾಗ ಗರ್ಭಕಂಠದ ಸುತ್ತಲು ರಕ್ತ ಪರಿಚಲನೆಯು ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಪೆಲ್ವಿಕ್ ಪರೀಕ್ಷೆ ಅಥವಾ ಸಂಭೋಗವು ರಕ್ತನಾಳಗಳ ಮೇಲೆ ಮತ್ತಷ್ಟು ಒತ್ತಡವನ್ನು ಹಾಕಿ, ರಕ್ತ ಸ್ರಾವಕ್ಕೆ ಕಾರಣವಾಗುತ್ತದೆ. ಇಂತಹ ರಕ್ತಸ್ರಾವವು ಅಪಾಯಕಾರಿಯಲ್ಲ. ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮವನ್ನು ಬೀರುವುದಿಲ್ಲ. ಆದರೂ ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಒಮ್ಮೆ ವೈದ್ಯರನ್ನು ಕಾಣುವುದು ಒಳಿತು. ಹೆರಿಗೆಯ ಸಮಯದಲ್ಲಿ ಪತಿಯ ನೆರವು ಪತ್ನಿಗೆ ಏಕೆ ಅತ್ಯವಶ್ಯಕ?

ಇನ್‍ಫೆಕ್ಷನ್‌ಗಳು
ಜನನಾಂಗದ ಸುತ್ತ ಮುತ್ತ ಅಥವಾ ಗರ್ಭಕಂಠದ ಸುತ್ತ ಕಂಡು ಬರುವ ಯಾವುದೇ ಇನ್‌ಫೆಕ್ಷನ್‌ಗಳು ರಕ್ತಸ್ರಾವಕ್ಕೆ ಕಾರಣವಾಗುತ್ತವೆ. ಇದರಿಂದ ತುರಿಕೆ ಮತ್ತು ಇನ್ನಿತರ ಅಸೌಖ್ಯವುಂಟಾಗಬಹುದು. ಯಾವುದೇ ಹೆಚ್ಚಿನ ಅಪಾಯಗಳಿಗೆ ಎಡೆ ಮಾಡಿಕೊಡದೆ ಇರಲು ಮೊದಲು ವೈಧ್ಯರನ್ನು ಕಾಣುವ ಮೂಲಕ ಇದಕ್ಕೆ ಪರಿಹಾರವನ್ನು ಪಡೆಯಿರಿ.

ಅಪಸ್ಥಾನೀಯ ಗರ್ಭಧಾರಣೆ
ಕೆಲವೊಮ್ಮೆ ಫಲವತ್ತಾದ ಅಂಡಾಣು ತಾನೇ ತಾನಾಗಿ ಗರ್ಭಾಶಯದ ಹೊರಗೆ, ಅಂದರೆ ಸಾಮಾನ್ಯವಾಗಿ ಫಾಲ್ಲೋಪಿಯನ್ ನಾಳದಲ್ಲಿ ಬೆಳೆಯಲಾರಂಭಿಸುತ್ತದೆ. ಭ್ರೂಣವು ಬೆಳೆದಂತೆಲ್ಲ, ಇದು ಫಾಲ್ಲೋಪಿಯನ್ ನಾಳವು ಒಡೆಯುವಂತೆ ಮಾಡುತ್ತದೆ, ಆಗ ರಕ್ತಸ್ರಾವವುಂಟಾಗುತ್ತದೆ. ಇದು ನಿಜಕ್ಕೂ ತಾಯಿಯ ಜೀವಕ್ಕೆ ಅಪಾಯವನ್ನು ತರುತ್ತದೆ. ಇಂತಹ ಸಂದರ್ಭದಲ್ಲಿ ಗರ್ಭಿಣಿಯ ಜೀವ ಉಳಿಸಲು ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗಿರುತ್ತದೆ.

English summary

Reasons for spotting during the first trimester

Some amount of spotting during the early days of your pregnancy when the fertilized egg implants itself on the uterus wall is normal. This spotting would be light and last for few hours. ‘Spotting during the first trimester may not necessarily mean trouble but it should definitely raise an alarm.
Story first published: Tuesday, February 10, 2015, 17:52 [IST]
X
Desktop Bottom Promotion