For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಯ ಸಮಯದಲ್ಲಿ ಅಲ್ಟ್ರಾ ಸೌಂಡ್ಸ್ – ನೀವು ತಿಳಿಯಬೇಕಾದ ಅಂಶಗಳಿವು!

By Poornima heggade
|

ಗರ್ಭಾವಸ್ಥೆ ಎನ್ನುವುದು ಹೆಣ್ಣಿಗೆ ಪರಿಪೂರ್ಣತೆಯನ್ನು ನೀಡುವ ಸಂದರ್ಭ ಎಂದೇ ಹೇಳಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಅತ್ಯಂತ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಭ್ರೂಣದ ಆರೋಗ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ಕಾಲಕಾಲಕ್ಕೆ ಸರಿಯಾಗಿ ವಿವಿಧ ಪರೀಕ್ಷೆಗಳನ್ನು ಕೈಗೊಳ್ಳಬೇಕಾಗುತ್ತದೆ. ಅಲ್ಟ್ರಾ ಸೌಂಡ್ಸ್ ಅಥವಾ ಸ್ಕ್ಯಾನ್, ಪ್ರಸವಪೂರ್ವ ಪರೀಕ್ಷೆಗಳಲ್ಲಿ ಒಂದು ಪ್ರಮುಖ ಭಾಗವಾಗಿದೆ.

ಈ ಸ್ಕ್ಯಾನ್ ಪರೀಕ್ಷೆ , ನಿಮ್ಮ ಗರ್ಭಧಾರಣೆಯ ಅವಧಿಯಲ್ಲಿ ಭ್ರೂಣದ ಬೆಳವಣಿಗೆಯನ್ನು ತಿಳಿಯಲು, ಯಾವುದೇ ವೈಪರಿತ್ಯಗಳು, ಜನನ ದೋಷಗಳು ಮೊದಲಾದ ತೊಂದರೆಗಳನ್ನು ಪತ್ತೆ ಮಾಡಲು, ಅತ್ಯಗತ್ಯವಾಗಿದೆ.

ನಿಮ್ಮ ಗರ್ಭಧಾರಣೆಯ ಒಂಬತ್ತು ತಿಂಗಳುಗಳಲ್ಲಿ ಕನಿಷ್ಠ ನಾಲ್ಕು ಬಾರಿ ಸ್ಕ್ಯಾನ್ ಪರೀಕ್ಷೆಗೆ ಒಳಗಾಗುವುದು ಸೂಕ್ತ. ಒಂದು ಮಸುಕಾದ ಕಪ್ಪು ಮತ್ತು ಬಿಳಿ ಛಾಯೆಯಲ್ಲಿ ಮೂಡಿಬರುವ ಭ್ರೂಣದ ಚಿತ್ರವನ್ನು ಇದರಲ್ಲಿ ಕಾಣಬಹುದು. ಇದು ನಿಮ್ಮ ಭ್ರೂಣದ ಯೋಗಕ್ಷೇಮದ ಬಗ್ಗೆ ಮಾಹಿತಿ ನೀಡುವ ಎಚ್ಚರಿಕೆಯ ಸಂಕೇತವಾಗಿರಬಹುದು!

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪುನರಾವರ್ತಿತ ಗರ್ಭಪಾತಕ್ಕೆ ಕಾರಣ ಏನಿರಬಹುದು?

Ultrasounds during pregnancy – everything you need to know

ಗರ್ಭಾವಸ್ಥೆಯಲ್ಲಿ ಅಲ್ಟ್ರಾಸೌಂಡ್ ಮಹತ್ವ:
ಗರ್ಭಧಾರಣೆಯ ಪ್ರತಿಯೊಂದು ಹಂತದಲ್ಲಿ ಮಾಡಲಾಗುವ ಅಲ್ಟ್ರಾಸೌಂಡ್ ಅಥವಾ ಸ್ಕ್ಯಾನಿಂಗ್ ಭ್ರೂಣದ ಮತ್ತು ಇತರ ಬೆಳವಣಿಗೆಯ ಬದಲಾವಣೆಗಳನ್ನು, ಆರೋಗ್ಯದ ಸ್ಥಿತಿಯನ್ನು ತಿಳಿಸುತ್ತದೆ . ಗರ್ಭಾವಸ್ಥೆಯಲ್ಲಿ ಈ ಕೆಳಗಿನ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಲಾಗುತ್ತದೆ:

ಕಾರ್ಯಸಾಧ್ಯತೆ /ಜೀವಶಕ್ತಿ (ವೈಬಲಿಟಿ) ಸ್ಕ್ಯಾನ್:
ಗರ್ಭಧಾರಣೆಯ 6 ಮತ್ತು 10 ವಾರಗಳ ನಡುವೆ ಈ ಸ್ಕ್ಯಾನ್ ಮಾಡಲಾಗುತ್ತದೆ. ಭ್ರೂಣದ ಹೃದಯ ಬಡಿತ ಮತ್ತು ತಾಯಿಯ ಹೊಟ್ಟೆಯಲ್ಲಿ ಎಷ್ಟು ಶಿಶು ಬೆಳೆಯುತ್ತಿದೆ ಎನ್ನುವ ಅಂಶಗಳನ್ನು ನಿರ್ಣಯಿಸಲು ಈ ಸ್ಕ್ಯಾನ್ ನಡೆಸಲಾಗುತ್ತದೆ.

ನುಚಲ್ ಟ್ರಾನ್ಪರೆನ್ಸಿ ಸ್ಕ್ಯಾನ್:
ಗರ್ಭಧಾರಣೆಯ 12ನೇ ತಿಂಗಳು ನಡೆಸಲಾಗುವ ಈ ಸ್ಕ್ಯಾನ್ ಮಗುವಿನ ಆರೋಗ್ಯ ತಿಳಿಯಲು, ವರ್ಣತಂತುಗಳ ಅಸಹಜತೆಗಳು ಮತ್ತು ಡೌನ್ ಸಿಂಡ್ರೋಮ್ ಗಳ ಬಗ್ಗೆ ತಿಳಿಯಲು ಅನುಕೂಲಕರವಾಗಿರುತ್ತದೆ. ಇದು ಆರಂಭಿಕ ಹಂತದಲ್ಲಿ ಭ್ರೂಣವು ಯಾವುದೇ ಸಂಭಾವ್ಯ ತೊಂದರೆಗೆ ಒಳಗಾದರೆ ಅದನ್ನು ಕಂಡುಹಿಡಿದು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಲು ಅತ್ಯಂತ ಅಗತ್ಯವಾದ ಚಿಕಿತ್ಸಾ ವಿಧಾನವಾಗಿದೆ.

ಎನೊಮಲಿ ಸ್ಕ್ಯಾನ್: 18 ಮತ್ತು 20 ನೇ ವಾರದ ನಡುವೆ ಮಾಡಲಾಗುವ ಈ ಈ ಸ್ಕ್ಯಾನ್ ಭ್ರೂಣದ ದೇಹ ಮತ್ತು ಪ್ಲಾಸೆಂಟಾ (ಜರಾಯು) ಸ್ಥಾನದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತದೆ. ಇದು ದೇಹದಲ್ಲಿನ, ಮೆದುಳು, ಮುಖ, ಬೆನ್ನುಮೂಳೆ, ಹೃದಯ, ಜಠರ, ಮೂತ್ರಪಿಂಡ, ಕೈಕಾಲು ಮೊದಲಾದ ಅವಯವಗಳ ಬೆಳವಣಿಗೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ. ಅಲ್ಲದೆ ಈ ಸ್ಕ್ಯಾನ್ ಮಾಡಿಸುವುದರಿಂದ ಆಮ್ನಿಯೋಟಿಕ್ ದ್ರವದ (ಗರ್ಭ ಕವಚದ ಒಳಗಿನ ದ್ರನ) ಪ್ರಮಾಣದ ಅಳತೆಯನ್ನು ನೀಡುತ್ತದೆ ಮತ್ತು ಭ್ರೂಣ ಬೆಳೆಯುತ್ತಿರುವ ವೇಗವನ್ನು ಹೇಳುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸ್ತನದಲ್ಲಿ ನೋವಿರುವಾಗ ಮಗುವಿಗೆ ಹೀಗೆ ಹಾಲುಣಿಸಿ

ಫೆಟಲ್ ಎಕೊಕಾರ್ಡಿಯೊಗ್ರಫಿ:
ಭ್ರೂಣದ ಹೃದಯ ಮತ್ತು ರಕ್ತನಾಳಗಳ ಸಂಪರ್ಕದ ಬಗೆಗೆ ಮಾಡಬಹುದಾದ ವಿವರವಾದ ಪರೀಕ್ಷೆ ಇದಾಗಿದ್ದು ಗರ್ಭಧಾರಣೆಯ 20 ಅಥವಾ 22 ವಾರಗಳ ನಡುವೆ ಸಾಮಾನ್ಯವಾಗಿ ನಡೆಸಲಾಗುತ್ತದೆ. ಎನೊಮಲಿ ಸ್ಕ್ಯಾನ್, ಭ್ರೂಣದ ಹೃದಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದರೆ ಈ ಸ್ಕ್ಯಾನ್ ಅನ್ನು ಹೆಚ್ಚಿನ ವಿವರಕ್ಕಾಗಿ ಮಾಡಲಾಗುತ್ತದೆ.

ಫೆಟಲ್ ವೆಲ್ಬಿಯಿಂಗ್ (ಯೋಗಕ್ಷೇಮ) :
ಈ ಸ್ಕ್ಯಾನ್ ಹೆಸರೇ ಸೂಚಿಸುವಂತೆ ಭ್ರೂಣದ ಆರೋಗ್ಯದ ಬಗ್ಗೆ ಸೂಚಿಸುತ್ತದೆ ಮತ್ತು ಭ್ರೂಣದ ಸ್ಥಾನವನ್ನು ಪರಿಶೀಲಿಸಿ ಸ್ಪಷ್ಟ ಮಾಹಿತಿ ಒದಗಿಸುತ್ತದೆ. ಈ ಸ್ಕ್ಯಾನ್ ಅನ್ನು ಸಾಮಾನ್ಯವಾಗಿ ಗರ್ಭಧಾರಣೆಯ 28 ರಿಂದ 39 ವಾರಗಳ ನಡುವೆ ನಡೆಸಲಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮೈ ದುರ್ವಾಸನೆ-ಹೆರಿಗೆಯ ನಂತರ ಕಾಡುವ ಸಮಸ್ಯೆ

ಗರ್ಭಾವಸ್ಥೆಯಲ್ಲಿ ಹೇಗೆ ಅಲ್ಟ್ರಾ ಸೌಂಡ್ಸ್ ಸ್ಕ್ಯಾನ್ ಮಾಡಲಾಗುತ್ತದೆ?
ಗರ್ಭಧಾರಣೆಯ ಕೊನೆಯ ಹಂತಗಳಲ್ಲಿ ಟ್ರಾನ್ಸ್ಅಬ್ಡೊಮಿನಲಿ ಅಲ್ಟ್ರಾ ಸೌಂಡ್ಸ್ ಸ್ಕ್ಯಾನ್ ನಡೆಸಲಾಗುತ್ತದೆ, ಆದರೆ ಆರಂಭಿಕ ತಿಂಗಳಲ್ಲಿ ಟ್ರಾನ್ಸ್ ವಜೈನಲ್ ಸೋನೊಗ್ರಫಿ ಅವಶ್ಯಕವಾಗಿರುತ್ತವೆ.
ಟ್ರಾನ್ಸ್ಅಬ್ಡೊಮಿನಲ್ ಅಲ್ಟ್ರಾ ಸೌಂಡ್ಸ್: ಈ ರೀತಿಯ ಅಲ್ಟ್ರಾಸೌಂಡ್ ಅನ್ನು ಸೊನೊಲೊಜಿಸ್ಟ್ ( ಸ್ಕ್ಯಾನಿಂಗ್ ಪರಿಣಿತರು) ಹೊಟ್ಟೆಯ ಮೇಲೆ ಜೆಲ್ ರೀತಿಯ ವಸ್ತುವನ್ನು ಹಾಕಿ ಆ ಮೂಲಕ ಭ್ರೂಣದ ಚಲನೆಗಳನ್ನು ಪರೀಕ್ಷಿಸಲು ನಿಧಾನವಾಗಿ ಹೊಟ್ಟೆ ಮೇಲೆ ಕೈಯಾಡಿಸಿದ ರೀತಿಯಲ್ಲಿ ಸಂಜ್ಞಾಪರಿವರ್ತಕಗಳನ್ನು ಬಳಸುತ್ತಾರೆ. ಈ ಪ್ರಕ್ರಿಯೆಯನ್ನು ನೀವು ವೈದ್ಯರೊಂದಿಗೆ ಮೊನಿಟರ್ (ಕಂಪ್ಯೂಟರ್ ಪರದೆ) ನಲ್ಲಿ ನೋಡಬಹುದು. ಈ ರೀತಿಯ ಸೋನೊಗ್ರಫಿ ಸುರಕ್ಷಿತವಾಗಿದೆ ಮತ್ತು ಗರ್ಭಿಣಿ ಸ್ತ್ರೀಗೆ ಹೆಚ್ಚು ಕಿರಿಕಿರಿಯನ್ನೂ ಉಂಟುಮಾಡುವುದಿಲ್ಲ.

ಟ್ರಾನ್ಸ್ ವಜೈನಲ್ ಅಲ್ಟ್ರಾ ಸೌಂಡ್ಸ್:
ಈ ರೀತಿಯ ಅಲ್ಟ್ರಾಸೌಂಡ್ಸ್ ಪರೀಕ್ಷೆಯನ್ನು ಪರೀಕ್ಷಕರು ಗರ್ಭಿಣಿಯ ಯೋನಿಯ ಒಳಗೆ ಉದ್ದದ ಕಿರಿದಾದ ಸಂಜ್ಞಾಪರಿವರ್ತಕವನ್ನು ಅಳವಡಿಸುವುದರ ಮೂಲಕ ತಪಾಸಣೆ ಮಾಡುತ್ತಾರೆ. ಇದನ್ನು ಸಾಮಾನ್ಯವಾಗಿ ಸುಲಭವಾಗಿ ದೇಹದೊಳಕ್ಕೆ ಅಳವಡಿಸಲು ಕಾಂಡೊಮ್ ಅಥವಾ ಜೆಲ್ ನ್ನು ಬಳಸಿ ಪರೀಕ್ಷೆ ಮಾಡಲಾಗುತ್ತದೆ, ಇದು ಗರ್ಭಿಣಿಗೆ ಸ್ವಲ್ಪ ಕಿರಿಕಿರಿಯನ್ನು ಉಂಟು ಮಾಡಬಹುದು. ಆದರೆ ಈ ಪರೀಕ್ಷೆಯಿಂದ ಆರಂಭಿಕ ಹಂತದಲ್ಲಿ ಭ್ರೂಣದ ಬೆಳವಣಿಗೆಯನ್ನು ಸ್ಪಷ್ಟವಾಗಿ ಗಮನಿಸಬಹುದು.

ಸೋನೊಗ್ರಫಿಗೆ ತಯಾರಿ ಹೇಗೆ?
1 ಅಲ್ಟ್ರಾಸೌಂಡ್ ಪ್ರಕ್ರಿಯೆಗೆ ಒಳಪಡಲು ಸುಲಭವಾಗುವಂತೆ, ಆರಾಮದಾಯಕವಾದ, ಸಡಿಲವಾದ ಉಡುಪುಗಳನ್ನು ಧರಿಸಿ.
2. ಸಾಕಷ್ಟು ನೀರನ್ನು ಕುಡಿಯಿರಿ. ಇದರಿಂದ ಮೂತ್ರಕೋಶದಿಂದ ಗರ್ಭಕೋಶ ಹೊರದೂಡಲ್ಪಡುತ್ತದೆ. ಪೂರ್ಣಗೊಂಡ ಮೂತ್ರಕೋಶ ವೈದ್ಯರಿಗೆ ಭ್ರೂಣವನ್ನು ಸ್ಪಷ್ಟವಾಗಿ ನೋಡಲು ಅನುಕೂಲ ಮಾಡಿಕೊಡುತ್ತದೆ.
3. ಟ್ರಾನ್ಸ್ ವಜೈನಲ್ ಅಲ್ಟ್ರಾ ಸೌಂಡ್ ನಲ್ಲಿ ನೀವು ಇದಕ್ಕೆ ವಿರುದ್ಧವಾದ ತಯಾರಿಯನ್ನು ಮಾಡಬೇಕು. ಪರೀಕ್ಷೆ ಮೇಜಿನ ಮೇಲೆ ಮಲಗುವ ಮೊದಲು ನಿಮ್ಮನ್ನು ನೀವು ಆರಾಮದಾಯಕವಾಗಿಟ್ಟುಕೊಳ್ಳಬೇಕು. ಸಂಜ್ಞಾಪರಿವರ್ತಕ ಸಾಧನವನ್ನು ನಿಮ್ಮ ದೇಹದಲ್ಲಿ ಅಳವಡಿಸುತ್ತಿದ್ದಂತೆ ನಿಮಗೆ ನೋವನ್ನುಂಟು ಮಾಡಬಹುದು. ಆದರೆ ಈ ತಪಾಸಣೆ ಮುಗಿಯುವವರೆಗೂ ಗಟ್ಟಿಯಾಗಿ, ವಿಶ್ರಾಂತ ಸ್ಥಿತಿಯಲ್ಲಿರಿ. ನಿಮ್ಮ ದೇಹವನ್ನು ಪರೀಕ್ಷೆ ಅನುವು ಮಾಡಿಕೊಡುವಂತೆ ಸಡಿಲಿಸಿ. ಇಲ್ಲವಾದರೆ ನಿಮಗೂ, ವೈದ್ಯರಿಗೂ ತೊಂದರೆಯಾಗಬಹುದು. ಆಳವಾದ ಉಸಿರಾಟ ಸ್ವಲ್ಪ ಮಟ್ಟಿಗೆ ಕಿರಿಕಿರಿಯನ್ನು ಕಡಿಮೆ ಮಾಡಬಹುದು.

English summary

Ultrasounds during pregnancy – everything you need to know

Ultrasounds during pregnancy
Story first published: Saturday, March 29, 2014, 16:53 [IST]
X
Desktop Bottom Promotion