For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಕಾಡುವ ವಾಂತಿಯ ಸಮಸ್ಯೆ: ಫಲಪ್ರದ ಮನೆಮದ್ದು

|

ಹೆಣ್ಣಿನ ಜೀವನದಲ್ಲಿ ಗರ್ಭಿಣಿಯಾಗಿರುವ ಕಾಲವು ಬಹುಕಾಲ ನೆನಪಿನಲ್ಲುಳಿಯುವ ದಿನಗಳಾಗಿರುತ್ತದೆ. ಬಹುತೇಕ ಹೆಂಗಸರಿಗೆ ಈ ಕಾಲವು ಸುಲಭವಾಗಿ ಸಾಗಿ ಹೋಗುತ್ತದೆ. ಆದರೆ ಕೆಲವರಿಗೆ ನಾಸಿಯಾ ಮತ್ತು ವಾಂತಿಯ ದೆಸೆಯಿಂದ ಇದು ನರಕ ಸದೃಶ್ಯವಾಗಿರುತ್ತದೆ. ವಾಂತಿಯನ್ನು ಮಾರ್ನಿಂಗ್ ಸಿಕ್‍ನೆಸ್ ಅಥವಾ ಮುಂಜಾನೆಯ ಮಂಕು ಕವಿಯುವಿಕೆ ಎಂದು ಸಹ ಗುರುತಿಸಬಹುದು.

ಇದು ಗರ್ಭಿಣಿಯಾಗಿರುವಾಗ ಸಾಮಾನ್ಯವಾಗಿ ಕಂಡು ಬರುವ ಒಂದು ಲಕ್ಷಣವಾಗಿರುತ್ತದೆ. ವಿಶೇಷವಾಗಿ ಮೊದಲ ಮೂರು ತಿಂಗಳಿನಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ವಾಸ್ತವಾಂಶವೇನೆಂದರೆ ಶೇ.65ಕ್ಕೂ ಅಧಿಕ ಜನ ಗರ್ಭಿಣಿ ಮಹಿಳೆಯರಲ್ಲಿ ಈ ಸಮಸ್ಯೆಯು ಸಾಮಾನ್ಯವಾಗಿ ಕಂಡು ಬರುತ್ತದೆ.

ಆದರೆ ಇದನ್ನು ನೀವು ಮನೆಯಲ್ಲಿಯೇ ದೊರೆಯುವ ಕೆಲವೊಂದು ಮನೆ ಮದ್ದುಗಳ ಸಹಾಯದಿಂದ ಮತ್ತು ನಿಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತರುವುದರ ಮೂಲಕ ಸರಿಪಡಿಸಿಕೊಳ್ಳಬಹುದು.ಬನ್ನಿ ಅವು ಯಾವುದು ಎಂಬುದನ್ನು ನೋಡೋಣ..

https://www.boldsky.com/img/2015/08/31-1441006562-vomit.jpg

ಶುಂಠಿ
ಗರ್ಭಿಣಿಯಾಗಿರುವಾಗ ಕಾಣಿಸಿಕೊಳ್ಳುವ ವಾಂತಿಯನ್ನು ನಿಭಾಯಿಸಲು ಶುಂಠಿಯು ಒಂದು ಒಳ್ಳೆಯ ಮನೆಮದ್ದಾಗಿದೆ. ಇದು ನಿಮ್ಮ ಜೀರ್ಣ ಕ್ರಿಯೆಗೂ ಸಹ ಒಳ್ಳೆಯದು ಮತ್ತು ನಾಸಿಯಾ ಹಾಗು ವಾಂತಿಯನ್ನು ತರುವಂತಹ ಆಸಿಡ್‌‍ಗಳು ಹೊಟ್ಟೆಯಲ್ಲಿ ಸ್ರವಿಸುವಿಕೆಯಾಗುವುದನ್ನು ಸಹ ತಪ್ಪಿಸುತ್ತದೆ. ಶುಂಠಿಯ ಪರಿಮಳ ಮತ್ತು ಸ್ವಾದವು ಸಹ ವಾಂತಿಯಾಗುವಂತಹ ಅನುಭವವನ್ನು ನಿವಾರಿಸುತ್ತದೆ. ನಾಸಿಯಾದಿಂದ ಮುಕ್ತರಾಗಲು ಒಂದು ತುಂಡು ಶುಂಠಿಯನ್ನು ಚೀಪಿ ಅಥವಾ ಶುಂಠಿ ಕ್ಯಾಂಡಿಯನ್ನು ಸೇವಿಸಿ. ಗರ್ಭಿಣಿಯರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಟಾಪ್ ಫುಡ್

ನಿಮಗೆ ಬೇಕಾದಲ್ಲಿ ಐದು ಹನಿ ಶುಂಠಿ ರಸಕ್ಕೆ ಒಂದು ಚಮಚ ಜೇನು ತುಪ್ಪವನ್ನು ಬೆರೆಸಿ ಸಹ ನೀವು ಸೇವಿಸಬಹುದು. ಬೆಳಗ್ಗೆ ಎದ್ದ ಕೂಡಲೆ ಇದನ್ನು ನಿಧಾನವಾಗಿ ಸೇವಿಸಿ. ಇದರ ಜೊತೆಗೆ 1 ಟೀ.ಚಮಚ ತುರಿದ ಶುಂಠಿಯನ್ನು 1 ಕಪ್ ನೀರಿನೊಂದಿಗೆ ಬೆರೆಸಿ 10 ನಿಮಿಷ ಕಾಯಿಸಿ. ನಂತರ ಇದನ್ನು ಶೋಧಿಸಿ, ಸ್ವಲ್ಪ ಜೇನು ತುಪ್ಪದ ಜೊತೆಗೆ ನಿಧಾನವಾಗಿ ಸೇವಿಸಿ. ಬೆಳಗ್ಗೆ 1 ರಿಂದ 2 ಕಪ್ ಶುಂಠಿ ಟೀಯನ್ನು ಸೇವಿಸಿ.

ಲಿಂಬೆಹಣ್ಣು
ಲಿಂಬೆಹಣ್ಣು ಸಹ ಗರ್ಭಿಣಿಯರಿಗೆ ಕಾಣಿಸಿಕೊಳ್ಳುವ ವಾಂತಿ ಮತ್ತು ನಾಸಿಯಾವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರ ಆಹ್ಲಾದಕರವಾದ ವಾಸನೆಯು ದೇಹದ ಮೇಲೆ ಸ್ವಾಭಾವಿಕವಾಗಿ ಪರಿಣಾಮ ಬೀರಿ, ವಾಂತಿಯಾಗುವ ಅನುಭವವನ್ನು ಶಾಂತಗೊಳಿಸುತ್ತದೆ. ಜೊತೆಗೆ ಲಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿಯು ತಾಯಿ ಮತ್ತು ಮಗು ಇಬ್ಬರಿಗೂ ಒಳ್ಳೆಯದು ಎಂದು ಬಿಡಿಸಿ ಹೇಳಬೇಕಾಗಿಲ್ಲ. ಒಂದು ಲೋಟ ನೀರಿಗೆ ತಾಜಾ ಲಿಂಬೆ ರಸವನ್ನು ಹಿಂಡಿಕೊಳ್ಳಿ ಹಾಗು ಇದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ. ಇದನ್ನು ದಿನಾ ಬೆಳಗ್ಗೆ ಎದ್ದ ಕೂಡಲೆ ಸೇವಿಸಿ. ಮಾರ್ನಿಂಗ್ ಸಿಕ್‍ನೆಸ್‍ನಿಂದ ಮುಕ್ತರಾಗಿ. ಗರ್ಭಾವಸ್ಥೆಯಲ್ಲಿ ನಿರ್ಲಕ್ಷ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ

ಇದಲ್ಲದೆ ಲಿಂಬೆ ಹಣ್ಣಿನ ಸಿಪ್ಪೆಯನ್ನು ಮೂಸಿ ನೋಡುವುದರಿಂದ ಸಹ ನಾಸಿಯಾ ಮತ್ತು ವಾಂತಿಯಾಗುವ ಅನುಭವವನ್ನು ತಡೆಯಬಹುದು. ಇದರ ಜೊತೆಗೆ ಲೆಮನ್ ಎಸೆನ್ಷಿಯಲ್ ಆಯಿಲ್ ಅನ್ನು ನಿಮ್ಮ ಕರವಸ್ತ್ರಕ್ಕೆ ಹಾಕಿಕೊಂಡು, ಅಗತ್ಯವಾದಾಗ ಅಥವಾ ನಾಸಿಯಾ ಬರುವಾಗ ಮೂಸಿ ನೋಡಬಹುದು. ಜೊತೆಗೆ ಲಿಂಬೆಯ ಕ್ಯಾಂಡಿಯನ್ನು ಸಹ ಇರಿಸಿಕೊಂಡರೆ ಸಹ ಒಳ್ಳೆಯದು.

ಜೀರಿಗೆ
ಜೀರಿಗೆಯು ವಾಂತಿ ಮತ್ತು ನಾಸಿಯಾಗೆ ಒಂದು ಅದ್ಭುತವಾದ ಮನೆ ಔಷಧಿಯಾಗಿರುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಾಂಗ ವ್ಯೂಹಕ್ಕೆ ಅಗತ್ಯ ವಿಶ್ರಾಂತಿಯನ್ನು ನೀಡುತ್ತದೆ. ಹೀಗೆ ಇದು ನಾಸಿಯಾ ಮತ್ತು ವಾಂತಿಯಾಗುವ ಅನುಭವವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಜೀರಿಗೆಯ ಸುವಾಸನೆಯು ಜಠರವನ್ನು ಶಾಂತಗೊಳಿಸುತ್ತದೆ. ಅದಕ್ಕಾಗಿ ನಿಮ್ಮ ಹಾಸಿಗೆಯ ಪಕ್ಕದಲ್ಲಿ ಯಾವಾಗಲು ಸ್ವಲ್ಪ ಜೀರಿಗೆಯನ್ನು ಇರಿಸಿಕೊಳ್ಳಿ.
ಯಾವಾಗ ನಿಮಗೆ ಹೊಟ್ಟೆ ತೊಳೆಸಿದ ಅನುಭವವಾಗುತ್ತದೆಯೋ, ಆಗ ಜೀರಿಗೆಯನ್ನು ಬಾಯಿಗೆ ಹಾಕಿಕೊಂಡು ತಿನ್ನಿ.


ನಿಮಗೆ ಬೇಕಾದಲ್ಲಿ ಒಂದು ಟೀ.ಚಮಚ ಜೀರಿಗೆ ಕಾಳುಗಳನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ, ಅದನ್ನು 10 ನಿಮಿಷಗಳ ಕಾಲ ಮುಚ್ಚಿ. ಆನಂತರ ಇದನ್ನು ಶೋಧಿಸಿ, ಅದಕ್ಕೆ ಸ್ವಲ್ಪ ಲಿಂಬೆರಸ ಮತ್ತು ಜೇನು ತುಪ್ಪವನ್ನು ಹಾಕಿಕೊಂಡು ಸೇವಿಸಬಹುದು. ಮುಂಜಾನೆ ನೀವು ಹಾಸಿಗೆಯಿಂದ ಎದ್ದ ಮೇಲೆ ಇದನ್ನು ನಿಧಾನವಾಗಿ ಗುಟುಕು ಗುಟುಕಾಗಿ ಸೇವಿಸಿ.

ಸಾಧ್ಯವಾದಷ್ಟು ನೀರು ಕುಡಿಯಿರಿ
ನೀರು ಕುಡಿಯುವುದು ನಾಸಿಯಾ ಮತ್ತು ವಾಂತಿಗೆ ಒಂದು ಒಳ್ಳೆಯ ಮದ್ದಾಗಿದೆ. ವಿಶೇಷವಾಗಿ ಗರ್ಭಿಣಿಯರು ಆಗಾಗ ಗಂಟೆಗೊಮ್ಮೆ ಒಂದು ಲೋಟ ನೀರನ್ನು ಸೇವಿಸುವುದರಿಂದ ಮಾರ್ನಿಂಗ್ ಸಿಕ್‍ನೆಸ್‍ನಿಂದ ಮುಕ್ತರಾಗಬಹುದು.

English summary

Natural remedies to prevent Vomiting During Pregnancy

Most women feel nausea and vomiting sensation during the early days of pregnancy. While some experience this for the first trimester or so, others may have it till the last month too! Unlike what it is popularly known as, morning sickness is not actually restricted only in the morning. In fact, many women experience a feeling of nausea and vomiting throughout the evening and night. have a look how to over come from these Problem.
Story first published: Monday, August 31, 2015, 19:07 [IST]
X
Desktop Bottom Promotion