For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಪಾಲಿನ ಸಂಜೀವಿನಿ ಈ ಪುಟ್ಟ ಒಣದ್ರಾಕ್ಷಿ

By Super
|

ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ಹಲವು ಬದಲಾವಣೆಗೆ ಒಳಗಾಗುತ್ತದೆ. ಈ ಸಮಯದಲ್ಲಿ ಇತರ ದಿನಗಳಿಗಿಂತಲೂ ಹೆಚ್ಚಿನ ಪೋಷಕಾಂಶ ಮತ್ತು ಇತರ ಆಹಾರಗಳನ್ನು ಗರ್ಭಿಣಿ ಸೇವಿಸುವುದು ಅಗತ್ಯ. ಇದೇ ಹೊತ್ತಿನಲ್ಲಿ ಕೆಲವು ಆಹಾರಗಳು ಗರ್ಭಿಣಿಗೆ ಮಾರಕ. ಉದಾಹರಣೆಗೆ ಹಸಿ ಪಪ್ಪಾಯಿ. ಇದನ್ನು ಅಪ್ಪಿತಪ್ಪಿಯೂ ಸೇವಿಸಬಾರದು.

ಇದೇ ರೀತಿ ಗರ್ಭಾವಸ್ಥೆಯಲ್ಲಿ ಕೆಲವು ಆಹಾರಗಳನ್ನು ಸೇವಿಸುವುಗು ಆರೋಗ್ಯಕ್ಕೆ ಉತ್ತಮ. ಕೇಸರಿ ಇದಕ್ಕೊಂದು ಉತ್ತಮ ಉದಾಹರಣೆ. ಹಾಲಿನೊಂದಿಗೆ ಕೇಸರಿಯ ಕೆಲವು ಎಸಳುಗಳನ್ನು ಸೇರಿಸಿ ಕುಡಿಯುವುದರಿಂದ ಗರ್ಭಿಣಿಯರಿಗೆ ಹತ್ತು ಹಲವು ಉಪಯೋಗಗಳಿವೆ. ಆದರೆ ಕೇಸರಿಯ ದುಬಾರಿ ಬೆಲೆಯ ಕಾರಣ ಎಲ್ಲರೂ ಇದನ್ನು ಭರಿಸಲು ಸಾಧ್ಯವಿಲ್ಲ.

ಬದಲಿಗೆ ಹೆಚ್ಚೂ ಕಡಿಮೆ ಕೇಸರಿಯಂತೆಯೇ ಇತರ ಆಹಾರಗಳು ಗರ್ಭಿಣಿಯರಿಗೆ ಉತ್ತಮವಾಗಿವೆ. ಬಾದಾಮಿ, ಅಕ್ರೋಟು, ಒಣದ್ರಾಕ್ಷಿ, ಒಣ ಅಂಜೂರ ಮೊದಲಾದ ಒಣಫಲಗಳು ಈ ಪಟ್ಟಿಯಲ್ಲಿ ಸೇರುತ್ತವೆ. ಈ ಲೇಖನದಲ್ಲಿ ಒಣದ್ರಾಕ್ಷಿಯ ಗುಣಗಳ ಬಗ್ಗೆ ಹಲವು ಮಾಹಿತಿಗಳನ್ನು ನೀಡಲಾಗಿದೆ. ಗರ್ಭಿಣಿ ಮಹಿಳೆಯರು ಅಪ್ಪಿತಪ್ಪಿಯೂ ಹಸಿರು ಚಹಾ ಸೇವಿಸಬಾರದು!

ಹಲ್ಲುಗಳ ರಕ್ಷಣೆಗೆ ಪೂರಕವಾಗಿದೆ

Benefits Of Raisins In Pregnancy

ಗರ್ಭಿಣಿಯರ ಒಂದು ಸಾಮಾನ್ಯ ತೊಂದರೆ ಎಂದರೆ ಒಸಡುಗಳಲ್ಲಿ ರಕ್ತ ಸುರಿಯುವುದು ಮತ್ತು ಹಲ್ಲುಗಳಲ್ಲಿ ಸವಕಳಿ. ದೇಹದ ರಕ್ತಪರಿಚಲನೆಯ ಹೆಚ್ಚು ಭಾಗ ಈಗ ಮಗುವಿನ ಪೋಷಣೆಯತ್ತ ಕೇಂದ್ರೇಕೃತವಾಗಿರುವುದರಿಂದ ದೇಹದ ಕಡಿಮೆ ಅಗತ್ಯವಿರುವ ಒಸಡು, ಬೆರಳ ಸಂದಿಗಳು ಮೊದಲಾದವುಗಳಲ್ಲಿ ಕಡಿಮೆಯಾಗುತ್ತದೆ. ಪರಿಣಾಮವಾಗಿ ಒಸಡುಗಳು ದುರ್ಬಲವಾಗುತ್ತವೆ. ಇದನ್ನು ಸರಿಪಡಿಸಲು ಒಲೆನೋಲಿಕ್ ಆಮ್ಲ (oleanolic acid)ದ ಅಗತ್ಯವಿದೆ. ಒಣದ್ರಾಕ್ಷಿಯಲ್ಲಿ ಈ ಅಂಶ ಪ್ರಮುಖವಾಗಿದ್ದು ಒಸಡುಗಳಲ್ಲಿ ರಕ್ತ ಮತ್ತು ಹಲ್ಲುಗಳ ಸವಕಳಿಯನ್ನು ತಡೆಯುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ


ಗರ್ಭಿಣಿಯರು ಎದುರಿಸುವ ಇನ್ನೊಂದು ತೊಂದರೆ ಎಂದರೆ ಮಲಬದ್ದತೆ. ಕರುಳುಗಳಲ್ಲಿರುವ ನೀರನ್ನು ಗರ್ಭದ ಬೆಳವಣಿಗೆಗೆ ಹೆಚ್ಚಾಗಿ ಬಳಸಿಕೊಳ್ಳುವ ಕಾರಣ ಮಲಬದ್ದತೆ ಎದುರಾಗುತ್ತದೆ. ಆಹಾರದಲ್ಲಿ ಸಾಕಷ್ಟು ನಾರು ಇದ್ದರೂ ನೀರಿನ ಕೊರತೆಯಿಂದಾಗಿ ಮಲಬದ್ಧತೆ ಎದುರಾಗುತ್ತದೆ. ಒಣದ್ರಾಕ್ಷಿಯ ನಿಯಮಿತ ಸೇವನೆಯಿಂದ ಕರುಳುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಉಳಿಯಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಕಡಿಮೆ ಒತ್ತಡದಿಂದ ಸುಲಭ ವಿಸರ್ಜನೆ ಸಾಧ್ಯವಾಗುತ್ತದೆ.

ರಕ್ತಹೀನತೆಯನ್ನು ತಡೆಯುತ್ತದೆ


ಒಡಲ ಕಂದನ ಆರೋಗ್ಯಕ್ಕೂ ರಕ್ತ ಅಗತ್ಯವಿರುವುದರಿಂದ ಗರ್ಭಿಣಿಯರು ಬಹುವಾಗಿ ರಕ್ತಹೀನತೆಯಿಂದ ಬಳಲುತ್ತಾರೆ. ಇದಕ್ಕೆ ಪ್ರಮುಖ ಕಾರಣ ಆಹಾರದಲ್ಲಿ ಕಬ್ಬಿಣದ ಕೊರತೆ. ಇದನ್ನು ನೀಗಿಸಲು ಬಸಲೆ ಪಾಲಕ್ ಮೊದಲಾದ ಗಾಢಹಸಿರು ಸೊಪ್ಪುಗಳು ಉತ್ತಮವಾಗಿವೆ. ಆದರೆ ಈ ಸೊಪ್ಪುಗಳು ಎಲ್ಲಾ ಕಾಲದಲ್ಲಿ ಸುಲಭವಾಗಿ ದೊರಕಲು ಸಾಧ್ಯವಿಲ್ಲ. ಈ ಸಮಯದಲ್ಲಿ ಒಣದ್ರಾಕ್ಷಿಯನ್ನು ಆಹಾರದ ಮೂಲಕ ಸೇವಿಸುವುದರೊಂದಿಗೆ ಕಬ್ಬಿಣದ ಅಂಶದ ಕೊರತೆಯನ್ನು ನೀಗಿಸಬಹುದು. ಒಣದ್ರಾಕ್ಷಿಯಲ್ಲಿ ಕಬ್ಬಿಣ, ಇತರ ಖನಿಜಗಳು ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಅಂಶಗಳು ಹೇರಳವಾಗಿರುವುದರಿಂದ ರಕ್ತದಲ್ಲಿ ಹೀಮೋಗ್ಲೋಬಿನ್ ಮಟ್ಟದ ಕೊರತೆಯನ್ನು ನೀಗಿಸಲು ಉತ್ತಮ ಆಹಾರವಾಗಿದೆ. ಶೀಘ್ರ ಗರ್ಭಧಾರಣೆಗೆ ಸಹಾಯಕವಾಗಿರುವ 20 ಆಹಾರಗಳು

ಹೊಟ್ಟೆಯುರಿ ಮತ್ತು ಹೊಟ್ಟೆಯುಬ್ಬರವನ್ನು ತಡೆಯುತ್ತದೆ


ಒಡಲ ಕಂದನಿಗೆ ಅಗತ್ಯವಿರುವ ಆಹಾರ ಮತ್ತು ತ್ಯಾಜ್ಯಗಳು ತಾಯಿಯ ಮೂಲಕವೇ ಆಗಬೇಕಾದುದರಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಮತ್ತು ವಾಯುಗಳು ಉತ್ಪನ್ನವಾಗಿ ಉರಿ ತರಿಸುತ್ತದೆ. ಜೊತೆಗೇ ಅನ್ನನಾಳದ ಮೂಲಕ ಈ ವಾಯು ಹೊರಬರಲು ಪ್ರಯತ್ನಿಸುವ ಕಾರಣ ವಾಕರಿಕೆ, ಹುಳಿತೇಗು ಮೊದಲಾದವು ಪ್ರಾರಂಭವಾಗುತ್ತವೆ. ಒಣದ್ರಾಕ್ಷಿಯಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅಂಶ ಹೇರಳವಾಗಿರುವುದರಿಂದ ಈ ತೊಂದರೆಯನ್ನು ಸಮರ್ಥವಾಗಿ ನಿವಾರಿಸಬಹುದು.

ಗರ್ಭಿಣಿಯರಿಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ


ಗರ್ಭಾವಸ್ಥೆಯಲ್ಲಿ ಇತರ ದಿನಗಳಿಗಿಂತಲೂ ಹೆಚ್ಚಿನ ಶಕ್ತಿಯ ಅಗತ್ಯವಿದೆ. ಮಗುವಿನ ಬೆಳವಣಿಗೆಗೆ ತಾಯಿಯ ಶರೀರ ಹೆಚ್ಚಿನ ಶಕ್ತಿಯನ್ನು ಬೇಡುತ್ತದೆ. ಇದನ್ನು ಸಾಮಾನ್ಯ ಆಹಾರಗಳ ಮೂಲಕ ಪಡೆದುಕೊಳ್ಳುವುದಾದರೆ ಸಾಮಾನ್ಯ ಪ್ರಮಾಣದ ದುಪ್ಪಟ್ಟು ಸೇವಿಸಬೇಕಾಗುತ್ತದೆ. ಇದು ಇತರ ತೊಂದರೆಗಳಿಗೆ ಆಹ್ವಾನ ನೀಡುತ್ತದೆ. ಬದಲಿಗೆ ನಿತ್ಯವೂ ಕೆಲವು ಒಣದ್ರಾಕ್ಷಿಗಳನ್ನು ಆಹಾರದ ಮೂಲಕ ಸೇವಿಸುವುದರಿಂದ ಈ ಅಗತ್ಯತೆಯನ್ನು ಪೂರೈಸಬಹುದು. ಅಲ್ಲದೇ ದ್ರಾಕ್ಷಿಯಲ್ಲಿನ ಸಕ್ಕರೆ ತಕ್ಷಣವೇ ಕರಗಿ ರಕ್ತದ ಮೂಲಕ ದೇಹದ ಎಲ್ಲಾ ಭಾಗಗಳಿಗೆ ಲಭ್ಯವಾಗುವುದರಿಂದ ಆಯಾಸವೂ ಕಡಿಮೆಯಾಗಿ ನಿತ್ಯದ ಕೆಲಸಗಳನ್ನು ಸಮರ್ಥವಾಗಿ ಪೂರೈಸಲು ಸಾಧ್ಯವಾಗುತ್ತದೆ.
English summary

Benefits Of Raisins In Pregnancy

You must know the foods that are healthy for you and your foetus. At the same time there are some harmful foods during pregnancy that must be avoided such as papaya and pine apple. How does raisins help in pregnancy?
X
Desktop Bottom Promotion