For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಜೋಕೆ, ಗ್ರೀನ್ ಟೀ ವಿಷಯದಲ್ಲಿ ಎಚ್ಚರ ತಪ್ಪದಿರಿ!

|

ಗ್ರೀನ್ ಟೀ ಅಥವಾ ಹಸಿರು ಚಹಾವನ್ನು ಸಾಮಾನ್ಯವಾದ ಟೀಗೆ ಹೋಲಿಸಿದರೆ, ಆರೋಗ್ಯಕರವೆಂದೇ ಭಾವಿಸಲಾಗುತ್ತದೆ. ತೂಕವನ್ನು ಕಳೆದುಕೊಳ್ಳಲು, ಹೃದ್ರೋಗದಿಂದ ಪಾರಾಗಲು, ಆರೋಗ್ಯಕರವಾದ ಕೇಶ ಮತ್ತು ತ್ವಚೆಯನ್ನುಗಳಿಸಲು ಗ್ರೀನ್ ಟೀ ಸಹಾಯಕ್ಕೆ ಬರುತ್ತದೆ.

ಆದರೂ ಗರ್ಭಿಣಿಯರು ಇದನ್ನು ಸೇವಿಸಬಹುದೇ ಎಂಬ ವಿಚಾರ ಬಂದಾಗ, ಅದು ಸ್ವಲ್ಪ ವಿವಾದಕ್ಕೆ ತಿರುಗುತ್ತದೆ. ಆದಾಗಿಯೂ ಈ ಗ್ರೀನ್ ಟೀಯನ್ನು ಸೇವಿಸುವುದರಿಂದ ಗರ್ಭಿಣಿಯರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು, ಹಾಗಾಗಿ ಇಂತಹ ವಿಚಾರವನ್ನು ಮಾತ್ರ ಗರ್ಭಿಣಿಯರು ಉದಾಸೀನ ಮಾಡಬಾರದು, ಗ್ರೀನ್ ಟೀಯಲ್ಲೂ ಸಹ ನಿರ್ದಿಷ್ಟ ಪ್ರಮಾಣದ ಕೆಫಿನ್ ಇರುತ್ತದೆ. ಗರ್ಭಿಣಿಯರು ಗ್ರೀನ್ ಟೀ ಕುಡಿಯಬಾರದೆನ್ನಲು 3 ಕಾರಣಗಳು ಇಲ್ಲಿವೆ ಓದಿ:

Is it safe to drink green tea during pregnancy?

ಫೋಲಿಕ್ ಆಮ್ಲದ ಹೀರುವಿಕೆಯನ್ನು ತಡೆಯುತ್ತದೆ
ಗರ್ಭಿಣಿಯರಿಗೆ ಫೋಲಿಕ್ ಆಮ್ಲವು ತುಂಬಾ ಮುಖ್ಯವಾಗಿ ಬೇಕಾಗುತ್ತದೆ. ಅದರಲ್ಲಿಯೂ ಇದು ಮಗುವಿನ ನರಗಳಲ್ಲಿರುವ ನ್ಯೂನತೆಗಳನ್ನು ನಿವಾರಿಸಲು ತೀರಾ ಅಗತ್ಯವಾಗಿ ಬೇಕಾಗುತ್ತದೆ. ಇದರ ಕೊರತೆಯ ಕಾರಣದಿಂದ ಸ್ಪೈನ ಬಿಫಿಡ ಎಂಬ ಸಮಸ್ಯೆ ಮಗುವಿನಲ್ಲಿ ಕಂಡು ಬರುತ್ತದೆ...
ಇದು ನರವ್ಯೂಹದ ಸಮಸ್ಯೆಯಾಗಿದ್ದು, ಮಗುವಿಗೆ ತೀವ್ರ ಪ್ರಮಾಣದಲ್ಲಿ ತೊಂದರೆ ಕೊಡುತ್ತದೆ. ಫೋಲಿಕ್ ಆಮ್ಲವನ್ನು ಸೇವಿಸುವುದರಿಂದ ಅಂದರೆ ವಿಶೇಷವಾಗಿ ಮೊದಲ 12 ವಾರದಲ್ಲಿ ಇದನ್ನು ಸೇವಿಸುವುದರಿಂದ ಗರ್ಭಿಣಿಯರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಗ್ರೀನ್ ಟೀಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಈ ಫೋಲಿಕ್ ಆಮ್ಲವನ್ನು ದೇಹ ಹೀರಿಕೊಳ್ಳುವುದರಲ್ಲಿ ವ್ಯತ್ಯಯವುಂಟಾಗುತ್ತದೆ. ಗರ್ಭಿಣಿ ಸ್ತ್ರೀಯರ ಆಹಾರ ಸೇವನೆ ಹೇಗಿರಬೇಕು?

ಕಬ್ಬಿಣಾಂಶವನ್ನು ಹೀರಿಕೊಳ್ಳಲು ತೊಂದರೆಯಾಗುತ್ತದೆ
ಗ್ರೀನ್ ಟೀಯನ್ನು ನಿಯಮಿತವಾಗಿ ಅಥವಾ ದಿನ ನಿತ್ಯ ಸೇವಿಸುವುದರಿಂದ, ಅದು ನಿಮ್ಮ ರಕ್ತ ಕೋಶಗಳಲ್ಲಿರುವ ಕಬ್ಬಿಣಾಂಶವನ್ನು ಸಹ ಹೀರಿಕೊಳ್ಳಲು ಆರಂಭಿಸುತ್ತದೆ. ಈ ಕಬ್ಬಿಣಾಂಶವು ಹಿಮೋಗ್ಲೋಬಿನ್ ಉತ್ಪಾದನೆಗೆ ಅತ್ಯಾವಶ್ಯಕವಾಗಿ ಬೇಕಾಗಿರುತ್ತದೆ. ಇದರಿಂದಾಗಿ ತಾಯಿಗೆ ಅನಿಮಿಯಾ ಸಮಸ್ಯೆ ಬಂದೊದುಗುತ್ತದೆ. ಇದು ಹೊಕ್ಕುಳ ಬಳ್ಳಿಯ ಮೂಲಕ ಆಮ್ಲಜನಕ ಮತ್ತು ಪೋಷಕಾಂಶಗಳ ಸಾಗುವುದನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯರಲ್ಲಿ ಹುಳಿ ತಿನ್ನುವ ಬಯಕೆ; ಏನಿದರ ರಹಸ್ಯ?

ಗರ್ಭಿಣಿಯರ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ
ಗರ್ಭಿಣಿಯಾಗಿರುವಾಗ ಜೀರ್ಣ ಶಕ್ತಿಯು ಅಧಿಕ ಪ್ರಮಾಣದಲ್ಲಿರುತ್ತದೆ. ಇದಕ್ಕೆ ಈ ಅವಧಿಯಲ್ಲಿ ಕಂಡು ಬರುವ ಹಾರ್ಮೋನುಗಳ ಬದಲಾವಣೆಯೇ ಕಾರಣ. ಗ್ರೀನ್ ಟೀಯನ್ನು ಅಧಿಕವಾಗಿ ಸೇವಿಸುವುದರಿಂದ ಜೀರ್ಣ ಶಕ್ತಿ ಮತ್ತಷ್ಟು ಹೆಚ್ಚಾಗುತ್ತದೆ. ಇದು ತಾಯಿ ಮತ್ತು ಮಗುವಿನ ದೈಹಿಕ ಬೆಳವಣಿಗೆಗೆ ಅಷ್ಟೇನು ಒಳ್ಳೆಯದಲ್ಲ. ಹೀಗಿದ್ದರು ನೀವು ಗ್ರೀನ್ ಟೀಯನ್ನು ಸೇವಿಸಬೇಕು ಎಂದುಕೊಂಡಲ್ಲಿ, ಯಾವುದೇ ಕಾರಣಕ್ಕು ಎರಡು ಲೋಟಕ್ಕಿಂತ ಹೆಚ್ಚು ಸೇವಿಸಲು ಹೋಗಬೇಡಿ.

English summary

Is it safe to drink green tea during pregnancy?

Green tea is usually thought to be healthy as compared to regular tea and other popular brews. It is known to aid weight loss, protect from heart diseases, promote healthy hair and skin and the list is endless. Here is why too much green tea can be dangerous for you
X
Desktop Bottom Promotion