For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ತಮ್ಮನ್ನು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದೇ?

By Arpitha Rao
|

ಸಾಕಷ್ಟು ಮಹಿಳೆಯರು ಗರ್ಭಿಣಿಯಾದಾಗ ಆತಂಕಕ್ಕೆ ಒಳಗಾಗುತ್ತಾರೆ, ಇದು ಕೇವಲ ಹಾರ್ಮೋನ್ ಬದಲಾವಣೆಯಿಂದ ಮಾತ್ರವಲ್ಲ, ಹೆರಿಗೆ ನೋವು, ಪ್ರಸವ ಇವುಗಳ ಬಗ್ಗೆಯೂ ಕೂಡ ಆತಂಕ ಇರುತ್ತದೆ. ಮಹಿಳೆ ತಾಯಿಯಾಗುತ್ತಿರುವಾಗ ಸಾಕಷ್ಟು ಬದಲಾವಣೆಗಳಾಗುತ್ತವೆ. ಮೈ ಚರ್ಮದಲ್ಲಿ, ತೂಕ ಹೆಚ್ಚಳದಲ್ಲಿ, ತಿಂಗಳು ಹೆಚ್ಚುತ್ತಿದ್ದಂತೆ ಮಗುವಿನ ಆಕಾರ ಹೊಟ್ಟೆಬರುವಿಕೆ, ಇವುಗಳೆಲ್ಲ ಮಹಿಳೆಗೆ ತಾನು ಹೇಗೆ ಕಾಣಬಹುದು ಎಂಬ ಆತಂಕ ಹುಟ್ಟಿಸುತ್ತದೆ.

ಗರ್ಭಿಣಿಯಾದಾಗ ಧನಾತ್ಮಕ ಚಿಂತನೆ ಹೊಂದಬೇಕು, ಆತ್ಮ ಗೌರವ ಮತ್ತು ಸ್ವಯಂ ಕಾಳಜಿ ಹೊಂದಿರುವುದು ಸಂತೋಷಕರ ಮತ್ತು ಆರೋಗ್ಯಕರ ಗರ್ಭಧಾರಣೆ ನಿರ್ವಹಿಸಲು ಕಾರಣವಾಗುತ್ತದೆ. ಗರ್ಭವತಿಯಾಗುವುದೆಂದರೆ ಡಲ್ ಆಗಿರುವುದು ಅಥವಾ ಹೆಚ್ಚು ನೋವು ತುಂಬಿರುತ್ತದೆ ಎಂದೇನು ಇಲ್ಲ ಬದಲಿಗೆ ಗರ್ಭಿಣಿಯಾಗುವುದು ನಿಮ್ಮಲ್ಲಿರುವ ಸ್ತ್ರೀ ಮತ್ತು ತಾಯಿತನ ಹೊರಸೂಸುವ ಸಂತೋಷಕರವಾದ ವಿಷಯ.ಕೆಲವು ಮಹಿಳೆಯರು ಗರ್ಭಿಣಿ ಇರುವಾಗ ಕೂಡ ಸೆಕ್ಸಿಯಾಗಿ, ಫಿಟ್ ಆಗಿ ಇರುತ್ತಾರೆ.ಅದು ಹೇಗೆ ಎಂಬುದರ ಬಗ್ಗೆ ಈ ಕೆಳಗೆ ಕೆಲವು ಸಲಹೆಗಳನ್ನು ನೀಡಿದ್ದೇವೆ. ಓದಿನೋಡಿ.

Easy Ways to Stay Fit During Pregnancy

ವರ್ಕ್ ಔಟ್
ಗರ್ಭಾವಸ್ಥೆಯ ಸಂಪೂರ್ಣ ಕಾಲದಲ್ಲಿ ವಾರದಲ್ಲಿ ಎರಡು ದಿನ ವ್ಯಾಯಾಮ ಮಾಡುವುದು ಸೂಕ್ತ.ಇಲ್ಲಿ ವರ್ಕ್ ಔಟ್ ಎಂದರೆ ವಾಕಿಂಗ್,ಸ್ವಿಮ್ಮಿಂಗ್, ವಾಟರ್ ಏರೋಬಿಕ್ಸ್ ಮತ್ತು ಯೋಗ.ವ್ಯಾಯಾಮ ನೀವು ಗರ್ಭಿಣಿ ಆಗುವ ಮೊದಲು ಎಷ್ಟು ಚಟುವಟಿಕೆಯಿಂದ ಇದ್ದಿರಿ ಎಂಬುದರ ಮೇಲೆ ಅವಲಂಬಿತವಾಗುತ್ತದೆ. ಶ್ರಮದಾಯಕ ಜೀವನಕ್ರಮವಿದ್ದರೆ ಅಥವಾ ಗರ್ಭಧಾರಣೆಯಲ್ಲಿ ತೊಂದರೆ ಇದ್ದರೆ ಅಂತಹ ಸಂದರ್ಭದಲ್ಲಿ ವ್ಯಾಯಾಮ ಮಾಡುವುದು ಸೂಕ್ತವಲ್ಲ. ಇಂತಹ ಚಟುವಟಿಕೆಗಳನ್ನು ಮಾಡುವಾಗ ಸಾಕಷ್ಟು ನೀರು ಸೇವಿಸಿ.ಹೆಚ್ಚು ನೀರು ಸೇವಿಸುವುದು ನಿಮ್ಮನ್ನು ತಾಜಾವಾಗಿ ಇಡುವುದು ಮಾತ್ರವಲ್ಲ ನಿಮ್ಮ ದೇಹಕ್ಕೆ ಬೇಕಾಗುವ ನೀರನ್ನು ಒದಗಿಸುತ್ತದೆ ಮತ್ತು ನಿಮ್ಮ ತ್ವಚೆಯ ಕಾಂತಿಯನ್ನು ಕಾಪಾಡುತ್ತದೆ. ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೊದಲು ನೀವು ವೈದ್ಯರ ಸಂಪೂರ್ಣ ಸಲಹೆಯನ್ನು ಪಡೆದುಕೊಳ್ಳಲು ಮರೆಯದಿರಿ.

ಮಾತೃತ್ವಕ್ಕೆಂದೇ ಸಿಗುವ ಬಟ್ಟೆಯನ್ನು ಉಪಯೋಗಿಸಿ
ನೀವು ನೋಡಿರಬಹುದು ಗರ್ಭಿಣಿ ಮಹಿಳೆಯರು ಸಾಮಾನ್ಯವಾಗಿ ಹಳೆಯ ದೊಡ್ಡ ಅಳತೆಯ ಟೀ ಶರ್ಟ್ ಗಳನ್ನು ಹಾಕಿಕೊಂಡಿರುತ್ತಾರೆ. ಆದರೆ ನೀವು ಸೆಕ್ಸಿಯಾಗಿ, ಫಿಟ್ ಆಗಿ ಕಾಣಿಸಬೇಕೆಂದರೆ ಫ್ಯಾಷನೇಬಲ್ ಆಗಿರುವ ಹೊಸ ರೀತಿಯ ಮಾತೃತ್ವಕ್ಕೆಂದೇ ಇರುವ ಬಟ್ಟೆಗಳನ್ನು ಧರಿಸಿ.ಇದು ನಿಮಗೆ ಆರಾಮದಾಯಕವಾಗಿ ಕೂಡ ಇರುತ್ತದೆ. ನಿಮ್ಮ ಇಷ್ಟದ ಹೊಂದಿಕೆಯಾಗುವಂತಹ ಆಭರಣ,ಅಕ್ಸೆಸರಿಯನ್ನು ಬಳಸಿ.ಹಿತಕರವಾದ ಶೂ ಬಳಸಿ.ಫ್ಲಾಟ್ ಆಗಿರುವುದನ್ನು ಬಳಸಿ ಇದು ಇತ್ತೀಚಿಗೆ ಟ್ರೆಂಡ್ ಕೂಡ ಆಗಿರುವುದರಿಂದ ನೋಡಲು ಸೊಗಸಾಗಿರುತ್ತದೆ. ತಾಯ್ತನದ ಸಂತಸಕ್ಕೆ ಅಡ್ಡಿಯಾಗದಿರಲಿ ನಿಮ್ಮ ದಿನಚರಿ!

ಸಮತೋಲಿತ ಆಹಾರ ಬಳಸಿ
ನಿಮ್ಮ ಆಹಾರದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಬಳಸಿ.ನಿಮಗೆ ಬೇಕಾದ ವಿಟಮಿನ್ ಮತ್ತು ಖನಿಜಾಂಶಗಳು ಇದರಿಂದ ದೊರೆಯುತ್ತವೆ.ತೆಳು ಮಾಂಸವನ್ನು ಮಾತ್ರ ಬಳಸಿ.ನೀವು ಕಾಫಿ ಹೆಚ್ಚು ಬಳಸುವವರಾದರೆ ಅದರಿಂದ ದೂರವಿರಿ.ಕೆಫಿನ್ ಹೆಚ್ಚು ಬಳಸುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ ಮತ್ತು ಹೊಟ್ಟೆಯಲ್ಲಿರುವ ನಿಮ್ಮ ಮಗುವಿನ ಬೆಳವಣಿಗೆಗೆ ಕೂಡ ಪರಿಣಾಮ ಬೀರುತ್ತದೆ.

ಹೇರ್ ಸ್ಟೈಲ್ ಮಾಡಿಸಿಕೊಳ್ಳಿ
ಗರ್ಭಾವಸ್ಥೆಯಲ್ಲಾಗುವ ಹಾರ್ಮೊನಿನ ಬದಲಾವಣೆಯಿಂದ ಕೂದಲು ದಟ್ಟವಾಗಿ,ಹೊಳೆಯುವಂತೆ ಬೆಳಯುತ್ತದೆ.ಈ ಸಮಯದಲ್ಲಿ ಕೂದಲು ಕತ್ತರಿಸಬೇಡಿ ಅಥವಾ ಕೂದಲನ್ನು ಹಿಂದೆ ಕಟ್ಟಿಬಿಡಬೇಡಿ.ಬದಲಿಗೆ ಹೇರ್ ಸ್ಟೈಲರ್ ಅನ್ನು ಭೇಟಿಯಾಗಿ ನಿಮಗೆ ಹೊಂದಾಣಿಕೆಯಾಗುವಂತಹ ಸ್ಟೈಲ್ ಮಾಡಲು ಹೇಳಿ.ನಿಮ್ಮ ಕೂದಲು ಸುಂದರವಾಗಿದ್ದಾಗ ನಿಮಗೆ ಹೊಂದಾಣಿಕೆಯಾಗುವಂತೆ ಇದ್ದಾಗ ನೀವು ಸೆಕ್ಸಿಯಾಗಿ ಕಾಣಿಸುತ್ತೀರಿ.

ಮೇಕಪ್ ಮತ್ತು ಸೌಂದರ್ಯ ಸಾಧನಗಳನ್ನು ಬಿಟ್ಟುಬಿಡಬೇಡಿ
ಸೌಂದರ್ಯ ಸಾಧನವನ್ನು ಬಳಸದೇ ಇರಬೇಡಿ. ಗರ್ಭಿಣಿಯಾದಾಗ ಕೆಲವೊಮ್ಮೆ ಸೌಂದರ್ಯ ಸಾಧನದಲ್ಲಿರುವ ರಾಸಾಯನಿಕ ಅಂಶಗಳು ಅಲರ್ಜಿಯನ್ನು ಉಂಟು ಮಾಡಬಹುದು.ಇದರಿಂದ ನೀವು ಸೌಂದರ್ಯ ಸಾಧನದಿಂದ ದೂರ ಉಳಿಯುವಂತಾಗಬಹುದು. ನಿಮ್ಮ ವೈದ್ಯರ ಸಲಹೆಯನ್ನು ಪಡೆದು ನಿಮಗೆ ಸೂಕ್ತ ಎನಿಸುವ ಸೌಂದರ್ಯ ಸಾಧನಗಳನ್ನು ಬಳಸಿ.

ನಿಮ್ಮ ವರ್ತನೆ ಹೆಚ್ಚು ಮಾದಕತೆ ತಂದು ಕೊಡುತ್ತದೆ
ನೀವು ಸೆಕ್ಸಿಯಾಗಿ ಕಾಣುತ್ತಿದ್ದೀರಿ ಮತ್ತು ಸುಂದರವಾಗಿದ್ದೀರಿ ಎಂದು ನಂಬಿ ಮತ್ತು ನೀವು ಸುಂದರವಾಗಿ ಕಾಣಿಸುತ್ತೀರಿ.ಸಕಾರಾತ್ಮಕ ಭಾವನೆಗಳ ಮೂಲಕ ಋಣಾತ್ಮಕ ಭಾವನೆಗಳನ್ನು ಹೋಗಲಾಡಿಸಿ.

English summary

Easy Ways to Stay Fit During Pregnancy

Most women fear pregnancy not only because of the hormonal changes, possible complications and the pains of labor and delivery. Women are more concerned on how they will look like after all the weight gain, skin changes and the inevitable baby bump while pregnant.
Story first published: Monday, January 5, 2015, 19:28 [IST]
X
Desktop Bottom Promotion