For Quick Alerts
ALLOW NOTIFICATIONS  
For Daily Alerts

ಆಹಾ ಎಳನೀರು, ನಿಜಕ್ಕೂ ಗರ್ಭಿಣಿಯರ ಪಾಲಿಗೆ ಪನ್ನೀರು!

By Deepak
|

ನಿಮಗೆ ಆಶ್ಚರ್ಯವಾಗಬಹುದು, ತೆಂಗಿನಕಾಯಿಯಿಂದ ಎಷ್ಟೊಂದು ಪ್ರಯೋಜನಗಳು ದೊರೆಯುತ್ತವೆ ಎಂಬುದನ್ನು ಕೇಳಿದರೆ. ತೆಂಗಿನಕಾಯಿಯಲ್ಲಿ ಪೊಟಾಶಿಯಂ ಮತ್ತು ಎಲೆಕ್ಟ್ರೋಲೈಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದರಲ್ಲಿ ವಿಟಮಿನ್, ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ ತೆಂಗಿನಕಾಯಿಯನ್ನು ಯಾವುದೇ ರೂಪದಲ್ಲಿ ಸೇವಿಸಿದರು ಮೂಳೆಗಳಿಗೆ ಉತ್ತಮ ಆರೋಗ್ಯ ದೊರೆಯುತ್ತದೆಯಂತೆ.

ತೂಕವನ್ನು ನಿಯಂತ್ರಿಸಲು, ಹಾರ್ಮೋನುಗಳನ್ನು ಉತ್ಪಾದಿಸಲು ಮತ್ತು ಉರಿಬಾವುಗಳನ್ನು ಕಡಿಮೆ ಮಾಡಲು ತೆಂಗಿನ ಕಾಯಿ ಉತ್ತಮ ಪ್ರಯೋಜನವನ್ನು ನೀಡುತ್ತದೆ. ಎಳ ನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗು ಗೊತ್ತು. ಎಳನೀರು ಒಳ್ಳೆಯದು ಹಾಗಾಗಿ ಗರ್ಭಿಣಿಯರು ಎಳನೀರನ್ನು ಕಡ್ಡಾಯವಾಗಿ ಸೇವಿಸುವುದು ಒಳ್ಳೆಯದು. ಆದರೆ ತಾಜಾ ಎಳನೀರನ್ನು ಆರಿಸಿಕೊಂಡು ಸೇವಿಸಿ. ತೆಂಗಿನಕಾಯಿಯಲ್ಲಿ ಸಕ್ಕರೆಯ ಪ್ರಮಾಣವು ಸಹ ಆರೋಗ್ಯಕಾರಿ ಮಟ್ಟದಲ್ಲಿರುತ್ತದೆ.

 /pregnancy-parenting/post-natal/2014/nutrients-found-breast-milk-008848.html

ಇದರಲ್ಲಿರುವ ವಿಟಮಿನ್ ಸಿ, ರಿಬೊಫ್ಲಾವಿನ್, ಮ್ಯಾಂಗನೀಸ್ ಮತ್ತು ಡಯಟೆರಿ ಫೈಬರ್‌ನಂತಹ ಇತರ ಪೋಷಕಾಂಶಗಳು ಸಹ ಗರ್ಭಿಣಿಯರಿಗೆ ಉತ್ತಮ ಆರೋಗ್ಯವನ್ನು ನೀಡುತ್ತವೆ. ಈ ಅಂಕಣದ ಆರಂಭದಲ್ಲಿ ಚರ್ಚಿಸಿದಂತೆ ಗರ್ಭಿಣಿಯರಿಗೆ ತೆಂಗಿನಕಾಯಿಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳು ಲಭಿಸುತ್ತವೆ. ಆದರೂ ಸಹ ಯಾವುದನ್ನಾದರು ಸೇವಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆದು ಮುಂದುವರಿಯುವುದು ಗರ್ಭಿಣಿಯರಿಗೆ ಉತ್ತಮ. ಮಗುವಿಗೆ ಹಾಲುಣಿಸಿದ ನಂತರವೂ ಸ್ತನ ಗಾತ್ರವನ್ನು ಕಾಯ್ದುಕೊಳ್ಳುವುದು ಹೇಗೆ?

ರೋಗ ನಿರೋಧಕ ಶಕ್ತಿ
ತೆಂಗಿನ ಕಾಯಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಗರ್ಭಿಣಿ ಹೆಂಗಸರು ಎಳನೀರನ್ನು ದಿನಕ್ಕೆ ಎರಡು ಬಾರಿ ಅಥವಾ ನಿಯಮಿತವಾಗಿ ಕುಡಿಯಬೇಕು ಎಂದು ವೈದ್ಯರ ಶಿಫಾರಸು ಮಾಡುತ್ತಾರೆ.

ಮಲಬದ್ಧತೆಯನ್ನು ತಡೆಯುತ್ತದೆ
ಎಳನೀರನ್ನು ನಿಯಮಿತವಾಗಿ ಪ್ರತಿನಿತ್ಯ ಕುಡಿಯುವುದರಿಂದ ಗರ್ಭಿಣಿಯರಲ್ಲಿ ಮಲಬದ್ಧತೆ ಕಾಣಿಸಿಕೊಳ್ಳುವುದಿಲ್ಲ. ಇನ್ನು ಕೆಲವೊಂದು ಮೂಲಗಳ ಪ್ರಕಾರ ಎಳನೀರು ಕುಡಿಯುವುದರಿಂದ ಗರ್ಭಿಣಿಯರಲ್ಲಿ ಎದೆ ಉರಿ ಕಾಣಿಸಿಕೊಳ್ಳುವುದಿಲ್ಲವಂತೆ. ಇದು ಗರ್ಭಿಣಿಯರಿಗೆ ವರದಾನವಾಗುವ ಒಂದು ಪ್ರಯೋಜನವಾಗಿದೆ. ಎದೆ ಹಾಲೆಂಬ ಅಮೃತದಲ್ಲಿದೆ ಅತ್ಯುನ್ನತ ಪೋಷಕಾಂಶಗಳು

ಜೀರ್ಣಶಕ್ತಿ
ಗರ್ಭಿಣಿಯರಿಗೆ ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಎಳನೀರು ಸಿಕ್ಕಾಪಟ್ಟೆ ಸಹಾಯ ಮಾಡುತ್ತದೆ. ಹಾಗಾಗಿ ಗರ್ಭಿಣಿಯರು ತಾವು ತಿಂದದ್ದನ್ನು ಜೀರ್ಣಿಸಿಕೊಳ್ಳಲು ಎಳನೀರು ಕುಡಿದರೆ ಉತ್ತಮ.

ಶಕ್ತಿಯನ್ನು ನೀಡುತ್ತದೆ
ಗರ್ಭಿಣಿಯರು ಪದೇ ಪದೇ ಸುಸ್ತಾಗುವುದು ಸಹಜ. ಎಳನೀರು ಕುಡಿಯುವುದರಿಂದ ಅವರಿಗೆ ತಕ್ಷಣದಲ್ಲಿ ಶಕ್ತಿಯು ದೊರೆಯುತ್ತದೆ.

ಎದೆ ಹಾಲು
ಎಳನೀರನ್ನು ಕುಡಿಯುವುದರಿಂದ ಎದೆ ಹಾಲಿನ ಉತ್ಪಾದನೆಯು ಸಹ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಎಳ ನೀರು ಆರೋಗ್ಯಕರವಾದ ಎದೆ ಹಾಲಿಗೆ ಕಾರಣವಾಗುತದೆ. ಇದು ಸಹ ಗರ್ಭಿಣಿಯರಿಗೆ ಉತ್ತಮವಾದ ಪ್ರಯೋಜನ. ಇಷ್ಟೆಲ್ಲ ಉಪಯೋಗ ಅದು ಸ್ವಾಭಾವಿಕ ಮಾರ್ಗದಲ್ಲಿ ಏಕೆ ಕಳೆದುಕೊಳ್ಳುತ್ತೀರಿ.

English summary

Benefits Of Coconut During Pregnancy

Are you wondering about the benefits of coconut during pregnancy? Well, coconuts are rich in potassium and high in electrolytes. It also contains vitamins, calcium and magnesium too. coconut water is healthy, pregnant women must consume it in moderate quantities. have a look
X
Desktop Bottom Promotion