For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ರಕ್ತಸ್ರಾವ: ಮಗುವಿನ ಮೇಲೆ ಪರಿಣಾಮ ಬೀರಬಹುದೇ?

By Super
|

ಗರ್ಭಿಣಿಯಾಗುವುದು ಎಂಥಾ ಒಂದು ಅದ್ಭುತವಾದ ಅನುಭವವೋ, ಅಷ್ಟೇ ಚಿಂತೆಗೀಡು ಮಾಡುವಂತಹ ಕೆಲವೊಂದು ಘಟನೆಗಳ ಅನುಭವವು ಸಹ ಹೌದು. ಇಲ್ಲಿ ಖುಷಿಯ ಜೊತೆಗೆ ಕಿರಿಕಿರಿಯು ಉಚಿತವಾಗಿ ದೊರೆಯುತ್ತದೆ. ಬೆಳಗ್ಗೆ ಎದ್ದ ಕೂಡಲೆ ಮಂಕು ಕವಿದಂತಿರುವುದು, ನೋವಿನಿಂದ ಊದಿಕೊಳ್ಳುವ ಸ್ತನಗಳು ಮತ್ತು ಪಾದಗಳು ಮತ್ತು ವಾತ ಇವೆಲ್ಲವು ಸಹಜವಾಗಿ ಸಂಭವಿಸುತ್ತ ಇರುತ್ತವೆ. ಆದರೆ ಇವೆಲ್ಲವುಗಳಿಗಿಂತ ಗರ್ಭಿಣಿಯರನ್ನು ಭಯಭೀತರನ್ನಾಗಿ ಮಾಡುವುದು ಅನಿರೀಕ್ಷಿತ ರಕ್ತಸ್ರಾವ. ಇದು ನಿಜಕ್ಕೂ ಭಯಾನಕವಾದ ಘಟನೆಯಾಗಿರುತ್ತದೆ.

ಆದರೂ ಇದರ ಕುರಿತಾಗಿ ವೈಧ್ಯರ ಅಭಿಪ್ರಾಯ ಸಮಾಧಾನಕರವಾಗಿರುತ್ತದೆ. ಹೀಗೆ ಆಗಲು ಹಲವಾರು ಕಾರಣಗಳು ಇರುತ್ತವೆ ಎಂಬುದು ಅವರ ನಿಲುವು. ನಿಜಕ್ಕೂ ಇದು ಗಂಭೀರವಾದ ವಿಚಾರವಾದರು, ರಕ್ತಸ್ರಾವ ಆದ ಕೂಡಲೆ ನೀವು ಮಗುವನ್ನು ಕಳೆದುಕೊಳ್ಳುತ್ತೀರಿ ಎಂಬ ಆಲೋಚನೆ ತಪ್ಪು. ಬನ್ನಿ ಗರ್ಭಿಣಿಯರಲ್ಲಿ ರಕ್ತಸ್ರಾವ ಕಂಡು ಬರಲು ಇರುವ 11 ಕಾರಣಗಳ ಕುರಿತು ತಿಳಿದುಕೊಂಡು ಬರೋಣ. ಇದನ್ನು ತಿಳಿದುಕೊಳ್ಳುವ ಮೊದಲು ನೀವು ತಿಳಿಯಬೇಕಾದ ವಿಚಾರವೇನೆಂದರೆ, ಗರ್ಭಿಣಿಯರಲ್ಲಿ ರಕ್ತಸ್ರಾವವು ಸರ್ವೇಸಾಮಾನ್ಯವಾಗಿ ಕಂಡು ಬರುವ ಲಕ್ಷಣವೆಂಬುದು. ಅದರಲ್ಲೂ " ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ.40 ರಷ್ಟು ಗರ್ಭಿಣಿಯರಲ್ಲಿ ಇದು ಕಂಡು ಬರುತ್ತದೆ" ಎಂದು ವೈದ್ಯರು ತಿಳಿಸಿದ್ದಾರೆ.

ರಕ್ತವನ್ನು ನೋಡಿ ಭಯಪಡುವ ಬದಲು, ಅದನ್ನು ನೋಡಿಯೇ ಅದು ಗಂಭೀರವೇ, ಅಲ್ಲವೇ ಎಂದು ನಿರ್ಧರಿಸಬಹುದು (ಅಂದರೆ ಬಣ್ಣ, ಗಾತ್ರ ಮತ್ತು ಅದರ ಸ್ವರೂಪ). "ಕಡುಗೆಂಪು ಅಥವಾ ಕಂದು ಬಣ್ಣದ ರಕ್ತವು ಹಳೆಯದು ಎಂದು ಸೂಚಿಸುತ್ತದೆ ಮತ್ತು ಗರ್ಭಕ್ಕೆ ಸಂಬಂಧಿಸಿದ್ದಲ್ಲ ಎಂದು ಸೂಚಿಸುತ್ತದೆ. ಇದು ಸಾಮಾನ್ಯವಾಗಿ ದುಷ್ಪರಿಣಾಮದಂತೆ ತೋರಿದರು, ಇದರಿಂದ ಗರ್ಭದ ಮೇಲೆ ಅಪಾಯವೇನು ಸಂಭವಿಸುವುದಿಲ್ಲ. ಗುಲಾಬಿ ಬಣ್ಣದ ರಕ್ತವು ಬಹುಶಃ ಗರ್ಭ ಕಂಠದ ಹಿಗ್ಗುವಿಕೆ, ಸವೆತ ಅಥವಾ ಇನ್ನಿತರ ಕಾರಣಗಳ ಸಲುವಾಗಿ ಕಂಡುಬರಬಹುದು. ಹೊಳೆಯುವ ಕೆಂಪು ಬಣ್ಣದ ರಕ್ತವು ಬಹುಶಃ ತಾಜಾ ರಕ್ತವಾಗಿದ್ದು, ಅದು ಸ್ರಾವವಾಗುವ ಪ್ರಮಾಣವನ್ನು ಅವಲಂಬಿಸಿ ಅದು ಅಪಾಯಕರವೇ, ಇಲ್ಲವೆ ಎಂದು ನಿರ್ಧರಿಸಬಹುದು. ಏಕೆಂದರೆ ಇದು ನಿಮ್ಮ ಗರ್ಭದ ಮೇಲೆ ಪರಿಣಾಮ ಬೀರಬಹುದಾಗಿದೆ".

ಇಂಪ್ಲಾಂಟೇಷನ್ ರಕ್ತಸ್ರಾವ

ಇಂಪ್ಲಾಂಟೇಷನ್ ರಕ್ತಸ್ರಾವ

ಇದೇಕೆ ಸಂಭವಿಸುತ್ತದೆ: ಯಾವಾಗ ಫಲವತ್ತಾದ ಅಂಡಾಣು ಗರ್ಭಕೋಶದ ಗೋಡೆಗಳಿಗೆ ಅಂಟಿಕೊಳ್ಳುತ್ತದೆಯೋ, ಆಗ ಇದು ಕಂಡು ಬರುತ್ತದೆ. ಗರ್ಭಧರಿಸಿದ ನಂತರದ 10 ರಿಂದ 14 ದಿನಗಳ ನಂತರ ಇದು ಕಂಡು ಬರುತ್ತದೆ.

ಅವಧಿ ಪೂರ್ವ ಪ್ರಸವ ವೇದನೆ

ಅವಧಿ ಪೂರ್ವ ಪ್ರಸವ ವೇದನೆ

ಇದೇಕೆ ಸಂಭವಿಸುತ್ತದೆ: ಇದನ್ನು ಅವಧಿ ಪೂರ್ವ ನೋವು ಎಂದು ಸಹ ಕರೆಯುತ್ತಾರೆ. ಇದು ನಿಮ್ಮ ದೇಹವು ಆದಷ್ಟು ಬೇಗ ಪ್ರಸವಕ್ಕೆ ತಯಾರಾಗಿದೆ ಎಂದು ಸೂಚಿಸುವಾಗ ಕಾಣಿಸಿಕೊಳ್ಳುತ್ತದೆ (ಸಾಮಾನ್ಯವಾಗಿ ಇದು 20 ವಾರಗಳ ನಂತರ ಅಥವಾ ನಿಮ್ಮ ಪ್ರಸವಕ್ಕೆ ನೀಡುಲಾದ ಗಡುವಿನ 3 ವಾರಗಳ ಮೊದಲು ಕಾಣಿಸಿಕೊಳ್ಳುತ್ತದೆ).

ಇನ್‍ಫೆಕ್ಷನ್

ಇನ್‍ಫೆಕ್ಷನ್

ಇದೇಕೆ ಸಂಭವಿಸುತ್ತದೆ: ಗರ್ಭಕಂಠದ ಮೇಲೆ ಉಂಟಾಗುವ ಇನ್‍ಫೆಕ್ಷನ್‍ಗೆ ಕಾರಣ ಲೈಂಗಿಕ ರೋಗಗಳು. ಲೈಂಗಿಕ ಕ್ರಿಯೆಯ ಮೂಲಕ ಹರಡುವ ಗೊನೊರ್ರಿಯಾ ಮತ್ತು ಹರ್ಪ್‍ಗಳಂತಹ ರೋಗಗಳು ನಿಮ್ಮ ಮಗುವಿಗೆ ಅದು ಜನಿಸುವಾಗ ನಿಮ್ಮಿಂದ ರವಾನೆಯಾಗುತ್ತದೆ. ಆದ್ದರಿಂದ ಒಂದು ವೇಳೆ ನಿಮಗೆ ಇಂತಹ ಕಾಯಿಲೆಗಳು ಇದ್ದಲ್ಲಿ, ಅದನ್ನು ವೈಧ್ಯರಿಗೆ ತಿಳಿಸಿ. ಇದರಿಂದ ಅವರು ಈ ಕಾಯಿಲೆಗಳು ಮಗುವಿಗೆ ಹರಡದೆ ಇರಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ.

ಗರ್ಭಕಂಠದ ಪಾಲಿಪ್‍ಗಳು

ಗರ್ಭಕಂಠದ ಪಾಲಿಪ್‍ಗಳು

ಇದೇಕೆ ಸಂಭವಿಸುತ್ತದೆ: ಸಾಮಾನ್ಯವಾಗಿ ಪೆಲ್ವಿಕ್ ಪರೀಕ್ಷೆ ನಡೆಸುವಾಗ ಗರ್ಭಕಂಠದಲ್ಲಿ ಇವುಗಳ ಬೆಳವಣಿಗೆ ಅಧಿಕಾವಾಗಿರುತ್ತವೆ. ಇದಕ್ಕೆ ಎಸ್ಟ್ರೋಜೆನ್ ಮಟ್ಟ, ಉರಿಯೂತಗಳು ಅಥವಾ ಗರ್ಭಕಂಠದಲ್ಲಿ ಕಟ್ಟಿಕೊಂಡ ರಕ್ತನಾಳಗಳು ಕಾರಣವಾಗಿರುತ್ತವೆ.

ಪಾಲಿಪ್‍ಗಳನ್ನು ಸಾಮಾನ್ಯವಾದ ಹೊರ ರೋಗ ವಿಧಾನದ ಮೂಲಕ ನಿವಾರಿಸಿಕೊಳ್ಳಬಹುದು." ಇದರಿಂದ ಮಗುವಿಗೆ ಯಾವುದೇ ಅಪಾಯವಿರುವುದಿಲ್ಲ. ಗರ್ಭಧಾರಣೆಯ ಆರಂಭದಲ್ಲಿ ಇದರ ಸಲುವಾಗಿ ರಕ್ತಸ್ರಾವ ಕಂಡು ಬರಬಹುದು. ಆದರೆ ಮೊದಲ ತ್ರೈಮಾಸಿಕದ ನಂತರ ಇವು ತುಂಬಾ ಅಪರೂಪವಾಗಿ ಗರ್ಭಪಾತಕ್ಕೆ ಕಾರಣವಾಗುತ್ತವೆ.

ಗರ್ಭಪಾತ

ಗರ್ಭಪಾತ

ಇದೇಕೆ ಸಂಭವಿಸುತ್ತದೆ: ಗರ್ಭಪಾತಕ್ಕೆ ಮೊದಲ ತ್ರೈಮಾಸಿಕದಲ್ಲಿ ಭ್ರೂಣದಲ್ಲಿ ಕಂಡು ಬರುವ ವರ್ಣತಂತುಗಳ ( ಕ್ರೋಮೊಸೋಮ್) ವೈಪರೀತ್ಯಗಳೇ ಪ್ರಮುಖ ಕಾರಣವಾಗಿರುತ್ತವೆ. ಇದಕ್ಕೆ ವಂಶವಾಹಿಗಳ ವೈಪರೀತ್ಯ, ಇನ್‍ಫೆಕ್ಷನ್, ಔಷಧಿಗಳು, ಹಾರ್ಮೋನ್‍ಗಳ ದುಷ್ಪರಿಣಾಮ, ಗರ್ಭಕೋಶದ ರಚನಾತ್ಮಕ ವೈಪರೀತ್ಯಗಳು ಮತ್ತು ರೋಗ ನಿರೋಧಕ ಶಕ್ತಿಯ ವೈಪರೀತ್ಯಗಳೆ ಕಾರಣವಾಗಿರುತ್ತವೆ.

ಗರ್ಭಪಾತವನ್ನು ಮುಂಚಿತವಾಗಿ ಗುರುತಿಸುವ ಅಥವಾ ತಡೆಯುವ ಯಾವುದೇ ಮಾರ್ಗಗಳು ಇಲ್ಲ. ಆದರೆ ರಕ್ತ ಸ್ರಾವವಾಗುವಾಗ , ಸಂಭೋಗದಿಂದ ದೂರವಿರಬೇಕು, ಯೋನಿಯ ಮೂಲಕ ಸ್ರವಿಸುವ ದ್ರವವನ್ನು ಗಮನಿಸಬೇಕು ಅಥವಾ ರಕ್ತ ಸ್ರಾವ ಇನ್ನೂ ಮುಂದುವರಿದಲ್ಲಿ, ನೋವು ಅಧಿಕಗೊಂಡಲ್ಲಿ, ಜ್ವರ, ಸುಸ್ತು, ತಲೆತಿರುಗುವಿಕೆ ಹೆಚ್ಚಾದಲ್ಲಿ ಹಾಸಿಗೆಯಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿರುತ್ತದೆ.

ಹೊಕ್ಕುಳಬಳ್ಳಿಯ ಪ್ರಿವಿಯ

ಹೊಕ್ಕುಳಬಳ್ಳಿಯ ಪ್ರಿವಿಯ

ಇದೇಕೆ ಸಂಭವಿಸುತ್ತದೆ: ಇದು ಮೂರನೆ ತ್ರೈಮಾಸಿಕದ ಅವಧಿಯಲ್ಲಿ ಕಂಡು ಬರುವ ಒಂದು ಸಾಮಾನ್ಯವಾದ ಅಂಶವಾಗಿರುತ್ತದೆ. ಗರ್ಭಕೋಶದ ಕೆಳಭಾಗದಲ್ಲಿ ಹೊಕ್ಕುಳ ಬಳ್ಳಿಯು ಬೆಳೆಯುವಾಗ ಮತ್ತು ಗರ್ಭಕಂಠದ ನಾಳವನ್ನು ಮುಚ್ಚಿಕೊಂಡಾಗ ಈ ಸಮಸ್ಯೆ ಕಂಡು ಬರುತ್ತದೆ. ಒಂದು ವೇಳೆ ಈ ಸಮಸ್ಯೆ ಕಂಡು ಬಂದಲ್ಲಿ, ಮಹಿಳೆಗೆ ಅತ್ಯಗತ್ಯವಾಗಿ ಹಾಸಿಗೆಯ ವಿಶ್ರಾಂತಿಯನ್ನು ನೀಡತಕ್ಕದ್ದು. ಜೊತೆಗೆ ಸಂಭೋಗದಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರವಹಿಸಬೇಕು ಹಾಗು ಯಾವುದೇ ಆಯಾಸ ತರುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು. ಒಂದು ವೇಳೆ ಪ್ರಿವಿಯ ಗರ್ಭಾವಧಿಯ ಅಂತ್ಯದಲ್ಲಿಯು ಸಹ ಗುಣವಾಗದಿದ್ದಲ್ಲಿ, ಸಿಸೇರಿಯನ್ ಮಾಡಬೇಕಾದ ಅನಿವಾರ್ಯತೆ ಇರುತ್ತದೆ.

ಹೊಕ್ಕುಳ ಬಳ್ಳಿಯ ಅಡೆತಡೆ

ಹೊಕ್ಕುಳ ಬಳ್ಳಿಯ ಅಡೆತಡೆ

ಇದೇಕೆ ಸಂಭವಿಸುತ್ತದೆ: ಶೇ.1 ರಷ್ಟು ಗರ್ಭಿಣೀಯರಲ್ಲಿ, ಹೊಕ್ಕುಳ ಬಳ್ಳಿಯು ಭ್ರೂಣದಿಂದ ಕತ್ತರಿಸಿಕೊಂಡು ಬಿಡುತ್ತದೆ ಹಾಗು ಭ್ರೂಣಕ್ಕು, ಹೊಕ್ಕುಳ ಬಳ್ಳಿಗು ನಡುವೆ ರಕ್ತವು ಕಟ್ಟಿಕೊಂಡು ಬಿಡುತ್ತದೆ.

ಇದನ್ನು ಮೊದಲು ಗಮನಿಸಿದಾಗ ನಿಜಕ್ಕು ಗಂಭೀರವಾಗಿರುತ್ತದೆ. " ಇದನ್ನು ಒಂದು ವೇಳೆ ಮೊದಲೆ ನೋಡಿಕೊಳ್ಳದಿದ್ದಲ್ಲಿ, ಅದು ಮಗುವನ್ನು ಕಳೆದುಕೊಳ್ಳುವಂತಹ ಅಪಾಯಕ್ಕೆ ತೆಗೆದುಕೊಂಡು ಹೋಗಬಹುದು. ಏಕೆಂದರೆ ಈ ಸಮಸ್ಯೆ ಉದ್ಭವಿಸಿದಾಗ ಮಗುವಿಗೆ ರಕ್ತ ಮತ್ತು ಆಮ್ಲಜನಕದ ಕೊರತೆ ಎದುರಾಗುತ್ತದೆ. ಜೊತೆಗೆ ತಾಯಿಗು ಸಹ ಅಧಿಕ ರಕ್ತಸ್ರಾವವಾಗುವ ಅಪಾಯವಿರುತ್ತದೆ.

ಗರ್ಭಾಶಯದ ಬಿರಿಯುವಿಕೆ

ಗರ್ಭಾಶಯದ ಬಿರಿಯುವಿಕೆ

ಇದೇಕೆ ಸಂಭವಿಸುತ್ತದೆ: ಒಂದು ವೇಳೆ ಗರ್ಭಿಣಿಗೆ ಈ ಹಿಂದೆ ಶಸ್ತ್ರಚಿಕಿತ್ಸೆ (ಸಿಸೇರಿಯನ್ ಅಥವಾ ಫೈಬ್ರಾಯ್ಡ್ ತೆಗೆಯುವಿಕೆ ರೀತಿಯದ್ದು) ಮಾಡಿದ್ದಲ್ಲಿ, ಅದರಿಂದ ಸಂಭವಿಸುವ ನಿಶ್ಶಕ್ತಿ, ಇಲ್ಲವೇ ಆ ಭಾಗವು ಗರ್ಭಧಾರಣೆಯಾದ ತೆರೆದುಕೊಳ್ಳುವುದು ಮತ್ತು ತಾಯಿಯ ಕಿಬ್ಬೊಟ್ಟೆಗೆ ಮಗುವು ಬಲವಂತವಾಗಿ ತಳ್ಳಲ್ಪಡುವುದು ನಡೆಯಬಹುದು. ಇದು ನಿಜಕ್ಕು ಮಾರಣಾಂತಕ ಪರಿಸ್ಥಿತಿಯಾಗಿರುತ್ತದೆ. ಈ ಸಂದರ್ಭದಲ್ಲಿ ವೈಧ್ಯರು ತಾಯಿ ಮತ್ತು ಮಗುವನ್ನು ಉಳಿಸಲು ಸಿಸೇರಿಯನ್‍ಗೆ ಮೊರೆ ಹೋಗಬಹುದು.

ಎಕ್ಟೋಪಿಕ್ ಗರ್ಭಧಾರಣೆ

ಎಕ್ಟೋಪಿಕ್ ಗರ್ಭಧಾರಣೆ

ಇದೇಕೆ ಸಂಭವಿಸುತ್ತದೆ: ಈ ಸಮಸ್ಯೆಯಲ್ಲಿ ಭ್ರೂಣವು ಗರ್ಭಕೋಶದ ಹೊರಭಾಗದಲ್ಲಿ ಅಂದರೆ ವಿಶೇಷವಾಗಿ ಫಾಲ್ಲೋಪಿಯನ್ ನಾಳದಲ್ಲಿ ಬೆಳೆಯುತ್ತದೆ. ಇದು ನಿಜಕ್ಕು ತಾಯಿಗೆ ಅತ್ಯಂತ ಅಪಾಯಕಾರಿಯಾಗಿರುತ್ತದೆ. ಇದೇ ಪರಿಸ್ಥಿತಿಯಲ್ಲಿ ಭ್ರೂಣವು ಬೆಳೆಯುತ್ತ ಹೋದಲ್ಲಿ, ಆ ನಾಳವು ಒಡೆದು ಹೋಗುವ ಸಂಭವವಿರುತ್ತದೆ. ತಾಯಿಯ ಸುರಕ್ಷತೆಗಾಗಿ, ಇಂತಹ ಗರ್ಭವನ್ನು ಸಹಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಆದ್ದರಿಂದ ಸೂಕ್ತ ಸಮಯದಲ್ಲಿ ಇದಕ್ಕೆ ಅಗತ್ಯ ಕ್ರಮವನ್ನು ವೈಧ್ಯರು ತೆಗೆದುಕೊಳ್ಳುತ್ತಾರೆ.

ಮೊಲಾರ್ ಗರ್ಭಾವಸ್ಥೆ

ಮೊಲಾರ್ ಗರ್ಭಾವಸ್ಥೆ

ಇದೇಕೆ ಸಂಭವಿಸುತ್ತದೆ: ತುಂಬಾ, ತುಂಬಾ ಅಪರೂಪದ ಸಂದರ್ಭದಲ್ಲಿ ಫಲವತ್ತಾದ ಅಂಡಾಣುವು ಬೆಳವಣಿಗೆಯಾಗಲು ಆರಂಭಿಸುತ್ತದೆ. ಆದರೆ ಅದು ಮಗುವಾಗಿ ಬೆಳೆಯುವ ಬದಲಿಗೆ ಒಂದು ಪಿಂಡ ಅಥವಾ ಮೋಲ್ ಎಂದು ಕರೆಯುವ ಅಂಶವಾಗಿ ಬೆಳೆಯುತ್ತದೆ. ಇದು ಬೆಳೆಯುವಾಗಲು ಸಹ ಗರ್ಭಿಣಿಯರಲ್ಲಿ ಕಂಡು ಬರುವ ಲಕ್ಷಣಗಳು ಆ ಮಹಿಳೆಯಲ್ಲಿ ಕಂಡು ಬರುತ್ತವೆ. ಆದರೆ ಇದು ತುಂಬಾ ಕಾಲ ಜೀವಿಸುವ ಗರ್ಭವಾಗಿರುವುದಿಲ್ಲ.

ವಾಸಾ ಪ್ರಿವಿಯ

ವಾಸಾ ಪ್ರಿವಿಯ

ಇದೇಕೆ ಸಂಭವಿಸುತ್ತದೆ: ತುಂಬಾ ಅಪರೂಪದ ಸಂದರ್ಭದಲ್ಲಿ, ಮಗುವಿನಲ್ಲಿ ರಕ್ತನಾಳಗಳು ಬೆಳೆಯುವ ಸಂದರ್ಭದಲ್ಲಿ ಹೊಕ್ಕುಳ ಬಳ್ಳಿಯು ಗರ್ಭನಾಳಕ್ಕೆ ಅಡ್ಡವಾಗಿ ಸುತ್ತಿಕೊಳ್ಳುತ್ತದೆ. ಆಗ ಇದು ಅಪಾಯಕಾರಿಯಾಗುತ್ತದೆ, ಏಕೆಂದರೆ ಈ ರಕ್ತನಾಳಗಳು ಒಡೆದು ಹೋದಲ್ಲಿ ಮಗುವಿಗೆ ಆಮ್ಲಜನಕದ ಪೂರೈಕೆ ನಿಂತು ಹೋಗುತ್ತದೆ.

ಒಂದು ವೇಳೆ ತಾಯಿಗೆ ನೋವು ಬಂದರೆ, ಈ ರಕ್ತನಾಳಗಳು ಒಡೆದು ಹೋಗಿ ಅಧಿಕ ರಕ್ತ ಸ್ರಾವವಾಗುತ್ತದೆ. ಇದರಿಂದ ತಾಯಿ ಮತ್ತು ಮಗು ಇಬ್ಬರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಹೊಕ್ಕುಳ ಬಳ್ಳಿಯ ಪ್ರಿವಿಯದಂತೆ ಇದಕ್ಕೂ ಸಹ ಸಿಸೇರಿಯನ್ ಮಾಡಲು ವೈಧ್ಯರು ಶಿಫಾರಸು ಮಾಡುತ್ತಾರೆ. ನೀವು ಗರ್ಭಿಣಿಯಾಗಿರುವಾಗ ಎಂದಾದರು ರಕ್ತಸ್ರಾವದ ಅನುಭವವಾಗಿದೆಯೇ?

English summary

11 Reasons Women Bleed During Pregnancy & What It Means for Your Baby

As thrilling as pregnancy is, it also comes with a lot of worrisome symptoms. Extreme morning sickness, painfully swollen breasts and feet, and sciatica are all par for the course. Though, one of the scariest things some moms-to-be experience is unexpected bleeding. It's a frightening moment.
X
Desktop Bottom Promotion