For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಹುಷಾರು! ಭಾರ ಎತ್ತುವ ಕೆಲಸದಿಂದ ದೂರವಿರಿ

By Deepak
|

ಮದುವೆಯಾದ ಪ್ರತಿಯೊಬ್ಬ ಗಂಡು-ಹೆಣ್ಣಿಗೂ ತಾವು ಒಂದು ಮಗುವಿಗೆ ಜನ್ಮ ನೀಡಬೇಕೆಂಬ ಆಸೆ ಮತ್ತು ಉದ್ದೇಶ ಇದ್ದೇ ಇರುತ್ತದೆ. ಮೊದಲೆಲ್ಲಾ ಹತ್ತು ಮಕ್ಕಳನ್ನು ಹೆತ್ತು ವಂಶವನ್ನು ಬೆಳೆಸಿ ಎಂದು ಹೇಳುತ್ತಿದ್ದರು.

ನಂತರ ಆರತಿಗೆ ಒಬ್ಬ ಮಗಳು ಕೀರ್ತಿಗೆ ಒಬ್ಬ ಮಗ ಸಾಕು ಎಂದರು. ಈಗ ಮನೆಗೆ ಒಂದು ಮಗು ದೇಶಕ್ಕೆ ನಗು ಎನ್ನುತ್ತಿದ್ದಾರೆ. ಆದರೆ ಪರಿಸ್ಥಿತಿಯೇ ಬೇರೆ ಇದೆ. ಆ ಒಂದು ಮಗುವನ್ನು ಸಹ ಹೆರುವುದು ನಿಲುಕದ ನಕ್ಷತ್ರವನ್ನು ತಾಕಿದ ಅನುಭವ ಈಗಿನ ಕಾಲದ ದಂಪತಿಗಳಿಗೆ ಆಗುತ್ತಿದೆ. ಕಾರಣವೇನು ಎಂದು ಹುಡುಕುತ್ತಾ ಹೊರಟರೆ ಬೆಚ್ಚಿಬೀಳಿಸುವಂತಹ ಮಾಹಿತಿಗಳು ದೊರೆಯುತ್ತಿವೆ.

ದಿನದಿಂದ ದಿನಕ್ಕೆ ಏರುತ್ತಿರುವ ಜೀವನ ವೆಚ್ಚ, ಗಂಡ ಹೆಂಡತಿ ಇಬ್ಬರೂ ದುಡಿಯಲೇ ಬೇಕಾದ ಒತ್ತಡ, ಕೆಲಸಕ್ಕೆ ಹೋದರೆ ಅಲ್ಲಿಯೂ ಮಾನಸಿಕ ಒತ್ತಡದ ಜೊತೆಗೆ ದೈಹಿಕ ಹೊರೆ ಸಹ ಹೆಂಗಸರನ್ನು ಹಣ್ಣು ಗಾಯಿ ನೀರು ಗಾಯಿ ಮಾಡುತ್ತಿದೆ. ಹೀಗೆ ಕೆಲಸಕ್ಕೆ ಹೋಗಿ ಅದರಿಂದ ಅಡ್ಡಪರಿಣಾಮಗಳಾಗಿ ಮಕ್ಕಳನ್ನು ಪಡೆಯುವ ಭಾಗ್ಯದಿಂದ ಹೆಂಗಸರು ದೂರವಾಗುತ್ತಿದ್ದಾರೆ ಎಂಬ ಅಂಶವು ಭಯವನ್ನುಂಟು ಮಾಡಿದರು ಸಹ ಸತ್ಯ ಎಂದು ಅಧ್ಯಯನಗಳು ಹೇಳುತ್ತಿವೆ. ಇದು ನಿಜವೇ?

How Women Who Lift Weight May Struggle To Get Pregnant

ಹೌದು, ಕೆಲಸಕ್ಕೆ ಹೋಗುವ ಮಹಿಳೆಯರು ಇತ್ತೀಚೆಗೆ ಗರ್ಭಿಣಿಯರಾಗಲು ಕಷ್ಟಪಡುತ್ತಾ ಇದ್ದಾರೆ. ಇದಕ್ಕೆ ಪ್ರಮುಖ ಕಾರಣ ದೀರ್ಘಕಾಲ ಕೆಲಸದಲ್ಲಿ ತೊಡಗಿಕೊಳ್ಳುವುದು ಎಂದು ತಿಳಿದುಬಂದಿದೆ. ಜೊತೆಗೆ ಕೆಲಸದ ಅವಧಿಯಲ್ಲಿ ಅವರು ಅನುಭವಿಸುವ ಒತ್ತಡವು ಸಹ ಇದಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ. ಇದಲ್ಲದೆ ಕೆಲವು ಕೆಲಸಗಳಲ್ಲಿ ಅಧಿಕ ಭಾರವನ್ನು ಸಹ ಹೆಂಗಸರು ಎತ್ತಬೇಕಾಗುತ್ತದೆ. ಹೀಗೆ ಅಧಿಕ ಭಾರ ಎತ್ತುವ ಹೆಂಗಸರಲ್ಲಿ ಗರ್ಭ ಧರಿಸುವ ಸಾಧ್ಯತೆ ಕಡಿಮೆಯಾಗಿರುತ್ತದೆ. ಅದು ಏಕೆ? ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೇ ಈ ಲೇಖನ.

ಸಾಮಾನ್ಯವಾಗಿ ಆರೋಗ್ಯವಂತ ದಂಪತಿಗಳು, ಮೂರರಿಂದ ಆರು ವಾರಗಳ ನಡುವೆ ಗರ್ಭಧರಿಸುವಂತಹ ಸಾಮರ್ಥ್ಯವನ್ನು ಪಡೆದಿರುತ್ತಾರೆ. ಆದರೆ ಗರ್ಭಧರಿಸುವ ಸಾಧ್ಯತೆ ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆಯಾಗಿರುತ್ತದೆ. ಅದು ಅವರ ಆರೋಗ್ಯ, ಜೀವನ ಶೈಲಿ, ಹವ್ಯಾಸ, ಔಷಧ ತೆಗೆದುಕೊಳ್ಳುತ್ತಿರುವ ಸ್ಥಿತಿ, ವಯಸ್ಸು ಮತ್ತು ಆಹಾರದ ಅಭ್ಯಾಸಗಳ ಮೇಲೆ ಅವಲಂಬಿಸಿರುತ್ತದೆ.

ಗರ್ಭಧರಿಸಬೇಕು ಎಂದು ಬಯಸುವ ದಂಪತಿಗಳು ಪ್ರತಿನಿತ್ಯ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಉತ್ತಮ. ಸಾಧ್ಯವಿಲ್ಲದಿದ್ದಲ್ಲಿ, ವಾರಕ್ಕೆ ಎರಡು ಬಾರಿಯಾದರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ವಿಶೇಷವಾಗಿ ಗರ್ಭಧರಿಸಬೇಕೆಂದು ಬಯಸುವ ಮಹಿಳೆಯು ಒತ್ತಡವನ್ನು ನಿಯಂತ್ರಿಸಿಕೊಳ್ಳಬೇಕು, ಧೂಮಪಾನ ಮತ್ತು ಮಧ್ಯಪಾನದಿಂದ ದೂರ ಇರಬೇಕು.

ವಾರದಲ್ಲಿ 40 ಗಂಟೆಗಳಿಗು ಅಧಿಕ ಕಾಲ ಕೆಲಸ ಮಾಡುವ ಹೆಂಗಸರಲ್ಲಿ ಬಂಜೆತನ ಕಂಡು ಬರುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ. ಇದರ ಜೊತೆಗೆ ಅಧಿಕ ಭಾರವನ್ನು ಎತ್ತುವ ಮಹಿಳೆಯರಲ್ಲಿಯೂ ಸಹ ಗರ್ಭಿಣಿಯರಾಗುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಅಧ್ಯಯನಕಾರರು ಹೇಳುತ್ತಾರೆ. ಭಾರ ಎತ್ತುವ ಮಹಿಳೆಯರಲ್ಲಿ ಏಕೆ ಗರ್ಭ ಧರಿಸುವ ಸಮಸ್ಯೆಗಳು ಕಂಡು ಬರುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿಯದಿರುವ ಅಂಶವೇನೆಂದರೆ, 40 ಗಂಟೆಗಳಿಗು ಕಡಿಮೆ ಅವಧಿ ಕೆಲಸ ಮಾಡುವ ಮತ್ತು ಕಡಿಮೆ ಭಾರವನ್ನು ಎತ್ತುವ ಮಹಿಳೆಯರಲ್ಲಿ ದೀರ್ಘಾವಧಿ ಕೆಲಸ ಮಾಡುವ ಮತ್ತು ಅಧಿಕ ಭಾರ ಎತ್ತುವ ಮಹಿಳೆಯರಿಗಿಂಗ ಗರ್ಭ ಧರಿಸುವ ಸಾಧ್ಯತೆ 20% ರಷ್ಟು ಅಧಿಕವಾಗಿರುತ್ತದೆಯಂತೆ. ಈ ಅಂಕಣದಲ್ಲಿ ನಾವು ಅಧಿಕ ಭಾರ ಎತ್ತುವಿಕೆಯು ಹೇಗೆ ಗರ್ಭಧರಿಸುವಿಕೆಯ ಮೇಲೆ ದುಷ್ಟರಿಣಾಮವನ್ನು ಬೀರುತ್ತದೆ ಎಂಬುದನ್ನು ವಿವರಿಸಿದ್ದೇವೆ. ಮುಂದೆ ಓದಿ...

ಆಯಾಸ
ಅಧಿಕ ಭಾರ ಎತ್ತುವಿಕೆಯು ಮಹಿಳೆಯರಲ್ಲಿ ಆಯಾಸವನ್ನು ತರುತ್ತದೆ. ಸುಸ್ತಾಗುವ ಮಹಿಳೆಯರು ಯಾವುದೇ ರೀತಿಯ ದೈಹಿಕ ಮತ್ತು ಮಾನಸಿಕ ಕಾರ್ಯವನ್ನು ಸಹ ಮಾಡಲಾರದಷ್ಟು ನಿತ್ರಾಣಗೊಳ್ಳುತ್ತಾರೆ. ಈ ಆಯಾಸವು ಗರ್ಭಧರಿಸುವಿಕೆಗೆ ಮಾರಕವಾಗುತ್ತದೆ.

ಲೈಂಗಿಕ ಕ್ರಿಯೆಯ ಕೊರತೆ
ಮತ್ತೊಂದು ಸರಳ ವಿವರಣೆ ಎಂದರೆ, ಅಧಿಕ ಭಾರ ಎತ್ತುವ ಮಹಿಳೆಯರು ಕೆಲಸ ಮಾಡಿ ಮಾಡಿ ಸುಸ್ತಾಗಿರುತ್ತಾರೆ. ಆಗ ಅವರ ಬಳಿ ಲೈಂಗಿಕ ಕ್ರಿಯೆ ನಡೆಸುವಷ್ಟು ಶಕ್ತಿ ಸಹ ಇರುವುದಿಲ್ಲ. ಕಡಿಮೆ ಲೈಂಗಿಕ ಕ್ರಿಯೆ ನಡೆಸುವ ದಂಪತಿಗಳು ಗರ್ಭಧರಿಸುವ ಸಾಮರ್ಥ್ಯ ಕಡಿಮೆ ಇರುತ್ತದೆ ಎಂದು ಒಹಿಯೊ ವಿಶ್ವ ವಿದ್ಯಾನಿಲಯದ ಅಧ್ಯಯನಗಳು ಅಭಿಪ್ರಾಯಪಟ್ಟಿವೆ.

ದಣಿವು
ಅಧಿಕ ಭಾರ ಎತ್ತುವ ಮಹಿಳೆಯರು ತಮ್ಮ ಬೆನ್ನು ಮತ್ತು ಸೊಂಟಕ್ಕೆ ಅಧಿಕ ದಣಿವನ್ನು ನೀಡುತ್ತಾರೆ. ಇದರಿಂದ ಗರ್ಭಾಶಯವು ಯೋನಿಯವರೆಗೆ ಜಾರುವ ಸಾಧ್ಯತೆ ಇರುತ್ತದೆ. 11 ಕಿ.ಗ್ರಾಂಗಿಂತ ಅಧಿಕ ಭಾರ ಇರುವ ವಸ್ತುಗಳನ್ನು ದಿನಕ್ಕೆ 10 ಬಾರಿಗಿಂತ ಹೆಚ್ಚುಸಲ ಎತ್ತಿರ್ದರೆ ಗರ್ಭಾಶಯದ ನೋವು ಕಾಣಿಸಿಕೊಳ್ಳುತ್ತದೆ. ಇದು ಸಹ ಗರ್ಭಧರಿಸಲು ಇರುವ ಮತ್ತೊಂದು ಕಂಟಕವಾಗಿರುತ್ತದೆ.

ಸಮತೋಲನದ ಸಮಸ್ಯೆ
ಅಧಿಕ ಭಾರವನ್ನು ಎತ್ತುವಾಗ, ಮಹಿಳೆಯರು ಸಮತೋಲನವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಅವರು ಜಾರಿ ಬೀಳುವ ಸಾಧ್ಯತೆ ಇರುತ್ತದೆ. ಇದು ಸಹ ಅವರನ್ನು ಗರ್ಭಧರಿಸದಂತೆ ತಡೆಯುತ್ತದೆ. ಕೆಲವೊಂದು ಸಂದರ್ಭಗಳು ಇರುತ್ತವೆ. ಆಗ ನಾವು ಅಧಿಕ ಭಾರವನ್ನು ಎತ್ತುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಆಗ ಆ ಭಾರ ಎತ್ತುವ ಕ್ರಿಯೆಯನ್ನು ಸುರಕ್ಷಿತವಾಗಿ ಮಾಡಿ ಎಂಬುದು ನಮ್ಮ ಸಲಹೆ. ಇಂತಹ ಸಂದರ್ಭದಲ್ಲಿ ಹೈ ಹೀಲ್ ಚಪ್ಪಲಿಗಳು ಅಥವಾ ಜಾರುವಂತಹ ಶೂಗಳನ್ನು ಹಾಕಿಕೊಳ್ಳಬೇಡಿ. ನೀವು ಒಂದು ಮಗುವನ್ನು ಎತ್ತಬೇಕಾದಲ್ಲಿ, ಆ ಮಕ್ಕಳನ್ನು ಸೋಫಾ ಅಥವಾ ಕುರ್ಚಿಯ ಮೇಲೆ ನಿಲ್ಲಿಸಿ ಎತ್ತಿಕೊಳ್ಳಲು ಪ್ರಯತ್ನಿಸಿ.

ಹೀಗೆ ಮಾಡುವುದರಿಂದ ನಿಮ್ಮ ಬೆನ್ನು ಮತ್ತು ಸೊಂಟಕ್ಕೆ ನೋವಾಗುವುದನ್ನು ತಡೆಯಬಹುದು. ಅಧಿಕ ಭಾರವನ್ನು ಯಾವಾಗಲೂ ಎರಡೂ ಕೈಗಳಿಂದ ಎತ್ತುವ ಅಭ್ಯಾಸವನ್ನು ಇರಿಸಿಕೊಳ್ಳಿ. ಒಂದೇ ಕೈಯಲ್ಲಿ ಎತ್ತುವ ಪರಿಪಾಠವನ್ನು ಆದಷ್ಟು ನಿಯಂತ್ರಿಸಿ, ಇಲ್ಲವೇ ಬೇಡವೇ ಬೇಡ. ಶಾಪಿಂಗ್ ಮಾಡುವುದು ಯಾವಾಗಲೂ ಆಸಕ್ತಿಕರವಾಗಿರುತ್ತದೆ, ಹಾಗೆಂದು ಎಲ್ಲಾ ಬ್ಯಾಗ್‌ಗಳನ್ನು ಒಂದೇ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಡಿ.

ಈ ಸಲಹೆಯನ್ನು ಸಹ ಗಂಭೀರವಾಗಿ ಪರಿಗಣಿಸಿ. ಈ ವಿಚಾರವನ್ನು ಗಮನವಿಟ್ಟು ಕೇಳಿ. ನೀವು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೊದಲು ಅಧಿಕ ಆಯಾಸವನ್ನುಂಟು ಮಾಡುವ ಕೆಲಸ ಮಾಡಬೇಡಿ. ನಿಮ್ಮ ಸಂಗಾತಿಯ ಜೊತೆಗೆ ಮನಃಪೂರ್ವಕವಾಗಿ ಉಲ್ಲಾಸದಿಂದ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಿ. ಆಗ ನಿಮ್ಮ ಗರ್ಭಧರಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ.

English summary

How Women Who Lift Weight May Struggle To Get Pregnant

Getting pregnant is becoming a challenge these days for working women. One main reason is the stress that they encounter due to long working hours. The other major reason is lifting heavy weights. Why women who lift weights may struggle to get pregnant?
X
Desktop Bottom Promotion