For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕಂಡುಬರುವ ಲಕ್ಷಣಗಳು ಅನುವಂಶೀಯವೇ?

By Super
|

ನಿಮಗಿದು ಮೊದಲನೇ ಗರ್ಭಾವಸ್ಥೆಯೇ? ಅಭಿನಂದನೆಗಳು. ಬರಲಿರುವ ಕಂದನ ಕನಸಿನಲ್ಲಿ ಮನಸ್ಸು ಏಳನೆಯ ಆಕಾಶದಲ್ಲಿ ಹಾರಾಡುತ್ತಿದ್ದರೆ ದೇಹ ಮಾತ್ರ ಹಲವು ಬದಲಾವಣೆಗಳಿಗೆ ಒಳಪಡುತ್ತಾ ಇರುತ್ತದೆ. ಹುಳಿ ತಿನ್ನುವ ಬಯಕೆ, ದೊಡ್ಡದಾಗುತ್ತಿರುವ ಹೊಟ್ಟೆ, ಸುಸ್ತು, ವಾಕರಿಕೆ, ಸರಿಯಾಗಿ ನಿದ್ದೆ ಬರದಿರುವುದು, ತಾತ್ಕಾಲಿಕವಾದ ಗರ್ಭಾವಸ್ಥೆಯ ಮಧುಮೇಹ (gestational diabetes), ಮೊದಲಾದ ಹಲವು ದೈಹಿಕ ತೊಂದರೆಗಳು ಎದುರಾಗಬಹುದು. ಗರ್ಭಿಣಿಯರ ಪ್ರಾಣ ಹಿಂಡುವ ವಾಂತಿ ಸಮಸ್ಯೆಗೆ ಕಡಿವಾಣ ಹಾಕುವುದು ಹೇಗೆ?

ಆದರೆ ಇವುಗಳಲ್ಲಿ ಹಲವು ಅನುವಂಶೀಯವಾದುದೆಂದು ನಿಮಗೆ ಗೊತ್ತಿತ್ತೇ? ಒಂದು ವೇಳೆ ನಿಮ್ಮ ತಾಯಿಗೂ ನಿಮ್ಮ ಜನನದ ವೇಳೆಯಲ್ಲಿ ಈ ಲಕ್ಷಣಗಳು ಕಂಡುಬಂದಿದ್ದರೆ ನಿಮಗೂ ಇವುಗಳಲ್ಲಿ ಕೆಲವು ಕಂಡುಬರುವ ಸಾಧ್ಯತೆ ಹೆಚ್ಚು ಎನ್ನುತ್ತವೆ ಇತ್ತೀಚಿನ ಸಂಶೋಧನೆಗಳು!

ಇದರಲ್ಲಿ ಆತಂಕಕಾರಿಯಾದ ಕೆಲವು ಲಕ್ಷಣಗಳೆಂದರೆ ಹುಟ್ಟುವ ಮಗುವಿನ ಗಾತ್ರ ಸಾಮಾನ್ಯಕ್ಕಿಂತಲೂ ಕೊಂಚ ಹೆಚ್ಚಿರುವುದು. ಇದು ಹೆರಿಗೆಯನ್ನು ಕಷ್ಟಕರವನ್ನಾಗಿಸುವುದು ಮಾತ್ರವಲ್ಲ, ಹೆರಿಗೆಯ ಅವಧಿಯನ್ನೂ ಹೆಚ್ಚಿಸುತ್ತದೆ. ಒಂದು ವೇಳೆ ನಿಮ್ಮ ತಾಯಿ ಅಥವಾ ಅತ್ತೆ (ಗಂಡನ ತಾಯಿ) ಈ ತೊಂದರೆಯನ್ನು ಅನುಭವಿಸಿದ್ದಿದ್ದರೆ ನಿಮಗೂ ಈ ತೊಂದರೆಯ ಸಾಧ್ಯತೆ ಹೆಚ್ಚು! ಅಷ್ಟೇ ಅಲ್ಲ, ನಿಮ್ಮ ಪತಿ ಹುಟ್ಟಿದ್ದಾಗ ಅವರ ತೂಕ ಎಷ್ಟಿತ್ತು ಎಂಬ ಮಾಹಿತಿಯೂ ಈ ತೊಂದರೆಯ ಮೇಲೆ ಪ್ರಭಾವ ಬೀರಬಲ್ಲುದು. ಗರ್ಭಿಣಿಯರೇ ಎಚ್ಚರ, ನಿಮಗೂ ಇದೇ ಸಮಸ್ಯೆ ಎದುರಾಗಬಹುದು!

ಬೆಳಗ್ಗಿನ ಸಮಯದ ವಾಕರಿಕೆಗೂ ಅನುವಂಶೀಯತೆ ಕಾರಣ ಎಂದು ಈಗ ಸಾಬೀತಾಗಿದೆ. ಆದ್ದರಿಂದ ನಿಮ್ಮ ಮನೆಯವರ ಮತ್ತು ನಿಮ್ಮ ಪತಿಯ ಕುಟುಂಬದ ಹತ್ತಿರದ ಸದಸ್ಯರ ಹೆರಿಗೆಯ ಸಮಯದಲ್ಲಿ ತಲೆದೋರಿದ ಸಮಸ್ಯೆಗಳನ್ನು ಕಲೆಹಾಕಿ ಅದರಲ್ಲಿ ಯಾವ ತೊಂದರೆ ನಿಮ್ಮನ್ನು ಬಾಧಿಸಬಹುದು ಎಂದು ಸ್ಥೂಲವಾಗಿ ಅಂದಾಜಿಸಲು ಕೆಳಗಿನ ಸ್ಲೈಡ್ ಶೋ ನಿಮಗೆ ಉಪಯುಕ್ತ ನೆರವು ನೀಡಲಿದೆ. ಇದರ ಮೂಲಕ ಈ ತೊಂದರೆಗಳಿಗೆ ನೀವು ಸಿದ್ಧರಾಗಿದ್ದು ಹೆಚ್ಚಿನ ತೊಂದರೆ ಅನುಭವಿಸುವುದರಿಂದ ತಪ್ಪಿಸಿಕೊಳ್ಳಬಹುದು. ನಿಮಗೆ ಶುಭವಾಗಲಿ..

ಬೆಳಗಿನ ಜಾವದ ವಾಕರಿಕೆ: ಅನುವಂಶೀಯವೇ- ಹೌದು

ಬೆಳಗಿನ ಜಾವದ ವಾಕರಿಕೆ: ಅನುವಂಶೀಯವೇ- ಹೌದು

ಒಂದು ವೇಳೆ ನಿಮ್ಮ ತಾಯಿ ಬೆಳಗ್ಗಿನ ವಾಕರಿಕೆಯಿಂದ ಬಳಲಿದ್ದರೆ ನೀವು ಕೂಡಾ ಈ ತೊಂದರೆಯಿಂದ ಬಳಲುವ ಸಾಧ್ಯತೆ ಬಲು ಹೆಚ್ಚು. ಈ ತೊಂದರೆ ಅನುವಂಶೀಯವಾಗಿ ಸಮಾನವಾಗಿರುವ ಹಲವಾರು ಪ್ರಕರಣಗಳನ್ನು ಪರಿಶೀಲಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಆದ್ದರಿಂದ ನಿಮ್ಮ ತಾಯಿಗೂ ಈ ತೊಂದರೆ ಇದ್ದಿದ್ದರೆ ಇದನ್ನು ತಡೆಯಲು ಸಾಧ್ಯವಿಲ್ಲದಿರುವುದರಿಂದ ಎದುರಿಸಲು ಮತ್ತು ಸೂಕ್ತವಾದ ಔಷಧಿಗಳನ್ನು ಪಡೆಯಲು ತಯಾರಿ ಮಾಡಿಕೊಳ್ಳುವುದು ಜಾಣತನ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬೆಳಗಿನ ಜಾವದ ವಾಕರಿಕೆ: ಅನುವಂಶೀಯವೇ- ಹೌದು

ಬೆಳಗಿನ ಜಾವದ ವಾಕರಿಕೆ: ಅನುವಂಶೀಯವೇ- ಹೌದು

ಸರಳ ಉಪಾಯವೆಂದರೆ ನಿಮ್ಮ ಹೊಟ್ಟೆಯನ್ನು ಎಂದಿಗೂ ಖಾಲಿ ಇರಲು ಬಿಡದಿರಿ. ಆಗಾಗ (ಅಂದರೆ ಗರಿಷ್ಟ ಮೂರು ಗಂಟೆಗಳ ಅವಧಿಯೊಳಗೆ) ಅಲ್ಪ ಆಹಾರಗಳನ್ನು ಸೇವಿಸುತ್ತಿರಿ. ಹಣ್ಣುಗಳ ರಸ ಉತ್ತಮ ಆಯ್ಕೆಯಾಗಿದೆ. ವೈದ್ಯರ ಸಲಹೆ ಪಡೆದು ವಿಟಮಿನ್ B6 ಗುಳಿಗೆಗಳನ್ನೂ ಸೇವಿಸಬಹುದು.

ಗರ್ಭಾಪಾತ : ಸರ್ವಥಾ ಅನುವಂಶೀಯವಲ್ಲ

ಗರ್ಭಾಪಾತ : ಸರ್ವಥಾ ಅನುವಂಶೀಯವಲ್ಲ

ಗರ್ಭಾಪಾತಕ್ಕೆ ಅನುವಂಶೀಯತೆ ಸರ್ವಥಾ ಕಾರಣವಲ್ಲ. ಇದಕ್ಕೆ ಗರ್ಭಿಣಿಯ ಆ ಹೊತ್ತಿನ ಆರೋಗ್ಯ, ಮಾನಸಿಕ ಸ್ಥಿತಿ, ದೈಹಿಕ ಸ್ಥಿತಿ, ಆರೈಕೆಯಲ್ಲಿ ಕೊರತೆ, ತಪ್ಪು ಔಷಧ ಅಥವಾ ಆಹಾರಗಳನ್ನು (ಉದಾಹರಣೆಗೆ ಹಸಿ ಪಪ್ಪಾಯಿ) ಸೇವಿಸುವುದು ಮೊದಲಾದ ಹಲವಾರು ಕಾರಣಗಳಿವೆ. ಒಂದು ವೇಳೆ ನಿಮ್ಮ ಅಥವಾ ನಿಮ್ಮ ಪತಿಯ ಕುಟುಂಬದ ಯಾವುದೇ ಸದಸ್ಯರಿಗೆ ಗರ್ಭಾಪಾತವಾಗಿದ್ದ ಇತಿಹಾಸವಿದ್ದರೆ ನಿಮಗೂ ಆಗುವ ಸಾಧ್ಯತೆಗಳು ಎಳ್ಳಷ್ಟೂ ಇಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗರ್ಭಾಪಾತ : ಸರ್ವಥಾ ಅನುವಂಶೀಯವಲ್ಲ

ಗರ್ಭಾಪಾತ : ಸರ್ವಥಾ ಅನುವಂಶೀಯವಲ್ಲ

ಆದ್ದರಿಂದ ಇದರ ಬಗ್ಗೆ ಚಿಂತಿಸದೇ ನಿಮ್ಮ ವೈದ್ಯರು ಸೂಚಿಸಿದ ಆಹಾರ, ಔಷಧಿ, ವ್ಯಾಯಾಮ, ನಿದ್ದೆ ಮೊದಲಾದವುಗಳನ್ನು ಕಾಲಕಾಲಕ್ಕೆ ಸರಿಯಾಗಿ ಸೇವಿಸುತ್ತಾ ನಿಮ್ಮ ಆರೋಗ್ಯವನ್ನು (ಮಾನಸಿಕ ಮತ್ತು ದೈಹಿಕ) ಉತ್ತಮ ಮಟ್ಟದಲ್ಲಿರಿಸಿಕೊಳ್ಳುವುದು ಶ್ರೇಯಸ್ಕರ.

ಗರ್ಭಾವಸ್ಥೆಯ ತಾತ್ಕಾಲಿಕ ಮಧುಮೇಹ: ಅನುವಂಶೀಯವೇ- ಹೌದು

ಗರ್ಭಾವಸ್ಥೆಯ ತಾತ್ಕಾಲಿಕ ಮಧುಮೇಹ: ಅನುವಂಶೀಯವೇ- ಹೌದು

Gestational Diabetes ಅಥವಾ ಗರ್ಭಾವಸ್ಥೆಯ ತಾತ್ಕಾಲಿಕ ಮಧುಮೇಹ ಸಹಾ ಅನುವಂಶೀಯವಾಗಿದೆ. ನಿಮ್ಮ ತಾಯಿಗೆ ಈ ತೊಂದರೆ ಇದ್ದಿದ್ದರೆ ನಿಮಗೂ ಇದು ಬರುವ ಸಾಧ್ಯತೆ ಹೆಚ್ಚು. ಆದರೆ ಗಂಡನ ಮನೆಯ ಸದಸ್ಯರಿಗೆ ಯಾರಿಗಾದರೂ ಇದ್ದಿದ್ದರೆ ಸಂಭವ ಕಡಿಮೆ, ಆದರೆ ಅಸಂಭವವಲ್ಲ. ಆದ್ದರಿಂದ ಹಿಂದೆ ಈ ತೊಂದರೆ ಇದ್ದ ಮಾಹಿತಿ ಲಭಿಸಿದರೆ ಇದನ್ನು ಎದುರಿಸಲು ಸೂಕ್ತ ತಯಾರಿಗಳನ್ನು ಮಾಡಿಕೊಳ್ಳುವುದೇ ಜಾಣತನ. ಗರ್ಭವಾಸ್ಥೆಯಲ್ಲಿ ನಿಮ್ಮ ಆರೋಗ್ಯಕ್ಕೆ ಪೂರಕವಾದ, ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ನೆರವಾಗುವ ಆಹಾರಗಳನ್ನೇ ಸೇವಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗರ್ಭಾವಸ್ಥೆಯ ತಾತ್ಕಾಲಿಕ ಮಧುಮೇಹ: ಅನುವಂಶೀಯವೇ- ಹೌದು

ಗರ್ಭಾವಸ್ಥೆಯ ತಾತ್ಕಾಲಿಕ ಮಧುಮೇಹ: ಅನುವಂಶೀಯವೇ- ಹೌದು

ಇದಕ್ಕೆ ಉತ್ತಮವಾದ ಮದ್ದು ಎಂದರೆ ನಡಿಗೆ ಮತ್ತು ಕೊಂಚ ಬಗ್ಗಿ ಮಾಡುವ (ಉದಾಹರಣೆಗೆ ಕಸ ಗುಡಿಸುವುದು) ವ್ಯಾಯಾಮಗಳು. ದಿನಕ್ಕೆ ಒಂದೆರಡು ಘಂಟೆಗಳಾದರೂ ನಡೆಯುವುದು ಈ ಮಧುಮೇಹವನ್ನು ದೂರದಲ್ಲಿರಿಸುತ್ತದೆ. ಸಕ್ಕರೆಯನ್ನು ದೂರವಿರಿಸುವುದು ಇನ್ನೊಂದು ಕ್ರಮ. ಸಕ್ಕರೆಯ ಬದಲಿಗೆ ಬೆಲ್ಲ, ಜೇನು ಮೊದಲಾದವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

ಹುಟ್ಟುವ ಮಗುವಿನ ಗಾತ್ರ ದೊಡ್ಡದಿರುವುದು: ಅನುವಂಶೀಯವೇ- ಹೌದು

ಹುಟ್ಟುವ ಮಗುವಿನ ಗಾತ್ರ ದೊಡ್ಡದಿರುವುದು: ಅನುವಂಶೀಯವೇ- ಹೌದು

ಒಂದು ವೇಳೆ ನೀವು ಅಥವಾ ನಿಮ್ಮ ಪತಿ ಹುಟ್ಟಿದಾದ ಶಿಶುವಿನ ಗಾತ್ರ ಸಾಮಾನ್ಯಕ್ಕಿಂತ ಹೆಚ್ಚಿದ್ದರೆ ನಿಮ್ಮ ಮಗುವಿನ ಗಾತ್ರವೂ ಹೆಚ್ಚಿರುವ ಸಾಧ್ಯತೆ ಅಧಿಕವಾಗಿದೆ. ತದ್ವಿರುದ್ದವಾಗಿ ಶಿಶುವಿನ ಗಾತ್ರ ಸಾಮಾನ್ಯಕ್ಕಿಂತಲೂ ಕಡಿಮೆ ಇದ್ದಿದ್ದರೆ ನಿಮಗೆ ಹುಟ್ಟುವ ಮಗುವಿನ ಗಾತ್ರವೂ ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆ ಹೆಚ್ಚು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹುಟ್ಟುವ ಮಗುವಿನ ಗಾತ್ರ ದೊಡ್ಡದಿರುವುದು: ಅನುವಂಶೀಯವೇ- ಹೌದು

ಹುಟ್ಟುವ ಮಗುವಿನ ಗಾತ್ರ ದೊಡ್ಡದಿರುವುದು: ಅನುವಂಶೀಯವೇ- ಹೌದು

ಇದಕ್ಕಾಗಿ ಮೊದಲಿನಿಂದಲೇ ತಯಾರಿ ಮಾಡಿಕೊಳ್ಳುವುದು ಮುಖ್ಯ. ದೊಡ್ಡ ಗಾತ್ರದ ಮಗುವಿನ ಸಾಧ್ಯತೆ ಇದ್ದರೆ ನಿಮ್ಮ ಆಹಾರದಲ್ಲಿ ನಿಯಂತ್ರಣ, ವೈದ್ಯರು ಅನುಮಾನಿಸಿದ ಹೆರಿಗೆಯ ದಿನಕ್ಕೂ ಒಂದೆರಡು ದಿನ ಮೊದಲೇ ಪ್ರಸೂತಿಗೃಹದಲ್ಲಿ ದಾಖಲಾತಿ ಪಡೆದು ಸೂಕ್ತ ಔಷಧಿ ಮತ್ತು ಆರೈಕೆಗಳನ್ನು ಪಡೆಯುವುದು ಜಾಣತನ.

English summary

Are Pregnancy Conditions Hereditary?

Your first pregnancy is full of excitement and unknown symptoms. There are some pregnancy conditions and symptoms that are hereditary. This means if you mom had any health conditions during her pregnancy such as gestational diabetes, chances are that you may also have the same problem during your pregnancy. 
Story first published: Friday, July 31, 2015, 10:17 [IST]
X
Desktop Bottom Promotion