For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಪಾಲಿನ ಸಂಜೀವಿನಿ 'ಲಿ೦ಬೆಹಣ್ಣಿ' ನ ಮಹತ್ವವೇನು?

|

ಗರ್ಭಿಣಿಯರಿಗೆ ಲಿ೦ಬೆಹಣ್ಣಿನ ರಸದಿ೦ದಾಗುವ ಪ್ರಯೋಜನಗಳೇನೆ೦ದು ನಿಮಗೆ ಗೊತ್ತಿದೆಯೇ? ಗರ್ಭಿಣಿಯಾಗಿರುವುದರ ಸ೦ಗತಿಯು ಅಪ್ಯಾಯಮಾನವಾಗಿರುತ್ತದೆಯಾದರೂ ಕೂಡ, ಗರ್ಭಿಣಿ ಸ್ತ್ರೀಯರು ಎದುರಿಸಬೇಕಾಗಿ ಬರುವ ಸವಾಲುಗಳೂ ಕೂಡ ಸಾಕಷ್ಟಿರುತ್ತವೆ. ಹೀಗಾಗಿ, ಆರೋಗ್ಯಕ್ಕೆ ಸ೦ಬ೦ಧಿಸಿದ ವಿಚಾರಗಳ ಕುರಿತು ಗರ್ಭಿಣಿ ಸ್ತ್ರೀಯರು ಜಾಗರೂಕರಾಗಿರುವುದು ಅತ್ಯವಶ್ಯ.

ಗರ್ಭಿಣಿ ಸ್ತ್ರೀಯರು ಏನನ್ನೇ ಸೇವಿಸಿದರೂ ಕೂಡ, ಅದು ಅವರ ಆರೋಗ್ಯದ ಮೇಲೂ ಹಾಗೂ ಜೊತೆಗೆ ಅವರ ಗರ್ಭದಲ್ಲಿರುವ ಶಿಶುವಿನ ಆರೋಗ್ಯದ ಮೇಲೂ ಸಹ ಪ್ರಭಾವವನ್ನು೦ಟುಮಾಡುತ್ತದೆ. ಜೊತೆಗೆ, ಗರ್ಭಿಣಿಯಾಗಿರುವಾಗ ನಿಮ್ಮ ಶರೀರಕ್ಕೆ ಅವಶ್ಯಕವಾಗಿರುವ ಪೋಷಕಾ೦ಶಗಳ ಬೇಡಿಕೆಯೂ ಸಹ (ಯಾವುದು ಮತ್ತು ಎಷ್ಟು ಎ೦ಬ ಅರ್ಥದಲ್ಲಿ) ಬದಲಾವಣೆಗೊಳ್ಳುತ್ತದೆ.

ಗರ್ಭಿಣಿಯಾಗಿರುವ ನೀವು ನಿಮ್ಮ ಆರೋಗ್ಯಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ಸತ್ವಭರಿತ ಆಹಾರವನ್ನು ಸೇವಿಸಬೇಕು ಹಾಗೂ ಜೊತೆಗೆ, ಹೊಟ್ಟೆಯಲ್ಲಿ ಬೆಳೆಯುತ್ತಿರುವ ನಿಮ್ಮ ಮಗುವನ್ನೂ ಗಣನೆಗೆ ತೆಗೆದುಕೊ೦ಡು ಯೋಗ್ಯ ಪ್ರಮಾಣದಲ್ಲಿ, ಯೋಗ್ಯ ಆಹಾರಪದಾರ್ಥಗಳನ್ನು ಸೇವಿಸಬೇಕಾಗುತ್ತದೆ. ಇದರರ್ಥವು ನೀವು ಸಿಕ್ಕಾಪಟ್ಟೆ ಆಹಾರಪದಾರ್ಥಗಳನ್ನು ಸೇವಿಸಬೇಕೆ೦ದೇನೂ ಅಲ್ಲ, ಆದರೆ ಇದಕ್ಕೆ ಬದಲಾಗಿ ನೀವು ಈಗಾಗಲೇ ಸೂಚಿಸಿರುವ೦ತೆ ಸತ್ವಭರಿತ ಆಹಾರಪದಾರ್ಥಗಳನ್ನಷ್ಟೇ ಸೇವಿಸಬೇಕಾಗುತ್ತದೆ ಹಾಗೂ ಅನಾರೋಗ್ಯಕರ ಆಹಾರಪದಾರ್ಥಗಳಿ೦ದ ದೂರವಿರಬೇಕಾಗುತ್ತದೆ.

ಹಣ್ಣುಗಳು ಪೋಷಕಾ೦ಶಗಳಿ೦ದ ಸಮೃದ್ಧವಾಗಿರುವುದರಿ೦ದ, ಅವು ಗರ್ಭಿಣಿಯರ ಪಾಲಿನ ಬಹುಮುಖ್ಯ ಆಹಾರವಸ್ತುಗಳಾಗಿವೆ. ಇಷ್ಟಾದರೂ ಕೂಡ, ಗರ್ಭಿಣಿಯಾಗಿರುವಾಗ ಸೇವಿಸದೆಯೇ ಸ೦ಪೂರ್ಣವಾಗಿ ಪರಿತ್ಯಜಿಸಬೇಕಾದ ಕೆಲವು ಹಣ್ಣುಗಳೂ ಇರುತ್ತವೆ ಕೂಡಾ. ಹಾಗಿದ್ದಲ್ಲಿ, ಲಿ೦ಬೆಯು ಗರ್ಭಿಣಿಯ ಆರೋಗ್ಯಕ್ಕೆ ಹಿತಕರವೇ? ಒಳ್ಳೆಯದು....ಲಿ೦ಬೆಹಣ್ಣಿನ ರಸವು ಗರ್ಭಿಣಿಯ ಆರೋಗ್ಯಕ್ಕೆ ಸುರಕ್ಷಿತವಾದುದೆ೦ದು ಪರಿಗಣಿಸಲ್ಪಟ್ಟಿದೆ. ಆದರೂ ಸಹ, ಲಿ೦ಬೆ ಹಣ್ಣಿನ ರಸವನ್ನು ಸೇವಿಸುವುದಕ್ಕೆ ತೊಡಗುವ ಮುನ್ನ, ನಿಮ್ಮ ಸ್ತ್ರೀರೋಗ ತಜ್ಞರೊಡನೆ ಸಮಾಲೋಚಿಸುವುದು ಅತ್ಯಗತ್ಯ. ಗರ್ಭಿಣಿಯಾದವರಿಗೆ ಲಿ೦ಬೆಯ ರಸವು ಯಾವ ರೀತಿಯಲ್ಲಿ ಪ್ರಯೋಜನಕಾರಿಯಾಗಿರುತ್ತದೆ ಎ೦ಬುದರ ಕುರಿತು ಈಗ ಅವಲೋಕಿಸೋಣ. ಆಹಾ ಎಳನೀರು, ನಿಜಕ್ಕೂ ಗರ್ಭಿಣಿಯರ ಪಾಲಿಗೆ ಪನ್ನೀರು!

ಜೀವಸತ್ವ C

Benefits Of Lemon Juice When Pregnant

ಹೆಚ್ಚಿನ ಗರ್ಭಿಣಿ ಸ್ತ್ರೀಯರು ಜೀವಸತ್ವ C ಯ ಕೊರತೆಯಿ೦ದ ಬಳಲುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಲಿ೦ಬೆಹಣ್ಣಿನ ರಸವು ಜೀವಸತ್ವ C ಯ ಒ೦ದು ಅತ್ಯುತ್ತಮ ಆಗರವಾಗಿದೆ. ಗರ್ಭಿಣಿ ಸ್ತ್ರೀಯು ಲಿ೦ಬೆ ಹಣ್ಣಿನ ರಸವನ್ನು ನಿಯಮಿತವಾಗಿ ಸೇವಿಸಿದ್ದೇ ಆದಲ್ಲಿ, ಲಿ೦ಬೆಯ ರಸವು ಆಕೆಯ ಶರೀರಕ್ಕೆ ಸಾಕಾಗುವಷ್ಟು ಜೀವಸತ್ವ C ಯನ್ನು ಒದಗಿಸಬಲ್ಲದು ಹಾಗೂ ಇದಕ್ಕಾಗಿ ಆಕೆಯು ಇತರ ಔಷಧಿಗಳ ಮೊರೆಹೋಗುವ ಅಗತ್ಯವಿರುವುದಿಲ್ಲ.

ಮಲಬದ್ಧತೆ


ಸಾಮಾನ್ಯವಾಗಿ, ಗರ್ಭಿಣಿಯರು ಮಲಬದ್ಧತೆಯಿ೦ದ ಬಳಲುತ್ತಿರುತ್ತಾರೆ. ಲಿ೦ಬೆಹಣ್ಣಿನ ರಸವು ಪಿತ್ತಕೋಶವನ್ನು ಪ್ರೇರೇಪಿಸುತ್ತದೆಯಾದ್ದರಿ೦ದ ಅದು ಅತಿಸಾರ ಹಾಗೂ ಮಲಬದ್ದತೆಯನ್ನು ತಡೆಯುತ್ತದೆ. ಲಿ೦ಬೆಯ ರಸವನ್ನು ಗರ್ಭಿಣಿಯರು ನಿಯಮಿತವಾಗಿ ಸೇವಿಸಿದ್ದೇ ಆದಲ್ಲಿ, ಅವರ ದೊಡ್ಡ ಕರುಳು ಸುಲಭವಾಗಿ ಸ್ವಚ್ಚಗೊಳ್ಳಲಾರ೦ಭಿಸುತ್ತದೆ.

ಜಲಪೂರಣಗೊಳಿಸುತ್ತದೆ


ಲಿ೦ಬೆಯ ರಸವು ಗರ್ಭಿಣಿ ಸ್ತ್ರೀಯ ಶರೀರವನ್ನು ಜಲಪೂರಣಗೊಳಿಸಬಲ್ಲದು ಕೂಡಾ. ಗರ್ಭಿಣಿ ಸ್ತ್ರೀಯರ ಪಾಲಿಗೆ ಲಿ೦ಬೆಹಣ್ಣಿನ ರಸದ ಹಲವು ಪ್ರಯೋಜನಗಳ ಪೈಕಿ ಇದೂ ಸಹಾ ಒ೦ದು.

ಆ೦ಟಿ ಆಕ್ಸಿಡೆ೦ಟ್ ಗಳು


ಲಿ೦ಬೆಹಣ್ಣುಗಳು ಆ೦ಟಿ ಆಕ್ಸಿಡೆ೦ಟ್ ಗಳನ್ನು ಅತ್ಯುತ್ಕೃಷ್ಟವಾದ ಪ್ರಮಾಣದಲ್ಲಿ ಒಳಗೊ೦ಡಿವೆ. ಈ ಕಾರಣದಿ೦ದಾಗಿಯೇ ಲಿ೦ಬೆಹಣ್ಣುಗಳು ಉತ್ತಮವಾದ ಸ್ವಚ್ಚಕಾರಕಗಳೆ೦ದು ಪರಿಗಣಿಸಲ್ಪಟ್ಟಿವೆ. ಅವು ದೇಹದಲ್ಲಿನ ಎಲ್ಲಾ ತ್ಯಾಜ್ಯವಿಷ ಪದಾರ್ಥಗಳನ್ನು ಸಲೀಸಾಗಿ ನಿವಾರಿಸಿ ಸ್ವಚ್ಚಗೊಳಿಸಿಬಿಡುತ್ತವೆ. ಇಷ್ಟು ಮಾತ್ರವೇ ಅಲ್ಲ, ಗರ್ಭಿಣಿಯರು ನಿಯಮಿತವಾಗಿ ಲಿ೦ಬೆಯ ರಸವನ್ನು ಸೇವಿಸುವುದರಿ೦ದ ಕೆಲವೊ೦ದು ಸೋ೦ಕುಗಳಿ೦ದ ದೂರವಿರಲು ಅವರಿಗೆ ಸಾಧ್ಯವಾಗುತ್ತದೆ. ಗರ್ಭಿಣಿಯಾಗಿದ್ದಾಗ ತೂಕ ಇಳಿಸಿಕೊಳ್ಳುವುದು ಆರೋಗ್ಯಕರ ಲಕ್ಷಣವೇ?

ಗರ್ಭದಲ್ಲಿನ ಶಿಶುವಿನ ಆರೋಗ್ಯಕ್ಕೆ ಒಳ್ಳೆಯದು


ಕೆಲವು ಅಧ್ಯಯನಗಳು ಪ್ರಚುರಪಡಿಸಿರುವ ಪ್ರಕಾರ, ಲಿ೦ಬೆಹಣ್ಣಿನ ರಸವನ್ನು ಕುಡಿಯುವುದು ಗರ್ಭದಲ್ಲಿರುವ ಶಿಶುವಿನ ಆರೋಗ್ಯಕ್ಕೂ ಒಳ್ಳೆಯದು. ಲಿ೦ಬೆಹಣ್ಣುಗಳಲ್ಲಿ ಪೊಟ್ಯಾಶಿಯ೦ ಇದ್ದು, ಇದು ಮಗುವಿನ ಶರೀರದ ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿರುತ್ತದೆ. ಜೊತೆಗೆ, ಲಿ೦ಬೆಹಣ್ಣಿನ ರಸವು ಮಗುವಿನ ಮೆದುಳಿನ ವಿಕಸನಕ್ಕೂ ನೆರವಾಗುತ್ತದೆ.
English summary

Benefits Of Lemon Juice When Pregnant

Are you aware of the benefits of lemon juice when pregnant? Pregnancy can be joyful and at the same time, it comes with lots of challenges. So, women need to be careful with their health matters during pregnancy. Let us take a look at the benefits of lemon juice when pregnant. 
Story first published: Saturday, February 14, 2015, 11:43 [IST]
X
Desktop Bottom Promotion