For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗಿದ್ದಾಗ ತೂಕ ಇಳಿಸಿಕೊಳ್ಳುವುದು ಆರೋಗ್ಯಕರ ಲಕ್ಷಣವೇ?

By Arshadh
|

ಹಿಂದಿನ ಸಿನೆಮಾಗಳಲ್ಲಿ ನಾಯಕಿ ತಾನು ಗರ್ಭಿಣಿ ಎಂದು ತನ್ನ ಪತಿಗೆ ತಿಳಿಸುತ್ತಿದ್ದುದೇ ಮೂರು ತಿಂಗಳ ನಂತರ! ವಾಸ್ತವವಾಗಿ ಮೊದಲ ತಿಂಗಳಲ್ಲಿಯೇ ಗರ್ಭ ಧರಿಸಿರುವ ಬಗ್ಗೆ ಅನುಮಾನವಿರುತ್ತದೆ. ಇಂದು ಎರಡನೇ ತಿಂಗಳಲ್ಲಿಯೇ ಮನೆಯಲ್ಲಿಯೇ ಪರೀಕ್ಷಿಸಿಕೊಳ್ಳಬಹುದಾದ ಸಾಧನದ ಮೂಲಕ ಪರೀಕ್ಷಿಸಿ ಪ್ರಮಾಣಿಸಿಕೊಳ್ಳಬಹುದು. ಆದರೆ ಮೈತುಂಬಿಕೊಳ್ಳಲು ಪ್ರಾರಂಭವಾಗುವುದು ಮೂರನೆಯ ತಿಂಗಳ ಬಳಿಕವೇ.

ಇಂದಿನ ದಿನಗಳಲ್ಲಿ ಯುವತಿಯರು ತಮ್ಮ ಮೈಕಟ್ಟು ಮತ್ತು ಅಂಗಸೌಷ್ಠವವನ್ನು ಯಥಾವತ್ತಾಗಿ ಉಳಿಸಿಕೊಳ್ಳುವತ್ತ ಒಲವು ತೋರುತ್ತಿದ್ದಾರೆ. ಗರ್ಭಿಣಿಯಾದ ಬಳಿಕ ದೇಹ ಒಡಲೊಳಗೆ ಬೆಳೆಯುತ್ತಿರುವ ಕಂದನಿಗಾಗಿ ಹಲವು ಮಾರ್ಪಾಡುಗಳನ್ನು ಮಾಡುತ್ತದೆ. ಹಲವಾರು ಹಾರ್ಮೋನುಗಳು ಸ್ರವಿಸಿ ಈ ಕಾರ್ಯಕ್ಕೆ ನೆರವಾಗುತ್ತದೆ.

ಪರಿಣಾಮವಾಗಿ ಹೊಟ್ಟೆಯೊಂದಿಗೇ ದೇಹದ ಇನ್ನಿತರ ಭಾಗಗಳೂ ಸ್ಥೂಲವಾಗುತ್ತಾ ಹೋಗುತ್ತವೆ. ಮೂರನೆಯ ತಿಂಗಳ ಬಳಿಕ ಹುಳಿ ತಿನ್ನುವ ಬಯಕೆಯಿಂದಾಗಿ (ಅದನ್ನು ಪೂರೈಸಲು ಮನೆಯವರೆಲ್ಲರೂ ಟೊಂಕಕಟ್ಟಿ ನಿಲ್ಲುವ ಕಾರಣ) ಅಗತ್ಯವಾದುಕ್ಕಿಂತಲೂ ಹೆಚ್ಚು ಆಹಾರ, ಮತ್ತು ಕೊಬ್ಬು ದೇಹಕ್ಕೆ ಸೇರ್ಪಡೆಯಾಗಿ ಸ್ಥೂಲಕಾಯ ಮತ್ತು ತೂಕ ಹೆಚ್ಚುತ್ತಾ ಹೋಗುತ್ತದೆ. ಈ ಹೆಚ್ಚಳ ಅತ್ಯಂತ ಸ್ವಾಭಾವಿಕವಾಗಿದೆ.

ಆದರೆ ಇದಕ್ಕೆ ವಿರುದ್ಧವಾಗಿ ನಿಮ್ಮ ತೂಕವನ್ನು ಇದ್ದಷ್ಟೇ ಇರಿಸಿಕೊಳ್ಳಲು ಪ್ರಯತ್ನಿಸುವುದು ಅಥವಾ ಇನ್ನಷ್ಟು ಇಳಿಸಿಕೊಳ್ಳಲು ವ್ಯಾಯಾಮ ಮಾಡುವುದು ಅಪಾಯಕರ! ನಿಮ್ಮ ಇಂದಿನ ತೂಕವನ್ನು ಪರಿಗಣಿಸಿ ಇನ್ನು ಎಷ್ಟು ತೂಕ ಹೆಚ್ಚಬಹುದೆಂಬುದನ್ನು ನಿಮ್ಮ ವೈದ್ಯರು ಸೂಕ್ತ ಪರೀಕ್ಷೆಗಳ ಬಳಿಕ ಸಲಹೆ ನೀಡಬಲ್ಲರು.

ಗರ್ಭಿಣಿಯರಿಗೆ ಇತರರಿಗಿಂತಲೂ ಹೆಚ್ಚಿನ ವಿಟಮಿನ್‌ಗಳು ಮತ್ತು ಪೋಷಕಾಂಶಗಳ ಅಗತ್ಯವಿದೆ. ಈ ಹೊತ್ತಿನಲ್ಲಿ ತೂಕ ಇಳಿಸಲೆಂದು ಊಟ ಕಡಿಮೆ ಮಾಡುವುದು, ಉತ್ತಮ ಪೌಷ್ಟಿಕ ಆಹಾರ ಸೇವಿಸದೇ ಇರುವುದು ಗರ್ಭಿಣಿಯ ಆರೋಗ್ಯದ ಮೇಲೂ ಬೆಳೆಯುತ್ತಿರುವ ಮಗುವಿನ ಆರೋಗ್ಯದ ಮೇಲೆಯೂ ಪರೋಕ್ಷ ಪರಿಣಾಮ ಬೀರಬಲ್ಲುದು. ಇತರರಲ್ಲಿ ಹೃದಯದಿಂದ ಕಳುಹಿಸಲ್ಪಡುವ ರಕ್ತದ ಸಿಂಹಪಾಲು ಮೆದುಳಿಗೆ ರವಾನೆಯಾಗುತ್ತದೆ. ಆದರೆ ಗರ್ಭಿಣಿಯರಿಗೆ ಮೆದುಳಿನ ಜೊತೆಗೇ ಗರ್ಭಕೋಶಕ್ಕೂ ಹೆಚ್ಚಿನ ರಕ್ತ ಪೂರೈಸಬೇಕಾಗುತ್ತದೆ. ಹೆರಿಗೆ ಸಮಯದಲ್ಲಿ ಮಲವಿಸರ್ಜನೆ: ಮುನ್ನೆಚ್ಚರಿಕೆ ಕ್ರಮಗಳೇನು?

ಇದೇ ಕಾರಣದಿಂದ ದೇಹಕ್ಕೆ ಹೆಚ್ಚಿನ ಪೌಷ್ಟಿಕ ಆಹಾರದ ಅಗತ್ಯವಿದೆ. ಒಂದು ವೇಳೆ ಈ ಪೂರೈಕೆಯಲ್ಲಿ ಕಡಿತವುಂಟಾದರೆ ಹೃದಯ ಅನಿವಾರ್ಯವಾಗಿ ಎರಡೂ ಕಡೆಗೆ ರಕ್ತಪೂರೈಕೆಯನ್ನು ಕಡಿಮೆಗೊಳಿಸಬೇಕಾಗಿ ಬರುತ್ತದೆ. (ವಿದ್ಯುತ್ ಕಡಿಮೆ ಲಭ್ಯವಾದರೆ ಲೋಡ್ ಶೆಡ್ಡಿಂಗ್ ಎಂದು ಕರೆಂಟು ತೆಗೆಯುವುದಿಲ್ಲವೇ ಹಾಗೇ). ಮೆದುಳಿಗೆ ರಕ್ತದ ಕೊರತೆಯಾದರೆ ಮೆದುಳಿನ ಕಾರ್ಯಕ್ಷಮತೆಯೇ ಕುಂದಬಹುದು.

ಜೊತೆಗೇ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯೂ ಬಾಧೆಗೊಳಗಾಗಬಹುದು (ಬುದ್ದಿಮಾಂದ್ಯತೆ, ಅಂಗವಿಕಲತೆ, ಅಪೂರ್ಣ ಬೆಳವಣಿಗೆ ಮೊದಲಾದವು). ಆದರೆ ಹಾಗೆಂದು ವ್ಯಾಯಾಮವೇ ಇಲ್ಲದೆ ಸುಮ್ಮನೇ ಸಿಕ್ಕಿದ್ದನ್ನು ತಿನ್ನುವುದರಿಂದಲೂ ಅಪಾಯವೇ. ಪೌಷ್ಟಿಕವೂ ಆದ, ತೂಕವನ್ನು ವೈದ್ಯರು ಸೂಚಿಸಿದಕ್ಕಿಂತ ಹೆಚ್ಚು ಮೀರದ, ಆರೋಗ್ಯವನ್ನೂ ಕಾಪಾಡಿಕೊಂಡು ಮಗುವಿನ ಉತ್ತಮ ಬೆಳವಣಿಗೆಯನ್ನೂ ಕಾಯ್ದುಕೊಳ್ಳುವ ಆಹಾರಕ್ರಮವನ್ನು ಇಲ್ಲಿ ಸೂಚಿಸಲಾಗಿದೆ. ಯಾವುದೇ ಕ್ರಮವನ್ನು ಕೈಗೊಳ್ಳುವ ಮುನ್ನ ನಿಮ್ಮ ಕುಟುಂಬ ವೈದ್ಯರ ಸಲಹೆ ಮೇರೆಗೇ ಮುನ್ನಡೆಯುವುದು ಸೂಕ್ತವಾಗಿದೆ.

ಆರೋಗ್ಯಕರ ಆಹಾರವನ್ನೇ ಸೇವಿಸಿ

Is it Safe to Lose Weight When Pregnant?

ನಿಮ್ಮ ತೂಕ ಹೆಚ್ಚು ಏರದ, ಆದರೆ ಎಲ್ಲಾ ರೀತಿಯ ಪೌಷ್ಟಿಕತೆಯನ್ನು ಹೊಂದಿರುವ ಆಹಾರಗಳನ್ನೇ ಸೇವಿಸಿ. ಒಂದು ವೇಳೆ ನಿಗದಿತ ತೂಕಕ್ಕಿಂತಲೂ ಕೊಂಚ ಹೆಚ್ಚಾದರೂ ಆತಂಕ ಬೇಡ. ತೂಕ ಕಳೆದುಕೊಳ್ಳಲಿಕ್ಕೆಂದು ಮಾರುಕಟ್ಟೆಯಲ್ಲಿ ಲಭ್ಯವಿರುವ 'ರಹಿತ' ಆಹಾರಗಳು, ಉದಾಹರಣೆಗೆ ಸಕ್ಕರೆರಹಿತ, ಕೊಬ್ಬುರಹಿತ ಮೊದಲಾದವು ನಿಮ್ಮ ಶರೀರಕ್ಕೆ ಸೂಕ್ತವಲ್ಲ. ಜೊತೆಗೇ ತೂಕ ಕಳೆದುಕೊಳ್ಳಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿದ್ಧ ಆಹಾರಗಳು (weight-loss supplements) ಸಹಾ ನಿಮ್ಮ ಆರೋಗ್ಯಕ್ಕೆ ಮಾರಕ. ಅತ್ಯಂತ ಅಗತ್ಯವಿದ್ದರೆ ನಿಮ್ಮ ವೈದ್ಯರೇ ಸೂಕ್ತವಾದ ಸಿದ್ಧ ಆಹಾರವನ್ನು ಸೇವಿಸಲು ಸಲಹೆ ನೀಡುತ್ತಾರೆ. ನಿಮ್ಮ ಸ್ವಂತ ನಿರ್ಧಾರದಿಂದ ಈ ಆಹಾರಗಳನ್ನೆಂದೂ ಸೇವಿಸದಿರಿ.

ತೂಕ ಏರಲಿ, ಆದರೆ ಆದಷ್ಟು ನಿಧಾನವಾಗಿ
ಗರ್ಭಿಣಿಯರಿಗೆ ವೈದ್ಯರು ಸಾಕಷ್ಟು ಪೌಷ್ಟಿಕ ಆಹಾರವನ್ನೇ ಸೇವಿಸಲು ಸಲಹೆ ನೀಡುತ್ತಾರೆ. ಇದರಿಂದ ತೂಕ ಏರುವುದು ಅನಿವಾರ್ಯವಾಗುತ್ತದೆ. ಈ ತೂಕ ಏರುವ ವೇಗವನ್ನು ನಿಯಂತ್ರಿಸುವುದು ಮಾತ್ರ ನಿಮ್ಮ ಕೈಯಲ್ಲಿದೆ. ವೈದ್ಯರು ಹೇಳಿದ್ದಾರೆ ಎಂದ ಮಾತ್ರಕ್ಕೇ ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದು ಮತ್ತು ಬಯಕೆಯಾದ ತಿಂಡಿ ತಿನಿಸುಗಳನ್ನೆಲ್ಲಾ ತಿನ್ನುತ್ತಾ ಹೋಗುವುದೂ ನಿಮ್ಮ ಆರೋಗ್ಯಕ್ಕೆ ಮಾರಕ. ಆದ್ದರಿಂದ ನಿಮ್ಮ ದಿನನಿತ್ಯದ ಆಹಾರದಲ್ಲಿ ಸಮತೋಲನವಿರಲಿ.

ಅಗತ್ಯವಿದ್ದಷ್ಟೇ ಪ್ರಮಾಣದಲ್ಲಿ ಸೇವಿಸಿ (ಹುಳಿತಿನ್ನುವ ಬಯಕೆ ಎಷ್ಟು ಪ್ರಬಲವಾಗಿದ್ದರೂ ಸಹಾ). ಆದ್ದರಿಂದ ನಿಮ್ಮ ವೈದ್ಯರು ಪ್ರತಿ ತಿಂಗಳೂ ನಿಮ್ಮ ತೂಕವನ್ನು ಅಳೆದು ಪರಿಶೀಲಿಸುತ್ತಾ ಇರುತ್ತಾರೆ. ಎದೆ ಹಾಲೆಂಬ ಅಮೃತದಲ್ಲಿದೆ ಅತ್ಯುನ್ನತ ಪೋಷಕಾಂಶಗಳು

ಪ್ರತಿ ತಿಂಗಳೂ ನೀವು ಪಡೆದ ತೂಕ ಹಾಗೂ ಬೆಳದ ಮಗುವಿನ ತೂಕವನ್ನು ಅವರು ಅಳೆದು ಸೂಕ್ತ ನಿರ್ದೇಶನಗಳನ್ನು ನೀಡಬಲ್ಲರು. ಅಮೇರಿಕಾದ ತಾಯಿ ಮತ್ತು ಮಗುವಿನ ಆರೋಗ್ಯದ ಕಾಳಜಿ ವಹಿಸಲೆಂದೇ 1938ರಲ್ಲಿ ಅಸ್ತಿತ್ವಕ್ಕೆ ಬಂದ The March of Dimes ಸಂಸ್ಥೆಯ ಪ್ರಕಾರ ಸಾಮಾನ್ಯ ಆರೋಗ್ಯದ ಗರ್ಭಿಣಿಯ ತೂಕ ಒಟ್ಟು ಒಂಭತ್ತು ತಿಂಗಳುಗಳಲ್ಲಿ 25 ರಿಂದ 35 ಪೌಂಡ್ (11.33 ರಿಂದ 15.87 ಕ.ಜಿ) ಹೆಚ್ಚಬಹುದು. ಆದರೆ ಗರ್ಭಿಣಿಯಾಗುವ ಮುನ್ನವೇ ಸ್ಥೂಲಕಾಯ ಹೊಂದಿರುವ ಮಹಿಳೆಯರು 11 ರಿಂದ 20 ಪೌಂಡ್ ( 5 ರಿಂದ 9 ಕೇಜಿ) ಮಾತ್ರ ಹೆಚ್ಚಬಹುದು. ಇದಕ್ಕಿಂತ ಹೆಚ್ಚಿನ ಸ್ಥೂಲಕಾಯವಿದ್ದರೆ ಅದು ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಗರ್ಭಾವಸ್ಥೆಯಲ್ಲಿ ರಕ್ತಸ್ರಾವ: ಮಗುವಿನ ಮೇಲೆ ಪರಿಣಾಮ ಬೀರಬಹುದೇ?

ಸಾಧ್ಯವಾದಷ್ಟು ನಡೆಯಿರಿ


ಗರ್ಭಿಣಿಯಾದ ಬಳಿಕ ನಿಮಗೆ ಅತ್ಯುತ್ತಮವಾದ ವ್ಯಾಯಾಮವೆಂದರೆ ನಡಿಗೆಯಾಗಿದೆ. ನಿಮ್ಮ ವೈದ್ಯರು ನಿಮ್ಮನ್ನು ಯಾವುದೋ ಪ್ರಬಲವಾದ ಕಾರಣಕ್ಕಾಗಿ ನಡೆಯಲೇ ಬೇಡಿ ಎಂದು ಸಲಹೆ ನೀಡಿದ ಹೊರತು ನಡಿಗೆ ನಿಮಗೆ ಅತ್ಯುತ್ತಮವಾಗಿದೆ. ಆದರೆ ಮೂರು ತಿಂಗಳಾಗುವ ಮುನ್ನ ಅಲ್ಪಸ್ವಲ್ಪ ಮಟ್ಟಿನ ನಡೆಗೆ ಸಾಕು. (ಜಿಗಿತ, ವೇಗವಾಗಿ ಮೆಟ್ಟಲಿಳಿಯುವುದು, ಸೈಕಲ್ ತುಳಿಯುವುದು ಮೊದಲಾದವುಗಳನ್ನು ಮಾಡಲೇ ಬಾರದು, ಇದರಿಂದ ಗರ್ಭಪಾತವಾಗುವ ಸಂಭವ ಹೆಚ್ಚಿರುತ್ತದೆ). ಮೂರು ತಿಂಗಳ ಬಳಿಕ ನಿಮ್ಮ ನಡಿಗೆಯನ್ನು ಹೆಚ್ಚಿಸುತ್ತಾ ಬರಬೇಕು. ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದನ್ನು ನಿಯಂತ್ರಿಸಲು ಟಿಪ್ಸ್

ದಿನದ ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ನಿಮಗೆ ಸಾಕೆನಿಸುವಷ್ಟು ನಡೆಯಿರಿ. ಆಯಾಸ ಎನಿಸಿದ ತಕ್ಷಣ ವಿಶ್ರಾಂತಿ ಪಡೆಯಿರಿ. ಎಂದಿಗೂ ಒಬ್ಬರೇ ಹೋಗಬೇಡಿ, ಜೊತೆಯಲ್ಲಿ ಆಪ್ತರೊಬ್ಬರಿರಲಿ. ಒಂದು ವೇಳೆ ಯಾರೂ ಸಿಗದೇ ಇದ್ದಲ್ಲಿ ಹೆಚ್ಚು ದೂರಕ್ಕೆಹೋಗದೇ ಹತ್ತಿರದ ಸ್ಥಳಕ್ಕೇ ನಾಲ್ಕೈದು ಬಾರಿ ಅತ್ತಿತ್ತ ಓಡಾಡಿ. ಗರ್ಭಿಣಿಯರಿಗೆ ಸೂಕ್ತವಾದ ವ್ಯಾಯಾಮ ಮತ್ತು ಯೋಗಾಭ್ಯಾಸಗಳನ್ನು ಪರಿಣಿತರ ನೆರವಿನೊಂದಿಗೆ ಮಾಡಬಹುದು. ಗೊತ್ತಿಲ್ಲದ ವ್ಯಾಯಾಮ ಮತ್ತು ಯೋಗಾಭ್ಯಾಸಗಳನ್ನು ಎಂದಿಗೂ ಒಂಟಿಯಾಗಿದ್ದಾಗ ಮಾಡಲು ಹೋಗಲೇಬೇಡಿ. ನೆನಪಿಡಿ, ನಿಮ್ಮ ಹೆಚ್ಚಿನ ತೂಕವನ್ನು ನಿಮ್ಮ ಹೆರಿಗೆಯ ಬಳಿಕವೂ ಇಳಿಸಿಕೊಳ್ಳಬಹುದು.

English summary

Is it Safe to Lose Weight When Pregnant?

The first and most important thing to remember when considering what is safe and reasonable regarding your body, weight, and pregnancy, is to ask your doctor. If you are considering weight loss while you are pregnant, so talking with your physician about your specific conditions and needs is crucial. have a look
X
Desktop Bottom Promotion