For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ ನಿದ್ದೆ ಏಕೆ ಅತ್ಯವಶ್ಯಕ?

|

ಮಾನವನ ದೇಹ ಮತ್ತು ಮೆದುಳಿನ ಸಮರ್ಪಕ ಕಾರ್ಯ ನಿರ್ವಹಣೆಗೆ ನಿದ್ದೆ ತೀರಾ ಅತ್ಯಗತ್ಯ. ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗಂತು, ಇದು ತೀರಾ ತೀರಾ ಅತ್ಯಗತ್ಯ. ಗರ್ಭಿಣಿಯರಲ್ಲಿ ನಿದ್ದೆ ಬರುವುದು ತುಂಬಾ ಕಷ್ಟ. ಬ್ಯಾಸ್ಕೆಟ್ ಬಾಲ್‍ನಂತೆ ಊದಿಕೊಳ್ಳುವ ಹೊಟ್ಟೆ, ಅಜೀರ್ಣ, ಎದೆ ಉರಿ ಇತ್ಯಾದಿ ಸಮಸ್ಯೆಗಳು ಅವರನ್ನು ನಿದ್ದೆಯಿಂದ ದೂರ ಮಾಡುತ್ತವೆ. ಇದೆಲ್ಲಕ್ಕಿಂತ ಮಿಗಿಲಾಗಿ ಈ ಅವಧಿಯಲ್ಲಿ ಅವರಿಗೆ ಇನ್ಸೋಮ್ನಿಯಾ ಕಾಡುತ್ತದೆ.

ಅದು ನಿದ್ದೆಯ ಚಕ್ರವನ್ನೆ ಏರು ಪೇರು ಮಾಡಿಬಿಡುತ್ತದೆ. ಮೊದಲ ಮೂರು ತಿಂಗಳು ಕಾಣಿಸಿಕೊಳ್ಳುವ ನಾಸಿಯಾ. ಮುಂದಿನ ಆರು ತಿಂಗಳು ಕಾಣಿಸಿಕೊಳ್ಳುವ ನಿಯಮಿತ ಮೂತ್ರ ವಿಸರ್ಜನೆಯ ಸಮಸ್ಯೆಯು ಅವರನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಆದರೆ ಇದನ್ನು ಮಹಿಳೆಯರು ಹಗುರವಾಗಿ ತೆಗೆದುಕೊಳ್ಳುವ ಬದಲು ವೈದ್ಯರನ್ನು ಕಂಡು ಅಗತ್ಯ ಸಲಹೆ ಪಡೆಯುವುದು ಉತ್ತಮ. ಸರಿಯಾದ ಭಂಗಿಯಲ್ಲಿ ನಿದ್ದೆ ಮಾಡಲು ಮಲಗಿದರೆ ನಿದ್ದೆ ಬರುತ್ತದೆ. ನಿದ್ದೆ ಮಾಡದಿದ್ದರೆ ಎದುರಾಗುವ ಸಮಸ್ಯೆಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದು: ಜ್ವರ ಬಂದಾಗ ಎದೆಹಾಲೆಂಬ ಅಮೃತ ಕೂಡ ವಿಷವಾಗುವುದೇ?

1.ಮಗುವಿನ ತೂಕದಲ್ಲಿ ಗಣನೀಯ ಇಳಿಮುಖವಾಗುತ್ತದೆ
2.ಅವಧಿ ಪೂರ್ವ ಹೆರಿಗೆ ನೋವು ಬರುತ್ತದೆ
3.ಪೋಸ್ಟ್ ಪರ್ಟಮ್ ಅಥವಾ ಪ್ರಿ ಪಾರ್ಟಮ್ ಖಿನ್ನತೆ (ಹೆರಿಗೆಯ ಹಿಂದೆ ಕಾಣಿಸಿಕೊಳ್ಳುತ್ತದೆ)
4.ರೋಗ ನಿರೋಧಕ ಶಕ್ತಿ ಕ್ಷೀಣಿಸುವಿಕೆ
5.ಸೈಟೊಕಿನ್‌ಗಳ ಮಟ್ಟದಲ್ಲಿ ಶೀಘ್ರ ಏರಿಕೆ

ನಮ್ಮ ಅಂಕಣ ಗಮನಹರಿಸಲು ಹೋಗುತ್ತಿರುವುದು ಗರ್ಭಿಣಿಯರು ನಿದ್ದೆ ಮಾಡುವುದರಿಂದ ಆಗುವ ಪ್ರಯೋಜನಗಳ ಕುರಿತು. ಏಕೆಂದರೆ ಗರ್ಭಿಣಿಯರು ನಿದ್ದೆ ಮಾಡುವುದರಲ್ಲಿ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಅವರು ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಮೂತ್ರ ವಿಸರ್ಜನೆಯ ಸಮಸ್ಯೆ

Importance Of Sleep During Pregnancy

ಮಲಗುವ ಎರಡು ಅಥವಾ ಮೂರು ಗಂಟೆಗಳ ಮುನ್ನ ದ್ರವ ರೂಪದ ಆಹಾರಗಳನ್ನು ಸೇವಿಸಲು ಹೋಗಬೇಡಿ. ಜೊತೆಗೆ ಮಲಗುವ ಮೊದಲು ಶೌಚಾಲಯಕ್ಕೆ ಹೋಗಿ ಬಂದು ಮಲಗುವುದರಿಂದ ಸ್ವಲ್ಪ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಪರೀಕ್ಷೆಯಲ್ಲಿ ನಿಮ್ಮ ಮಕ್ಕಳು ಟಾಪ್ ಸ್ಕೋರರ್ ಎನಿಸಿಕೊಳ್ಳಬೇಕೇ?

ಎದೆ ಉರಿ


ಎದೆ ಉರಿಯನ್ನು ನಿವಾರಿಸಿಕೊಳ್ಳುವುದರಿಂದ ನಿದ್ದೆಯನ್ನು ಚೆನ್ನಾಗಿ ಮಾಡಬಹುದು. ಅದಕ್ಕಾಗಿ ಭಾರೀ ಎನಿಸುವಂತಹ, ಜೀರ್ಣ ಮಾಡಿಕೊಳ್ಳಲು ಕಷ್ಟವಾಗುವಂತಹ ಆಹಾರವನ್ನು ಸೇವಿಸಬೇಡಿ. ಅರ್ಧ ನೀರು ಮತ್ತು ಅರ್ಧ ಹಾಲು ಬೆರೆಸಿಕೊಂಡು ತಣ್ಣಗೆ ಮಾಡಿಕೊಂಡು ಸೇವಿಸುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಅಸೌಖ್ಯ


ನೀವು ಎಡಗಡೆಯೇ ಮಲಗಬೇಕು ಎಂಬುದು ಕಡ್ಡಾಯವಲ್ಲ! ನಿಮಗೆ ಇಷ್ಟಬರುವ ಭಂಗಿಯನ್ನು ಆಯ್ಕೆ ಮಾಡಿಕೊಳ್ಳಿ. ಒಂದೆರಡು ಹೆಚ್ಚಿನ ತಲೆದಿಂಬುಗಳು ನಿಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡಬಹುದು.

ತಲೆ ನೋವು


ನಿಮ್ಮ ತಲೆಯ ಬಿಸಿಯನ್ನು ತಣ್ಣಗೆ ಮಾಡಲು ಒಂದು ಹೆಡ್ ಮಸಾಜ್ ಮಾಡಿಕೊಳ್ಳಿ ಅಥವಾ ಒಂದು ತಣ್ಣಗಿನ ಟವೆಲನ್ನು ಸುತ್ತಿಕೊಳ್ಳಿ. ಇದು ಹೈಪರ್‌ಆಕ್ಟಿವ್ ಹಾರ್ಮೋನುಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಜೊತೆಗೆ ನಿಮಗೆ ಚೆನ್ನಾಗಿ ನಿದ್ದೆ ಬರುವಂತೆ ಮಾಡುತ್ತದೆ. ಸಿಸೇರಿಯನ್ ನಂತರ ಅಪ್ಪಿತಪ್ಪಿಯೂ ಹೊಟ್ಟೆಯ ಬೊಜ್ಜನ್ನು ಕರಗಿಸಬೇಡಿ!

ಸ್ತನಗಳ ನೋವು
ಎಸ್ಟ್ರೊಜೆನ್ ಮತ್ತು HCG ಮಟ್ಟಗಳ ಕಾರಣದಿಂದ ಸ್ತನಗಳು ನೋಯಲು ಆರಂಭಿಸುತ್ತವೆ. ಇದರಿಂದ ನಿದ್ದೆಯು ನಿಮಗೆ ಬಾರದೆ ಹೋಗುತ್ತದೆ. ಅದಕ್ಕಾಗಿ ನಿಮ್ಮ ಕಾಲಿನ ಕೆಳಗೆ ಒಂದು ದಿಂಬನ್ನು ಇರಿಸಿಕೊಳ್ಳಿ ಮತ್ತು ನಿಮ್ಮ ಸ್ತನಗಳಿಗೆ ಒಂದು ಸಣ್ಣ ಮಸಾಜನ್ನು ನೀಡಿ. ನಿದ್ದೆ ಬರಲು ಇದರಿಂದ ಅನುಕೂಲವಾಗುತ್ತದೆ.

English summary

Importance Of Sleep During Pregnancy

Sleep is highly essential for the proper functioning of human body and mind, especially if a woman is pregnant, the need for sleep increases all the more. Sleeping during pregnancy is a huge problem as it is, with the basketball tummy and other pregnancies problems such as indigestion, heartburn, etc.
Story first published: Saturday, March 7, 2015, 11:56 [IST]
X
Desktop Bottom Promotion