For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಟಾಪ್ ಫುಡ್

By Manu
|

ಪ್ರತಿಯೊಬ್ಬ ಗರ್ಭಿಣಿಯು ತನ್ನ ಗರ್ಭಾವಧಿಯಲ್ಲಿ ಹೆಚ್ಚು ಆರೋಗ್ಯಕರವಾಗಿರಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಹುಡುಕುತ್ತಾ ಇರುತ್ತಾಳೆ, ಜೊತೆಗೆ ಅದಕ್ಕಾಗಿ ಕೆಲವೊಂದು ಮಾತ್ರೆ ಮತ್ತು ಔಷಧಿಗಳನ್ನು ಸೇವಿಸಲು ಇವರು ಆರಂಭಿಸುತ್ತಾರೆ. ಗರ್ಭಧಾರಣೆಯ ಅವಧಿಯು ಮಹಿಳೆಯರ ಜೀವನದಲ್ಲಿನ ಅತ್ಯಂತ ಮಹತ್ವದ ಮತ್ತು ಸೂಕ್ಷ್ಮವಾದ ಹಂತವಾಗಿರುತ್ತದೆ. ಆಕೆ ತನ್ನೊಳಗೆ ಒಂದು ಮಗುವಿಗೆ ಜೀವವನ್ನು ನೀಡುವ ಕಾಲ ಇದಾಗಿರುತ್ತದೆ.

ಒಂದು ವೇಳೆ ಈಕೆಗೆ ಯಾವುದಾದರು ಪೋಷಕಾಂಶಗಳ ಕೊರತೆಯುಂಟಾದರೆ ಅದರ ಪರಿಣಾಮವು ಹುಟ್ಟುವ ಮಗುವಿನ ಮೇಲೆ ಉಂಟಾಗುತ್ತದೆ. ಇದು ಕೇವಲ ಆಕೆಯಲ್ಲಿ ಶಕ್ತಿಯನ್ನು ಮಾತ್ರ ತರುವುದಿಲ್ಲ ಜೊತೆಗೆ ಇದು ಆಕೆಯ ಮತ್ತು ಆಕೆಯ ಹೊಟ್ಟೆಯಲ್ಲಿರುವ ಮಗುವಿನ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಆದ್ದರಿಂದ ಆರೋಗ್ಯಕರವಾದ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸುವುದು ಗರ್ಭಿಣಿಯರ ಅಗತ್ಯಗಳಲ್ಲಿ ಒಂದು ಎಂಬುದನ್ನು ಮರೆಯಬಾರದು.

Foods To Increase Immunity During Pregnancy

ಗರ್ಭಿಣಿಯಾಗಿರುವಾಗ ಬೆಳಗ್ಗೆಯೇ ಮಂಕು ಕವಿದಂತೆ ಇರುತ್ತದೆ ಮತ್ತು ರುಚಿಯು ಸಹ ಏರು ಪೇರಾಗುತ್ತದೆ. ಆದ್ದರಿಂದ ಯಾವುದೇ ಯೋಜನೆಗಳನ್ನು ಕೈಗೊಳ್ಳುವ ಮೊದಲು ಪದಾರ್ಥಗಳನ್ನು ಒಮ್ಮೆ ಪರೀಕ್ಷಿಸಿ ನೋಡುವುದು ಉತ್ತಮ. ಜೊತೆಗೆ ನಡು ನಡುವೆ ಸ್ವಲ್ಪ ತಿಂಡಿಯನ್ನು ಸೇವಿಸುತ್ತಾ ಇರಬೇಕಾಗುತ್ತದೆ. ಅವರವರ ದೇಹಕ್ಕೆ ಸೂಕ್ತವಾದಂತಹ ಮತ್ತು ಸರಿಹೊಂದುವಂತಹ ಊಟಗಳನ್ನು ಸೇವಿಸುವುದು ಉತ್ತಮ.

ಆರೋಗ್ಯಕರವಾದ ಆಹಾರಗಳ ದೊಡ್ಡ ಪಟ್ಟಿಯೇ ಕಣ್ಣ ಮುಂದೆ ಇದ್ದರೂ, ಈ ಕೆಳಗೆ ನೀಡಿರುವ ಆಹಾರಗಳನ್ನು ಗರ್ಭಿಣಿಯರು ಸೇವಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಅವುಗಳು ಯಾವುವು ಎಂದು ಒಮ್ಮೆ ನೋಡಿ. ಆಹಾ ಎಳನೀರು, ನಿಜಕ್ಕೂ ಗರ್ಭಿಣಿಯರ ಪಾಲಿಗೆ ಪನ್ನೀರು!

ವಿಟಮಿನ್ ಎ
ವಿಟಮಿನ್ ಎ ಯು ಒಂದು ಪರಿಣಾಮಕಾರಿಯಾದ ಆಂಟಿ-ಆಕ್ಸಿಡೆಂಟ್ ಆಗಿರುತ್ತದೆ. ಇದು ನಿಮ್ಮ ದೇಹದಲ್ಲಿ ಕರಗಿ ಹೋಗಿ, ಬೀಟಾ-ಕೆರೋಟಿನ್ ರೂಪಕ್ಕೆ ಪರಿವರ್ತನೆ ಹೊಂದುತ್ತದೆ. ಇದು ನಿಮ್ಮ ಮಗುವಿನಲ್ಲಿ ಕಂಡು ಬರುವ ಜನನ ಕಾಲದ ಕೆಲವೊಂದು ಲೋಪದೋಷಗಳನ್ನು ನಿವಾರಿಸಲು ಅಗತ್ಯವಾಗಿ ಬೇಕಾಗುತ್ತದೆ. ಗರ್ಭಿಣಿಯರಿಗೆ ನೀಡುವ ಆಹಾರವು ವಿಟಮಿನ್ ಎ ಇಲ್ಲದೆ ಪರಿಪೂರ್ಣವಾಗಲು ಸಾಧ್ಯವೇ ಇಲ್ಲ. ಇದು ಗರ್ಭದ ಬೆಳವಣಿಗೆಗೆ ತೀರಾ ಅವಶ್ಯಕ. ಮಾವಿನ ಹಣ್ಣು, ಸಿಹಿ ಗೆಣಸು ಮತ್ತು ಬಾದಾಮಿಗಳಲ್ಲಿ ವಿಟಮಿನ್ ಎ ಅಧಿಕ ಪ್ರಮಾಣದಲ್ಲಿರುತ್ತದೆ.

ವಿಟಮಿನ್ ಡಿ
ವಿಟಮಿನ್ ಡಿಯು ನೆಗಡಿ ಮತ್ತು ಫ್ಲೂ ವಿರುದ್ಧ ಹೋರಾಡಲು ಅಗತ್ಯವಾಗಿ ಬೇಕಾಗುತ್ತದೆ. ಇದು ಮಗುವಿಗೆ ಹಾಲು ಕುಡಿಸುವ ಕಾಲದ ಉದ್ದಕ್ಕೂ ನಿಮಗೆ ನೆರವಿಗೆ ಬರುತ್ತದೆ. ಆದರೂ ಚಳಿಗಾಲದಲ್ಲಿ ಸೂರ್ಯನ ಬಿಸಿಲಿಗೆ ನಾವು ಒಡ್ಡಿಕೊಳ್ಳುವುದು ಕಡಿಮೆ. ಆದ್ದರಿಂದ ವಿಟಮಿನ್ ಡಿ ಹೆಚ್ಚಿರುವ ಮೀನು, ಮೊಟ್ಟೆ, ಮಲ್ಟಿ ವಿಟಮಿನ್ ಧಾನ್ಯಗಳು ಮತ್ತು ಸತು ಇರುವ ಆಹಾರಗಳನ್ನು ಸೇವಿಸುವುದು ಉತ್ತಮ.

ಸತು
ಪಟ್ಟಿಯಲ್ಲಿ ಮುಂದಿನ ಸ್ಥಾನವನ್ನು ಗಳಿಸಿರುವುದು ಸತು. ಇದು ಪ್ರಸವದ ನಂತರ ದೇಹವನ್ನು ಮತ್ತೆ ಯಥಾಸ್ಥಿತಿಗೆ ತರಲು ಸಹಾಯ ಮಾಡುತ್ತದೆ. ಇದು ಡಿಎನ್‌ಎಯನ್ನು ರಿಪೇರಿ ಮಾಡುತ್ತದೆ, ಪುನರುತ್ಪತ್ತಿ ಮಾಡುತ್ತದೆ ಮತ್ತು ಅದರ ಕಾರ್ಯವನ್ನು ಸರಾಗಗೊಳಿಸುತ್ತದೆ. ಕೆಲವೊಂದು ಆಹಾರಗಳಲ್ಲಿ ಸತುವು ಅಧಿಕವಾಗಿರುತ್ತದೆ. ಹೈನು ಉತ್ಪನ್ನಗಳು, ಶೆಲ್ ಫಿಶ್, ಒಣಹಣ್ಣುಗಳಲ್ಲಿ ಇದು ಅಧಿಕ ಪ್ರಮಾಣದಲ್ಲಿರುತ್ತವೆ.

ವಿಟಮಿನ್ ಬಿ
ವಿಟಮಿನ್ ಬಿ ಒಂದು ಅತ್ಯಂತ ಉಪಯುಕ್ತವಾದ ಪೋಷಕಾಂಶವಾಗಿರುತ್ತದೆ. ವಿಶೇಷವಾಗಿ ಮುಂಜಾನೆ ಮಂಕು ಹಿಡಿದಂತೆ ಕೂರುವ ಮಹಿಳೆಯರಿಗೆ ಇದು ತೀರಾ ಅತ್ಯಗತ್ಯ. ಬಿ6 ಎಂಬ ಅಂಶವು ವಿಟಮಿನ್ ಬಿ ಸಮೂಹದಲ್ಲಿಯೇ ಅತ್ಯಂತ ಪರಿಣಾಮಕಾರಿಯಾದ ಅಂಶವಾಗಿದ್ದು, ಇದು ಮುಂಜಾನೆಯ ಮಂಕನ್ನು ಹೊಡೆದು ಓಡಿಸುತ್ತದೆ.

ಪ್ರೋಟಿನ್‌ಗಳು
ಪ್ರೋಟಿನ್‌ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೇಳಿ ಮಾಡಿದ ಅಂಶಗಳಾಗಿರುತ್ತವೆ. ಏಕೆಂದರೆ ಇವು ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಟ್ಟುವ ಇಟ್ಟಿಗೆಗಳು ಎಂದು ಹೇಳಬಹುದು.

ಬೆಳ್ಳುಳ್ಳಿ
ಬೆಳ್ಳುಳ್ಳಿಯು ಇನ್‌ಫೆಕ್ಷನ್ ಮತ್ತು ರೋಗಗಳನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಏಕೆಂದರೆ ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ ಅಂಶಗಳು ಹೆಚ್ಚಾಗಿರುತ್ತವೆ. ಇದರಿಂದಾಗಿ ಇದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಎಲ್ಲಾ ಗುಣಗಳನ್ನು ಪಡೆದಿರುತ್ತದೆ.

ಕಬ್ಬಿಣಾಂಶ
ಕಬ್ಬಿಣಾಂಶವು ರಕ್ತದ ಮೇಲೆ ಪ್ರಮುಖ ಪಾತ್ರವನ್ನು ಬೀರುತ್ತದೆ. ರಕ್ತವೇ ರೋಗ ನಿರೋಧಕ ಶಕ್ತಿಯ ಪ್ರಮುಖ ಅಂಶ. ಇದರ ಕುರಿತು ಯಾವುದೇ ವಾದ ಮತ್ತು ವಿವಾದಗಳಿಗೆ ಆಸ್ಪದವೇ ಇಲ್ಲ. ರಕ್ತದ ಕೋಶಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಮುಖ ಅಂಶಗಳಾಗಿರುತ್ತವೆ. ಕೆಂಪು ಮಾಂಸ, ಬ್ಲಾಕ್ ಪ್ಲಮ್ ಮತ್ತು ಬೀನ್ಸ್‌ಗಳಲ್ಲಿ ಕಬ್ಬಿಣಾಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

English summary

Foods To Increase Immunity During Pregnancy

All to-be mothers are always seeking foods to increase immunity during pregnancy as they are much healthier than the regular medication or pills. Pregnancy is an extremely delicate phase in a woman’s life as she is contributing from her own body to create a life form inside her.There is a long list of foods for health but, below enlisted is a catalog of Foods to increase immunity during pregnancy.
Story first published: Tuesday, August 18, 2015, 19:35 [IST]
X
Desktop Bottom Promotion