For Quick Alerts
ALLOW NOTIFICATIONS  
For Daily Alerts

ಜನನ ನಿಯಂತ್ರಣ ಮಾತ್ರೆಗಳ ಕುರಿತಾದ 5 ತಪ್ಪು ಕಲ್ಪನೆಗಳು!

By Super
|

ಜನನ ನಿಯಂತ್ರಣ ಮಾತ್ರೆಗಳು ನಿಮ್ಮನ್ನು ಗರ್ಭಿಣಿಯಾಗದಂತೆ ತಡೆಯಲು ಸುಲಭವಾದ ಮಾರ್ಗಗಳಾಗಿರುತ್ತವೆ. ಆದರೂ ಇದರಲ್ಲಿ ಒಂದು ಬಗೆಯ ಆತಂಕ ಇದ್ದೇ ಇರುತ್ತದೆ. ಬಹುತೇಕ ಮಹಿಳೆಯರಲ್ಲಿ ಜನನ ನಿಯಂತ್ರಣದ ಕುರಿತಾಗಿ ಕೆಲವೊಂದು ತಪ್ಪು ಕಲ್ಪನೆಗಳು ಮನೆ ಮನೆ ಮಾಡಿ ಕೊಂಡಿದೆ. ಅಂತಹ ತಪ್ಪು ಕಲ್ಪನೆಗಳ ಕುರಿತಾದ ಕೆಲವೊಂದು ಸಾಮಾನ್ಯ ಪ್ರಶ್ನೆಗಳನ್ನು ನಾವು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ:

ಜನನ ನಿಯಂತ್ರಣ ಗುಳಿಗೆಗಳನ್ನು ವೈದ್ಯಕೀಯ ಸಲಹೆಗಳಿಲ್ಲದೆ ತೆಗೆದುಕೊಳ್ಳಬಹುದು!
ಒಂದು ಮಟ್ಟಿಗೆ ಈ ಹೇಳಿಕೆ ಸತ್ಯ. ಈ ಮೊದಲು ಯಾವುದೇ ಆರೋಗ್ಯದ ಸಮಸ್ಯೆಗಳನ್ನು ಹೊಂದಿಲ್ಲದೆ ಇರುವ ಮಹಿಳೆಯರು, ಜನನ ನಿಯಂತ್ರಣ ಮಾಡಿಕೊಳ್ಳಲು ಈ ಮಾತ್ರೆಗಳನ್ನು ಸೇವಿಸಲು ಅಡ್ಡಿಯಿಲ್ಲ. ಆದರೂ ಮಧುಮೇಹ, ಹೈಪರ್ ಟೆನ್ಶನ್ ಅಥವಾ ಥೈರಾಯ್ಡ್ ಸಮಸ್ಯೆ ಮುಂತಾದವುಗಳನ್ನು ಹೊಂದಿರುವ ಮಹಿಳೆಯರು ಈ ಮಾತ್ರೆಗಳನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.

Myths and facts about birth control pills you ought to know!

ಇದರ ಜೊತೆಗೆ ಕರುಳಿನ ಸಮಸ್ಯೆ ಅಥವಾ ಕೊವಾಗುಲೇಷನ್ (ಘನೀಕರಣ) ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯರು ಸಹ ವೈದ್ಯರ ಸಲಹೆ ಇಲ್ಲದೆ ಯಾವುದೇ ಕಾರಣಕ್ಕೂ ಈ ಜನನ ನಿಯಂತ್ರಣ ಮಾತ್ರೆಗಳನ್ನು ತೆಗೆದುಕೊಳ್ಳಲು ಹೋಗಬಾರದು. ಏಕೆಂದರೆ ಈ ಮಾತ್ರೆಗಳು ಈಗಾಗಲೇ ತೆಗೆದುಕೊಳ್ಳುತ್ತಿರುವ ಮಾತ್ರೆಗಳ ಜೊತೆಗೆ ರಾಸಾಯನಿಕ ಪ್ರಕ್ರಿಯೆ ನಡೆಸಿ, ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡಬಹುದು. ಆದ್ದರಿಂದ ನಿಮಗೆ ಈ ಸಮಸ್ಯೆಗಳು ಇದ್ದಲ್ಲಿ, ಮೊದಲು ವೈದ್ಯರನ್ನು ಕಂಡು ಅವರ ಶಿಫಾರಸುಗಳನ್ನು ಮತ್ತು ಸಲಹೆಗಳನ್ನು ತಪ್ಪದೆ ಪಾಲಿಸಿ. ಮಿದುಳಿನ ಮೇಲೆ ಗರ್ಭನಿರೋಧಕ ಮಾತ್ರೆಯ ಪ್ರಭಾವ

ಜನನ ನಿಯಂತ್ರಣ ಗುಳಿಗೆಗಳು ತೂಕವನ್ನು ಇಳಿಸುತ್ತವೆ ಮತ್ತು ಹೆಚ್ಚಿಸುತ್ತವೆ
ಬಹುತೇಕ ಜನನ ನಿಯಂತ್ರಣ ಮಾತ್ರೆಗಳು ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟಿರೋನ್ ಎಂಬ ಎರಡು ಅಂಶಗಳಿಂದ ಮಾಡಲ್ಪಟ್ಟಿರುತ್ತವೆ. ಈಸ್ಟ್ರೋಜೆನ್‌ನ ಅಧಿಕ ಡೋಸ್ ಹೊಟ್ಟೆ ಉಬ್ಬುವಿಕೆ ಮತ್ತು ದೇಹದಲ್ಲಿ ನೀರಿನಂಶವನ್ನು ಕಳೆದುಕೊಳ್ಳುವಿಕೆಗೆ ಕಾರಣವಾಗುತ್ತದೆ
ಆದರೆ ಆಧುನಿಕ ಜನನ ನಿಯಂತ್ರಣ ಮಾತ್ರೆಗಳು ಈ ಹಾರ್ಮೋನುಗಳ ಸಣ್ಣ ಪ್ರಮಾಣದ ಡೋಸ್ ಅನ್ನು ಹೊಂದಿದ್ದು, ಅಡ್ಡಪರಿಣಾಮಗಳಿಂದ ಮುಕ್ತವಾಗಿರುತ್ತವೆ. ಆದರೂ ಸ್ಥೂಲ ಕಾಯವನ್ನು ಹೊಂದಿರುವ ಮಹಿಳೆಯರಲ್ಲಿ, ಜೀರ್ಣಕ್ರಿಯೆಗೆ ಸಂಬಂಧಪಟ್ಟು ಈ ಮಾತ್ರೆಗಳು ಸ್ವಲ್ಪ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತವೆ. ಆದರೂ ಇವುಗಳನ್ನು ವೈದ್ಯರಿಂದ ಸೂಚಿಸಲ್ಪಟ್ಟ ಸರಿಯಾದ ಪ್ರಮಾಣದ ಡೋಸ್ ಸೇವಿಸುವ ಮೂಲಕ ಸರಿಪಡಿಸಿಕೊಳ್ಳಬಹುದು.

ಜನನ ನಿಯಂತ್ರಣ ಮಾತ್ರೆಗಳು ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತವೆ

ಸತ್ಯಾಂಶವೇನೆಂದರೆ ಸಣ್ಣ ಮಟ್ಟದ ಡೋಸ್ ಇರುವ ಹಾರ್ಮೋನುಗಳ ಗುಳಿಗೆಯು ಸಹ ನಿಮ್ಮ ಲೈಂಗಿಕ ಹಾರ್ಮೋನುಗಳ ಅಸಮತೋಲವನ್ನು ನಿವಾರಿಸಿ, ಸಂತಾನೋತ್ಪತ್ತಿಗೆ ಸಹಕರಿಸಬಲ್ಲವು. ಮಗುವಿನ ನಿರೀಕ್ಷೆಯಲ್ಲಿರುವಾಗ ಗರ್ಭಧಾರಣೆಗಾಗಿ ಎರಡರಿಂದ ಮೂರು ತಿಂಗಳವರೆಗೆ ಈ ಮಾತ್ರೆಗಳನ್ನು ಸೇವಿಸದೆ ಕಾಯಬೇಕಾಗುತ್ತದೆ. ಆದರೂ ಕೆಲವೊಮ್ಮೆ ಆರು ತಿಂಗಳವರೆಗೆ ತಾಳ್ಮೆಯಿಂದ ಕಾಯುವಂತಹ ಅನಿವಾರ್ಯತೆ ಬರಬಹುದು. ಮಾತ್ರೆಗಳನ್ನು ತ್ಯಜಿಸಿದ ಕೂಡಲೆ ಗರ್ಭಧಾರಣೆ ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಜನನ ನಿಯಂತ್ರಕಗಳ ಅಡ್ಡಪರಿಣಾಮಗಳು

ಅಡ್ಡ ಪರಿಣಾಮಗಳಿಗೆ ಗುರಿಯಾಗಬೇಕಾಗುತ್ತದೆ
ಜನನ ನಿಯಂತ್ರಣ ಮಾತ್ರೆಗಳನ್ನು ಸೇವಿಸುವುದರಿಂದ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಅಡ್ಡಪರಿಣಾಮವೆಂದರೆ ಅದು ಹೊಟ್ಟೆ ಉಬ್ಬಿಕೊಳ್ಳುವುದು, ತೂಕ ಹೆಚ್ಚಾಗುವುದು, ನಾಸಿಯಾ, ತಲೆ ನೋವು ಮತ್ತು ಮೂಡ್ ವಿಪರೀತವಾಗಿ ಬದಲಾಗುವುದು. ಆದರೂ ಈ ಅಡ್ಡ ಪರಿಣಾಮಗಳು ಕಾಲಕ್ರಮೇಣ ಬೇಗ ಗುಣವಾಗುತ್ತವೆ. ಹೊಸ ಬಗೆಯ ಜನನ ನಿಯಂತ್ರಣ ಮಾತ್ರೆಗಳು ಕಡಿಮೆ ಡೋಸ್‌ಗಳನ್ನು ಹೊಂದಿರುತ್ತವೆ, ಇವುಗಳು ಈ ಬಗೆಯ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಹಾಗಾಗಿ ಅಡ್ಡ ಪರಿಣಾಮಗಳು ಹೊಸ ಮಾತ್ರೆಗಳಿಗಿಂತ ಹಳೆಯ ಮಾದರಿಯ ಮಾತ್ರೆಗಳಲ್ಲಿ ಹೆಚ್ಚಾಗಿರುತ್ತವೆ.

ಇದಕ್ಕೂ ಮಿಗಿಲಾಗಿ ಮಾರುಕಟ್ಟೆಯಲ್ಲಿ ಇಂದು ಹಲವಾರು ಬಗೆಯ ಜನನ ನಿಯಂತ್ರಣ ಮಾತ್ರೆಗಳು ಲಭ್ಯವಿದೆ. ಒಂದು ವೇಳೆ ಅಡ್ಡ ಪರಿಣಾಮಗಳು ಕಾಣಿಸಿಕೊಂಡಲ್ಲಿ, ತಪ್ಪದೆ ನಿಮ್ಮ ವೈದ್ಯರಿಗೆ ಇದರ ಕುರಿತು ವರದಿ ಮಾಡಿ. ಆಗ ಅವರು ಡೋಸ್ ಬದಲಾವಣೆಯ ಸಲಹೆಯನ್ನು ನೀಡಬಹುದು. ಆಗ ಈ ಅಡ್ಡ ಪರಿಣಾಮಗಳು ಸಹ ನಿಲ್ಲಬಹುದು. ಸಾಮಾನ್ಯವಾಗಿ ಈ ಅಡ್ಡಪರಿಣಾಮಗಳು ನಿಲ್ಲಲು ಜನನ ನಿಯಂತ್ರಣ ಮಾತ್ರೆಗಳನ್ನು ತೆಗೆದುಕೊಳ್ಳಲು ಆರಂಭಿಸಿದ ದಿನದಿಂದ ಒಂದು ತಿಂಗಳ ಕಾಲಾವಧಿಯನ್ನು ತೆಗೆದುಕೊಳ್ಳಬಹುದು. ಜನನ ನಿಯಂತ್ರಣದ ಬಳಿಕ ಗರ್ಭಧರಿಸಬಹುದೇ?

ಋತು ಚಕ್ರದ ಮೇಲೆ ಪರಿಣಾಮ ಬೀರುತ್ತವೆ ಮತ್ತು ನಿಧಾನಗೊಳಿಸುತ್ತವೆ
ಇದನ್ನು ಸಾಬೀತು ಮಾಡಲು ಅತ್ಯಂತ ಕಡಿಮೆ ಪುರಾವೆಗಳು ಲಭ್ಯವಿವೆ. ಆದರೆ ಇದು ನಿಮ್ಮ ಋತು ಚಕ್ರದ ಅವಧಿಯನ್ನು ಏರು ಪೇರು ಮಾಡುವುದು ಸುಳ್ಳಲ್ಲ. ಮತ್ತೊಂದು ಕಡೆ ಜನನ ನಿಯಂತ್ರಣ ಮಾತ್ರೆಗಳು ಈ ಹಿಂದೆ ನಿಮ್ಮ ದೇಹದಲ್ಲಿದ್ದ ಹಾರ್ಮೋನುಗಳನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತವೆ ಮತ್ತು ನಿಮ್ಮ ಋತುಚಕ್ರವನ್ನು ಸರಾಗ ಸಹ ಮಾಡಬಹುದು. ಒಂದು ವೇಳೆ ತೀವ್ರತರದ ಏರುಪೇರುಗಳು ಸಂಭವಿಸಿದಲ್ಲಿ, ನಿಮ್ಮ ವೈದ್ಯರನ್ನು ಕಂಡು ಅವರ ಬಳಿ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

English summary

Myths and facts about birth control pills you ought to know!

Birth control pills are thought to be the most effective and convenient way to delay or postpone a pregnancy. However, there is always some anxiety attached to the same. Many women harbour a lot of misconceptions regarding birth control pills. Here we shed some light on some of the most frequently asked questions about birth control pills:
X
Desktop Bottom Promotion