For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರೆಯ ಹಂಗೇಕೆ?

By Deepu
|

ಗರ್ಭಿಣಿಯರನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕಾದ ಅಗತ್ಯವಿರುತ್ತದೆ. ಅದಕ್ಕಾಗಿ ಅವರನ್ನು ನೋಡಿಕೊಳ್ಳುವವರ ಜೊತೆಗೆ ಸ್ವತಃ ಗರ್ಭಿಣಿಯರು ಸಹ ಈ ವಿಚಾರವಾಗಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ವಾಯುವಿನ ಸಮಸ್ಯೆ ಅಧಿಕವಾಗಿ ಕಂಡು ಬರುತ್ತದೆ. ಇದು ಅವರಿಗೆ ಅಸೌಖ್ಯವನ್ನು ತರುವುದರ ಜೊತೆಗೆ, ಮುಜುಗರವನ್ನು ಸಹ ತರುತ್ತದೆ. ಗರ್ಭಿಣಿಯರಲ್ಲಿರುವ ಹಾರ್ಮೋನುಗಳು ಅವರ ಕರುಳುಗಳ ಸುತ್ತ ಇರುವ ಸ್ನಾಯುಗಳನ್ನು ವಿಶ್ರಾಂತಿಯಿಂದ ಇರಿಸಲು ಸಹಾಯ ಮಾಡುತ್ತಿರುತ್ತವೆ. ಅಲ್ಲದೆ ಇದು ಗರ್ಭಿಣಿಯರ ಜೀರ್ಣ ಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ.

ವಾಯು ಸಮಸ್ಯೆಯಿದ್ದರೆ ಆಹಾರವು ಗರ್ಭಿಣಿಯರ ಕರುಳಿನಲ್ಲಿ ಹಾದು ಹೋಗಲು ಅಧಿಕ ಕಾಲ ತೆಗೆದುಕೊಳ್ಳುತ್ತದೆ. ಹೀಗಾಗಿಯೇ ಗರ್ಭಿಣಿಯರಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುತ್ತದೆ. ಈ ವಾಯು ಸಮಸ್ಯೆ ಬರಲು ಮೂಲ ಕಾರಣ ಗರ್ಭಿಣಿಯರಲ್ಲಿರುವ ಪ್ರೊಜೆಸ್ಟೆರೋನ್ ಎಂಬ ಹಾರ್ಮೊನ್ ಎಂಬುದು ಅಧ್ಯಯನಗಳಿಂದ ಧೃಡಪಟ್ಟಿದೆ. ಈ ಹಾರ್ಮೋನ್ ನೀವು ಗರ್ಭಿಣಿಯರಾಗಿರುವಾಗ ಅತಿ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಮೊದಲೇ ಹೇಳಿದಂತೆ, ಕರುಳಿನಲ್ಲಿರುವ ಸ್ನಾಯುಗಳು ಈ ಹಾರ್ಮೋನುಗಳ ಪ್ರಕ್ರಿಯೆಯಿಂದಾಗಿ ಮತ್ತಷ್ಟು ವಿಶ್ರಾಂತಿಯನ್ನು ಪಡೆಯುತ್ತವೆ.

ಯಾವಾಗ ಆಹಾರಗಳು ಕರುಳಿನಲ್ಲಿ ನಿಧಾನವಾಗಿ ಸರಿದು ಹೋಗಲು ಆರಂಭಿಸುತ್ತವೆಯೋ, ಆಗ ಗರ್ಭಿಣಿಯರಲ್ಲಿ, ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ಮಲಬದ್ಧತೆಯ ಸಮಸ್ಯೆಯಿಂದಾಗಿ, ಹೊಟ್ಟೆ ಊದಿದ ಅನುಭವವಾಗುತ್ತದೆ. ಆಗ ವಾಯು ಸಮಸ್ಯೆ ಕಂಡು ಬರುತ್ತದೆ. ಹಾಗಾಗಿ ನಿಮ್ಮ ಆಹಾರ ಅಭ್ಯಾಸಗಳು ಮತ್ತು ನಿಮ್ಮ ಜೀವನ ಶೈಲಿ ಸಹ ಬದಲಾಗಬೇಕಾಗುತ್ತದೆ. ಬನ್ನಿ ಅದಕ್ಕೆ ಯಾವ ಪರಿಹಾರ ನೀಡಬಹುದು ಎಂಬುದನ್ನು ತಿಳಿಯೋಣ. ಗರ್ಭಿಣಿಯರ ಆರೋಗ್ಯಕ್ಕೆ ಗಿಡಮೂಲಿಕೆಯ ಉಪಚಾರ

How To Prevent Flatulence In Pregnancy Without Using Medicines

ಗರ್ಭಿಣಿಯರಲ್ಲಿ ವಾಯು ಸಮಸ್ಯೆಯನ್ನು ಹೇಗೆ ಬಗೆಹರಿಸುವುದು?
ಗ್ಯಾಸ್ ಉತ್ಪತ್ತಿ ಮಾಡುವ ಆಹಾರ ಪದಾರ್ಥಗಳಿಂದ ದೂರವಿರಿ. ಅವುಗಳನ್ನು ಸೇವಿಸದೆ ಇದ್ದಲ್ಲಿ ನಿಮಗೆ ಒಳ್ಳೆಯದು. ಯಾರಿಗೆ ಲ್ಯಾಕ್ಟೋಸ್ ಎಂದರೆ ಆಗುವುದಿಲ್ಲವೋ, ಅವರು ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ದೂರವಿರಬಹುದು. ಕರಿದ ಮತ್ತು ಕೊಬ್ಬು ಅಧಿಕವಾಗಿರುವ ಆಹಾರ ಪದಾರ್ಥಗಳಿಂದ ದೂರವಿರಿ. ಸೋಡಾ, ಹಣ್ಣಿನ ರಸ, ಜೋಳ, ಬೀನ್ಸ್, ಈರುಳ್ಳಿಗಳು, ಹೂಕೋಸು, ಪಿಯರ್ಸ್, ಎಲೆ ಕೋಸು, ಬ್ರೊಕ್ಕೊಲಿ, ಆಲೂಗಡ್ಡೆ, ಜೇನು ತುಪ್ಪ, ಅಸ್ಪರಗುಸ್ ಮತ್ತು ಕೃತಕ ಸಿಹಿತಿನಿಸುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ.

ಊಟವನ್ನು ಸ್ವಲ್ಪ ಸ್ವಲ್ಪ ಸೇವಿಸಿ
ಒಂದೇ ಬಾರಿ ಸೇವಿಸುವ ಊಟವನ್ನು ಎರಡು ಭಾಗ ಮಾಡಿಕೊಂಡು, ಸ್ವಲ್ಪ ಸಮಯದ ನಂತರ ಸೇವಿಸಿ. ಮೂರು ಬಾರಿ ಊಟ ಮಾಡುವವರು ಆರು ಬಾರಿ ಮಾಡಿ. ನಿಮ್ಮ ಊಟಗಳ ನಡುವಿನ ಅವಧಿ ಚಿಕ್ಕದಿರಲಿ. ಆತುರ ಪಡದೆ ನಿಧಾನವಾಗಿ ಸೇವಿಸಿ. ಚೆನ್ನಾಗಿ ಅಗಿಯುವ ಮೂಲಕ ಆಹಾರವನ್ನು ಸೇವಿಸಿ. ಇದರಿಂದ ಜೀರ್ಣ ಚೆನ್ನಾಗಿ ಆಗುತ್ತದೆ. ಒಮ್ಮೊಮ್ಮೆ ನೀವು ಆಹಾರ ಸೇವಿಸುವಾಗ ಗಾಳಿಯು ಸಹ ನಿಮ್ಮ ಹೊಟ್ಟೆ ಸೇರುತ್ತದೆ. ಇದರಿಂದಾಗಿ ನಿಮಗೆ ಗ್ಯಾಸ್ ಸಮಸ್ಯೆ ಬರುತ್ತದೆ.

ನಾರಿನಂಶವನ್ನು ಸೇವಿಸಿ
ನಿಮಗೆ ಗ್ಯಾಸ್ ಸಮಸ್ಯೆ ಇದ್ದಲ್ಲಿ ಊಟದಲ್ಲಿ ನಾರಿನಂಶ ಅಧಿಕವಾಗಿರುವ ಹಾಗೆ ನೋಡಿಕೊಳ್ಳಿ. ಇದು ನಿಮಗೆ ಬರುವ ಗ್ಯಾಸ್ ಸಮಸ್ಯೆಯನ್ನು ತಡೆಯುತ್ತದೆ. ನಾರಿನಂಶವು ಜೀರ್ಣಾಂಗಕ್ಕೆ ಹೆಚ್ಚು ಸಹಕರಿಸುತ್ತದೆ. ಅಲ್ಲದೆ ನಾರಿನಂಶವು ಕರುಳಿನಲ್ಲಿ ಸರಾಗವಾಗಿ ಸಾಗಿ ಹೋಗುತ್ತದೆ. ನಿಮ್ಮ ಕರುಳಿನಲ್ಲಿ ಆಹಾರಗಳು ಸುಲಭವಾಗಿ ಸಾಗಿ ಹೋಗಲು, ನೀರನ್ನು ಸಹ ಹೆಚ್ಚಾಗಿ ಸೇವಿಸಿ. ಇದು ಕರುಳಿನಲ್ಲಿ ಲೂಬ್ರಿಕೇಟ್ ರೀತಿ ವರ್ತಿಸುತ್ತದೆ.

ಯಾವ ಚಟುವಟಿಕೆ ಮಾಡಬೇಕು ಎಂದು ನಿಮ್ಮ ವೈದ್ಯರನ್ನು ಕೇಳಿ


ನೀವು ಚಟುವಟಿಕೆಯಿಂದ ಇರುವುದು ತೀರಾ ಅತ್ಯಗತ್ಯ. ಆದರೆ ಅದಕ್ಕೆ ಮೊದಲು ನಿಮ್ಮ ವೈದ್ಯರನ್ನು ಕೇಳಿ. ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಮೊದಲು ತಿಳಿದುಕೊಳ್ಳಿ. ವಿಶ್ರಾಂತಿಯನ್ನು ಅಗತ್ಯವಾಗಿ ಪಡೆಯಿರಿ. ವ್ಯಾಯಾಮ ಮಾಡಿ. ವಾಯು ಸಮಸ್ಯೆಯನ್ನು ದೂರ ಮಾಡಲು ಇದು ಸಹ ಸಹಾಯ ಮಾಡುತ್ತದೆ.
English summary

How To Prevent Flatulence In Pregnancy Without Using Medicines

Flatulence in pregnancy could be both embarrassing as well as uncomfortable. The hormones in a pregnant women tend to keep the muscles around the intestines relaxed. This may affect the digestive processes. Generally, it may take longer for the food to pass through the intestines when you are pregnant. This causes gas formation. This is the reason for gas in pregnancy.
X
Desktop Bottom Promotion