For Quick Alerts
ALLOW NOTIFICATIONS  
For Daily Alerts

ಗರ್ಭಿಣಿ ಮಹಿಳೆಯರು ಅಪ್ಪಿತಪ್ಪಿಯೂ ಹಸಿರು ಚಹಾ ಸೇವಿಸಬಾರದು!

By Super
|

ಹಸಿರು ಚಹಾ (ಗ್ರೀನ್ ಟೀ) ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಉತ್ತಮವಾಗಿದೆ. ಕಪ್ಪು ಚಹಾ ಮತ್ತು ಇತರ ಪೇಯಗಳಿಗಿಂತಲೂ ಹಸಿರು ಟೀಯಲ್ಲಿರುವ ಅಧಿಕ ಪೋಷಕಾಂಶಗಳು ತೂಕ ಇಳಿಸುವಲ್ಲಿ, ಕೂದಲಿಗೆ ಹೊಳಪು ಮತ್ತು ದೃಢತೆ ನೀಡುವಲ್ಲಿ, ಚರ್ಮಕ ಕಾಂತಿ ಹೆಚ್ಚಿಸುವಲ್ಲಿ, ಹೃದಯದ ಕ್ಷಮತೆಯನ್ನು ಹೆಚ್ಚಿಸುವಲ್ಲಿ, ಇನ್ನೂ ಇತರ ಹತ್ತು ಹಲವು ವಿಧಗಳಲ್ಲಿ ನೆರವಾಗುತ್ತದೆ.

ಆದರೆ ಗರ್ಭಾವಸ್ಥೆಯಲ್ಲಿರುವಾಗ ಹಲವು ಆಹಾರ ಮತ್ತು ಔಷಧಿಗಳ ಸೇವನೆ ಮಾರಕವಾಗಿರುವಂತೆ ಹಸಿರು ಟೀ ಸಹಾ ಆರೋಗ್ಯಕ್ಕೆ ಉತ್ತಮವಲ್ಲ ಎಂದು ಹಲವು ಪರಿಣಿತರು ಅಭಿಪ್ರಾಯಪಡುತ್ತಾರೆ. ಏಕೆಂದರೆ ಹಸಿರು ಟೀಯಲ್ಲಿ ಅಲ್ಪ ಪ್ರಮಾಣದ ಕೆಫೀನ್ ಇದ್ದು ಗರ್ಭಾವಸ್ಥೆಯಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹಲವು ಸಂಶೋಧನೆಗಳ ಮೂಲಕ ಈಗ ಪ್ರಮಾಣಿತವಾಗಿದೆ.

Reasons green tea is bad for you during pregnancy

ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ರಕ್ತದಲ್ಲಿ ಮಿಳಿತಗೊಳ್ಳುವುದರಿಂದ ತಾಯಿ ಮತ್ತು ಗರ್ಭದಲ್ಲಿರುವ ಶಿಶುವಿನ ಬೆಳವಣಿಗೆಯಲ್ಲಿ ಪ್ರಭಾವ ಬೀರುತ್ತದೆ. ಈ ಕಾರಣದಿಂದ ವೈದ್ಯರು ಔಷಧಿಗಳನ್ನು ಸಲಹೆ ನೀಡುವಾಗ ರೋಗಿ ಗರ್ಭವತಿಯಾಗಿದ್ದರೆ ವಿಶೇಷ ಕಾಳಜಿಯನ್ನು ವಹಿಸುತ್ತಾರೆ. ಏಕಾಗಿ ಕೆಫೀನ್ ಇರುವ ಹಸಿರು ಚಹಾ ಬೇಡ ಎಂಬ ಪ್ರಶ್ನೆಗೆ ಉತ್ತರಗಳನ್ನುಇಲ್ಲಿ ನೀಡಲಾಗಿದೆ. ಗರ್ಭಿಣಿಯರೇ ಉರಿ ಬಿಸಿಲಿನ ತಾಪಕ್ಕೆ ಬೇಸತ್ತು ಹೋಗಿರುವಿರಾ?

ಒಂದು ಕಪ್ ಹಸಿರು ಚಹಾದಲ್ಲಿ ದಿನಕ್ಕೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಕೆಫೀನ್ ಇದೆ ಸಾಧಾರಣ ತೂಕದ ವ್ಯಕ್ತಿಗೆ ಪ್ರತಿದಿನಕ್ಕೆ ಅಗತ್ಯವಿರುವ ಕೆಫೀನ್ ಪ್ರಮಾಣ 200ಮಿಲಿಗ್ರಾಂ ಆಗಿದೆ. ಈ ಪ್ರಮಾಣ ಸರಿಸುಮಾರು ಎರಡು ಕಪ್ ಹಸಿರು ಟೀ ಮೂಲಕ ಲಭ್ಯವಾಗುತ್ತದೆ. ಇಷ್ಟೇ ಪ್ರಮಾಣ ಸುಮಾರು ಒಂದು ಕಪ್ ಕಾಫಿ ಮತ್ತು ಇತರ ಪೇಯಗಳ ಮೂಲಕ ಲಭ್ಯವಾಗುತ್ತದೆ. ಆದರೆ ಇತರ ಔಷಧಿಗಳಲ್ಲಿಯೂ ಅಲ್ಪಪ್ರಮಾಣದ ಕೆಫೀನ್ ಇರುತ್ತದೆ.

ವೈದ್ಯರು ನಿತ್ಯ ಸೇವಿಸಲು ಸಲಹೆ ನೀಡುವ ಔಷಧಿಗಳನ್ನು ಎಷ್ಟು ಕಳಕಳಿ ವಹಿಸಿ ಆಯ್ದು ನೀಡಿದರೂ ಅಲ್ಪ ಪ್ರಮಾಣದ ಕೆಫೀನ್ ಯಾವುದಾದರೊಂದು ಔಷಧಿಯಲ್ಲಿ ಅಥವಾ ಪೇಯದಲ್ಲಿ ಇದ್ದೇ ಇರುತ್ತದೆ. ಈಗ ಕುಡಿಯುವ ಹಸಿರು ಚಹಾ ಮೂಲಕ ಲಭ್ಯವಾಗುವ ಕೆಫೀನ್ ನಿತ್ಯದ ಅಗತ್ಯದ ಪ್ರಮಾಣವನ್ನು ಮೀರುವುದರಿಂದ ಹಸಿರು ಟೀ ಕುಡಿಯದಿರುವುದೇ ಲೇಸು.

ದೇಹವು ಫೋಲಿಕ್ ಆಮ್ಲವನ್ನು ಹೀರಿಕೊಳ್ಳಲು ಅಡ್ಡಿಪಡಿಸುತ್ತದೆ
ಗರ್ಭಾವಸ್ಥೆಯಲ್ಲಿ ಶಿಶುವಿನ ಬೆಳವಣಿಗೆಗೆ ಫೋಲಿಕ್ ಆಮ್ಲ ಒಂದು ಅತ್ಯಾವಶ್ಯವಾದ ಪೋಷಕಾಂಶವಾಗಿದೆ. ವಿಶೇಷವಾಗಿ ಶಿಶುವಿನ ನರಮಂಡಲದ ಬೆಳವಣಿಗೆ ಮತ್ತು ನರಗಳ ಉತ್ಪತ್ತಿಗೆ ಫೋಲಿಕ್ ಆಮ್ಲ ಅತ್ಯಾವಶ್ಯವಾಗಿದೆ. ಒಂದು ವೇಳೆ ಅಗತ್ಯ ಪ್ರಮಾಣದಲ್ಲಿ ಫೋಲಿಕ್ ಆಮ್ಲ ಬಳಸಿಕೊಳ್ಳದೇ ಇದ್ದರೆ ಶಿಶುವಿನ ಬೆಳವಣಿಗೆಯಲ್ಲಿ spina bifida (ಶಿಶುವಿನ ಮೆದುಳುಬಳ್ಳಿ ಪೂರ್ಣವಾಗಿ ಬೆಳೆಯದೇ ಇದ್ದು ದೇಹದಿಂದ ಹೊರಚಾಚಿಕೊಂಡುರುವ ಅವಸ್ಥೆ) ಎಂಬ ರೋಗಕ್ಕೂ ತುತ್ತಾಗಬಹುದು.

ಗರ್ಭಾವಸ್ಥೆಯಲ್ಲಿ, ಅದರಲ್ಲೂ ಪ್ರಥಮ ಹನ್ನೆರಡು ವಾರಗಳಲ್ಲಿ ಗರ್ಭವತಿಯ ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ಫೋಲಿಕ್ ಆಮ್ಲ ಇರುವುದು ಮತ್ತು ದೇಹ ಬಳಸುವುದು ಅಗತ್ಯವಾಗಿದೆ. ಒಂದು ವೇಳೆ ಈ ಅವಧಿಯಲ್ಲಿ ಹಸಿರು ಟೀ ಕುಡಿಯುವ ಮೂಲಕ ಅಗತ್ಯಪ್ರಮಾಣದಲ್ಲಿ ಫೋಲಿಕ್ ಆಮ್ಲ ಬಳಕೆಯಾಗದೇ ಶಿಶುವಿನ ಬೆಳವಣಿಗೆಯಲ್ಲಿ ಪ್ರಭಾವ ಬೀರಬಹುದು. ಜ್ವರ ಬಂದಾಗ ಎದೆಹಾಲೆಂಬ ಅಮೃತ ಕೂಡ ವಿಷವಾಗುವುದೇ?

ಕಬ್ಬಿಣವನ್ನು ಹೀರಿಕೊಳ್ಳಲು ಕಷ್ಟಕರವಾಗುತ್ತದೆ
ಗರ್ಭಿಣಿಯರಿಗೆ ಇತರರಿಗಿಂತ ಹೆಚ್ಚಿನ ಕಬ್ಬಿಣದ ಅವಶ್ಯಕತೆ ಇರುತ್ತದೆ. ಹಸಿರು ಸೊಪ್ಪು ಮತ್ತು ಇತರ ಕಬ್ಬಿಣಾಂಶ ಹೆಚ್ಚಿರುವ ಆಹಾರಗಳ ಮೂಲಕ ದೇಹಕ್ಕೆ ಆಗಮನವಾಗುವ ಕಬ್ಬಿಣವನ್ನು ರಕ್ತ ಪೂರ್ಣವಾಗಿ ಹೀರಿಕೊಂಡಾಗ ಮಾತ್ರ ಕಬ್ಬಿಣ ಅಗತ್ಯತೆ ಪೂರ್ಣಗೊಳ್ಳುತ್ತದೆ. ಆದರೆ ಹಸಿರು ಟೀ, ಮಸಾಲೆ ಟೀ ಕುಡಿಯುವುದರಿಂದ ಆಹಾರದಲ್ಲಿ ಕಬ್ಬಿಣವಿದ್ದರೂ ರಕ್ತ ಅದನ್ನು ಪೂರ್‍ಣಪ್ರಮಾಣದಲ್ಲಿ ಹೀರಿಕೊಳ್ಳಲು ಅಸಮರ್ಥವಾಗುತ್ತದೆ. ಇದರಿಂದ ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶ ಕಡಿಮೆಯಾಗುತ್ತದೆ. ಪರಿಣಾಮವಾಗಿ gestational anemia (ಗರ್ಭಾವಸ್ಥೆಯ ರಕ್ತಹೀನತೆ) ಎಂಬ ತೊಂದರೆ ಎದುರಾಗುತ್ತದೆ. ಇದರಿಂದ ಶಿಶುವಿಗೆ ಮಾಸುಬಳ್ಳಿಯ ಮೂಲಕ ಲಭ್ಯವಾಗುವ ಆಮ್ಲಜನಕ ಮತ್ತು ಇತರ ಪೋಷಕಾಂಶಗಳ ಪ್ರಮಾಣ ಕಡಿಮೆಯಾಗುತ್ತದೆ. ಇದು ಹಲವು ಸಂಕೀರ್ಣತೆಗಳಿಗೆ ದಾರಿಮಾಡಿಕೊಡುತ್ತದೆ. ತಾಯ್ತನದ ಅವಧಿಯಲ್ಲಿ ಮೇಕಪ್ ಕಿಟ್ ಬಗ್ಗೆ ಎಚ್ಚರವಿರಲ್ಲಿ!

ಜೀವರಾಸಾಯನಿಕ ಕ್ರಿಯೆಯನ್ನು ಕುಂಠಿತಗೊಳಿಸುತ್ತದೆ
ಗರ್ಭಾವಸ್ಥೆಯಲ್ಲಿ ತಾಯಿಯ ಶರೀರ ಹಲವು ಬದಲಾವಣೆಗಳಿಗೆ ಒಳಗಾಗುತ್ತದೆ. ಬೆಳೆಯುತ್ತಿರುವ ಶಿಶುವಿನ ಅಗತ್ಯತೆಗಳನ್ನು ಪೂರೈಸಲು ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚುಗೊಳಿಸಬೇಕಾಗಿ ಬರುತ್ತದೆ. ಹಸಿರು ಟೀ ಸೇವನೆಯ ಮೂಲಕ ಈ ಕ್ರಿಯೆಯ ಗತಿ ನಿಧಾನವಾಗುತ್ತದೆ. ಇದರಿಂದ ಅಗತ್ಯಪ್ರಮಾಣದ ಶಕ್ತಿ ಬಿಡುಗಡೆಯಾಗದೇ ದೇಹ ಸೊರಗುತ್ತದೆ. ಜೊತೆಗೇ ಶಿಶುವಿಗೂ ಅಗತ್ಯವಿರುವಷ್ಟು ಪ್ರಮಾಣದಲ್ಲಿ

ಪೋಷಕಾಂಶಗಳು ಲಭ್ಯವಾಗದೇ ಬೆಳವಣಿಗೆ ಬಾಧೆಗೊಳಗಾಗುತ್ತದೆ
ಒಂದು ವೇಳೆ ನೀವು ಹಸಿರು ಟೀ ಕುಡಿಯದಿದ್ದರೆ ಆಗುವುದೇ ಇಲ್ಲ ಎನ್ನುವಷ್ಟು ವ್ಯಸನಿಯಾಗಿದ್ದರೆ ಒಂದು ದಿನಕ್ಕೆ ಎರಡು ಕಪ್, ಅದರಲ್ಲೂ ಸ್ವಲ್ಪ ಹೊತ್ತು ಮಾತ್ರ ಕುದಿಸಿದ ಟೀಯನ್ನು ಕುಡಿಯಿರಿ. ನಿಯಮಿತವಾಗಿ ರಕ್ತದ ತಪಾಸಣೆಯನ್ನು ಮಾಡಿಸಿ ವೈದ್ಯರ ಸಲಹೆಯನ್ನು ಪಾಲಿಸಿ.

English summary

Reasons green tea is bad for you during pregnancy

Green tea is usually thought to be healthy as compared to regular tea and other popular brews. It is known to aid weight loss, protect from heart diseases, promote healthy hair and skin and the list is endless.
X
Desktop Bottom Promotion